Weekly Horoscope: ವಾರಭವಿಷ್ಯ, ಆಗಸ್ಟ್ 13 ರಿಂದ ಆಗಸ್ಟ್ 19ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ

ದ್ವಾದಶ ರಾಶಿಗಳ ವಾರ ಭವಿಷ್ಯ: 2023ರ ಆಗಸ್ಟ್ 13 ರಿಂದ ಆಗಸ್ಟ್ 19 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರಭವಿಷ್ಯ, ಆಗಸ್ಟ್ 13 ರಿಂದ ಆಗಸ್ಟ್ 19ರ ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ವಾರಭವಿಷ್ಯ (Photo Credit: iStock)
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Aug 13, 2023 | 1:15 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಆಗಸ್ಟ್ 13 ರಿಂದ ಆಗಸ್ಟ್ 19 ರ ವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ:

ಇದು ಆಗಷ್ಟ್ ತಿಂಗಳ ಮೂರನೆಯ ವಾರವಾಗಿದ್ದು ಗ್ರಹನಾಯಕನಾದ ಸೂರ್ಯನು ವಾರದ ಕೊನೆಯಲ್ಲಿ ತನ್ನ ಮನೆಯನ್ನು ಪ್ರವೇಶ ಮಾಡುವನು. ಪಂಚಮಸ್ಥಾನವನ್ನು ಪ್ರವೇಶಿಸುವ ಕಾರಣ ಈ ರಾಶಿಯವರಿಗೆ ಅಧಿಕ ಶುಭವು ಇರಲಿದೆ. ಮೇಷವು ಸೂರ್ಯನ ಉಚ್ಚಕ್ಷೇತ್ರವೂ ಇದಾಗಿದೆ. ಮುಂದೆ ಸಕಾರಾತ್ಮಕ ಬದಲಾವಣೆಗಳು ಆಗಲಿದೆ. ಪಂಚಮಸ್ಥಾನದಲ್ಲಿ ಚತುರ್ಗ್ರಹಯೋಗವು ಸಂಭವಿಸಲಿದ್ದು ಆರೋಗ್ಯ ಸುಧಾರಣೆ, ಸ್ಥಾನಮಾನ ಪ್ರಾಪ್ತಿ, ಆರಬ್ಧ ಕಾರ್ಯದಲ್ಲಿ ಜಯ ಮಕ್ಕಳಿಂದ ಒಳ್ಳೆಯದಿದೆ. ಮಕ್ಕಳಿಂದ ಈ ವಾರ ಶುಭ ಸುದ್ದಿಯು ಬರಲಿದೆ. ಏಕಾದಶದ ಶನಿಯು ನಿಮಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಕೊಡಿಸುವನು.

ವೃಷಭ ರಾಶಿ:

ಈ ವಾರ ಕೆಲವು ಗ್ರಹಗಳ ಬದಲಾವಣೆಯಿಂದ ನಿಮ್ಮ ಮೇಲೆ‌ ಅಲ್ಪ ಪರಿಣಾಮವು ಬೀರಬಹುದು. ಸೂರ್ಯನು ತೃತೀಯಸ್ಥಾನದಿಂದ ಚತುರ್ಥಕ್ಕೆ ಚಲಿಸಲಿದ್ದ ನೂತನ ಗೃಹನಿರ್ಮಾಣ ಆಗಬಹುದು. ಚಂದ್ರ, ಕುಜ, ಬುಧರ ಜೊತೆ ಸೂರ್ಯನ ಸಂಯೋಗವು ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರುವಂತೆ ಮಾಡುವುದು. ತಾಯಿಯಿಂದ ಹಿತ ವಚನಗಳು, ಬಂಧುಗಳ ಸಹಕಾರ ಎಲ್ಲವೂ ನಿಮಗೆ ಸಿಗುವುದು. ಮಾನಸಿಕ ಕಿರಿಕಿರಿಯೂ ದೂರವಾಗಿ ನೆಮ್ಮದಿಯಿಂದ ಇರುವಿರಿ. ಗುರುವಿನ ಬಲವು ಇಲ್ಲದಿರುವ ಕಾರಣ ವಿಷ್ಣುವಿನ ಆರಾಧನೆಯನ್ನು ಹೆಚ್ಚು ಮಾಡಬೇಕಾಗಬಹುದು.

ಮಿಥುನ ರಾಶಿ:

ಈ ತಿಂಗಳ‌ ಮೂರನೇ ವಾರ ಗ್ರಹಗತಿಗಳು ಬದಲಾವಣೆ ಆಗಲಿದ್ದು ಸೂರ್ಯನು ದ್ವಿತೀಯ ಸ್ಥಾನದಿಂದ ತೃತೀಯಕ್ಕೆ ಅಂದರೆ ಸ್ವಕ್ಷೇತ್ರಕ್ಕೆ ಹೋಗುವನು. ನಿಮ್ಮ ಸಾಮರ್ಥ್ಯವು ಎಲ್ಲರಿಗೂ ತಿಳಿಯುವುದು. ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ದ್ವಿತೀಯ ಸ್ಥಾನದಲ್ಲಿ ಶುಕ್ರನು ನಿಮಗೆ ಸ್ತ್ರೀಯಿಂದ ಲಾಭವನ್ನು ಪಡೆಯುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ಏಕಾದಶದಲ್ಲಿರುವ ಗುರುವು ನಿಮ್ಮ ಅಲ್ಪ ತೊಂದರೆಗಳನ್ನು ನಾಶ ಮಾಡಿ ನೆಮ್ಮದಿಯಿಂದ ಇರುವಂತೆ ಮಾಡುವನು. ನವಮದಲ್ಲಿ ಶನಿಯು ಬಿದ್ದು ನಿಮಗೆ ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಆಗಬಹುದು.

ಕಟಕ ರಾಶಿ:

ಒಂದು ತಿಂಗಳುಗಳ‌ ಕಾಲ ಪ್ರಥಮ ಸ್ಥಾನದಲ್ಲಿ ಇದ್ದ ಸೂರ್ಯ ಈ ವಾರದ ಕೊನೆಗೆ ದ್ವಿತೀಯಕ್ಕೆ ಹೋಗಲಿದ್ದಾನೆ. ಚತುರ್ಗ್ರಹಗಳ ಯೋಗವು ಆಗಲಿದ್ದು ಕುಟುಂಬದಲ್ಲಿ ನಿಮ್ಮ ಎಲ್ಲ ಕೆಲಸಗಳಿಗೂ ಬೆಂಬಲ ಸಿಗಬಹುದು. ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯವು ದೂರವಾಗುವುದು.‌ ನಿಮ್ಮ ಕೆಲಸಗಳಿಗೆ ಬೇಕಾದ ಸಹಕಾರವು ಯಾರಿಂದಲಾದರೂ ತಾನಾಗಿಯೇ ಸಿಗುವುದು. ಮನಸ್ಸಿನಲ್ಲಿ ಸಣ್ಣ ಅಳುಕು ಇರಬಹುದು. ಅಷ್ಟಮದಲ್ಲಿ ಶನಿ ಇರುವುದರಿಂದ ದೈಹಿಕ ಬಾಧೆಯು ಕಾಣಿಸಿಕೊಳ್ಳುವುದು. ದಶಮದಲ್ಲಿ ಇರುವ ಇರುವ ಗುರು ಹಾಗೂ ರಾಹುಗಳು ಉದ್ಯೋಗದಲ್ಲಿ ಒತ್ತಡವನ್ನು ಉಂಟುಮಾಡಬಹುದು.

ಸಿಂಹ ರಾಶಿ:

ನಿಮ್ಮ ರಾಶಿಗೆ ರವಿಯ ಪ್ರವೇಶವು ಆಗಿಲಿದೆ. ಇದು ಸೂರ್ಯನ ಕ್ಷೇತ್ರವೇ ಆದ ಕಾರಣ ಸಂಪೂರ್ಣ ಬಲವುಳ್ಳವನಾಗುವನು. ಸರ್ಕಾರಿ ಉದ್ಯೋಗಿಗಳು ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ಆರ್ಥಿಕವಾದ ನಷ್ಟವು ಆಗಬಹುದು. ನವಮದಲ್ಲಿ ಇರುವ ಗುರುವಿನ ದೃಷ್ಟಿಯೂ ನಿಮ್ಮ ಮೇಲೆ ಇರುವ ಕಾರಣ ನಿಮಗೆ ಈ ವಾರವು ಅತ್ಯಂತ ಶುಭವಾರವಾಗಿದೆ. ಮಹಾಲಕ್ಷ್ಮಿಯ ಕೃಪೆಗಾಗಿ ಲಕ್ಷ್ಮನಾರಾಯಣರ ಆರಾಧನೆಯನ್ನು ಹೆಚ್ಚು ಮಾಡಿ. ಅಂದುಕೊಂಡ ಕೆಲಸಗಳು ಅನಾಯಾಸವಾಗಿ ಮುಕ್ತಾಯವಾಗುವುದು. ಶನಿಯ ದೃಷ್ಟಿಯು ನಿಮ್ಮ ಮೇಲೆ ಇರುವುದರಿಂದ ಇದನ್ನೆಲ್ಲ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಕನ್ಯಾ ರಾಶಿ:

ಈ ವಾರವು ಗ್ರಹಗಳ ಬದಲಾವಣೆಯಿಂದ ಅಶುಭವೇ ಹೆಚ್ಚಾಗುವ ಸಾಧ್ಯತೆ ಇದೆ. ಏಕಾದಶದಲ್ಲಿ ಯೋಗಕಾರಕನಾಗಿ ಇದ್ದು ಅನೇಕ ಶುಭಗಳನ್ನು ನೀಡಿದ್ದ ಸೂರ್ಯನು ದ್ವಾದಶಕ್ಕೆ ಬರಲಿದ್ದಾನೆ. ದ್ವಾದಶದಲ್ಲಿ ಕುಜ, ರವಿ, ಚಂದ್ರ ಹಾಗೂ ಬುಧರ ಸಮಾಗಮವು ಆರ್ಥಿಕ ನಷ್ಟವನ್ನು, ಅಧಿಕಾರದ ನಷ್ಟವನ್ನು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ನೀಡಬಹುದು. ಅಷ್ಟಮದಲ್ಲಿ ಗುರು ಹಾಗೂ ರಾಹುಗಳಿಂದ ನಿಮಗೆ ತೊಂದರೆ ಆಗುವುದು. ದ್ವಿತೀಯದಲ್ಲಿ ಇರುವ ಕೇತುವೂ ಇರುವ ಆಸ್ತಿಯನ್ನು ಕಳೆದುಹೋಗಬಹುದು. ಷಷ್ಠದಲ್ಲಿ ಶನಿಯು ಇದ್ದು ಶತ್ರುಬಾಧೆಯನ್ನು ಕಡಿಮೆ ಮಾಡುವನು. ಏಕಾದಶದ ಶುಕ್ರನು ನಿಮಗೆ ಲಾಭದಾಯಕನಾಗಿ ನಿಮಗೆ ನೆಮ್ಮದಿಯನ್ನು ಕೊಡುವನು.

ತುಲಾ ರಾಶಿ:

ಈ ತಿಂಗಳ ಮೂರನೆಯ ವಾರವು ಶುಭಪ್ರದವಾದ ವಾರವಾಗಿದೆ. ಗುರುವಿನ ಪೂರ್ಣಬಲವು ನಿಮ್ಮ ಮೇಲೆ ಇರಲಿದೆ. ಇದರ ಜೊತೆ ಸೂರ್ಯನು ಏಕಾದಶಕ್ಕೆ ಬಂದು ಇನ್ನಷ್ಟು ಬಲವನ್ನು ಕೊಡುವನು. ಉನ್ನತ ಸ್ಥಾನಕ್ಕೆ ಹೋಗಲು ಎಲ್ಲ ಅವಕಾಶಗಳು ನಿಮ್ಮ ಪಾಲಿಗೆ ಸಿಗುವುದು. ನೂತನ ವಾಹನ, ಆಭರಣ ಹಾಗೂ ಸರ್ಕಾರಿ ಉದ್ಯೋಗವನ್ನು ಪಡೆಯಲು ಪ್ರಯತ್ನಿಸಿದರೆ ಲಭ್ಯವಾಗುವುದು. ಉನ್ನತ ಅಭ್ಯಾಸಕ್ಕೆ ಸೂಕ್ತ ಸ್ಥಳಗಳು ಪ್ರಾಪ್ತವಾಗುವುದು. ನವಮದಲ್ಲಿ ಇರುವ ಶುಕ್ರನು ನಿಮಗೆ ಇನ್ನಷ್ಟು ಅದೃಷ್ಟವು ಹೆಚ್ಚಾಗಿ ಇರಲಿದೆ. ಕೇತುವು ನಿಮ್ಮ ಮನೆಯಲ್ಲಿ ಇರುವುದರಿಂದ ದೇಹಕ್ಕೆ ನಾನಾ ರೀತಿಯ ತೊಂದರೆಗಳು ಆಗಬಹುದು.

ವೃಶ್ಚಿಕ ರಾಶಿ:

ಈ ವಾರ ಮಧ್ಯಮ ಫಲವನ್ನು ನೀವು ಪಡೆಯಬಹುದು. ಷಷ್ಠದಲ್ಲಿ ಅತ್ಯಂತ ಶುಭ ಕಾರಕನಾದ ಗುರುವಿರುವಿದು ನಿಮಗೆ ಶುಭವಲ್ಲ. ಅದರಲ್ಲಿಯೂ ರಾಹುವಿನ ಸಹಯೋಗದಲ್ಲಿ ಇರುವುದು ಆರೋಗ್ಯದ ತೊಂದರೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಶತ್ರುಗಳ ಬಾಧೆ ಅಪಮಾನವನ್ನು ಎದರಿಸಬೇಕಾಗಬಹುದು. ದಶಮಸ್ಥಾನದಲ್ಲಿ ರವಿ, ಕುಜ, ಬುಧ ಹಾಗೂ ಚಂದ್ರರು ವೃತ್ತಿಯಲ್ಲಿ ನೆಮ್ಮದಿಯನ್ನು ನೀಡುವರು. ಬಡ್ತಿ ಸಿಗುವ ಸಾಧ್ಯತೆ ಇದೆ. ಸರ್ಕಾರದ ಕೆಲಸಗಳು ಬೇಗನೆ ಆಗುವುದು. ವಿವಾಹಕ್ಕೆ ಶುಭ ಕಾಲವು ಒದಗಿಂದಿದ್ದು ಚಿಂತಸದೇ ವಿವಾಹಕ್ಕೆ ಒಪ್ಪಿಕೊಳ್ಳಿ. ಪ್ರೇಮವಿವಾಹಕ್ಕೆ ಅನುಕೂಲವಾಗಲಿದೆ. ಅನಗತ್ಯವಾಗಿ ಆರ್ಥಿಕ ನಷ್ಟವಾಗುವುದು. ಮಹಾಗಣಪತಿ ಆರಾಧನೆಯನ್ನು ನಾನ ಪ್ರಕಾರವಾಗಿ ಮಾಡಿ.

ಧನು ರಾಶಿ:

ಈ ವಾರವು ನಿಮಗೆ ಅಧಿಕ ಶುಭವು ಇರಲಿದೆ. ಪಂಚಮದಲ್ಲಿ ರಾಹುವಿನ ಜೊತೆ ಗುರುವಿದ್ದು ನಿಮಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪಮಟ್ಟಿಗೆ ಅಡೆತಡೆಗಳು ಬಂದಾವು. ಪ್ರಯತ್ನವನ್ನು ಹೆಚ್ಚು ಮಾಡಬೇಕಾಗುವುದು. ನವಮದಲ್ಲಿ ಚತುರ್ಗ್ರಹಗಳು ಇರಲಿದ್ದು ಅಪರೂಪಕ್ಕೆ ಈ ಯೋಗವು ಸಂಭವಿಸಿದೆ. ಇದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡುವುದು. ತಂದೆಯಿಂದ ಪಿತ್ರಾರ್ಜಿತ ಆಸ್ತಿಯನ್ನು ಬಯಸಿದರೆ ಸಿಗಲಿದೆ. ಸಹೋದರಿಂದ ನಿಮಗೆ ಲಾಭವಾಗುವುದು. ವ್ಯಾಪರವು ಅಧಿಕ ಲಾಭದ ಜೊತೆ ಅಭಿವೃದ್ಧಿಯನ್ನು ಪಡೆಯುವುದು. ವಿವಾಹಕ್ಕೆ ಉಪಯುಕ್ತ ಕಾಲವಿದಾಗಿದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ಅನಿವಾರ್ಯವಾದೀತು.

ಮಕರ ರಾಶಿ:

ಈ ವಾರವು ಶುಕ್ರನೊಬ್ಬನೇ ಸಪ್ತಮದಲ್ಲಿ ಇದ್ದು ನಿಮಗೆ ಶುಭವನ್ನು ನೀಡುವವನಾಗಿದ್ದಾನೆ. ಉಳಿದ ಎಲ್ಲ ಗ್ರಹರೂ ಪ್ರತಿಕೂಲದ ಸ್ಥಿತಿ ಇರಲಿದ್ದು ದೈವವೊಂದೇ ನಿಮ್ಮನ್ನು ಕಾಪಾಡುವ ಹುಲ್ಲುಕಡ್ಡಿಯಾಗಿದೆ. ಅಷ್ಟಮದಲ್ಲಿ ಬುಧ, ಕುಜ, ಚಂದ್ರ ಹಾಗೂ ರವಿಯು ಇದ್ದು ಬಂಧುಗಳ ಅಥವಾ ಆಪ್ತರ ಮರಣಭೀತಿಯು ಕಾಡಬಹುದು. ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು. ಗುರುವಿನ ಪೂರ್ಣ ದೃಷ್ಟಿಯು ಅಷ್ಟಸ್ಥಾನದ ಮೇಲೆ ಇರುವ ಕಾರಣ ಅದೆಲ್ಲವೂ ಕಾರ್ಮೋಡದಂತೆ ಬಂದು ಸರಿದುಹೋಗುವುದು. ವೃತ್ತಿಯಲ್ಲಿ ಯಾವುದೇ ಹೊಸ ಆಯಾಮವನ್ನು ಮಾಡಲು ಹೋಗುವುದು ಬೇಡ.

ಕುಂಭ ರಾಶಿ:

ಆಗಷ್ಟ್ ತಿಂಗಳ ಮೂರನೆಯ ವಾರವು ಮಧ್ಯಮ ಗತಿಯಲ್ಲಿ ಸಾಗಬಹುದು. ಸಪ್ತಮಸ್ಥಾನದಲ್ಲಿ ಚತುರ್ಗ್ರಹಯೋಗವು ಈ ವಾರವು ಸಂಭವಿಸುವುದು. ಬಂಧುಗಳ ಕಡೆಯಿಂದ ನಿಮ್ಮ ವಿವಾಹವು ನಿಶ್ಚಯವಾಗುವುದು. ಷಷ್ಠದಲ್ಲಿ ಶುಕ್ರನು ಇರುವುದರಿಂದ ಸ್ತ್ರೀಯರಿಂದ ತೊಂದರೆಯಾಗಬಹುದು ಅಥವಾ ಕುಲದೇವರ ಅನುಗ್ರಹವು ಕಡಿಮೆ ಆಗಲಿದೆ. ರಾಜರಾಜೇಶ್ವರಿಯನ್ನು ನಾನಾ ಪ್ರಕಾರವಾಗಿ ಆರಾಧಿಸಿ. ಆಕೆಯ ಅನುಗ್ರಹವನ್ನು ಪಡೆಯಿರಿ. ವಾತಕ್ಕೆ ಸಂಬಂಧಿಸಿ ಖಾಯಿಲೆಯು ಕಾಣಿಸಿಕೊಳ್ಳಬಹುದು. ಮೃತ್ಯುಂಜಯನ ಸ್ಮರಣೆಯನ್ನು ಮಾಡಲಿ.

ಮೀನ ರಾಶಿ:

ಇದು ಆಗಷ್ಟ್ ತಿಂಗಳ ಮೂರನೆಯ ವಾರವಾಗಿದ್ದು ಅಶುಭವೇ ಹೆಚ್ಚು ಇರಲಿದೆ. ಷಷ್ಠದಲ್ಲಿ ಇರುವ ಕುಜ, ರವಿ, ಬುಧ, ಚಂದ್ರರು ಶತ್ರು ಬಾಧೆ, ತಂದೆ ಅಥವಾ ಮನೆಯ ಹಿರಿಯರಿಂದ ಅಪಮಾನ, ವಿದ್ಯಾಭ್ಯಾಸದಲ್ಲಿ ಸೋಲು, ತಾಯಿಂದ ಅಸಹಕಾರ ಎಲ್ಲವೂ ಆಗುವುದು. ಇದಾವುದಕ್ಕೂ ಧೃತಿಗೆಡದೇ ಮುನ್ನಡೆದರೆ ಯಶಸ್ಸನ್ನು ನೀವು ಪಡೆಯಬಹುದು‌. ದ್ವಿತೀಯದಲ್ಲಿ ಇರುವ ಗುರುವು ಷಷ್ಠಸ್ಥಾನದಲ್ಲಿ ಇರುವ ಕಾರಣ ಎಲ್ಲ ಆತಂಕಗಳೂ ನಾಶವಾಗಿ ನೆಮ್ಮದಿಯು ಸಿಗಬಹುದು. ಮಾತನಾಡುವವಾಗ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಇರಲಿ. ಮಹಾವಿಷ್ಣುವಿನ ಆರಾಧನೆಯು ನಿಮ್ಮ ಹೆಚ್ಚಿನ ಕಷ್ಟವನ್ನು ದೂರ ಮಾಡುವುದು.

-ಲೋಹಿತಶರ್ಮಾ (ವಾಟ್ಸ್​ಆ್ಯಪ್ – 8762924271)

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ