AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ನ. 16 ರಿಂದ 22 ವರೆಗೆ ಹೇಗಿರಲಿದೆ ನಿಮ್ಮ ಲವ್ ಲೈಫ್? 12 ರಾಶಿಗಳ ಪ್ರೇಮ- ಪ್ರೀತಿ ಭವಿಷ್ಯ ಇಲ್ಲಿದೆ

ನವೆಂಬರ್ 16 ರಿಂದ 22 ರವರೆಗಿನ ಈ ವಾರದ ಪ್ರೇಮ ರಾಶಿಫಲ ಇಲ್ಲಿದೆ. ಪ್ರೇಮದಲ್ಲಿ ಸಕಾರಾತ್ಮಕವಾಗಿರಿ, ಸಣ್ಣ ಸಮಸ್ಯೆಗಳನ್ನು ದೊಡ್ಡದಾಗಿಸಬೇಡಿ. ಅತಿಯಾದ ವರ್ತನೆಯಿಂದ ತೊಂದರೆ ಎದುರಿಸುವ ಬದಲು ಬುದ್ಧಿವಂತಿಕೆಯಿಂದ ವರ್ತಿಸಿ. ಪ್ರೇಮವು ಜೀವನದ ಒಂದು ಭಾಗವೇ ಹೊರತು, ಮುಖ್ಯ ಮಾರ್ಗವಲ್ಲ ಎಂಬುದನ್ನು ಅರಿಯಿರಿ. ನಿಮ್ಮ ಪ್ರೀತಿಯ ಜೀವನಕ್ಕೆ ಪ್ರಮುಖ ಸಲಹೆಗಳು ಮತ್ತು ಭವಿಷ್ಯದ ಅರಿವು ಇಲ್ಲಿವೆ.

Weekly Love Horoscope: ನ. 16 ರಿಂದ 22 ವರೆಗೆ ಹೇಗಿರಲಿದೆ ನಿಮ್ಮ ಲವ್ ಲೈಫ್? 12 ರಾಶಿಗಳ ಪ್ರೇಮ- ಪ್ರೀತಿ ಭವಿಷ್ಯ ಇಲ್ಲಿದೆ
ವಾರದ ಪ್ರೇಮ- ಪ್ರೀತಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 15, 2025 | 3:12 PM

Share

ನವೆಂಬರ್ 16 ರಿಂದ ನವೆಂಬರ್ 22 ವರೆಗೆ ಪ್ರೇಮವು ಸಕಾರಾತ್ಮಕ ಅಂಶಗಳನ್ನು ಇಟ್ಟುಕೊಳ್ಳುವುದು. ಸಣ್ಣ ಅವಕಾಶವನ್ನೂ ಅತಿಯಾಗಿ ಬಳಸಿಕೊಂಡು ತೊಂದರೆಯನ್ನು ಎದುರಿಸಬೇಕಾಗುವುದು. ಗುರಿಗೆ ಅಡ್ಡವಾಗುವ ಮಾರ್ಗವನ್ನು ಬಿಡುವುದೇ ಸೂಕ್ತ. ಭವಿಷ್ಯ ನಿಮ್ಮ ವರ್ತಮಾನದ ತೀರ್ಮಾನ ಸಮಯದ ಮೇಲಿರಲಿದೆ. ಪ್ರೇಮವೂ ಜೀವನದ ಭಾಗವೇ ಹೊರತು, ಮುಖ್ಯಮಾರ್ಗವಲ್ಲ ಎನ್ನುವ ಅರಿವಿರಲಿ.

ಮೇಷ ರಾಶಿ:

ಈ ವಾರ ಪ್ರೇಮದಲ್ಲಿ ಅನ್ಯರ ಕಾರಣದಿಂದ ಅಪನಂಬಿಕೆ ಬರಲಿದೆ. ಹಳೆಯ ತಕರಾರುಗಳು ಇದ್ದರೆ ಅವು ಪರಿಹಾರವಾಗುವ ಸಾಧ್ಯತೆ ಇದೆ. ನಿಮ್ಮ ನಿಜವಾದ ಭಾವನೆಗಳನ್ನು ಹಂಚಿಕೊಂಡರೆ, ಸಂಬಂಧದಲ್ಲಿ ಭವಿಷ್ಯ ಸರಿಯಾಗುವುದು. ಹೊಸ ವ್ಯಕ್ತಿಯ ಪರಿಚಯವೂ ಪ್ರೇಮದ ದಾರಿಯಲ್ಲಿ ಮುನ್ನಡೆಯಲು ಕಾರಣವಾಗಬಹುದು. ಹಿರಿಯರ ಪ್ರೋತ್ಸಾಹ ಪ್ರೇಮದ ವಿಷಯಗಳಲ್ಲಿ ಧೈರ್ಯ ಸಿಗುತ್ತದೆ.

ವೃಷಭ ರಾಶಿ:

ಹೇಗಾದರೂ ಮಾಡಿ ಮನವೊಲಿಸಲು ಪ್ರಯತ್ನ ಸಾಗುವುದು. ನಿಮ್ಮ ಹೃದಯ ಈ ವಾರ ಹೆಚ್ಚು ಸಂವೇದನಾಶೀಲ. ಹೃದಯವು ದುರ್ಬಲವಾದ ಕಾರಣ ಯಾವುದನ್ನೂ ಪ್ರೀತಿಯ ವಿಚಾರದಲ್ಲಿ ಮಾಡಲಾರಿರಿ. ಹಳೆಯ ನೆನಪುಗಳು ಮನಸ್ಸನ್ನು ಹಿಂಡಬಹುದು, ಆದರೆ ಈಗ ಕಾಲ ಬದಲಾಗಿದೆ. ಹೊಸ ಆರಂಭಕ್ಕೆ ಇದು ಅತ್ಯುತ್ತಮ ವಾರ. ಒಂಟಿಗೆ ಆಗಿರುವವರಿಗೆ ಮತ್ತೊಬ್ಬ ಒಂಟಿಯಾದ ವ್ಯಕ್ತಿಯೇ ಜೊತೆಯಾಗುವರು. ಸಂಬಂಧದಲ್ಲಿರುವವರು ಹೆಚ್ಚು ಸಹನೆ ತೋರಿಸಬೇಕು. ಸಣ್ಣ ವಿಷಯಗಳಿಂದ ಭಾವನೆ ಹಾಳಾಗಬಹುದು.

ಮಿಥುನ ರಾಶಿ:

ಈ ವಾರ ಸಂಬಂಧಗಳಲ್ಲಿ ಸತ್ಯವಾದ ಸಂವಹನ ಅತ್ಯಗತ್ಯ. ಪ್ರೇಮದ ವಿಷಯದಲ್ಲಿ ನಿಮ್ಮ ಬುದ್ಧಿ ಮತ್ತು ಹಾಸ್ಯಭಾವದಿಂದ ಮನ ಗೆಲ್ಲುವಿರಿ. ಅತಿಯಾಗಿ ತಮಾಷೆ ಮಾಡುವುದು ತಪ್ಪು ಅರ್ಥ ನೀಡಬಹುದು. ಸ್ನೇಹವು ಪ್ರೇಮವಾಗಿ ಮಾರ್ಪಡಬಹುದು. ಹಳೆಯ ಸಂಬಂಧಗಳಲ್ಲಿ ಮತ್ತೆ ಉರಿಯುವ ಅವಕಾಶವೂ ಇದೆ. ನೀವು ಈ ವಾರ ಭಾವನೆಗಳನ್ನು ಸ್ಪಷ್ಟವಾಗಿ ಹೇಳಿದರೆ ಪ್ರೀತಿಯ ದಾರಿಯೂ ಸಷ್ಟವಾಗಲಿದೆ.

ಕರ್ಕಾಟಕ ರಾಶಿ:

ನಾಲ್ಕನೇ ರಾಶಿಯವರಿಗೆ ಈ ವಾರ ಭಾವನಾತ್ಮಕ ಬದಲಾವಣೆಯ ಕಾಲ. ಪ್ರೇಮದಲ್ಲಿ ನೀವು ಹೆಚ್ಚು ರಕ್ಷಣೆ ಮತ್ತು ಪ್ರೀತಿ ಬಯಸುತ್ತೀರಿ. ಪ್ರೀರಿಪಾತ್ರರ ಬಗ್ಗೆ ಹೆಚ್ಚು ಕಾಳಜಿ ತಾನಾಗಿಯೇ ಬರಲಿದೆ. ಆದರೆ ಅವರಿಗೂ ಸ್ವಲ್ಪ ಸಮಯ ಕೊಡಿ. ಸಂಬಂಧದಲ್ಲಿ ಪರಸ್ಪರ ನಂಬಿಕೆ ಮತ್ತು ಗೌರವ ಮುಖ್ಯ. ತಮ್ಮ ಕುಟುಂಬ ಅಥವಾ ಹಳೆಯ ಸ್ನೇಹದಿಂದ ಒಬ್ಬರಿಗೆ ಹತ್ತಿರವಾಗಬಹುದು. ಆಕರ್ಷಣೆಯನ್ನು ಅವರ ಬಳಿ ಹೇಳಿಕೊಳ್ಳುವಿರಿ.

ಸಿಂಹ ರಾಶಿ:

ನಿಮ್ಮ ಉತ್ಸಾಹ ಮತ್ತು ಆಕರ್ಷಣಾ ಶಕ್ತಿ ಉತ್ಕೃಷ್ಟವಾಗಿರಲಿದೆ. ಹಲವಾರು ಇಷ್ಟವಾಗುವವರಿದ್ದರೂ ಅತ್ಯಂತ ಮುಖ್ಯ ಯಾರು ಎಂಬುದು ಈ ವಾರ ನಿರ್ಣಯವಾಗಲಿದೆ. ಸಂಗಾತಿಯು ನಿಮ್ಮ ನಾಯಕತ್ವದಿಂದ ಪ್ರೇರಿಸಬಹುದು. ಆದರೆ ಅಹಂಕಾರ, ಸ್ವಾಭಿಮಾನದಿಂದ ಮಾತು ಹಾಳಾಗದಂತೆ ಜಾಗರೂಕರಾಗಿ. ಪ್ರೇಮಸಂದೇಶವು ಅತಿಯಾಗ ನಡೆಯುವುದು. ಆದರೆ ಆಳವಾದ ಭಾವನೆ ಬೆಳೆಸಲು ಸಮಯ ಬೇಕು. ನಿಜವಾದ ಪ್ರೀತಿ ತಾಳ್ಮೆಯಿಂದಲೇ ಸಿಗುತ್ತದೆ.

ಕನ್ಯಾ ರಾಶಿ:

ಈ ವಾರ ನಿಮ್ಮ ಮನಸ್ಸು ಸಂಶಯಗಳಿಂದ ತುಂಬಿರಬಹುದು. ಪ್ರಿಯತಮನ ವರ್ತನೆ ಅರ್ಥವಾಗದಂತೆ ಇರಲಿದ್ದು, ನೇರವಾಗಿ ಕೇಳುವಿರಿ. ತಪ್ಪಾದ ಊಹೆಗಳನ್ನು ಆಗಾಗ ಮಾಡಿಕೊಳ್ಳುವಿರಿ. ಹಳೆಯ ತಪ್ಪುಗಳಿಂದ ಕಲಿತು ಹೊಸ ಸಂಬಂಧದಲ್ಲಿ ಸರಿಯಾದ ನಿಷ್ಠೆ ತೋರಿಸಿ. ಸುಳ್ಳು ಹೇಳಿ ಯಾರನ್ನಾದರೂ ನಂಬಿಸುವಿರಿ. ಭಾವನೆಗಳಿಗಿಂತ ವಿವೇಕದೊಂದಿಗೆ ನಡೆಯುವುದು ಉತ್ತಮ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಈ ವಾರ ಪ್ರೇಮ ಮತ್ತು ಕುಟುಂಬ ಎರಡನ್ನೂ ಸಮತೋಲನವಾಗಿರಿಸಿಕೊಳ್ಳಲು ಈ ವಾರ ಸೂಕ್ತ. ಪ್ರಿಯತಮನೊಂದಿಗೆ ಸಮಯ ಕಳೆಯುವುದರಿಂದ ಬಂಧ ಬಲ ಎಂಬ ಯೋಜನೆ ಇರಲಿದೆ. ಆದರೆ ಸಾಧ್ಯವಾಗದು. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸೂಚನೆ ಇದೆ. ಎಲ್ಲರ ಜೊತೆ ಪ್ರಣಯಕ್ಕೆ ಕನೆಕ್ಟ್ ಆಗುವಂತೆ ಮಾತನಾಡುವಿರಿ. ಈ ವಾರ ಸಾಮಾಜಿಕ ಜಾಲತಾಣ, ಪ್ರಯಾಣದಲ್ಲಿ ಆಕಸ್ಮಿಕ ಪ್ರೇಮಭಾವ ಬರಬಹುದು.

ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ವೃಶ್ಚಿಕ ರಾಶಿ:

ಭಾವನೆಗಳ ಉಕ್ಕಿ ಈ ವಾರ ನಿಮಗೆ ಆಳವಾದ ಪ್ರೀತಿ ಅನುಭವವಾಗುವುದು. ಆದರೆ ಅತಿಯಾದ ಸಂದೇಹ ಅಥವಾ ಅಸೂಯೆಯಿಂದ ದೂರವಿರಿ. ಪ್ರಿಯತಮನ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಈ ವಾರ ಸತ್ಯ ಮತ್ತು ನಿಷ್ಠೆ ನಿಮ್ಮ ಹೃದಯದ ಕೀಲಿ. ಏಕಾಂಗಿ ಹಳೆಯ ಪ್ರೇಮವನ್ನು ಮತ್ತೆ ಎದುರಿಸಬೇಕಾಗುವುದು. ಹಳೆಯದನ್ನು ಮುಚ್ಚಿ, ಹೊಸದು ಆರಂಭಿಸುವ ವಾರ.

ಧನು ರಾಶಿ:

ಈ ವಾರ ಸಾಹಸಪ್ರಿಯರಾದ ಧನು ರಾಶಿಯವರಿಗೆ ಈ ವಾರ ಸಂಗಾತಿಯ ಬಗ್ಗೆ ಗೌರವ ಮೂಡುತ್ತದೆ. ಪ್ರಯಾಣ ಅಥವಾ ಸಾಮಾಜಿಕ ಚಟುವಟಿಕೆಯಲ್ಲಿ ಹೊಸಬರ ಪರಿಚಯವಾಗಬಹುದು. ಪ್ರೇಮದ ವಿಷಯದಲ್ಲಿ ಮುಕ್ತ ಮನಸ್ಸಿನಿಂದ ನಡೆದುಕೊಳ್ಳಿ. ಬದ್ಧ ಸಂಬಂಧದಲ್ಲಿ ಪ್ರಿಯತಮನ ಜೊತೆ ಸಣ್ಣ ವಾದ ಮಾಡುವಿರಿ. ಸಂವಾದವೇ ಶಾಂತಿಯನ್ನು ತರುವುದು.

ಮಕರ ರಾಶಿ:

ಹತ್ತನೇ ರಾಶಿಯವರಿಗೆ ನಿಮ್ಮ ಸಂಬಂಧದಲ್ಲಿ ಸ್ಥಿರತೆ ಮತ್ತು ನಂಬಿಕೆಯ ಹೆಚ್ಚಾಗುವ ಕಾಲ. ಕೆಲಸದ ಒತ್ತಡದಿಂದ ದೂರವಿದ್ದು, ಇಷ್ಟಪಡುವವರಿಗೆ ಹೇಗಾದರೂ ಸಮಯ ಕೊಡಿ. ಹೊಸ ಸಂಬಂಧ ನಿಧಾನವಾಗಿ ಬೆಳೆಯಬಹುದು ಆದರೆ ಅದು ದೀರ್ಘಕಾಲೀನವಾಗಿರದು. ಹಳೆಯ ಪ್ರೇಮದ ನೋವುಗಳು ಕ್ರಮೇಣ ಅಳಿದು ಹೋಗುವ ಕಾಲ ಇದು. ನೈತಿಕತೆ ಮತ್ತು ನಿಷ್ಠೆ ನಿಮ್ಮನ್ನು ಬಲವಾಗಿಸುವುದು.

ಕುಂಭ ರಾಶಿ:

ಈ ವಾರ ನೀವು ಪ್ರೇಮದ ಆಳವನ್ನು ವಿಭಿನ್ನ ರೀತಿಯಲ್ಲಿ ಅರಿಯಬಹುದು. ಹಳೆಯ ಸಂಬಂಧಕ್ಕೆ ಮರು ಜೀವ ಸಿಗುವ ಸಾಧ್ಯತೆ ಇದೆ. ಪ್ರೇಯಸಿಯ ಜೊತೆ ಸಂವಾದಗಳು ಹೃದಯ ಹತ್ತಿರ ತರುತ್ತವೆ. ಒಂಟಿಯಾಗಿರುವ ನಿಜವು ಸ್ನೇಹದಿಂದ ಪ್ರೇಮದ ಹಾದಿ ಹಿಡಿಯಬಹುದು. ಅತಿಯಾಗಿ ಭಾವುಕರಾಗದೇ, ಮುಕ್ತ ಮನಸ್ಸಿನಿಂದ ಇರಿ.

ಮೀನ ರಾಶಿ:

ಕೊನೆಯ ರಾಶಿಗೆ ಈ ವಾರ ನಿಮ್ಮ ಹೃದಯ ತುಂಬ ಭಾವನಾತ್ಮಕ ವಿಚಾರಗಳೇ ಸುಳಿದಾಡುವುದು. ಪ್ರೇಮ ಸಂಬಂಧದಲ್ಲಿ ಆಳವಾದ ತೃಪ್ತಿ ಸಿಗುತ್ತದೆ. ಪ್ರಿಯತಮನಿಂದ ಅನಿರೀಕ್ಷಿತ ಕಾಳಜಿ ಮತ್ತು ಪ್ರೀತಿ ಸಿಗುವ ಸಾಧ್ಯತೆ ಇದೆ. ಕಲಾ, ಸಂಗೀತ, ಧಾರ್ಮಿಕ ಸಂದರ್ಭಗಳಲ್ಲಿ ಪ್ರೇಮ ಕಾಣಬಹುದು. ಪ್ರೀತಿಯ ವಿಷಯದಲ್ಲಿ ನಿಮ್ಮ ಒಳ ಮನಸ್ಸು ತುಂಬ ಬಲವಾಗಿರುತ್ತದೆ, ಅದನ್ನು ನಂಬಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ