Weekly Horoscope in Kannada: ವಾರ ಭವಿಷ್ಯ: ಸೆಪ್ಟೆಂಬರ್. 29 ರಿಂದ ಅಕ್ಟೋಬರ್.05ರವರೆಗೆ ವಾರ ಭವಿಷ್ಯ ಇಲ್ಲಿದೆ

ಇದು ಅಕ್ಟೋಬರ್ ತಿಂಗಳ ಮೊದಲ ವಾರ. ಸೆ. 29 ರಿಂದ ಅ. 05 ರವರೆಗೆ ಇರಲಿದೆ. ಶನಿಯು ಪೂರ್ಣ ಬಲಿಷ್ಠನಾದ ಕಾರಣ ಆತನಿಂದ ಶುಭಫಲವೂ ಸಿಗುವುದು. ಶುಕ್ರನು ಸ್ವಕ್ಷೇತ್ರಕ್ಕೆ ತೆರಳುವನು. ಭೋಗವಸ್ತುಗಳನ್ನು ಪಡೆಯುವ ಹಾಗೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ‌ ಎರಡೂ ಸಂದರ್ಭದಲ್ಲಿ ಏಕರೂಪತೆಯನ್ನು ಇಟ್ಟುಕೊಂಡರೆ ನಿಮಗೆ ದಾರಿ ಸುಂದರ. ಇಲ್ಲವಾದರೆ ಭಯಂಕರ.

Weekly Horoscope in Kannada: ವಾರ ಭವಿಷ್ಯ: ಸೆಪ್ಟೆಂಬರ್. 29 ರಿಂದ ಅಕ್ಟೋಬರ್.05ರವರೆಗೆ ವಾರ ಭವಿಷ್ಯ ಇಲ್ಲಿದೆ
ವಾರ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 12:03 AM

ಇದು ಅಕ್ಟೋಬರ್ ತಿಂಗಳ ಮೊದಲ ವಾರ. ಸೆ. 29 ರಿಂದ ಅ. 05 ರವರೆಗೆ ಇರಲಿದೆ. ಶನಿಯು ಪೂರ್ಣ ಬಲಿಷ್ಠನಾದ ಕಾರಣ ಆತನಿಂದ ಶುಭಫಲವೂ ಸಿಗುವುದು. ಶುಕ್ರನು ಸ್ವಕ್ಷೇತ್ರಕ್ಕೆ ತೆರಳುವನು. ಭೋಗವಸ್ತುಗಳನ್ನು ಪಡೆಯುವ ಹಾಗೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ‌ ಎರಡೂ ಸಂದರ್ಭದಲ್ಲಿ ಏಕರೂಪತೆಯನ್ನು ಇಟ್ಟುಕೊಂಡರೆ ನಿಮಗೆ ದಾರಿ ಸುಂದರ. ಇಲ್ಲವಾದರೆ ಭಯಂಕರ.

ಮೇಷ ರಾಶಿ : ಅಕ್ಟೋಬರ್ ತಿಂಗಳ ಮೊದಲನೇ ವಾರದಲ್ಲಿ ಕುಜನು ಅಧಿಪತಿಯಾದ ಈ ರಾಶಿಗೆ ಶುಭಾಶುಭ ಫಲ. ಗುರುವು ದ್ವಿತೀಯದಲ್ಲಿ ಇದ್ದು ಗೌರವಯುತವಾದ ದಾರಿಯಲ್ಲಿ ನಿಮಗೆ ಸಂಪತ್ತನ್ನು ಕೊಡವನು. ಮನೆಯಲ್ಲಿಯೂ ಸಂತಸದ ವಾತಾವರಣ ಇರುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಶುಕ್ರನು ಸಪ್ತಮದಲ್ಲಿ ಇರುವ ಕಾರಣ ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ನೌಕರಿ ಇಲ್ಲದೆ ಹುಡುಕುತ್ತಿರುವವರಿಗೆ ಮನೆ ಬಾಗಿಲಿಗೇ ನೌಕರಿಯ ಆಹ್ವಾನ ಬರುತ್ತದೆ. ಹಣದ ಹರಿವು ಉತ್ತಮವಾಗಿದೆ.‌ ತಂದೆಯ ಮೇಲೆ‌ ನೀವು ಸಿಟ್ಟುಮಾಡಿಕೊಳ್ಳುವಿರಿ. ಸುಬ್ರಹ್ಮಣ್ಯ ಸ್ತೋತ್ರವನ್ನು ಮಾಡಿ, ಆರಾಧಿಸಿ.

ವೃಷಭ ರಾಶಿ : ರಾಶಿಚಕ್ರದ ಎರಡನೇ ರಾಶಿಯಾಗಿದ್ದು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಶುಭಾಶುಭ ಫಲ. ರಾಶಿಯ ಅಧಿಪತಿಯೇ ಷಷ್ಠದಲ್ಲಿ ಇರುವುದು ನಿಮ್ಮವರೇ ನಿಮಗೆ ಶತ್ರುಗಳಾಗಿ ಬರುವರು.‌ ನಿಮ್ಮ ವರ್ತನೆ ಹಾಗೂ ಅವರನ್ನು ಕಾಣುವ ರೀತಿಯಿಂದ ನಿಮ್ಮವರನ್ನು ಕಳೆದುಕೊಳ್ಳುವಿರಿ. ಏಕಾದಶದಲ್ಲಿ ರಾಹುವು ಬಲಬಾಗಿ ಇರುವುದರಿಂದ ಏನೇ ಅಡೆತಡೆಗಳು ಎದುರಾದರೂ ಸರಾಗವಾಗಿ ನಿಭಾಯಿಸಿ ಮುಂದಕ್ಕೆ ಹೋಗುತ್ತೀರಿ. ಯಾವುದಕ್ಕೂ ಯೋಚನೆ‌ಬೇಡ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹೋಗಿ ಮುಗ್ಗರಿಸುವಿರಿ. ಮಕ್ಕಳ ಕಿರಿಕಿರಿಯನ್ನು ಸಹಿಸಲಾಗದು. ಕೆಂಪು ವಸ್ತುವನ್ನು ದಾನವಾಗಿ ಕೊಡಿ.

ಮಿಥುನ ರಾಶಿ : ಬುಧನ ಅಧಿಪತ್ಯದ ಮೊದಲ ರಾಶಿ ಇದು. ಚತುರ್ಥದಲ್ಲಿ ಕೇತುವಿನ ಜೊತೆ ಇರುವ ಕಾರಣ ಆಗಾಗ ಆರೋಗ್ಯ, ಮಾನಸಿಕ ನೆಮ್ಮದಿ ದೂರಾಗುವುದು. ಗುರು ವ್ಯಯಸ್ಥಾನಕ್ಕೆ ಬಂದಿರುವುದರಿಂದ ಶುಭಕಾರ್ಯಕ್ಕೆ ಖರ್ಚುಗಳು ಇರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ವೃತ್ತಿಜೀವನದಲ್ಲಿ ನಿಮಗೆ ಏನೋ ಬದಲಾವಣೆ ಎನಿಸಬಹುದು. ಅದು ಗೋಚರಿಸಿದಾಗ ಒಪ್ಪಿಕೊಳ್ಳಿ. ಆ ಬದಲಾವಣೆಯಿಂದ ನಿಮ್ಮ ಜೀವನಕ್ಕೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ತಾಯಿಗೆ ಒತ್ತಡಗಳಿಂದ ಅನಾರೋಗ್ಯ ಹೆಚ್ಚಾಗುವುದು. ಹೆಣ್ಣು ಮಕ್ಕಳ ಪ್ರೀತಿಯು ನಿಮಗೆ ಸಿಗುವುದು. ದುರಭ್ಯಾಸಗಳ ಕಡೆ ಗಮನ ಬೇಡ. ಗುರುವಿನ ಧ್ಯಾನ ಮಹಡಿ.

ಕರ್ಕಾಟಕ ರಾಶಿ ; ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಚಂದ್ರ ಆಧಿಪತ್ಯವಿರುವ ರಾಶಿಯಲ್ಲಿ‌ ಕುಜನು ನೀಚನಾಗಿರುವನು. ಇದುವರೆಗೂ ಗುರುಬಲ ಇಲ್ಲದೇ ಒದ್ದಾಡಿದ್ದೀರಿ. ಈ ರಾಶಿಗೆ ಗುರುಬಲವಿರುವ ಕಾರಣ ನಿಂತ ಕೆಲಸಗಳು ಮರು ಆರಂಭವನ್ನು ಪಡೆಯುತ್ತವೆ. ವೃತ್ತಿಯಲ್ಲಿ ಭಡ್ತಿಯನ್ನು ಕೇಳಿ ಪಡೆದರೂ ಯಶಸ್ಸು ಇದೆ. ಕೌಟುಂಬಿಕ ಸೌಹಾರ್ದತೆಯನ್ನು ವಿಶೇಷ ಆಸಕ್ತಿಕೊಟ್ಟು ನೋಡಿಕೊಳ್ಳುವಿರಿ.‌ ತೃತೀಯದಲ್ಲಿ ಕೇತು ನಿಮಗೆ ಮುನ್ನುಗ್ಗುವ ಎದುರಿಸುವ ಶಕ್ತಿ ಕೊಡುತ್ತಾನೆ. ಶುಕ್ರನು ತಾಯಿಯ ಸಂಬಂಧದಲ್ಲಿ ವಿವಾಹವಾಗುವಂತೆ ಮಾಡುವನು ಅಥವಾ ಪ್ರೇಮಕ್ಕೆ ಪೂರಕವಾದ ವಾತಾವರಣವನ್ನು ಕೊಡುವನು.‌ ನಾಗದೇವರ ಆರಾಧನೆಯನ್ನು ಮಾಡಿ.

ಸಿಂಹ ರಾಶಿ : ಸೂರ್ಯನು ಅಧಿಪತಿಯಾದ ರಾಶಿಗೆ ಮಿಶ್ರಫಲ.‌ ದಶಮಸ್ಥಾನದಲ್ಲಿ ಗುರುವಿರುವನು. ಕೇತುವು ದ್ವಿತೀಯದಲ್ಲಿ ಇರುವ ಕಾರಣ ಸುಳ್ಳನ್ನು ಹೆಚ್ಚು ಹೇಳುವಿರಿ. ನಿಮ್ಮ ನೌಕರಿಯ ಜಾಗದಲ್ಲಿ ಏನೇ ಏರಿಳಿತ ಆದರೂ ಸಂಭಾಳಿಸಿಕೊಳ್ಳಿ. ಯಾರೊಂದಿಗೂ ಜಗಳ‌ ವಾದ ವಾಗ್ವಾದ ಬೇಡ. ಆರೋಗ್ಯದಲ್ಲಿ ಏರುಪೇರು ಕಾಣಬಹುದು. ನಿಮ್ಮ ಅಭ್ಯಾಸಗಳ ಮೇಲೆ ನಿಗಾ ಇರಲಿ. ತಂದೆ ಹಾಗೂ ಮಕ್ಕಳ‌ ನಡುವೆ ಸಣ್ಣ ವಿಚಾರಕ್ಕೂ ಕಲಹವಾಗಲಿದೆ. ಕುಜನು ವ್ಯಯದಲ್ಲಿ ಇರುವುದು ನಿಮ್ಮ ಧೈರ್ಯವನ್ನು ಹೆಚ್ಚಿಸುವುದು. ಏನಾದರೂ‌ ಮಾಡಬಲ್ಲೆ ವಿಶ್ವಾಸವು ಹೆಚ್ಚಾಗುವುದು. ಶಿವನಿಗೆ ರುದ್ರಾಭಿಷೇಕ‌ವನ್ನು‌ ಮಾಡಿಸಿ.

ಕನ್ಯಾ ರಾಶಿ : ರಾಶಿ‌ಚಕ್ರದ ಆರನೇ ರಾಶಿಯವರಿಗೆ ಶುಭ. ಬುಧಾಧಿಪತ್ಯದ ರಾಶಿಯಾದ ಇದು, ಬುಧನನ್ನೇ ತನ್ನ ರಾಶಿಯಲ್ಲಿ ಈ ವಾರ ಇರಿಸಿಕೊಂಡಿದೆ. ಶನಿಬಲವೂ ಗುರುಬಲವೂ ಸೇರಿ ನಿಮ್ಮ ಜೀವನವನ್ನು ಉತ್ತುಂಗಕ್ಕೆ ಏರಿಸಲಿದೆ. ಗಟ್ಟಿ ನಿರ್ಧಾರವೇ ನಿಮ್ಮನ್ನು ಸರಿಯಾದ ಕಡೆ ಕೊಂಡೊಯ್ಯುವುದು. ಯಾವ ಯಾವುದೋ ನಿಂತು ಹೋಗಿದ್ದ ಕೆಲಸಗಳು ಈಗ ಮರುಚಾಲನೆಯಾಗಿ ನಿಮ್ಮ ಉತ್ಸಾಹ ಹೆಚ್ಚಿಸುತ್ತದೆ. ನೌಕರಿಯಲ್ಲಿ ಬಡ್ತಿ ಮದುವೆ ಮನೆ ಕಟ್ಟುವುದು ಕೊಳ್ಳುವುದು ಮುಂತಾದ ಗಟ್ಟಿ ಸಂಗತಿಗಳು ನಡೆಯುತ್ತದೆ. ನೀವು ನಡೆದದ್ದೇ ದಾರಿ. ಜನ ನಿಮ್ಮ ಮಾತಿಗೆ ಗೌರವ ಕೊಡುತ್ತಾರೆ. ರಾಜಕೀಯ ನಾಯಕರಿಗೆ ಪದವಿ ಅಧಿಕಾರ ದೊರೆಯುತ್ತದೆ. ವೈವಾಹಿಕ ಅಡ್ಡಿಯನ್ನು ಸರಿಸಿ ಮುನ್ನಡೆಯುವಿರಿ. ಶಕ್ತಿದೇವತೆಯನ್ನು ಪೂಜಿಸಿ.

ತುಲಾ ರಾಶಿ : ನಿಮ್ಮ ರಾಶಿಗೆ ಗುರುಬಲ ಇಲ್ಲದೇಯಿರುವುದರಿಂದ ಇಲ್ಲಸಲ್ಲದ ತೊಂದರೆಗಳು ಮೈಮೇಲೆ ಬೀಳುತ್ತವೆ. ನೀವೇ ತಂದುಕೊಳ್ಳಲೂಬಹುಸು. ಗುರುವು ಅಷ್ಟಮ‌ಸ್ಥಾನಕ್ಕೆ ಬಂದರೆ ಆರೋಗ್ಯಕ್ಕೆ ತೊಂದರೆ. ಪಂಚಮದಲ್ಲಿ ಶನಿಯು ಇರುವುದರಿಂದ ದೈಹಿಕವಾದ ನೋವು, ಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗುವುದು, ಜಾಗರೂಕರಾಗಿರಿ. ನಿಮ್ಮ ರಾಶಿಯಲ್ಲಿಯೇ ಶುಕ್ರನು ಇರುವುದು ಧೈರ್ಯಗೆಡುವ ಸ್ಥಿತಿ ಬಾರದು. ದ್ವಾದಶದಲ್ಲಿ ಸೂರ್ಯನು ನಿಮ್ಮ ತಂದೆಯ ವಿಚಾರಕ್ಕೆ ಆರ್ಥಿಕ ನಷ್ಟವನ್ನು ಮಾಡಿಸುವನು. ಖರ್ಚಿಗೆ ಬೇಡವೆಂದರೂ ಮಾರ್ಗಗಳು ಒಂದೊಂದಾಗಿ ತೆರಯುವುದು. ಧನಲಕ್ಷ್ಮಿಯನ್ನು ಆರಾಧಿಸಿ.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ. ಕುಜನು ಈ ರಾಶಿಯ ಅಧಿಪತಿಯಾಗಿ ನೀಚನಾಗಿದ್ದರೂ ನಿಮ್ಮ ರಾಶಿಗೆ ಗುರುವಿನ ದೃಷ್ಟಿ ಇರಿವ ಕಾರಣ ಇಂದ್ರಜಾಲದಂತೆ ಎಲ್ಲವೂ ಕಾಣೆಯಾಗುವುದು. ಇದುವರೆಗೂ ಅನುಭವಿಸಿ ಮಾನಸಿಕ ಕಿರುಕುಳ, ಒತ್ತಡಗಳು ನಿಮಗೆ ಕಾಣಿಸದು. ಹಣಕಾಸು ಕಳೆದುಕೊಂಡಿದ್ದೀರಿ. ಮಾನಸಿಕವಾಗಿ ಜರ್ಝರಿತರಾಗಿದ್ದೀರಿ. ಈಗ ನಿಮಗೆ ಗುರುಬಲ‌ ಬರುವುದರಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರ ಕಾಣುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನೌಕರಿ ಬದಲಿಸುವವರಿಗೆ ಇನ್ನೂ ಒಳ್ಳೆಯ ಅವಕಾಶಗಳು ಸಿಗುತ್ತದೆ. ಮಕ್ಕಳಿಂದ ಮನಸ್ಸಿಗೆ ನೋವು‌ ಬರುವುದು. ಆದರೆ ಆರೋಗ್ಯ ಹಣಕಾಸು ಕೌಟುಂಬಿಕ ಸುಖಶಾಂತಿಗಳು ಅಧಿಕವಾಗುವುದು.

ಧನಸ್ಸು ರಾಶಿ : ಗುರುವಿನ ರಾಶಿಯಾದ ನಿಮಗೆ ಶುಭವಿಲ್ಲ. ಷಷ್ಠ ರಾಶಿಯಲ್ಲಿ ಇರುವ ಗುರುವು ಶುಭನಲ್ಲ.‌ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವನು. ಸಮಸ್ಯೆಗಳಿಗೆ ಪರಿಹಾರವಿ ಕಾಣಿಸದಾಗುವುದು. ಹಣಕಾಸಿನ ಸಮಸ್ಯೆಗಳು ಮೇಲೇಳಬಹುದು. ಯಾವುದೋ ವ್ಯವಹಾರ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ಕೌಟುಂಬಿಕ ಶಾಂತಿ ಕದಡಬಹುದು. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಹೋಗವುದು. ಶನಿ‌ ಮೂರನೇ ರಾಶಿಯಲ್ಲಿ ಇದ್ದು ಸುಖವನ್ನು ಕೊಡುವನು. ಇವನ‌ ಅನುಗ್ರಹದಿಂದ ಪರ್ವತದಂತೆ ಇರುವ ತೊಂದರೆಯನ್ನು ಏನೂ ಇಲ್ಲದಂತೆ ಆಗುವುದು. ನಾಲ್ಕನೇ ರಾಶಿಯಲ್ಲಿ ರಾಹು ಇರುವುದು ತಾಯಿಯ ಜೊತೆಗಿನ ಸಂಬಂಧ ಹದಗೆಡಬಹುದು.‌ ವೃಥಾ ಅಲೆದಾಟ ಇರುತ್ತದೆ. ಬರುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.

ಮಕರ ರಾಶಿ : ಈ ವಾರದಲ್ಲಿ ರಾಶಿಚಕ್ರದ ಹತ್ತನೇ ರಾಶಿಯವರಿಗೆ ಶುಭ ಗುರು ಐದನೇ ಮನೆಯಲ್ಲಿ ಇದ್ದು ನೀವು ಅನೇಕ ತೊಂದರೆಗಳನ್ನು ಸರಿಮಾಡುವನು. ಆಗಬೇಕಾದ ಕಾರ್ಯಗಳಿಗೆ ಸಹಕಾರ ಸಿಗುವಂತೆಯೂ ಮಾಡುವನು. ಗುರುವಿನ ಅನುಗ್ರಹವೂ ನಿಮಗೆ ಆಗಾಗ ಸಿಗುವುದು. ಮನಸ್ಸಿಗೆ ಉಲ್ಲಾಸ ಸಂತೋಷ ಅನುಭವಿಸುತ್ತೀರಿ. ನೌಕರಿ ಲಾಭ, ಅರ್ಹರಿಗೆ ವಿವಾಹಯೋಗ, ಆಸ್ತಿ ಖರೀದಿ, ಪ್ರವಾಸ ಮೊದಲಾದ ಎಲ್ಲ ಶುಭ ಸಂಗತಿಗಳೂ ಈ ವಾರದಲ್ಲಿ ನಿಮಗೆ ಇದೆ. ಮೂರರಲ್ಲಿ ರಾಹು ಹಾಗೂ ಐದರಲ್ಲಿ ಗುರು ಇದ್ದು ಈಗ ನಿಮಗೆ ಭಾಗ್ಯೋದಯವಾಗುವ ಸಮಯ.‌ ಸಾಡೇ ಸಾಥ್ ಶನಿಯ ಪ್ರಭಾವವು ನಿಮ್ಮ ಮೇಲೆ ಆಗುವುದು. ನಿಮ್ಮ ಕಷ್ಟಗಳಿಗೆ ಪರಿಹಾರ ಗೋಚರಿಸುತ್ತಾ ಹೋಗುತ್ತದೆ. ಶನಿಯ ಸ್ತೋತ್ರವನ್ನು ಮಾಡಿ.

ಕುಂಭ ರಾಶಿ : ಈ ತಿಂಗಳ ಮೊದಲ ವಾರದಲ್ಲಿ ಶುಭಾಶುಭ ಫಲ. ಗುರುವು ನಿಮಗೆ ನಾಲ್ಕನೇ ರಾಶಿಯಲ್ಲಿ ಇದ್ದಾನೆ. ಈ ರಾಶಿಯು ಶುಭಾಶುಭರಾಶಿಯಾಗಿದೆ. ಕೆಲವು ವಿಚಾರಕ್ಕೆ ಶುಭ. ಕೆಲವಕ್ಕೆ ಅಶುಭ. ಕುಟುಂಬದ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದು. ಎಲ್ಲವನ್ನು ಸಮಭಾವದಿಂದ ತೆಗೆದುಕೊಳ್ಳಿ ಅವಶ್ಯಕತೆ ಇರುವುದು. ಆರೋಗ್ಯಕ್ಕೆ ಸಂಬಂಧಿಸದಂತೆ ವೈದ್ಯರ ಸಲಹೆಯನ್ನು ನಡೆಯಿರಿ. ಹಣಕಾಸಿನ ಬಿಕ್ಕಟ್ಟು ತಲೆದೋರಿದರೂ ಅದನ್ನು.‌ ಕುಟುಂಬದಲ್ಲೂ ಅಸೌಖ್ಯ ಅಶಾಂತಿ ಇರುತ್ತದೆ. ರಾಜಕೀಯ ನಾಯಕರಿಗೆ ಪದವಿ ಪಲ್ಲಟವಾಗಬಹುದು.‌ ವಿನಾಕಾರಣ ಅವಮಾನ ಆಗಬಹುದು. ನಿಮ್ಮವರೇ ನಿಮ್ಮ ತೇಜೋವಧೆ ಮಾಡಬಹುದು. ಜಾಗ್ರತೆಯಿಂದ ಇರಿ.

ಮೀನ ರಾಶಿ : ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಮಿಶ್ರ ಫಲ. ಗುರುವು ತೃತೀಯ ಸ್ಥಾನದಲ್ಲಿ ಇದ್ದಾನೆ. ಇದು ನಿಮಗೆ ಶುಭಕರವಲ್ಲ ಮತ್ತು ಇದು ಶತ್ರುವಿನ ರಾಶಿಯೂ ಆಗಿದೆ. ಪ್ರತಿದಿನ ನಡೆಯುವ ಹಾದಿಯೇ ಆದರೂ ಆಯ ತಪ್ಪಬಹುದು. ಆಪ್ತರಿಂದಲೇ ನಿಮಗೆ ಸಣ್ಣ ವಿಚಾರಕ್ಕೂ ಅಪಮಾನಗಳು ಆತ್ಮೀಯರೊಡನೆ ಮನಸ್ತಾಪಗಳು ಬರುತ್ತಲೇ ಇರುತ್ತವೆ. ಆರ್ಥಿಕವಾದ ತೊಂದರೆಯನ್ನು ಮುಚ್ಚಿಡಲು ಹೋದರೂ ಅದು ಸ್ಫೋಟವಾಗುತ್ತದೆ. ಆದರೆ ಭಯಗೊಳ್ಳದೇ ಉತ್ತಮ ಮಾರ್ಗದ ನಿರೀಕ್ಷೆಯಲ್ಲಿ ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಾಮಾಣಿಕತೆಯನ್ನು ಬಿಡಬೇಡಿ. ನಿಮ್ಮ ಗುರುಗಳ ಅನುಗ್ರಹವನ್ನು ಪ್ರಾರ್ಥಿಸಿ.

-ಲೋಹಿತ ಹೆಬ್ಬಾರ್-8762924271 (what’s app only)

ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್; ಜೈಲಿಂದ ದಾಸ ಕೊಟ್ಟ ಸಿಗ್ನಲ್ ಏನು?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಮಗನನ್ನು ಪುನಃ ಲಾಂಚ್ ಮಾಡಲು ಹಟತೊಟ್ಟ ಹೆಚ್ಡಿಕೆ ಕ್ಷೇತ್ರ ಬಿಟ್ಟುಕೊಡುವರೇ?
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಮಯ ಬೇಕು: ವಿಜಯೇಂದ್ರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಗ್ಗೆ ಸೋಮಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಪ್ರದೋಶ್ ವಾಪಸ್
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!
ಜಗಳೂರು ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭ!