ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.
ವಾರ ಭವಿಷ್ಯ
ತಾ.04-10-2021 ರಿಂದ ತಾ.10-10-2021 ರ ತನಕ.
****
ಮೇಷರಾಶಿ:-
ನಿಮ್ಮ ಕೌಶಲ್ಯದಿಂದ ಅದ್ಭುತವನ್ನು ಸಾಧಿಸುವಿರಿ. ಕೆಲವು ಅವಕಾಶಗಳು ನಿಮ್ಮ ಅನುಚಿತ ಮಾತುಗಳಿಂದ ಕೈತಪ್ಪಬಹುದು. ಈ ವಾರ ಹೆಚ್ಚು ಪ್ರತಿಷ್ಠೆ ಹಾಗೂ ಅಸೂಯೆ ಎರಡನ್ನೂ ಸಹ ಅನುಭವಿಸುವಿರಿ. ಸರ್ಕಾರದಿಂದ ಗೌರವವು ದೊರೆಯುವುದು. ಸಂಗಾತಿಯಿಂದ ಉತ್ತಮ ಬೆಂಬಲ ದೊರೆಯುವುದು. ವಾರದ ಮಧ್ಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ. ನಿಮ್ಮ ಅವಿರತ ಶ್ರಮಕ್ಕೆ ಉತ್ತಮ ಫಲ ದೊರೆಯುವುದು. ನಿಮ್ಮ ಬೌದ್ಧಿಕ ಬುದ್ಧಿವಂತಿಕೆ ಹೆಚ್ಚು ಪ್ರಯೋಜನ ನೀಡಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಬಹುದು.
ಅದೃಷ್ಟ ಬಣ್ಣ: ಕೇಸರಿ ಬಣ್ಣ.
ಸಂಖ್ಯೆ: 9
ವೃಷಭ ರಾಶಿ:-
ನಿಮ್ಮ ರಾಶಿಯ ಮೇಲೆ ಗುರುವಿನ ಪ್ರಭಾವ ಉತ್ತಮವಾಗಿರುವುದರಿಂದ ನೀವು ಆಂತರಿಕ ಶಕ್ತಿಯನ್ನು ಮತ್ತು ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಳ್ಳುವಿರಿ. ವಿದೇಶಿ ಬಂಧುಗಳಿಂದ ಲಾಭವನ್ನು ಪಡೆದುಕೊಳ್ಳುವಿರಿ. ನಿಮಗೆ ಸಂತೋಷದ ಭಾವನೆ ದೊರೆಯುವುದು. ಹೊಸ ಆಲೋಚನೆಗಳು ಲಾಭವನ್ನು ತಂದುಕೊಡುತ್ತವೆ. ವಿದ್ಯಾರ್ಥಿಗಳಿಗೆ ಇದು ಸಾಮಾನ್ಯಕರವಾದ ಸಮಯ ಎನ್ನಬಹುದು. ಅಜಾಗರೂಕತೆಯಿಂದ ಒಂದಿಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆಗಳು ಇರುತ್ತವೆ. ಉದ್ದೇಶ ಪೂರಕವಾಗಿ ಇತರರ ಹೃದಯವನ್ನು ನೋಯಿಸುವಿರಿ. ಸಂಗಾತಿಯೊಂದಿಗೆ ಅನಗತ್ಯವಾದ ಭಿನ್ನಾಭಿಪ್ರಾಯ ಸಂಭವಿಸುವುದು. ತಂದೆ ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಅದೃಷ್ಟ ಬಣ್ಣ: ಬೆಳ್ಳಿ ಮತ್ತು ಬಿಳಿ ಬಣ್ಣ.
ಅದೃಷ್ಟದ ಸಂಖ್ಯೆ: 6
ಮಿಥುನ ರಾಶಿ:-
ಕುಟುಂಬದಲ್ಲಿ ಸಂತೋಷವನ್ನು ಪಡೆದುಕೊಳ್ಳುವಿರಿ. ನಿಮಗೆ ಗೌರವ ಹೆಚ್ಚಾಗುತ್ತದೆ. ನಿಮ್ಮೊಳಗೆ ಕೆಲವು ಚಿಂತನೆಗಳು ನಿಮ್ಮಲ್ಲಿ ಉಗ್ರವಾದ ಭಾವನೆ ಮೂಡುವಂತೆ ಮಾಡುವುದು. ವಾರದ ಆರಂಭದಲ್ಲಿ ಇತರರ ಬೆಂಬಲ ಪಡೆಯುತ್ತೀರಿ. ವಸ್ತುಗಳಿಂದ ಒಂದಿಷ್ಟು ಸಂತೋಷವನ್ನು ಪಡೆದುಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿಯು ಲಾಭ ಮತ್ತು ಭದ್ರತೆಯಿಂದ ಕೂಡಿರುತ್ತದೆ. ಪ್ರೇಮದ ಸಂಬಂಧವು ಗಟ್ಟಿಯಾಗಿರುತ್ತದೆ. ಪ್ರೀತಿ ಪಾತ್ರರ ಬೆಂಬಲ ಹೆಚ್ಚಾಗಿರುತ್ತದೆ. ಕುಟುಂಬ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಂತೋಷ ದೊರೆಯುವುದು. ಧೈರ್ಯದಿಂದ ಮಾತನಾಡಿ. ವ್ಯಾಪಾರದಲ್ಲಿ ಹೊಸ ಅವಕಾಶ ಹಾಗೂ ಲಾಭವನ್ನು ಕಾಣುವರು. ಸಂಬಂಧದಲ್ಲಿ ಕೆಲವು ಗೊಂದಲ ಕಾಡುವುದು. ಸಮಯದ ಬಗ್ಗೆ ಕೊಂಚ ಕಾಳಜಿ ಹೊಂದಿರಬೇಕು.
ಅದೃಷ್ಟ ಬಣ್ಣ: ಹಸಿರು
ಸಂಖ್ಯೆ: 5
ಕರ್ಕ ರಾಶಿ:-
ಉದ್ಯೋಗ ಕ್ಷೇತ್ರದಲ್ಲಿ ಲಾಭ ಹಾಗೂ ಅವಕಾಶಗಳು ಕೈಗೂಡಿ ಬರುತ್ತವೆ. ನಿಮ್ಮ ಸೋಮಾರಿತನ ನಿಮ್ಮ ಸಮಯವನ್ನು ಹಾಳು ಮಾಡುವುದು. ಕ್ಷಮೆ ಮತ್ತು ಪ್ರೀತಿಯು ನಿಮಗೆ ವಿವಿಧ ಕ್ಷೇತ್ರದಲ್ಲಿ ಜಯವನ್ನು ತಂದುಕೊಡುವುದು. ಹಳೆಯ ಸಮಸ್ಯೆ ಬಗೆ ಹರಿಯುವುದು. ಹಣಕಾಸಿನ ಸಾಮಥ್ರ್ಯ ಸುಧಾರಿಸುತ್ತದೆ. ಯಾವುದೇ ಹೊಸ ನಿರ್ಧಾರ ಕೈಗೊಳ್ಳಬೇಕಾದರೆ ಸೂಕ್ತ ಚಿಂತನೆ ನಡೆಸಿ. ಮಕ್ಕಳಿಗೆ ಕಾಡುವ ಚಿಂತನೆಗಳು ಕಡಿಮೆ ಆಗುತ್ತವೆ. ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಹೊಸತನ ಹಾಗೂ ಸಂತೋಷವಿರುತ್ತದೆ. ವಾರದ ಕೊನೆಯಲ್ಲಿ ಹಾಠಾತ್ ಲಾಭ ಪಡೆಯುವ ಸಾಧ್ಯತೆ ಹೆಚ್ಚು. ನಿಮ್ಮ ಒತ್ತಡದ ಕೆಲಸ ಹಾಗೂ ಕಾರ್ಯ ನಿರತತೆಯು ಸಂಗಾತಿಯಲ್ಲಿ ದುಃಖವನ್ನು ತರುವುದು.
ಅದೃಷ್ಟ ಬಣ್ಣ: ಕೇಸರಿ ಬಣ್ಣ.
ಅದೃಷ್ಟದ ಸಂಖ್ಯೆ: 1 ಮತ್ತು 2
ಸಿಂಹ ರಾಶಿ:-
ಹೊಸ ಆಲೋಚನೆಗಳು ಖ್ಯಾತಿಯನ್ನು ತಂದುಕೊಡುವುದು. ಬೆಲೆಬಾಳುವ ವಸ್ತು ಅಥವಾ ಅಗತ್ಯ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು. ವಾರದ ಆರಮಭದಲ್ಲಿ ಸಂತೋಷ ಹಾಗೂ ವ್ಯಾಪಾರದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಆತುರದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳದಿರಿ. ಪೋಷಕರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು. ವಿರುದ್ಧ ಲಿಂಗದವರಮೇಲೆ ಆಕರ್ಷಣೆ ಹೆಚ್ಚುವುದು. ವಾರದ ಅಂತ್ಯದಲ್ಲಿ ದೈಹಿಕ ಆಕ್ತಿಯಲ್ಲಿ ಇಳಿಕೆ ಹಾಗೂ ಮಾನಸಿಕ ಶಕ್ತಿಯಲ್ಲಿ ಏರಿಕೆಯನ್ನು ಕಾಣುವಿರಿ. ಸಹೋದರ ಮತ್ತು ಸಹೋದರಿಯರಿಂದ ಸಹಕಾರ ದೊರೆಯುವುದು. ಹೊಸ ಉದ್ಯೋಗಗಳಿಂದ ದೂರ ಇರಿ. ವೃತ್ತಿ ಜೀವನವು ಉತ್ತಮವಾಗಿರುತ್ತದೆ.
ಅದೃಷ್ಟ ಬಣ್ಣ: ಕೇಸರಿ ಬಣ್ಣ.
ಶುಭ ಸಂಖ್ಯೆ: 1
ಕನ್ಯಾರಾಶಿ:-
ಎಲ್ಲಾ ವಿಚಾರಗಳಲ್ಲಿ ಸಮಚಿತ್ತದಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಗೃಹ ನಿರ್ಮಾಣ ಕಾರ್ಯಗಳು ಅಡೆತಡೆಗಳಿಂದ ನಡೆಯುತ್ತವೆ. ಶುಭಕಾರ್ಯಗಳಿಗಾಗಿ ಹಿರಿಯರೊಡನೆ ಸಮಾಲೋಚನೆ ಅಗತ್ಯವಿರುತ್ತದೆ. ದುಡುಕದಿರಿ. ಈ ದಿನ ಒಳಿತಲ್ಲ ಎಂಬ ಮನೋಭಾವನೆ ಬಿಟ್ಟು ಪ್ರಯತ್ನ ಬಲ, ಆತ್ಮವಿಶ್ವಾಸದಿಂದ ಕಾರ್ಯರಂಗಕ್ಕೆ ಧುಮುಕಿರಿ. ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು.
ಅದೃಷ್ಟ ಬಣ್ಣ: ಗುಲಾಬಿ
ಶುಭ ಸಂಖ್ಯೆ: 7
ತುಲಾ ರಾಶಿ:-
ಔಷಧಿ ಹಾಗೂ ರಾಸಾಯನಿಕ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಈ ವಾರ ಹರ್ಷದಾಯಕವಾಗಿರುತ್ತದೆ. ಕೃಷಿ ಉತ್ಪನ್ನಗಳ ಬೆಲೆ ಏರುವುದರಿಂದ ಕೃಷಿಕರಿಗೆ ಒಳ್ಳೆಯ ಆದಾಯವಿದ್ದು ತಾವು ಮಾಡಿದ್ದ ಸಾಲವನ್ನು ತೀರಿಸಿಕೊಳ್ಳುವ ಸದಾವಕಾಶ ಒದಗುವುದು. ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು ಇದ್ದು ಹೆಚ್ಚಿನ ಪ್ರೋತ್ಸಾಹಗಳು ದೊರೆತು ಸಮಾಜದಲ್ಲಿ ಸ್ಥಾನಮಾನಗಳಿಂದ ಉನ್ನತ ಸ್ಥಿತಿಗೆ ಬರುವರು.
ಅದೃಷ್ಟ ಬಣ್ಣ: ಕಂದು
ಶುಭ ಸಂಖ್ಯೆ: 6
ವೃಶ್ಚಿಕರಾಶಿ:-
ಆರ್ಥಿಕ ಸ್ಥಿತಿಯಲ್ಲಿ ಆಗಾಗ ಏರುಪೇರಾದರೂ ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ. ಆತ್ಮೀಯರ ಸಹಕಾರದಿಂದ ಕಾರ್ಯಸಿದ್ಧಿ. ಚಿನ್ನಾಭರಣ ಸಂಗ್ರಹದಿಂದ ಯಶಸ್ವಿ ಬಾಳ್ವೆಯೆನಿಸಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವೃತ್ತಿರಂಗದಲ್ಲಿ ನಿಮಗೆ ಕ್ರಿಯಾಶೀಲತೆಗೆ ಹಾಗೇ ನೀವಿಟ್ಟ ವಿಶ್ವಾಸ ಇವೆಲ್ಲ ಸಫಲತೆಯನ್ನು ಹೊಂದುವುದು. ಸಾಮಾಜಿಕ ಕ್ಷೇತ್ರದಲ್ಲಿ ಜನಾನುರಾಗದ ಅನುಭವವಾಗುತ್ತದೆ.
ಅದೃಷ್ಟ ಬಣ್ಣ: ಬೂದು
ಶುಭ ಸಂಖ್ಯೆ: 7
ಧನುರಾಶಿ:-
ಉತ್ತಮ ಯಶಸ್ಸಿನ ವಾರವಿದು. ಜೀವನ ಶೈಲಿ ಹಾಗೂ ವಿಚಾರ ಚಿಂತನೆಯನ್ನು ಬದಲಿಸಿಕೊಳ್ಳುವ ಕಾಲ ಪಕ್ವವಾಗಲಿದೆ. ದೇವತಾನುಗ್ರಹದಿಂದ ತೆಗೆದುಕೊಳ್ಳುವ ಹೆಜ್ಜೆಗಳು ಸರಿದಾರಿಯಲ್ಲಿ ಮುನ್ನಡೆಸಲಿವೆ. ಆತ್ಮವಿಶ್ವಾಸ ವಿರಲಿ. ನಿಮ್ಮ ಸಾಮರ್ಥ್ಯ ಹಾಗೂ ಪ್ರಯತ್ನವನ್ನು ಕೀಳಂದಾಜಿಸಬೇಡಿ. ಒಳ್ಳೆಯದು ನಿಮ್ಮದಾಗಲಿದೆ. ಪ್ರಣಯಿಗಳಿಗೆ ಪ್ರೀತಿ, ಪ್ರೇಮಕ್ಕೆ ಪೂರಕವಾದ ಸಮಯ. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸಿಕೊಳ್ಳಲಿದ್ದಾರೆ.
ಅದೃಷ್ಟ ಬಣ್ಣ: ಬಿಳಿ
ಶುಭ ಸಂಖ್ಯೆ: 3
ಮಕರ ರಾಶಿ:-
ಹಿರಿಯರ ಅಭಿಪ್ರಾಯದಂತೆ ಮನೆಯನ್ನು ಆಧುನಿಕಗೊಳಿಸುವ ಕೆಲಸದಲ್ಲಿ ಮುಂದುವರಿಯುವಿರಿ. ಸ್ನೇಹಿತರ ಸಹಾಯದಿಂದ ಜಮೀನು ಖರೀದಿಯ ಕನಸು ನನಸಾಗಲಿದೆ. ಸರಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜೊತೆಗೆ ಲಾಭದಾಯಕವಾಗಿಯೂ ಇರುತ್ತವೆ. ಸಾಂಸಾರಿಕವಾಗಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತು, ಮನಸ್ಸಿನ ಶಾಂತಿಯನ್ನು ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯಿದ್ದು ಸಂತೋಷದಿಂದಿರುವಿರಿ. ಶ್ರೀ ರಾಮನಾಮದ ಜಪವನ್ನು ಮಾಡಿ.
ಅದೃಷ್ಟ ಬಣ್ಣ: ಕಪ್ಪು
8
ಕುಂಭ ರಾಶಿ:-
ಮನೆ ಕಟ್ಟಲೇಬೇಕೆಂಬ ನಿಮ್ಮ ಆಸೆಯು ಈ ವಾರದಲ್ಲಿ ಪ್ರಾರಂಭವಾಗಲಿದೆ. ಲೇಖನ ವೃತ್ತಿಯಲ್ಲಿ ಪ್ರಗತಿಯನ್ನು ಕಾಣುವಿರಿ. ಯಂತ್ರೋಪಕರಣಗಳ ವ್ಯಾಪಾರಗಳ ಮೂಲಕ ಲಾಭ. ಹಿರಿಯರ ಆರೋಗ್ಯವು ಸುಧಾರಣೆ ಹಂತದಲ್ಲಿರುವುದು. ನಿಮ್ಮ ಸ್ವಂತ ಉದ್ಯಮದಲ್ಲಿ ನೀವು ಉತ್ತಮ ಲಾಭ ಹೊಂದುವಿರಿ. ಹೊಸ ಮನೆಗಾಗಿ ಅಲಂಕಾರಿಕ ವಸ್ತುಗಳ ಖರೀದಿ ನಡೆಯುವುದು. ಆಕಸ್ಮಿಕ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವಿರಿ. ಹೊಸ ವ್ಯವಹಾರವೊಂದರ ಪ್ರಾರಂಭಕ್ಕೆ ಮಾಹಿತಿಗಳ ಸಂಗ್ರಹಣೆಯು ನಡೆಯುವುದು.
ಅದೃಷ್ಟ ಬಣ್ಣ: ನೀಲಿ
ಶುಭ ಸಂಖ್ಯೆ: 4
ಮೀನರಾಶಿ.
ವೃತ್ತಿರಂಗದಲ್ಲಿ ನಿರೀಕ್ಷಿತ ಉನ್ನತ ಸ್ಥಾನ ಪ್ರಾಪ್ತಿಯಾಗಿ ಕಂಟ್ರಾಕ್ಟ್ ವೃತ್ತಿಯವರಿಗೆ ಧನಾಗಮನ ನಿರಂತರವಿದೆ. ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ ಸಿಗಲಿದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರುವ ಸಾಧ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಹೊಸ ಉತ್ಸಾಹ ವರ್ಧಿಸಲಿದೆ. ನೂತನ ವಾಹನ ಲಾಭವೂ ಇದ್ದೀತು. ಕಾರ್ಯಶೀಲರಾದ ನಿಮ್ಮ ಪ್ರಯತ್ನಬಲವೂ ಕಾರ್ಯಸಾಧನೆಗೆ ಅನುಗುಣವಾಗಲಿದೆ.
ಅದೃಷ್ಟ ಬಣ್ಣ: ತಿಳಿ ಹಳದಿ
ಶುಭ ಸಂಖ್ಯೆ : 5
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937