ಉದ್ಯೋಗ ಭವಿಷ್ಯ: ಗ್ರಹಗಳ ಬದಲಾವಣೆಯಿಂದ ನೌಕರರು ಹಾಗೂ ಉದ್ಯಮಿಗಳಿಗೆ ವಿಶೇಷ ಲಾಭ

ಈ ವಾರ (ನವೆಂಬರ್ 15-21) ಗ್ರಹಗಳ ಸಂಚಾರವು ನಿಮ್ಮ ಉದ್ಯೋಗ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಬುಧ, ಶುಕ್ರ, ಸೂರ್ಯ, ಗುರುಗಳು ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲಿದ್ದಾರೆ. ಕೆಲವು ರಾಶಿಗಳಿಗೆ ಹೊಸ ಅವಕಾಶ, ಬಡ್ತಿ, ಆದಾಯ ವೃದ್ಧಿಯಾದರೆ, ಇನ್ನು ಕೆಲವರಿಗೆ ಮಾತುಕತೆಯಲ್ಲಿ ಎಚ್ಚರಿಕೆ, ತಾಳ್ಮೆ ಅಗತ್ಯ. ನಿಮ್ಮ ರಾಶಿಫಲ ತಿಳಿದು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಿ.

ಉದ್ಯೋಗ ಭವಿಷ್ಯ: ಗ್ರಹಗಳ ಬದಲಾವಣೆಯಿಂದ ನೌಕರರು ಹಾಗೂ ಉದ್ಯಮಿಗಳಿಗೆ ವಿಶೇಷ ಲಾಭ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Nov 13, 2026 | 10:44 PM

ನವೆಂಬರ್ ೧೫ರಿಂದ ೨೧ರವರೆಗೆ ದಶಮ ಸ್ಥಾನದ ಮೇಲೆ ಗ್ರಹಗಳ ನೆರಳು ಬೆಳಕು ಜೊತೆಯಾಗಿ ಬೀಳುತ್ತವೆ. ಬುಧ ಮತ್ತು ಶುಕ್ರ ಋಜುವಾಗಿ ಅರ್ಧಕ್ಕೆ ನಿಂತ ಕೆಲಸಗಳು ಮತ್ತೆ ಆರಂಭ. ೧೬ರಂದು ಸೂರ್ಯನು ವೃಶ್ಚಿಕಕ್ಕೆ ಬರುತ್ತಾನೆ. ಸಿಂಹದ ಕುಜ ಶ್ರಮಕ್ಕೆ ಶಕ್ತಿ ತುಂಬಿದರೆ, ಕರ್ಕಾಟಕದ ಗುರು ದಿಕ್ಕು ತೋರಿಸುವನು.

ಮೇಷ ರಾಶಿ :
ಷಷ್ಠದ ಶುಕ್ರ ಸ್ಪರ್ಧೆಯಲ್ಲಿ ನಿಮ್ಮ ಕೈ ಮೇಲಾಗಿಸುತ್ತಾನೆ. ಬೇರೆ ಕೆಲಸವನ್ನು ಮೈಮೇಲೆ ತಂದುಕೊಳ್ಳುವುದಕ್ಕಿಂತ ಬಾಕಿ ಇದ್ದ ಕೆಲಸ ಮುಗಿಸಿ ಮೆಚ್ಚುಗೆ ಗಳಿಸಿ. ವಾರದ ಮಧ್ಯದ ಅನಂತರ ಸೂರ್ಯನು ಅಷ್ಟಮಕ್ಕೆ ಹೋಗುವುದರಿಂದ ಮೇಲಧಿಕಾರಿಯೊಂದಿಗೆ ಮಾತು ಎಚ್ಚರಿಕೆಯಿಂದಿರಲಿ.

Loading...

ವೃಷಭ ರಾಶಿ :
ದಶಮದ ರಾಹು ಹೊಸ ಅವಕಾಶಗಳ ಬಾಗಿಲು ತಟ್ಟುತ್ತಾನೆ, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಜನರ, ಹೊಸ ಸ್ಥಳದ ಪರಿಚಯ ಮಾಡಿಸುವನು. ಲಾಭಸ್ಥಾನದ ಶನಿ ಸ್ಥಿರವಾದ ಆದಾಯ ಕೊಡುತ್ತಾನೆ. ಹೊಸ ಜವಾಬ್ದಾರಿಯನ್ನು ಹಿಂಜರಿಯದೆ ಸ್ವೀಕರಿಸಿ.

ಮಿಥುನ ರಾಶಿ :
ದಶಮದ ಶನಿ ವೇಗ ಕಡಿಮೆ ಮಾಡಿದರೂ ಅಡಿಪಾಯ ಭದ್ರಪಡಿಸುತ್ತಾನೆ. ತೃತೀಯದ ಕುಜ ಸಂವಹನ ಕೌಶಲ್ಯ ಹೆಚ್ಚಿಸುತ್ತಾನೆ. ಪ್ರಸ್ತುತಿ, ಸಂದರ್ಶನ, ಮಾತುಕತೆಗಳಲ್ಲಿ ನಿಮ್ಮ ಮಾತು ಫಲ ಕೊಡುತ್ತದೆ.

ಕರ್ಕಾಟಕ ರಾಶಿ :
ನಿಮ್ಮದೇ ರಾಶಿಯಲ್ಲಿ ಉಚ್ಚನಾದ ಗುರುವು ನಿಮ್ಮ ಮೇಲೆ ನಂಬಿಕೆ ಹೆಚ್ಚಿಸುತ್ತಾನೆ. ಹಿರಿಯರು ನಿಮ್ಮ ಸಲಹೆಗೆ ಕಿವಿಗೊಡುತ್ತಾರೆ. ಸಂಬಳ ಅಥವಾ ಸ್ಥಾನದ ಮಾತು ಎತ್ತಲು ಇದು ಒಳ್ಳೆಯ ಸಮಯ.

ಸಿಂಹ ರಾಶಿ :
ಲಗ್ನದ ಕುಜ ಶಕ್ತಿ ತುಂಬಿದರೂ ಆತುರಕ್ಕೆ ದಾರಿ ಮಾಡಿಕೊಡಬಹುದು. ದ್ವಿತೀಯದ ಶುಕ್ರ ಧನಲಾಭ ಸೂಚಿಸುತ್ತಾನೆ. ತಂಡದೊಂದಿಗೆ ಹೊಂದಿಕೊಂಡು ನಡೆದರೆ ಯಶಸ್ಸು ನಿಶ್ಚಿತ.

ಕನ್ಯಾ ರಾಶಿ :
ಏಕಾದಶದ ಗುರುವು ಲಾಭದ ಹಾದಿ ಬೆಳಗಿಸುತ್ತಾನೆ. ನಿಮ್ಮ ರಾಶಿಯಲ್ಲಿ ಶುಕ್ರ ಋಜುವಾಗಿ ಕೆಲಸದ ಸ್ಥಳದಲ್ಲಿ ಮೃದುವಾಗುವಂತೆ ಮಾಡುವನು. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ, ಹೊಸ ಯೋಜನೆ ಆರಂಭಿಸಬಹುದು.

ತುಲಾ ರಾಶಿ :
ದಶಮದ ಉಚ್ಚಸ್ಥಾನದಲ್ಲಿರುವ ಗುರುವು ವೃತ್ತಿ ಜೀವನಕ್ಕೆ ಅತ್ಯುತ್ತಮ ಆಶೀರ್ವಾದ ನೀಡುವನು. ಭಡ್ತಿ, ಪ್ರಶಂಸೆ ಅಥವಾ ಹೊಸ ಅವಕಾಶ ಬರಬಹುದು. ದ್ವಾದಶದ ಶುಕ್ರನಿಂದ ಖರ್ಚು ಹೆಚ್ಚಾಗಬಹುದು, ಲೆಕ್ಕ ಇಟ್ಟುಕೊಳ್ಳಿ.

ವೃಶ್ಚಿಕ ರಾಶಿ :
ದಶಮದ ಕುಜ ನಾಯಕತ್ವದ ಗುಣ ಹೊರತರುತ್ತಾನೆ. ಸೂರ್ಯ ನಿಮ್ಮ ರಾಶಿಗೆ ಬಂದು ಗೌರವ ಹೆಚ್ಚಿಸುತ್ತಾನೆ. ಲಾಭಸ್ಥಾನದ ಶುಕ್ರ ಆದಾಯಕ್ಕೆ ಬೆಂಬಲ ನೀಡುತ್ತಾನೆ. ಧೈರ್ಯದಿಂದ ಮುನ್ನಡೆಯಿರಿ.

ಧನು ರಾಶಿ :
ಕರ್ಮಸ್ಥಾನದ ದಶಮದ ಶುಕ್ರ ಕಚೇರಿಯಲ್ಲಿ ನಿಮ್ಮ ಸೌಜನ್ಯಕ್ಕೆ ಬೆಲೆ ತರುತ್ತಾನೆ. ಗ್ರಾಹಕರು ಮತ್ತು ಸಹೋದ್ಯೋಗಿಗಳು ಮೆಚ್ಚುತ್ತಾರೆ. ಅಷ್ಟಮದ ಗುರುವಿನಿಂದ ಗುಪ್ತ ಜವಾಬ್ದಾರಿಗಳು ಬರಬಹುದು. ಕಾಗದಪತ್ರ ಪರಿಶೀಲಿಸಿ.

ಮಕರ ರಾಶಿ :
ದಶಮದ ಸೂರ್ಯ ನಿಮಗೆ ಅಧಿಕಾರದ ಬಲ ಕೊಡುತ್ತಾನೆ, ಅನಂತರ ಲಾಭಸ್ಥಾನಕ್ಕೆ ಹೋಗಿ ಹಣದ ಹರಿವು ಹೆಚ್ಚಿಸುತ್ತಾನೆ. ಸಪ್ತಮದ ಗುರು ವ್ಯವಹಾರ ಪಾಲುದಾರಿಕೆಗೆ ಶುಭ ನೀಡುವನು. ಒಪ್ಪಂದ ವಿಚಾರಕ್ಕೆ ಅನುಕೂಲ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ: ನಿಂತಿದ್ದ ಪ್ರೇಮ ಸಂಬಂಧಗಳು ಮತ್ತೆ ಚಲಿಸುವ ಕಾಲ

ಕುಂಭ ರಾಶಿ :
ದಶಮದಲ್ಲಿ ಸೂರ್ಯನು ಈ ವಾರ ಬರುವುದರಿಂದ ನಿಮ್ಮ ಕೆಲಸ ಎಲ್ಲರ ಕಣ್ಣಿಗೆ ಬೀಳುತ್ತದೆ. ಷಷ್ಠದಲ್ಲಿರುವ ಗುರುವು ಪ್ರತಿಸ್ಪರ್ಧಿಗಳ ಮೇಲೆ ಜಯ ತರುತ್ತಾನೆ. ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ.

ಮೀನ ರಾಶಿ :
ಷಷ್ಠದ ಕುಜನು ಶತ್ರುಗಳನ್ನು ಸೋಲಿಸಿ ಕೆಲಸದಲ್ಲಿ ವಿಜಯ ತರುತ್ತಾನೆ. ಲಗ್ನದಲ್ಲಿರುವ ಶನಿಯು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವನು. ಸಪ್ತಮದ ಶುಕ್ರನಿಂದ ಗ್ರಾಹಕರೊಂದಿಗೆ ಸಂಬಂಧ ಸುಧಾರಿಸುತ್ತದೆ. ಪ್ರಯತ್ನ ಬಿಡಬೇಡಿ.

-ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Fri, 13 November 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us