ಈ ರಾಶಿಗೆ ಶುಕ್ರನ ಪ್ರವೇಶ: ಒಂದಲ್ಲ 10 ರಾಜ ಯೋಗ, ಆದರೆ ಈ ನಿರ್ಧಾರದಿಂದ ಜೀವನವೇ ನಾಶವಾಗಬಹುದು

ಈ ತಿಂಗಳು ವೃಷಭ ರಾಶಿಯವರಿಗೆ ಶುಕ್ರನ ಸಂಚಾರ ಮತ್ತು ಶನಿಯ ದೃಷ್ಟಿಯಿಂದ ಮಿಶ್ರ ಫಲಗಳಿವೆ. ಶುಕ್ರ, ಗುರು, ಬುಧ ದಶೆಗಳು ಶುಭ ಫಲ ನೀಡಿದರೆ, ಕುಜ, ಶನಿ, ರಾಹು-ಕೇತು ದಶೆಗಳು ಕಷ್ಟ ತರಬಹುದು. ಜಾತಕದಲ್ಲಿ ಗ್ರಹಗಳ ಸ್ಥಾನ ಆಧರಿಸಿ ಆರ್ಥಿಕ, ಮಾನಸಿಕ, ಕುಟುಂಬಿಕ ಬದಲಾವಣೆಗಳಾಗಲಿವೆ. ಕಷ್ಟಗಳ ನಿವಾರಣೆಗೆ ಶನಿವಾರದಂದು ಶನಿ ಪೂಜೆ ಅಥವಾ ಹನುಮಾನ್ ಚಾಲೀಸಾ ಪಠಿಸಬಹುದು.

ಈ ರಾಶಿಗೆ ಶುಕ್ರನ ಪ್ರವೇಶ: ಒಂದಲ್ಲ 10 ರಾಜ ಯೋಗ, ಆದರೆ ಈ ನಿರ್ಧಾರದಿಂದ ಜೀವನವೇ ನಾಶವಾಗಬಹುದು
ಸಾಂದರ್ಭಿಕ ಚಿತ್ರ
Edited By:

Updated on: Apr 18, 2026 | 11:02 PM

ಈ ತಿಂಗಳು ವೃಷಭ ರಾಶಿಯವರಿಗೆ ಹೆಚ್ಚು ಮಿಶ್ರ ಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಶುಕ್ರನ ಸಂಚಾರ ಮತ್ತು ಪ್ರಭಾವವು ಜೀವನದ ವಿವಿಧ ಆಯಾಮಗಳ ಮೇಲೆ ನೇರ ಪರಿಣಾಮ ಬೀರಲಿದೆ. ಶುಕ್ರನು ನಿಮ್ಮ ರಾಶಿಯಲ್ಲಿ ಸಂಚಾರವಾಗಲಿದೆ ಮತ್ತು ಶನಿಯು ಈ ರಾಶಿಯ ಮೇಲೆ ದೃಷ್ಟಿ ಇಡುವನು. ಆಗಾಗ ಉಂಟಾಗುವ ಚಂದ್ರನ ಸಂಯೋಗ ಮತ್ತು ದೃಷ್ಟಿಯಿಂದ ಮಾನಸಿಕ ಸ್ಥಿತಿಯೂ ವಿಚಿತ್ರವಾಗಬಹುದು.

ಶುಭ ದಶೆ

​ಶುಕ್ರ ದಶೆ :

ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಬಲವಾಗಿದ್ದರೆ, ಈ ತಿಂಗಳು ಸುಖ-ಸಂತೋಷದ ವೃದ್ಧಿಯಾಗಲಿದೆ. ಹೊಸ ವಸ್ತುಗಳ ಖರೀದಿ, ಸೌಂದರ್ಯವರ್ಧಕ ವಸ್ತುಗಳ ಮೇಲೆ ಆಸಕ್ತಿ ಮತ್ತು ಕೌಟುಂಬಿಕವಾಗಿ ನೆಮ್ಮದಿ ಕಾಣುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮನ್ನಣೆ ಸಿಗಲಿದೆ.

​ಗುರು ದಶೆ :

ಜಾತಕದಲ್ಲಿ ಗುರುವಿನ ಅನುಗ್ರಹವಿದ್ದರೆ, ಆರ್ಥಿಕವಾಗಿ ಲಾಭದಾಯಕ ಸಮಯವಿದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಹಿರಿಯರ ಮಾರ್ಗದರ್ಶನದಿಂದ ದೊಡ್ಡ ಸಂಕಷ್ಟವೊಂದು ದೂರವಾಗಬಹುದು.

ಬುಧನ ದಶೆ :

ವ್ಯಾಪಾರ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಬುದ್ಧಿವಂತಿಕೆಯಿಂದ ಕೈಗೊಂಡ ನಿರ್ಧಾರಗಳು ಹಣಕಾಸಿನ ಲಾಭ ತಂದುಕೊಡಲಿವೆ.

​ಕಷ್ಟದ ದಶೆಗಳು

​ಕುಜ ದಶೆ :

ಮಂಗಳನ ಪ್ರಭಾವವು ಅಧಮವಾಗಿದ್ದರೆ, ಅನಗತ್ಯ ಕೋಪ ಮತ್ತು ಆತುರದಿಂದ ಕೆಲಸಗಳು ಕೆಡುವ ಸಾಧ್ಯತೆ ಇರುತ್ತದೆ. ಸಣ್ಣ ವಿಷಯಗಳಿಗೂ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ತರ್ಕಗಳು ಉಂಟಾಗಬಹುದು. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ.

​ಶನಿ ದಶೆ :

ಶನಿಯು ಅಶುಭ ಸ್ಥಾನದಲ್ಲಿದ್ದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣವೇ ಸಿಗದೆ ನಿರಾಸೆ ಮೂಡಬಹುದು. ಕಾಲು ನೋವು ಅಥವಾ ಆಲಸ್ಯದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

​ರಾಹು-ಕೇತುಗಳ ದಶೆ :

ಮನಸ್ಸಿನಲ್ಲಿ ಗೊಂದಲ, ಅನಿಶ್ಚಿತ ಭಯ ಮತ್ತು ಇಲ್ಲದ ಚಿಂತೆಗಳು ಕಾಡುವ ಸಾಧ್ಯತೆ ಇದೆ. ಯಾರಿಗೂ ಸಾಲ ನೀಡುವ ಮುನ್ನ ಎಚ್ಚರವಿರಲಿ.

​ಅಧಮ ದೆಸೆಗಳನ್ನು ನೀಗಿಸಲು ಶನಿವಾರದಂದು ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಉತ್ತಮ.

– ಲೋಹಿತ ಹೆಬ್ಬಾರ್

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us