AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 16 November : ಇಂದು ಈ ರಾಶಿಯವರ ನಡೆಯಿಂದ ಕಲಹ, ಒಪ್ಪಂದದಲ್ಲಿ ಭಿನ್ನಮತ ಇರಲಿದೆ

ದಿನ ಭವಿಷ್ಯ, 16, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸ ಕೃಷ್ಣ ಪಕ್ಷದ ಏಕಾದಶೀ ತಿಥಿ ಭಾನುವಾರ ಎಲ್ಲದಕ್ಕೂ ವಿರೋಧ, ವ್ಯರ್ಥ ಶ್ರಮ, ಹೊಸ ಗೆಳೆತನ, ಹೂಡಿಕೆಯ ಲೆಕ್ಕ, ತ್ಯಾಗ ಮನೋಭಾವ, ಆತ್ಮಾವಲೋಕನ, ನಿರ್ದಿಷ್ಟ ಆದಾಯ ಇವೆಲ್ಲ ಹನ್ನೆರಡು ರಾಶಿಗಳ ಇಂದಿನ ಭವಿಷ್ಯದಲ್ಲಿ ಇರಲಿದೆ.

Horoscope Today 16 November : ಇಂದು ಈ ರಾಶಿಯವರ ನಡೆಯಿಂದ ಕಲಹ, ಒಪ್ಪಂದದಲ್ಲಿ ಭಿನ್ನಮತ ಇರಲಿದೆ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Nov 16, 2025 | 6:02 PM

Share

ಮೇಷ ರಾಶಿ :

ಒಮ್ಮೆ ಎಡವಿದ ಮೇಲೆ ಎಡವುವ ಬೀಳುವ ಭಯವಿಲ್ಲ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತಿಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಯಾವುದೂ ಶಾಶ್ವತವಲ್ಲ ಎಂಬ ಅರಿವು ಆಗಾಗ ನಿಮ್ಮ ಮನಸ್ಸಿಗೆ ಬರುತ್ತಲೇ ಇರುವುದು. ಸ್ವಂತ ವಾಹನದಿಂದ ನಿಮಗೆ ತೊಂದರೆಯಾಗಲಿದೆ. ಅನಿರೀಕ್ಷಿತ ಧನದಿಂದ ಸಂತೋಷವಾದರೂ ಅದನ್ನು ಸ್ವೀಕರಿಸಲಾರಿರಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಅನವರತ ಶ್ರಮ ವ್ಯರ್ಥ ಎನಿಸಬಹುದು. ಅನುಭವವಂತೂ ನಿಮ್ಮದಾಗಿರುವುದು ಸಮಾಧಾನದ ಸಂಗತಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವಿರಿ. ಇಂದಿನ ಹೆಚ್ಚಿನ ಸಮಯವನ್ನು ಧಾರ್ಮಿಕ ಕೆಲಸಕ್ಕೆ ಮೀಸಲಿಡುವಿರಿ. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರೀದಿಸಿ. ಉದ್ಯೋಗದಲ್ಲಿ ಸುಲಭದ ಉಪಾಯವನ್ನು ಕಂಡುಕೊಳ್ಳುವಿರಿ.

ವೃಷಭ ರಾಶಿ :

ತೋರಿಕೆಗೆ ಇಂದು ಮಹತ್ತ್ವ ನೀಡಲಿದ್ದೀರಿ. ಬೆಂಬಲಿಸುವವರಿಲ್ಲದೇ ನಿಮಗೆ ಸೋಲಾಗಬಹುದು. ಆತ್ಮಾವಲೋಕನ ಮಾಡಿಕೊಳ್ಳುವುದು ನಿಮಗೆ ಯೋಗ್ಯ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನಿಮ್ಮ ಮಾತು ಸುತ್ತಿ ಬಳಸಿ ನಿಮ್ಮ ಬುಡಕ್ಕೇ ಬರಲಿದೆ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಅನಾರೋಗ್ಯದ ಕಾರಣ ಉದ್ಯೋಗ ಕೈತಪ್ಪಬಹುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ. ಅವಿವಾಹಿತರು ಯೋಗ್ಯವಾದ ಸಂಗಾತಿಯನ್ನು ಪಡೆಯುವರು. ನವವಿವಾಹಿತರಿಗೆ ಸಂತಸದ ಸುದ್ದಿಯು ಇರಲಿದೆ. ಇಂದು ನಿಮ್ಮ ಪ್ರಯಾಣವನ್ನು ಸಣ್ಣ ಮಾಡುವುದು ಉತ್ತಮ. ಕ್ಷಮಾಗುಣದಿಂದ ದೊಡ್ಡವರಾಗಲು ಸಾಧ್ಯ. ಉದ್ಯೋಗದಲ್ಲಿ ಒತ್ತಡವಿರುವ ಕಾರಣ ಬದಲಾವಣೆಯನ್ನು ಬಯಸುವಿರಿ.

ಮಿಥುನ ರಾಶಿ :

ನಿಮ್ಮ ಸಾಧನೆಗಳು ಅನ್ಯರ ಮೂಲಕ ಪ್ರಸಾರವಾಗಲಿದೆ. ದೇಹ ಭಾರ ಹಾಗೂ ಮನಸ್ಸಿನ ಭಾರವನ್ನು ಅಲ್ಪ ಕಡಿಮೆ ಮಾಡಿದರೆ ಬಹಳ ಹಿತವೆನಿಸುವುದು. ಏಕಕಾಲಕ್ಕೆ ಹಲವಾರು ಖರ್ಚುಗಳು ಬಂದು ನಿಮಗೆ ತಲೆಬಿಸಿ ಆಗಲಿದೆ. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಅವರವರ ತೂಕವೇ ಬೇರೆ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ಮಾಡಿಕೊಡಬೇಕಿರುವ ಕಾರ್ಯಗಳನ್ನು ಇಂದು ಮಾಡಿ ಮುಗಿಸುವಿರಿ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ. ನಿಮ್ಮ ಕಾರ್ಯಕ್ಕೆ ರಾಜಕೀಯ ಅಡ್ಡ ಬರಲಿದೆ. ಯಾರಾದರೂ ನಿಮ್ಮ ಅರ್ಹತೆಯನ್ನು ಪ್ರಶ್ನಿಸಬಹುದು. ಅದಕ್ಕೆ ನಿಮಗೆ ಉತ್ತಮ ಮಾರ್ಗೋಪಯ ಕೊಡುವರು. ನಿಮ್ಮ ಅನುಭವದ ಆಧಾರದ ಮೇಲೆ ಕೆಲಸವು ಇರಲಿದೆ.

ಕರ್ಕಾಟಕ ರಾಶಿ:

ವ್ಯಕ್ತಿಗೆ ಅಲ್ಲದೇ ಇದ್ದರೂ ಸ್ಥಾನಕ್ಕೆ ಗೌರವ ಸಿಗಲಿದೆ.‌ ಅದನ್ನು ಉಳಿಸಿಕೊಳ್ಳುವುದು ನಿಮ್ಮ‌ ಮೇಲಿದೆ. ಯಾರ ಅವಲಂಬನೆಯೂ ನಿಮಗೆ ಹಿಡಿಸದು. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ಕ್ರೀಡಾಸಕ್ತಿಯನ್ನು ಹೆಚ್ಚು ಮಾಡಿಕೊಳ್ಳಬಹುದು. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ನಿಮ್ಮ ಹೂಡಿಕೆಯ ಪೂರ್ಣ ವಿವರಗಳನ್ನು ಲೆಕ್ಕಹಾಕಿಕೊಳ್ಳುವುದು ಉತ್ತಮ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು. ಕಠಿಣ ವ್ಯಾಯಾಮವನ್ನು ಮಾಡುವ ಮುಂಚೆ ದೇಹದ ಸಾಮರ್ಥ್ಯವನ್ನು ತಿಳಿಯಲು ವೈದ್ಯರನ್ನು ಸಂಪರ್ಕಿಸಿ. ಇಂದು ವೃತ್ತಿಯ ವಿಚಾರಕ್ಕೆ ಮನೆಯಲ್ಲಿ ಅಸಮಾಧಾನ.

ಸಿಂಹ ರಾಶಿ:

ಆರಂಭದ ಸುಖ ಅಥವಾ ದುಃಖವನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ಮನಸ್ಸು ಕಠಿಣವಾದಷ್ಟೂ ಸಂಬಂಧಗಳು ಬಿರುಕುಬಿಡಬಹುದು. ನಿಮ್ಮ ಉದ್ಯೋಗದ ನಿಷ್ಠೆಯು ಮೇಲಧಿಕಾರಿಗಳಿಗೆ ಇಷ್ಟವಾಗುವುದು. ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಅಶಿಸ್ತಿನ ಕಾರಣಕ್ಕೆ ಹಿರಿಯರಿಂದ ಉಪದೇಶ ಸಿಗಲಿದೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವಿರಿ. ಕಲೆಯ ಹವ್ಯಾಸವನ್ನು ಬೆಳೆಸಿಕೊಳ್ಳುವ ತುಡಿತ ಸ್ಪಷ್ಟವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನೀವು ಮತ್ತು ಸಂಗಾತಿ ನಡುವೆ ಹಣದ ಬಗ್ಗೆ ವಾಗ್ವಾದವು ನಡೆದು ಅತಿರೇಕವಾದೀತು. ಜ್ಞಾನಿಯಂತೆ ತೋರಿಸಿಕೊಳ್ಳುವುದು ಬೇಡ. ಒತ್ತಡವಿಲ್ಲದೆ ಇಂದು ನಿಮ್ಮ ದಿನವನ್ನು ಆನಂದಿಸಲು ಪ್ರಯತ್ನಿಸಿ.

ಕನ್ಯಾ ರಾಶಿ:

ನಿಮ್ಮ ಕಾರ್ಯವನ್ನೂ ವೃತ್ತಿಗೆ ಸಂಬಂಧಿಸಿದ್ದನ್ನೂ ಮಾಡಲು ಪ್ರಯಾಣ ಮಾಡಿ ಬರುವಿರಿ. ಮನೆಯಲ್ಲಿ ಕಾರ್ಯದ ಒತ್ತಡ ಅಧಿಕವಾಗಿರುವುದು. ಇಂದು ನಿಮ್ಮ ವಿರೋಧಿಗಳನ್ನು ಸ್ತಬ್ಧಗೊಳಿಸುವಿರಿ. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಭೂಮಿಯನ್ನು ಉಳಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನ ಮಾಡುವಿರಿ. ಖರೀದಿಸಿದ ಸ್ಥಳವನ್ನು ಅನಿವಾರ್ಯ ಕಾರಣಕ್ಕಾಗಿ ಮಾರಾಟಮಾಡುವಿರಿ‌. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಸಹವಾಸದ ಕಾರಣ ನಿಮ್ಮ ಮೇಲೆ ಸಲ್ಲದ ಆರೋಪಗಳು ಕೇಳಿಬರಬಹುದು. ಹಣಕಾಸಿನ ವಿಚಾರದಲ್ಲಿ ಗಮನಾರ್ಹ ಬೆಳವಣಿಗೆ ಉಂಟಾಗಲಿದೆ. ನಿಮ್ಮ ವೃತ್ತಿಜೀವನವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ನಿರ್ಧರಿಸುವಿರಿ.

ತುಲಾ ರಾಶಿ:

ಉಪವಾಸದಿಂದ ನಿಮ್ಮ ಆರೋಗ್ಯ ಹಾಳಾಗುವುದು. ಸ್ತ್ರೀಯರ ಜೊತೆ ವ್ಯವಹಾರದಿಂದ ದೂರವಿರುವುದು ಉತ್ತಮ. ವ್ಯವಸ್ಥೆಯ ಕೈಮೀರುವತ ತನಕ‌ ಅದನ್ನು ಬಿಡುವುದು ಬೇಡ. ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡಗಾಲು ಹಾಕಬಹುದು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಸ್ಥಿರ ಮನಸ್ಸಿನಿಂದ ಯಾವುದನ್ನೂ ಒಪ್ಪಲಾರಿರಿ. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿಮಗೆ ಮನಸ್ಸಾಗದು. ನಮ್ಮ ಉತ್ತಮ ಕಾರ್ಯವನ್ನು ಮೊದಲೇ ಹೇಳಿಕೊಳ್ಳುವುದು ಬೇಡ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಇಂದು ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ. ಬಂದ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ಮಾಡಿ.

ವೃಶ್ಚಿಕ ರಾಶಿ:

ಸ್ವಯಂ ನಿವೃತ್ತಿಯನ್ನು ಪಡೆಯುವ ಮನಸ್ಸು ಬರಬಹುದು. ರಾಜಕಾರಣದಿಂದ ನೀವು ಪ್ರೇರಣೆ ಪಡೆಯುವಿರಿ. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶಗಳು ಸಿಗಲಿದೆ. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ನಿಮ್ಮ ರೂಢಿಗಳು ನಿಮಗೆ ಗೊತ್ತಾಗದಂತೆ ಬದಲಾಗಬಹುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ನಿರ್ಮಾಣದ ಕಾಮಗಾರಿಯ ಪರಿಶೀಲನೆ ಮಾಡುವಿರಿ. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ಉಳಿಯತಾಯಕ್ಕೆ ಏನೇ ಮಾಡಿದರೂ ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗದು. ಹೊಸ ಕೆಲಸದಲ್ಲಿ ಉತ್ಸಾಹವು ಇರಲಿದೆ. ನಿಮ್ಮ ಅಂತರಂಗವು ಎಲ್ಲರಿಗೂ ಗೊತ್ತಾದೀತು. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಕ್ರಿಯಾಶೀಲರಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ.

ಧನು ರಾಶಿ:

ಇಂದು ಯಾರಿಂದಲೂ ಸಹಾಯ ನಿರೀಕ್ಷೆ ಮಾಡದೇ ನಿಮ್ಮ ಕರ್ತವ್ಯವನ್ನು ಮಾತ್ರ ಮಾಡುವಿರಿ. ದುಃಖವನ್ನು ಎಷ್ಟೇ ಹಿಡಿದಿಟ್ಟರೂ ಅದು ಅಸ್ಥಾನದಲ್ಲಿ ಪ್ರಕಟವಾಗಬಹುದು. ನಿಮ್ಮ ಬೆಳವಣಿಕೆಗೆಯು ಸಾತ್ತ್ವಿಕ ರೀತಿಯಲ್ಲಿ ಇರಲಿ. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ನಿಮ್ಮ ಕಾರ್ಯವೇ ದೀರ್ಘವಾಗಬಹುದು. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು. ಹಿಂದಿನ ಹಣಕಾಸಿನ ಸಮಸ್ಯೆಯು ಇಂದೂ ಕಾಣಿಸಿಕೊಳ್ಳಬಹುದು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮಹತ್ತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೂಕ್ಷ್ಮತೆಯ ಅಗತ್ಯತೆ ಇದೆ. ತಂತ್ರವನ್ನು ಹೂಡಿ ನಿಮ್ಮ ಹಿತಶತ್ರುವನ್ನು ಕಂಡುಕೊಳ್ಳುವಿರಿ.

ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಮಕರ ರಾಶಿ:

ವಂಚನೆಯ ಜಾಲದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಸಮರ್ಪಕವಾದ ನಿಲುವನ್ನು ಹೊಂದಿದರೆ ನಿಮಗೇ ಮುಂದಿನ ಮಾರ್ಗ ತೆರೆಯುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಕೋಪಿಷ್ಠರ ಜೊತೆ ವ್ಯವಹಾರ ಕಷ್ಟ. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ನಿಮ್ಮ ಸ್ಪಷ್ಟ ಮಾತುಗಳು ಯಾರನ್ನೂ ಎಚ್ಚರಿಸುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ. ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಚಿಂತೆನೆಗಳು ಉತ್ತಮವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಕಷ್ಟವಾದೀತು.

ಕುಂಭ ರಾಶಿ:

ಎಲ್ಲರ ಸಂಪರ್ಕದಿಂದ ದೂರವಿರುವ ಪ್ರಯತ್ನ ಮಾಡುವಿರಿ. ಪರಧನವನ್ನು ಪಡೆದು ಸ್ವತಂತ್ರವಾಗಿ ಇರಲಾಗದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ವಿದೇಶ ಪ್ರಯಾಣದ ಗುಂಗಿನಲ್ಲಿ ನೀವು ಇರುವಿರಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗುವುದು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ತಪ್ಪನ್ನು ಎತ್ತಿ ತೋರಿಸುವವರು ಇಂದು ಕಾಣಿಸುವರು. ಮೂರ್ಖತನದಿಂದ ಅವಿವೇಕದ ಮಾತುಗಳನ್ನಾಡುವಿರಿ. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ. ನಿಮ್ಮನ್ನು ಇಷ್ಟಪಟ್ಟವರು ನಿಮ್ಮನ್ನು ಕಡೆಗಣಿಸಬಹುದು. ಇದು ನಿಮಗೆ ಸಂತೋಷವೂ ಆಗುವುದು.

ಮೀನ ರಾಶಿ:

ಯಾರಿಂದಲೋ ಆದ ಬೇಸರವನ್ನು ಮತ್ಯಾರಮೇಲೋ ತೋರಿಸಿ, ಅವರ ಮೇಲೆ ಸಿಟ್ಟಾಗುವುದು ಔಚಿತ್ಯವಲ್ಲ. ಸಡಿಲವಾದಷ್ಟು ನಿಮಗೇ ತೊಂದರೆ. ಎಲ್ಲಿಯೂ ಹಿಡಿತ ತಪ್ಪದಂತೆ ನೋಡಿಕೊಳ್ಳಿ. ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ನಿಮ್ಮನ್ನು ಮೇಲೆತ್ತಲು ಯಾರೋ ಬರುತ್ತಾರೆಂಬ ನಿರೀಕ್ಷೆ ಬೇಡ. ಕಾನೂನು ಸಮರಕ್ಕೆ ನಿಮಗೆ ಹೊಸ ಆಯಾಮ ಸಿಗಲಿದೆ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ನಷ್ಟವಾಗಬಹುದು. ಯಾವುದನ್ನಾದರೂ ನಂಬಿಕಸ್ಥರ ಜೊತೆ ವ್ಯವಹರಿಸಿ.

16 ನವೆಂಬರ್​ 2025ರ ಭಾನುವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ವೈಧೃತಿ, ಕರಣ : ಗರಜ, ಸೂರ್ಯೋದಯ – 06 – 19 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 – 17:49, ಗುಳಿಕ ಕಾಲ 14:57 – 16:33, ಯಮಗಂಡ ಕಾಲ 12:04 – 13:30

-ಲೋಹಿತ ಹೆಬ್ಬಾರ್ – 8762924271 (what’s app only)

Published On - 12:19 am, Sun, 16 November 25