
21-12-2025ರಿಂದ 27-12-2025ರವರಗೆ ಈ ವಾರವು ಡಿಸೆಂಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಅನ್ಯರ ಸಮಸ್ಯೆಯಿಂದ ಉದ್ಯೋಗದಲ್ಲಿ ನಿಮಗೆ ತೊಂದರೆ, ಆರೋಗ್ಯದಲ್ಲಿ ಆಗುವ ವ್ಯತ್ಯಾಸ ಕೆಲಸದ ಮೇಲೆ ಪರಿಣಾಮ ಬೀರುವುದು. ಕರ್ಮಾಧಿಪತಿ ಮೇಲೆ ಕುಜನ ಪರಸ್ಪರ ದೃಷ್ಟಿ ಇರುವ ಕಾರಣ ಯಂತ್ರ ತಂತ್ರಗಳ ಜೊತೆ ಕಾರ್ಯಕ್ಕೆ ಉತ್ಸಾಹ ಬರಲಿದೆ. ರಾಜಸಮಾನರಿಂದ ಉದ್ಯಮಕ್ಕೆ ಸಹಕಾರ ಸಿಗುವುದು. ವಿದೇಶ ಪ್ರವಾಸಕ್ಕೆ ಬಹಳ ಅವಸರ ಕಾಣಿಸುವುದು. ಒಟ್ಟಿನಲ್ಲಿ ಯಾವುದೇ ವಿಘ್ನಗಳೂ ನಿಮಗೆ ಬಾಧೆ ಕೊಡದೇ ಯಶಸ್ವಿಯಾಗಿ ಮುನ್ನಡೆಯಲಿ.
ಈ ವಾರ ಉದ್ಯೋಗದಲ್ಲಿ ಚುರುಕು ಹೆಚ್ಚಾದರೂ ಆತುರದ ನಿರ್ಧಾರಗಳು ಸಮಸ್ಯೆ ಉಂಟುಮಾಡಲಿವೆ. ಮೇಲಧಿಕಾರಿಗಳೊಂದಿಗೆ ಮಾತಿನ ಜಾಗರೂಕತೆ ಅಗತ್ಯ. ದಾಖಲೆ ಅಥವಾ ತಾಂತ್ರಿಕ ದೋಷದಿಂದ ಕೆಲಸ ವಿಳಂಬವಾಗುವ ಸಾಧ್ಯತೆ. ಈ ವಾರ ಕೋಪ ನಿಯಂತ್ರಿಸಿ ಶಾಂತರಾಗುದ್ದರೆ ಮಾತ್ರ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ.
ನಾಲ್ಕನೇ ವಾರ ಕಾರ್ಯದಲ್ಲಿ ಸ್ಥಿರತೆ ಇದ್ದರೂ ಪ್ರಗತಿ ನಿರೀಕ್ಷೆಯಷ್ಟು ವೇಗವಾಗುವುದಿಲ್ಲ. ಹಠ ಮತ್ತು ಹಳೆಯ ಆಲೋಚನೆಗಳು ಅವಕಾಶಗಳನ್ನು ತಪ್ಪಿಸುವುದು. ಹಣಕಾಸು ವಿಷಯದಲ್ಲಿ ಒತ್ತಡ ಕಂಡುಬರುತ್ತದೆ. ಉದ್ಯೋಗ ಬದಲಾವಣೆ ಯತ್ನ ಈ ವಾರ ಯಶಸ್ಸು ನೀಡದಿರಬಹುದು. ಸಹನೆಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ.
ರಾಶಿಯ ಅಧಿಪತಿಯಾದ ಬುಧನಿಂದ ಉದ್ಯಮಕ್ಕೆ ಬೇಕಾದ ಸಂವಹನದ ಗೊಂದಲಗಳನ್ನು ಹೆಚ್ಚಿಸುವನು. ಮಾತಿನ ತಪ್ಪು ಅಥವಾ ತಪ್ಪು ಮಾಹಿತಿ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಳೆಯ ಸಂಪರ್ಕಗಳಿಂದ ಅವಕಾಶ ಬಂದರೂ ಸ್ಪಷ್ಟತೆ ಇಲ್ಲದಿದ್ದರೆ ನಷ್ಟ. ನೀವು ಪ್ರತಿಯೊಂದು ನಿರ್ಧಾರಕ್ಕೂ ಪುನಃ ಪರಿಶೀಲನೆ ಮಾಡಿಕೊಳ್ಳುವಿರಿ.
ಈ ವಾರ ನಿಮ್ಮ ಮನಸ್ಸಿನ ಅಸ್ಥಿರತೆಯಡೆ ಉದ್ಯೋಗದಲ್ಲಿ ಏರುಪೇರಿಗೆ ಕಾರಣವಾಗಬಹುದು. ಭಾವನಾತ್ಮಕ ಪ್ರತಿಕ್ರಿಯೆಗಳು ಸಹೋದ್ಯೋಗಿಗಳ ಜೊತೆ ಅಂತರ ಹೆಚ್ಚಿಸಬಹುದು. ಈ ವಾರದಲ್ಲಿ ಆಗಾಗ ಕೆಲಸದ ಒತ್ತಡ ಮನಸ್ಸನ್ನು ಕಾಡುತ್ತದೆ. ಶಾಂತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಮಾನ್ಯತೆ ಸಿಗುತ್ತದೆ; ಇಲ್ಲದಿದ್ದರೆ ಅವಕಾಶ ಕೈ ತಪ್ಪಬಹುದು.
ಐದನೇ ರಾಶಿಯವರಿಗೆ ಈ ವಾರ ನಿಮ್ಮ ಸಾಮರ್ಥ್ಯ ಗುರುತಿಸಲ್ಪಟ್ಟರೂ ಅಹಂಕಾರದಿಂದ ವಿರೋಧ ಎದುರಾಗಬಹುದು. ಅಧಿಕಾರಕ್ಕೆ ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅವಶ್ಯಕ. ಮೇಲಧಿಕಾರಿಗಳ ಜೊತೆ ಸಂಘರ್ಷ ಮಾಡಿಕೊಳ್ಳುವುದು ಬೇಡ. ನಾಯಕತ್ವದ ಗುಣವನ್ನು ವಿನಯದಿಂದ ಬಳಸದೇ ಇದ್ದರೆ ಗೌರವದ ಬದಲು ಟೀಕೆ ಎದುರಾಗುವ ಸಾಧ್ಯತೆ.
ಈ ವಾರ ನೀವು ಮಾಡುವ ಕೆಲಸಗಳಲ್ಲಿ ಹಿಡಿತ ಇದ್ದರೂ ಸಣ್ಣ ತಪ್ಪು ದೊಡ್ಡ ಸಮಸ್ಯೆಯಾಗಬಹುದು. ಅತಿಯಾದ ಒತ್ತಡದಿಂದ ಆರೋಗ್ಯದ ದಣಿವು ಕಾರ್ಯಕ್ಷಮತೆಯನ್ನು ಕಡಿಮೆಮಾಡಬಹುದು. ದಾಖಲೆ, ಲೆಕ್ಕಪತ್ರಗಳಲ್ಲಿ ಜಾಗ್ರತೆಯಿಂದ ರಕ್ಷಿಸಿ. ಪರಿಪೂರ್ಣತೆಯ ಹಠವು ಕೆಲಸದ ಒತ್ತಡವನ್ನು ಹೆಚ್ಚಿಸಬಹುದು.
ಏಳನೇ ರಾಶಿಯವರಿಗೆ ಪಾಲುದಾರಿಕೆಯ ಉದ್ಯೋಗಗಳಲ್ಲಿ ಅವಕಾಶ ಇದ್ದರೂ ನಿರ್ಧಾರ ಗೊಂದಲ ನಷ್ಟಕ್ಕೆ ಕಾರಣವಾಗಬಹುದು. ಒಪ್ಪಂದ ಅಥವಾ ಕಾನೂನು ವಿಷಯಗಳಲ್ಲಿ ಸರಿಯಾದ ಅರಿವು ಇರದು. ಈ ವಾರ ಇತರರ ಅಭಿಪ್ರಾಯದ ಮೇಲೆ ಹೆಚ್ಚು ಅವಲಂಬನೆ ಸಮಸ್ಯೆ ತರುತ್ತದೆ. ಸ್ವಂತ ನಿರ್ಣಯ ಸ್ಪಷ್ಟವಾಗಿರಬೇಕು.
ಕುಜನ ಆಧಿಪತ್ಯದ ಈ ವಾರ ಗುಪ್ತ ಯೋಜನೆಗಳು ಫಲ ನೀಡುವ ಸಾಧ್ಯತೆ ಇದ್ದರೂ ಒಳರಾಜಕೀಯ ಮತ್ತು ಈರ್ಷೆ ತೊಂದರೆ ಕೊಡಬಹುದು. ಸಹೋದ್ಯೋಗಿಗಳ ಜೊತೆ ವಾಗ್ವಾದ ಸಂಭವಿಸುವುದು. ಅತಿಯಾದ ಸಂಶಯ ಕೆಲಸದ ವಾತಾವರಣ ಹಾಳುಮಾಡಬಹುದು. ಮೌನ ಮತ್ತು ತಾಳ್ಮೆಯೇ ಈ ವಾರ ಆಪ್ತರಕ್ಷಕ.
ಡಿಸೆಂಬರ್ ನಾಲ್ಕನೇ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚಾದರೂ ಅತಿಯಾದ ಆಶಾವಾದದಿಂದ ತಪ್ಪು ಆಶ್ವಾಸನೆಗಳನ್ನು ಕೆಲಸದ ಹೊಣೆಗಾರಿಕೆ ಹೆಚ್ಚಾಗಿ ಒತ್ತಡ ಉಂಟಾಗುತ್ತದೆ. ವಿದೇಶಿ ಅಥವಾ ದೂರದ ಸಂಪರ್ಕಗಳಲ್ಲಿ ವಿಳಂಬ ಸಾಧನೆ ಮಾಡಿಕೊಳ್ಳುವಿರಿ. ಕಾಲ್ಪನಿಕ ದೃಷ್ಟಿಯಿಂದ ವಾಸ್ತವಿಕ ಗುರಿಗಳನ್ನು ಹೊಂದಿದರೆ ಮಾತ್ರ ತೃಪ್ತಿ ಸಿಗುತ್ತದೆ.
ಶನಿಯ ಆಧಿಪತ್ಯದ ಪರಿಶ್ರಮಕ್ಕೆ ಫಲ ಸಿಗುವ ಸೂಚನೆ ಇದ್ದರೂ ಕೆಲಸದ ಹೊರೆ ದೈಹಿಕ ಮತ್ತು ಮಾನಸಿಕ ದಣಿವು ತರಬಹುದು. ಕುಟುಂಬ, ಕೆಲಸದಲ್ಲಿ ಸಮತೋಲನ ತಪ್ಪುವ ಸಾಧ್ಯತೆ ಕಂಡುಬರುವುದು. ಮೇಲಧಿಕಾರಿಗಳಿಂದ ನಿಮ್ಮ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ. ವಿಶ್ರಾಂತಿ ಕಡೆಗಣಿಸಿದರೆ ಅನಾರೋಗ್ಯದ ಸಮಸ್ಯೆ ಕಾಣಿಸಬಹುದು.
ನಿಮಗೆ ನವೀನ ಆಲೋಚನೆಗಳಿಗೆ ಮೆಚ್ಚುಗೆ ಇದ್ದರೂ ವ್ಯವಸ್ಥೆಯ ಅಡ್ಡಿಗಳು ಮತ್ತು ವಿಳಂಬಕ್ಕೆ ಕಿರಿಕಿರಿಯನ್ನು ತಡೆದುಕೊಳ್ಳಲಾಗದು. ಸಾಮಾಜಿಕವಾಗಿ ಆಡಿದ ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ. ಸಹನೆ ಕಳೆದುಕೊಂಡರೆ ಅವಕಾಶ ಕೈ ತಪ್ಪುವುದು. ಪೂರ್ವಾಪರ ಆಲೋಚನೆ ಇಲ್ಲದೇ ನಿಯಮಗಳನ್ನು ಉಲ್ಲಂಘಿಸುವುದು ಸಮಸ್ಯೆ ತರುತ್ತದೆ.
ಕೊನೆಯ ರಾಶಿಯವರಿಗೆ ಈ ವಾರ ನಿಮ್ಮ ಪ್ರಭಾವದಿಂದ ಕೆಲಸದ ಹೊಣೆಗಾರಿಕೆ ಮತ್ತು ಅದರಲ್ಲಿ ಟೀಕೆ ಹೆಚ್ಚಾಗಬಹುದು. ನಿಮ್ಮ ಆತ್ಮವಿಶ್ವಾಸ ಕುಸಿಯುವ ಸಂದರ್ಭಗಳು ಎದುರಾಗುತ್ತವೆ. ಈ ವಾರದ ನಿಮ್ಮ ಶ್ರಮ ತಕ್ಷಣ ಫಲ ನೀಡದಿರಬಹುದು. ನಿರಾಶೆಗೆ ಒಳಗಾಗದೇ ನಿರಂತರ ಪ್ರಯತ್ನ ಮಾಡಿದರೆ ಮುಂದಿನ ದಿನಗಳಲ್ಲಿ ಸ್ಥಿರತೆ ಸಿಗುತ್ತದೆ.
– ಲೋಹಿತ ಹೆಬ್ಬಾರ್ – 8762924271 (what’s app only)