Horoscope 13 August: ಮಕ್ಕಳಿಂದ ನಿಮಗೆ ಆರ್ಥಿಕ ನೆರವು, ರಾಜಕೀಯದಲ್ಲಿ ವರ್ಚಸ್ಸು ಹೆಚ್ಚಲಿದೆ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಸಂಜೆ 05:21 ರಿಂದ 06:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:37 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ರಿಂದ 05:21ರ ವರೆಗೆ.
ಮೇಷ ರಾಶಿ: ಸ್ತ್ರೀಯರಿಂದ ಅಪಮಾನವಾಗಬಹುದು. ವಿಳಂಬವಾಗಿ ಬರುತ್ತದೆ ಎಂದುಕೊಂಡ ಧನವು ಬೇಗ ಬರುವುದು. ಇಂದು ನೀವು ನಿಮ್ಮ ವೃತ್ತಿಯನ್ನು ನಿರ್ಧರಿಸುವಿರಿ. ಸ್ವಾಭಿಮಾನವನ್ನು ಬಿಡಲು ನಿಮಗೆ ಆಗದು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ತಾಯಿಯ ಜೊತೆ ವಾಗ್ವಾದ ಮಾಡಬಹುದು. ಧಾರ್ಮಿಕ ಶ್ರದ್ಧೆಯಿಂದ ದೇವತಾರಾಧನೆಯನ್ನು ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಭಕ್ತಿಗಾಗಿ ಮೀಸಲಿಡುವಿರಿ. ಆದಾಯದ ಮೂಲವನ್ನು ಹುಡುಕುವಿರಿ. ನೆಮ್ಮದಿಯು ನಿಮ್ಮ ಪಾಲಿಗೆ ಇರಲಿದೆ.
ವೃಷಭ ರಾಶಿ: ಮಿತ್ರರ ಜೊತೆ ನೀವು ಪಾಲುದಾರಿಕೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಇರದು. ಸಂಬಂಧದಲ್ಲಿ ವ್ಯವಹಾರವು ಬೇಡ. ನಿಮ್ಮ ಶತ್ರುಗಳು ನಿಮ್ಮಿಂದ ಇಂದು ಅಪ್ರತ್ಯಕ್ಷವಾಗಿ ಪ್ರಯೋಜನವನ್ನು ಪಡೆವರು. ವೃತ್ತಿಯ ಸಂಕಟವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸಲು ಹೋಗಿ ಇನ್ಯಾವುಕ್ಕೋ ಹಣವು ಖಾಲಿಯಾಗುಬಹುದು. ಸಂಗಾತಿಯ ಮಾತುಗಳಿಗೆ ನಿಮ್ಮ ವಿರೋಧವು ಉಚಿತವಾಗಿರುವುದು.
ಮಿಥುನ ರಾಶಿ: ಕಲಾವಿದರು ತಮ್ಮ ಇಂದಿನ ದಿನವನ್ನು ಸಂತೋಷದಿಂದ ಕಳೆಯುವರು. ಆರ್ಥಿಕಲಾಭವು ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕೃಷಿಯಲ್ಲಿ ಹೆಚ್ಚು ಆಸಕ್ತಿಯು ಇದ್ದು ಇಂದು ಅದರ ಕಡೆ ಹೆಚ್ಚು ಗಮನವನ್ನು ಕೊಡುವಿರಿ. ವಾಹನಚಾಲನೆಯಲ್ಲಿ ಜಾಗರೂಕತೆ ಇರಲಿ. ಸಂಗಾತಿಯನ್ನು ನೀವು ಹೊರಗೆ ಕರೆದುಕೊಂಡು ಹೋಗಿ ಖುಷಿಪಡಿಸುವಿರಿ. ಉತ್ಸಾಹವು ಇಂದು ಹೆಚ್ಚಿರಲಿದೆ. ಸುಳ್ಳಾಡಲು ಹೋಗಿ ಸಿಕ್ಕಿಕೊಳ್ಳುವಿರಿ. ಪ್ರಾಮಾಣಿಕತೆಯು ನಿಮಗೆ ವರವಾಗಲಿದೆ.
ಕಟಕ ರಾಶಿ: ನಿಮ್ಮ ಆತ್ಮಗೌರವಕ್ಕೆ ತೊಂದರೆ ಆಗುವ ಕಡೆ ನೀವು ಹೋಗಲಾರಿರಿ. ನಿಮಗೆ ನಿಶ್ಚಯಾತ್ಮಕ ಬುದ್ಧಿಯು ಇಂದು ಇರಲಾರದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮನಸ್ಸಿಡಲು ಕಷ್ಟವಾದೀತು. ದೇಹಕ್ಕೆ ಹೆಚ್ಚು ಶ್ರಮವನ್ನು ಕೊಡುವಿರಿ. ಸಾಮಾಜಿಕ ಮನ್ನಣೆಯನ್ನು ಪಡೆಯಲು ಬಯಸುವಿರಿ. ವಿದೇಶದಲ್ಲಿ ಇರುವವರಿಗೆ ಮನೆಯವರ ನೆನಪಾಗುವುದು. ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಂಡು ಸಂಕಟಪಡುವಿರಿ. ಯಂತ್ರೋಪಕರಣಕ್ಕೆ ಹಣವನ್ನು ಖರ್ಚುಮಾಡುವಿರಿ. ಹಿರಿಯರ ಮೇಲೆ ಗೌರವ ಇರಲಿ.
ಸಿಂಹ ರಾಶಿ: ಹಣವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಗಳು ನಿಮಗೆ ಲಾಭವನ್ನು ಕೊಟ್ಟಾವು. ಇಂದಿನ ಆಯಾಸವು ವಿಶ್ರಾಂತಿಯನ್ನು ಕೊಟ್ಟೀತು. ಅನಾರೋಗ್ಯವು ಸುಧಾರಿಸುವುದು. ಉದ್ಯೋಗಿಗಳಿಗೆ ಸಂತೋಷದ ಸಮಾಚಾರವು ಇರುವುದು. ನಿಮಗೆ ಸಂಬಂಧಿಸಿದ ಸಲಹೆಗಳು ಬಂದರೆ ಅದನ್ನು ಸ್ವೀಕರಿಸಿ. ಅವರನ್ನು ಗೌರವಿಸಿ. ಅನಿರೀಕ್ಷಿತ ಸಂಪತ್ತು ನಿಮಗೆ ಸಂತೋಷವನ್ನು ಕೊಡುವುದು. ಅರಂಭಗಳಿಗೆ ಭೇಟಿ ನೀಡುವಿರಿ. ಮನೆಯಲ್ಲಿ ನಿಮ್ಮ ಸಹಕಾರವು ಪ್ರಶಂಸೆಗೆ ಪಾತ್ರವಾಗುವುದು. ಅಪರಿಚಿತರು ನಿಮ್ಮ ಎಲ್ಲ ವಿಚಾರಗಳನ್ನು ಚರ್ಚಿಸುವರು.
ಕನ್ಯಾ ರಾಶಿ: ಮನಸ್ಸಿಗೆ ಹಿಡಿಸದ ಕೆಲಸವನ್ನು ಮಾಡಲು ಹಿಂಜರಿಯುವಿರಿ. ಕುಟುಂಬದ ಜೊತೆ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಮನಸ್ಸಿನ ಚಾಂಚಲ್ಯಕ್ಕೆ ನೀವು ಯೋಗ್ಯವಾದ ಉಪಚಾರವನ್ನು ಮಾಡುವಿರಿ. ಗೃಹನಿರ್ಮಾಣದ ಬಗ್ಗೆ ಎಲ್ಲರ ಜೊತೆ ಕುಳಿತು ಚರ್ಚಿಸುವಿರಿ. ಅಧ್ಯಾತ್ಮದಲ್ಲಿ ಆಸಕ್ತಿ ಇರಲಿದೆ. ಪ್ರೇಮಜೀವನವು ನಿಮಗೆ ಸಾಕಾಗಿ ಹೋಗುವುದು. ವಿವಾಹದ ಮಾತುಕತೆಯು ನಿಮಗೆ ಸಂತೋಷವನ್ನು ನೀಡದು. ನೆರೆ ಹೊರೆಯ ಜೊತೆ ಕಲಹವಾಗುವುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವುದು. ಬೇರೆಯವರ ಬಗ್ಗೆ ನಿಮಗೆ ಅಸೂಯೆ ಬರಬಹುದು.
ತುಲಾ ರಾಶಿ: ಸ್ಥಿರಾಸ್ತಿಯ ವಿಕ್ರಯದ ವಿಚಾರದಲ್ಲಿ ಏಕಮುಖವಾದ ಅಭಿಪ್ರಾಯವು ಒಳ್ಳೆಯದಲ್ಲ. ಸ್ನೇಹಿತರು ನಿಮ್ಮ ಮಾರ್ಗವನ್ನು ತಪ್ಪಿಸುವರು. ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು, ನಿಮ್ಮ ಕಾರ್ಯವನ್ನು ಗುರುತಿಸಲು ಸಕಾಲ. ನಿಮಗೆ ಬಂದ ಅಪವಾದವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಸ ಉದ್ಯಮವು ಸತತ ಪರಿಶ್ರಮದಿಂದ ಅಭಿವೃದ್ಧಿಯನ್ನು ಕಾಣುವುದು. ಪ್ರಭಾವೀ ಜನರ ಜೊತೆ ಅಂತರವನ್ನು ಇಟ್ಟುಕೊಳ್ಳಿ. ಮನೆಯವರ ವರ್ತನೆಗೆ ನಿಮಗೆ ಸಿಟ್ಟು ಬರಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧವು ಆಗಬಹುದು.
ವೃಶ್ಚಿಕ ರಾಶಿ: ನಿದ್ರೆಯು ಸರಿಯಾಗಿ ಆಗದೇ ಕಿರಿಕಿರಿ ಎನಿಸಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಮಕ್ಕಳ ಕುರಿತು ನಿಮಗೆ ದೂರುಗಳು ಬರಬಹುದು. ಹಿತಶತ್ರುಗಳಿಂದ ದೂರವಿರುವುದು ಉತ್ತಮ. ಈ ದಿನವು ಉತ್ಸಾಹದಿಂದ ಕೆಲಸ ಮಾಡುತ್ತ ಕಳೆದುಹೋಗುವುದು. ಅತಿಯಾದ ಆಲೋಚನೆಯು ತಲೆನೋವು ತಂದೀತು. ಸಹೋದರರ ನಡುವೆ ಸಂಪತ್ತಿಗಾಗಿ ಕಲಹವಾದೀತು. ತಂದೆಯ ಸ್ವಭಾವವು ನಿಮಗೆ ಇಷ್ಟವಾಗದು. ಹೊಸ ಆದಾಯದ ಮೂಲವು ಸಿಕ್ಕಿ ಸಂತೋಷವಾಗಲಿದೆ. ರಾಜಕಾರಣಿಗಳು ಸಮಾಜದಿಂದ ಗೌರವವನ್ನು ಪಡೆದು ಸಂತೋಷಿಸುವಿರಿ. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಸ್ತ್ರೀಯರ ಜೊತೆ ಕಲಹದಿಂದ ತೊಂದರೆಗಳು ಎದುರಾಗಬಹುದು. ಬಂಧುಗಳ ಜೊತೆ ವಿನಾಕಾರಣ ಮನಸ್ತಾಪ ಆಗಬಹುದು.
ಧನು ರಾಶಿ: ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗಲಿದೆ. ದುರಭ್ಯಾಸವನ್ನು ಬಿಡಲು ಒಬ್ಬೊಬ್ಬರಾಗಿ ಹೇಳಬಹುದು. ಅಪಮಾನವಾಗುವ ಸಂದರ್ಭದಲ್ಲಿ ನೀವು ಇರಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಮಾದರಿಯಾಗುವುದು. ನಿರ್ಲಕ್ಷ್ಯದಿಂದ ಉತ್ತಮ ಅವಕಾಶಗಳಿಂದ ವಂಚಿತರಾಗುವಿರಿ. ಕುಟುಂಬ ಮಹತ್ವವು ತಿಳಿಯುವುದು. ಮನೆಯ ಹಿರಿಯ ಆರೋಗ್ಯವು ದುರ್ಬಲವಾಗಿದ್ದು ಇದೇ ನಿಮಗೆ ಚಿಂತೆಯು ಆಗಬಹುದು. ಆತ್ಮಾಭಿಮಾನವು ಅಧಿಕವಾಗಿ ತೋರುವುದು. ಸಹೋದರಿಯ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಿರಿ.
ಮಕರ ರಾಶಿ: ದಾಂಪತ್ಯದ ವಿರಸವು ಸಾಮರಸ್ಯವಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದು. ಸ್ವಪ್ರತಿಷ್ಠೆಯನ್ನು ಬಿಟ್ಟು ಬಿಡಿವುದು ಉತ್ತಮ. ವ್ಯಾಪಾರದಲ್ಲಿ ಯಾರ ಹಸ್ತಕ್ಷೇಪವನ್ನು ಸಹಿಸಲಾರಿರಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ರಾಜಕೀಯದಲ್ಲಿ ನಿಮ್ಮ ವರ್ಚಸ್ಸು ಹೆಚ್ಚುವುದು. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ಕೆಲಸದ ಒತ್ತಡವು ಇಂದು ಅಧಿಕವಾಗುವುದು. ಸಹೋದರನಿಗೆ ಕಾರ್ಯದ ಅನ್ವೇಷಣೆಯನ್ನು ಮಾಡಲಿದ್ದೀರಿ. ನೀವು ನಿರೀಕ್ಷಿಸಿದ ಕೆಲಸದಿಂದ ಯಶಸ್ಸು ಸಿಗಲಿದೆ. ಮಾತನ್ನು ಸರಿಯಾಗಿ ಆಡಿದರೆ ಗೌರವವು ಪ್ರಾಪ್ತವಾಗಬಹುದು. ಭೋಗದ ಕಾರಣಕ್ಕೆ ಹಣವು ಖರ್ಚಾಗುವುದು.
ಕುಂಭ ರಾಶಿ: ಬಂಧುಗಳ ನಾನಾ ಪ್ರಶ್ನೆ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕೆನಿಸುವುದು. ಎಷ್ಟೇ ಪ್ರಯತ್ನಿಸದರೂ ಕೆಲಸವು ಅಡೆತಡೆಗಳಿಂದ ಇದ್ದರೆ ಅದನ್ನು ಬಿಡುವುದು ಉತ್ತಮ. ಮನೆಯ ಕೆಲಸಗಳನ್ನು ನಿರಾಸಕ್ತಿಯು ಇರುವುದು. ಈ ದಿನವನ್ನು ನೀವು ಆರಾಮವಾಗಿ ಕಳೆಯಲು ನಮ್ಮನ್ನು ಮೊದಲೇ ಸಿದ್ಧಪಡಿಸಿಕೊಂಡಿರುವಿರಿ. ರಾಜಕೀಯ ನಾಯಕನಿಂದ ನಿಮಗೆ ಬೇಕಾದ ಬೆಂಬಲವು ಸಿಗುವುದು. ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳಿ. ಅಮೂಲ್ಯವಾದ ವಸ್ತುವನ್ನು ಖರೀದಿಸಿ ಸಂತೋಷಪಡುವಿರಿ. ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.
ಮೀನ ರಾಶಿ: ಇಂದು ನಿಮಗೆ ಸಹಾಯದ ಮನೋಭಾವವು ಅಧಿಕವಾಗಿ ಇರಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ವಾಹನದಿಂದ ಅಪಘಾತವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು. ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಕಾಣಿಸುವುದು. ಎಲ್ಲ ಕಾರ್ಯಗಳಲ್ಲಿಯೂ ಹೆಜ್ಜೆಯನ್ನು ಹಿಂದಿಡುವಿರಿ. ನಿಮ್ಮ ನಿರೀಕ್ಷೆಗೆ ವಿರುದ್ಧವಾದ ಮಾತುಗಳು ಬರಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಮೃದು ಮಾತಿನಿಂದ ಹೆಚ್ಚು ಪ್ರಯೋಜನ ಆಗಬಹುದು.
-ಲೋಹಿತಶರ್ಮಾ – 8762924271 (what’s app only)