AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope ವಾರ ಭವಿಷ್ಯ: ಮೇಷ ರಾಶಿಯವರಿಗೆ ಈ ವಾರ ಬಹಳ ಶುಭ ಫಲಗಳಿವೆ, ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ

Horoscope: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮೇಷ ರಾಶಿಯವರಿಗೆ ಈ ವಾರ ಬಹಳ ಶುಭ ಫಲಗಳಿವೆ, ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ
ವಾರ ಭವಿಷ್ಯ: ಮೇಷ ರಾಶಿಯವರಿಗೆ ಈ ವಾರ ಬಹಳ ಶುಭ ಫಲಗಳಿವೆ, ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ
TV9 Web
| Edited By: |

Updated on: Aug 28, 2022 | 6:06 AM

Share

Weekly Horoscope ವಾರ ಭವಿಷ್ಯ: ತಾ. 28-08-2022 ರಿಂದ ತಾ. 06-09-2022 ರವರೆಗೆ:

  1. ಮೇಷ ರಾಶಿ: ಈ ವಾರ ಬಹಳ ಶುಭ ಫಲಗಳಿವೆ. ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕವಾಗಿ ಯಾವುದೇ ವಿಚಾರಗಳಲ್ಲಿ ಸಕ್ರಿಯವಾಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿವೆ. ತಂದೆ-ತಾಯಿಗಳ ಬೆಂಬಲದಿಂದ ನೂತನ ಉದ್ಯಮವನ್ನು ಆರಂಭ ಮಾಡುವಿರಿ. ಸ್ನೇಹಿತರೊಂದಿಗೆ ಆರ್ಥಿಕ ವ್ಯವಹಾರ ಬೇಡ. ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನಗಳಿವು. ಶುಭ ಸಂಖ್ಯೆ 7
  2. ವೃಷಭ ರಾಶಿ: ಶುಕ್ರನ ನೀಚತ್ವ ಮುಗಿದು ಶುಭವಾಗಲಿದೆ. ನಿಮ್ಮ ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಹುಷಾರಾಗಿರಿ.ಗೆಳೆಯರ ಮಾತಿಗೆ ಹೆಚ್ಚು ಬೆಲೆ ನೀಡುವಿರಿ.ಆರೋಗ್ಯದ ಕಡೆ ಗಮನವಿರಲಿ. ಹತ್ತಿರದ ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ. ಸಂಬಂಧದಲ್ಲಿ ಸಣ್ಣ ಕೋಲಾಹಲವಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಪ್ರಗತಿ. ಶುಭ ಸಂಖ್ಯೆ 1
  3. ಮಿಥುನ ರಾಶಿ: ಭಯದ ವಾತಾವರಣ ಬೇಡ. ಮುಕ್ತವಾಗಿರಿ. ಮೊದಲು ನಿಮ್ಮ ಕೆಲಸಗಳ ಕಡೆಗೆ ಗಮನವಿಡಿ. ತದನಂತರ ಸ್ನೇಹಿತರಿಗೆ ನೆರವಾಗಿ. ಔದ್ಯೋಗಿಕವಾಗಿ ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ. ಆರೋಗ್ಯದಲ್ಲಿ ಸ್ಥಿರತೆ. ಶುಭ ಕಾರ್ಯಗಳು ಸನ್ನಿಹಿತವಾಗಲಿವೆ.ಬಂಧು ಬಳಗದಿಂದ ನಿಮ್ಮ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಸೂಕ್ತಿ ನಿರ್ಧಾರಗಳಿಂದ ಮುಂದುವರೆಯಿರಿ. ಶುಭ ಸಂಖ್ಯೆ 4
  4. ಕಟಕ ರಾಶಿ: ಗುರುಬಲ ಪ್ರಾರಂಭವಾಗಲಿದೆ.ಕಾರ್ಯಸಿದ್ದಿಯಾಗಲಿದೆ. ಸ್ವಲ್ಪ ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ವಾರಪೂರ್ತಿ ಸಂತಸದಿಂದ ಇರುವಿರಿ. ನಿಧಾನವಾಗಿ ಯೋಚಿಸಿ ಸಂಬಂಧ ಬೆಸೆಯಲು ಮುಂದಾಗಿ.ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದರಲ್ಲಿ ನಂಬಿಕೆ ಇರಲಿ. ಮನೆಗೆ ಹೊಸ ವಸ್ತುಗಳು ಬರಲಿವೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ ಬರಲಿ. ಶುಭ ಸಂಖ್ಯೆ 8
  5. ಸಿಂಹ ರಾಶಿ: ಕೋಪತಾಪಗಳಿಂದ ದೂರವಿರಿ,ಶುಭ ಸಮಯ,ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದ ಕೆಲಸ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು ಪೂರ್ವತಯಾರಿಯನ್ನು ಮಾಡಿಕೊಳ್ಳಿ. ಮಿತವ್ಯಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಮನೆಯವರೊಂದಿಗೆ ಸಂತಸವಾಗಲಿದೆ. ಶುಭ ಸಂಖ್ಯೆ 6
  6. ಕನ್ಯಾ ರಾಶಿ: ಬುಧನ ಅನುಗ್ರಹ ಚನ್ನಾಗಿದೆ. ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಚ್ಚುಮೊಬೈಲ್ ಬಳಕೆ ಒಳ್ಳೆಯದಲ್ಲ. ಕೆಲಸದ ಸ್ಥಳದಲ್ಲಿ ಅನಾವಶ್ಯಕ ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. ನಿಮ್ಮ ಕೆಲಸಗಳಿಂದ ಹೆತ್ತವರು ಹೆಮ್ಮೆ ಪಡಲಿದ್ದಾರೆ. ಮಾತಿಗಿಂತ ಮೌನ ಹೆಚ್ಚು ಪರಿಣಾಮಕಾರಿ. ಶುಭ ಸಂಖ್ಯೆ 7
  7. ತುಲಾ ರಾಶಿ: ಶುಕ್ರ ಜನ್ಮ ಸಂಚಾರ ಶುಭವಾಗಲಿದೆ. ಆರೋಗ್ಯದ ಮೇಲೆ ಜಾಸ್ತಿ ನಿಗಾ ಇರಲಿ. ಕೆಲಸದ ಒತ್ತಡ ನಿಭಾಯಿಸುವ ಶಕ್ತಿಯನ್ನು ಒಟ್ಟು ಮಾಡಿಟ್ಟುಕೊಳ್ಳಿ. ಅಗತ್ಯವಾದ ವಿಚಾರಗಳ ಕಡೆಗೆಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ ಮಾಡಿಕೊಳ್ಳಿ. ರಾಜಕೀಯವಾಗಿ ಮುನ್ನಡೆ ಸಿಗಲಿದೆ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಒಂದೇ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಶುಭ ಸಂಖ್ಯೆ 2
  8. ವೃಶ್ಚಿಕ ರಾಶಿ: ದೊಡ್ಡ ದೊಡ್ಡ ನಿರ್ಧಾರಗಳನ್ನು ಹೆಚ್ಚು ಸಮಯ ಮುಂದೂಡಬೇಡಿ. ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು ಎದುರಾಗಲಿವೆ. ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಸ್ವಂತ ಮನೆ ಕನಸು ಕೈಗೂಡಲಿದೆ. ಶುಭ ಸಂಖ್ಯೆ 9
  9. ಧನಸ್ಸು ರಾಶಿ: ಏನೋ ಅಂದುಕೊಂಡಿದ್ದರೂ ಆ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವರೊಂದಿಗೆ ಮೃದುವಾಗಿ ವರ್ತಿಸಿ, ಆರ್ಥಿಕವಾಗಿಲಾಭವಾಗಲಿದೆ. ಕೋಪ ಬಂದಾಗ ಹೆಚ್ಚು ಮಾತನಾಡಲು ಹೋಗಬೇಡಿ. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಮುಖ್ಯ. ಶುಭ ಸಂಖ್ಯೆ 5
  10. ಮಕರ ರಾಶಿ: ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕ ಬೇಡ. ಮನೆಯಲ್ಲಿ ಮುನಿಸು ಬೇಡ. ಮಕ್ಕಳ ಪ್ರೀತಿಯಿಂದ ಹೆಚ್ಚು ಸಂತೋಷಪಡುವಿರಿ. ಅಂದುಕೊಂಡಂತೆ ಮಹತ್ವದ ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ ಇಡಿ. ಖರ್ಚಿನಲ್ಲಿ ಮಿತ ಸಾಧಿಸಿದರೆ ಭವಿಷ್ಯದಲ್ಲಿ ಒಳಿತಾಗಲಿದೆ. ಶುಭ ಸಂಖ್ಯೆ 3
  11. ಕುಂಭ ರಾಶಿ: ವ್ಯಯ ಗುರು ಸರಳ ವಿಘ್ನಗಳು. ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದಪ್ರಯಾಣ ದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.ಅತಿ ಭಾವುಕತೆ ಒಳ್ಳೆಯದಲ್ಲ. ಜಗತ್ತು ನೀವಂದುಕೊಂಡ ಹಾಗೆ ಇಲ್ಲ. ತಂದೆ ತಾಯಿ ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ. ಶುಭ ಸಂಖ್ಯೆ 9
  12. ಮೀನ ರಾಶಿ: ಗುರು ಬದಲಾವಣೆ ಶುಭ ಫಲ. ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಸಕ್ತರಿಗೆ ನೆರವಾಗುವಿರಿ. ಶುಭ ಸಂಖ್ಯೆ 5. ಡಾ. ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ, ಮೊಬೈಲ್- 99728 48937

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?