Weekly Love Horoscope: ಅ.12ರಿಂದ, 18 ವರೆಗೆ ಈ ರಾಶಿಯವರ ಪ್ರೀತಿಯಲ್ಲಿ ಆಗುವ ಬದಲಾವಣೆಗಳೇನು?

ಪ್ರೀತಿ ಅಥವಾ ಮದುವೆ ಯಾರಿಗೆ, ಯಾರನ್ನು ಜೋಡಿ ಮಾಡಬೇಕು ಎನ್ನುವುದು ವಿಧಿಲಿಖಿತ, ಪ್ರೀತಿ ಹೇಗೆ ಬೇಕಾದರೂ ಹುಟ್ಟಿಕೊಳ್ಳಬಹುದು, ಆದರೆ ಪ್ರೀತಿ ಮಾಡಿದವರನ್ನೇ ಮದುವೆ ಆಗುವುದು ಸುಲಭ ಮಾತಲ್ಲ. ಅದು ಅವರ ಹಣೆಯಲ್ಲಿ ಬರೆದಿರಬೇಕು. ಇಲ್ಲಿ ರಾಶಿಯ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗಿರುತ್ತದೆ. ಈ ತಿಂಗಳ ಅಂದರೆ ಅಕ್ಟೋಬರ್ 12ರಿಂದ ಅಕ್ಟೋಬರ್ 18 ವರೆಗೆ ಯಾವ ರಾಶಿಗೆ ಪ್ರೀತಿ ವಿಚಾರದಲ್ಲಿ ಆಗುವ ಲಾಭ ಹಾಗೂ ನಷ್ಟಗಳೇನು ಎಂಬುದನ್ನು ಇಲ್ಲಿ ಹೇಳಿದ್ದಾರೆ ನೋಡಿ.

Weekly Love Horoscope: ಅ.12ರಿಂದ, 18 ವರೆಗೆ ಈ ರಾಶಿಯವರ ಪ್ರೀತಿಯಲ್ಲಿ ಆಗುವ ಬದಲಾವಣೆಗಳೇನು?
ಸಾಂದರ್ಭಿಕ ಚಿತ್ರ
Edited By:

Updated on: Oct 10, 2025 | 12:44 PM

ಅಕ್ಟೋಬರ್ 12ರಿಂದ ಅಕ್ಟೋಬರ್ 18 (Weekly Love Horoscope) ವರೆಗೆ ಪ್ರೀತಿಯಲ್ಲಿ ಗೆಲವು ಸಾಧಿಸುತ್ತೇನೆ ಎಂಬ ಭಾವ ಬೇಡ. ಪ್ರೀತಿ ಪ್ರೇಮ ಪ್ರಣಯಕ್ಕೆ ಕಾರಣನಾಗಿರುವ ಶುಕ್ರನು ನೀಚಸ್ಥಾನಕ್ಕೆ ಬಂದಿದ್ದರಿಂದ ದುಡುಕಿ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಿಕೊಂಡರೆ ನಿಮಗೇ ಒಳ್ಳೆಯದು. ಶಾಶ್ವತ ಪ್ರೇಮ ಬೇಕೆಂದರೆ ಕೆಲವು ಸಂದರ್ಭಗಳಲ್ಲಿ ಬಿಟ್ಟಂತೆ ಇರುವುದ ಕೂಡ ಹೌದು. ಹದವರಿತು ಪ್ರೇಮದಲ್ಲಿ ಮುಂದುವರಿಯಿರಿ.

ಮೆಷ ರಾಶಿ :

ಪ್ರೀತಿಸುವವರು ಈ ವಾರ ಪ್ರೇಮ ಜೀವನದಲ್ಲಿ ಸ್ಪಷ್ಟ ಸಂವಾದ ಮುಖ್ಯವಾಗಿರಲಿ. ನವ ದಂಪತಿಗಳು ಭಾವನೆಗಳನ್ನು ಹಂಚಿಕೊಳ್ಳಲು ಸಮಯ ತೆಗೆದುಕೊಳ್ಳಿ. ಹೃದಯದ ಅಭಿವ್ಯಕ್ತಿ ಮುಕ್ತವಾಗಿರಿಸಿ. ಆದರೆ ಸಮಯ ಮತ್ತು ಸ್ಥಳವನ್ನು ಗಮನಿಸಿ. ಈ ವಾರ ಸಂಗಾತಿಯ ಹೆಸರಿನಲ್ಲಿ ಆಸ್ತಿಯ ಮಾಡುವ ಯೋಚನೆ ಬರುವುದು.

ವೃಷಭ ರಾಶಿ :

ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯು ನಿಮಗೆ ಹೊಸ ಅವಕಾಶವನ್ನು ಕೊಡುತ್ತದೆ. ಹಳೆಯ ಪ್ರೇಮ ಸಂಬಂಧವನ್ನು ಪುನಃ ಆರಂಭವಾಗುವುದು. ಶಾಂತಿಯುತ ಸಂವಾದದಿಂದ ಯಾರನ್ನೂ ಗೆಲ್ಲಬಹುದು. ಮಾನಸಿಕ ನೋವು ನಿಮಗೆ ಅಸಹನೀಯ ಅನುಭವವನ್ನು ನೀಡುವುದು. ಈ ವಾರ ಸಂಗಾತಿ ಹೇಳಿದ ಕಡೆಗೆ ನಿಮ್ಮ ಪ್ರಯಾಣ.

ಮಿಥುನ ರಾಶಿ :

ಮೂರನೇ ರಾಶಿಯವರಿಗೆ ಈ ವಾರ ಹೊಸ ಪ್ರೇಮಿಯ ಜೊತೆ ಸಂವಹನದಲ್ಲಿ ಮುಕ್ತತೆ ಹೆಚ್ಚಾಗುತ್ತದೆ. ನೇರವಾಗಿ ಮಾತನಾಡುವುದಕ್ಕಿಂತ ವಕ್ರವಾಗಿ ಮಾತನಾಡುವಿರಿ. ನಿಮ್ಮನ್ನು ಆಡಿಕೊಳ್ಳುವಾಗ ದಿಟ್ಟವಾಗಿ ಎದುರಿಸಲು ಸಾಧ್ಯವಾಗದು. ಈ ವಾರ ಸಂಬಂಧದಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸುವುದು ಸ್ನೇಹಭಾವನೆಯನ್ನು ಶಕ್ತಿಗೊಳಿಸುತ್ತದೆ.

ಕರ್ಕಾಟಕ ರಾಶಿ :

ಅಕ್ಟೋಬರ್ ತಿಂಗಳ ಈ ವಾರ ನೀವು ಭಾವನಾತ್ಮಕವಾಗಿ ತೋರಿಸುವ ಒಲವು ಪ್ರತ್ಯೇಕ ಕಾಳಜಿಯೂ ಪ್ರೀತಿಯ ಮೌಲ್ಯವನ್ನು ತೋರಿಸುತ್ತದೆ. ಸ್ವಾಮಿತ್ವವು ನಿಮ್ಮ ಸಂಗಾತಿಗೆ ಕಿರಿಕಿಯಾಗುವುದು.
ಪ್ರೀತಿ ಪಾತ್ರರ ಜೊತೆ ನಿಮ್ಮ ಆಸೆಯನ್ನು ಹಂಚಿಕೊಂಡರೂ ಅವರ ಇಚ್ಛೆಗಳ ಭಿನ್ನತೆಯಿಂದ ಮಾತು ವಿವಾದಕ್ಕೆ ಹೋಗುವುದು. ಆದರೆ ಅವುಗಳನ್ನು ಮುಚ್ಚಿದಿಡಬೇಡಿ. ಎಂದಾದರೂ ಪ್ರಕಟವಾಗಲೇಬೇಕು.

ಸಿಂಹ ರಾಶಿ :

ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಈ ವಾರ ಪ್ರೇಮದಲ್ಲಿ ಚೈತನ್ಯ ಎದ್ದು ಕಾಣಿಸುವುದು. ನೀವು ಕೊಡುವ ಸರ್‌ಪ್ರೈಸಸ್ ಸಂಗಾತಿಯು ಊಹಿಸಿರಲಾರರು. ನಿಮ್ಮಿಬ್ಬರಲ್ಲಿ ಒಬ್ಬರಾದವರು ಆತ್ಮವಿಶ್ವಾಸದಿಂದ ಮುಂದಡಿ ಇಡುವುದು ಯೋಗ್ಯ.ಅಧಿಕಾರದಿಂದ ಬರುವ ಅಲಂಕಾರವನ್ನು ತೋರ್ಪಡಿಸುವ ಅವಶ್ಯಕತೆ ಇಲ್ಲ.

ಕನ್ಯಾ ರಾಶಿ :

ಆರನೇ ರಾಶಿಯವರಿಗೆ ಈ ವಾರ ಇಷ್ಟ ಹಾಗು ಕಷ್ಟಗಳ ತುಲನಾತ್ಮಕ ಮಾತುಕತೆ ನಡೆಯಲಿದೆ. ಸಂಗಾತಿಯ ಜೊತೆ ದೂರ ಪ್ರಯಾಣದ ಯೋಚನೆ ಇದ್ದರೂ ಒಬ್ಬರೇ ಮನಸ್ಸು ಮಾಡಿದರೆ ಸಾಧ್ಯವಾಗದು.
ಸಂಬಂಧಗಳಲ್ಲಿ ನಿಮ್ಮ ಸೇವಾ ಮನೋಭಾವ ಮತ್ತು ಸಹಕಾರಿ ಮನಸ್ಸು ಮುಖ್ಯ. ನಿಮ್ಮ ಭಾವನೆಗಳನ್ನು ಸ್ಪಂದಿಸುವವರ ಜೊತೆ ಹಂಚಿಕೊಳ್ಳಿ.

ತುಲಾ ರಾಶಿ :

ಅಕ್ಟೋಬರ್ ತಿಂಗಳ ಈ ವಾರದಲ್ಲಿ ಪ್ರೀತಿಯ ಸಂವಾದಗಳು ಉತ್ಸಾಹವನ್ನು ಅಧಿಕಮಾಡಿಸುವುದು. ಪ್ರೀತಿಯಲ್ಲಿ ಸೌಹಾರ್ದತೆ ಮರೆಯಾಗದಂತೆ ನೋಡಿಕೊಳ್ಳಿ. ರಮಣೀಯ ಸ್ಥಾನಗಳನ್ನು ವೀಕ್ಷಿಸುವ ಮನಸ್ಸು ಬರಲಿದೆ. ಈ ವಾರ ನಿಮ್ಮ ಪ್ರೇಮ ಬಂಧನವು ಹಿತವೆನಿಸಲಾರಂಭಿಸುವುದು. ಸಂಗಾತಿಯ ಅತಿಯಾದ ಕಾಳಜಿ ನಿಮಗೆ ಕಿರಿಕಿರಿ ನೀಡಲಿದೆ.

ವೃಶ್ಚಿಕ ರಾಶಿ :

ರಾಶಿ ಚಕ್ರದ ಎಂಟನೇ ರಾಶಿಗೆ ಈ ವಾರ ಭಾವನೆಗಳನ್ನು ಹೇಳಿಕೊಳ್ಳುವ ಸ್ಥಿತಿ ಇರದು. ಪ್ರೀತಿಗೆ ಸಹವಾಸಿಗಳಿಂದ ಒತ್ತಡ, ಕುಹಕ ಮಾತುಗಳನ್ನು ಕೇಳಬೇಕಾಗುವುದು. ಈ ವಾರ ನಿಮ್ಮ ಸ್ಥಿತಿಯನ್ನು ನೋಡಿ ಅಯ್ಯೋ ಪಾಪ ಎನಿಸಿ ಯಾರಾದರು ಪ್ರೀತಿ ತೋರಿಸಬಹುದು. ಅದನ್ನು ಶಾಶ್ವತ ಎಂದು ಭಾವಿಸುವುದು ಬೇಡ. ಸ್ವಲ್ಪಮಟ್ಟಿಗೆ ನೆಮ್ಮದಿ ನಿಮ್ಮದಾಗಲಿದೆ.

ಧನು ರಾಶಿ :

ಈ ರಾಶಿಯವರಿಗೆ ಎರಡನೇ ವಾರದಲ್ಲಿ ಪ್ರೇಮದಲ್ಲಿ ಸಾಹಸ ಮಾಡಬೇಕಾಗುವುದು. ಕೆಲವು ತ್ಯಾಗಕ್ಕೂ ತಯಾರಿರಬೇಕಾಗುವುದು. ಇದನ್ನು ಗಮನಿಸಿ ಮುಂದಿನ ಹೆಜ್ಜೆ ಇಡಿ.‌ ಮೋಸ ಮಾಡಿ ಅನಂತರ ಪಶ್ಚಾತ್ತಾಪ ಪಡುವುದು ಬೇಡ. ಈ ವಾರ ಉದ್ಯೋಗದ ಸಮಯ ಬದಲಾದ ಕಾರಣ ಪ್ರೇಯಸಿಯ ಜೊತೆ ಸಮಯ ಕಳೆಯಲಾಗದು. ಅದನ್ನು ಮನವರಿಕೆ ಮಾಡಿಸಿ.

ಮಕರ ರಾಶಿ :

ಹತ್ತನೇ ರಾಶಿಯವರಿಗೆ ಈ ವಾರ ಭಾವನಾತ್ಮಕ ಸ್ಥಿರತೆ ಕಷ್ಟ. ಕ್ಷಣ ಕ್ಷಣಕ್ಕೂ ಒಂದೊಂದು ಕಾರಣಕ್ಕೆ ಬದಲಾಗುತ್ತಲೇ ಇರುತ್ತದೆ. ಅಭದ್ರತೆಯು ಹೆಚ್ಚಾಗಿ ಕಾಡುವುದು. ನಿಮ್ಮ ಪ್ರೀತಿ ಈಗಲೇ ತುಂಬ ಎಕ್ಸಪೆನ್ಸಿವ್ ಆದರೆ ಅದನ್ನು ಬಿಡುವುದು ಉತ್ತಮ. ಇಲ್ಲವಾದರೆ ಅನಂತರ ಸಂಕಟಪಡಬೇಕಾಗುವುದು. ನಿಮ್ಮ ಮಾನಸಿಕತೆಗೆ ಹೊಂದುವಂತಹದ್ದಲ್ಲ. ಈ ವಿಚಾರಕ್ಕೆ ಬರುವ ಕೋಪವನ್ನು ನಿಯಂತ್ರಿಸಿಕೊಳ್ಳುವಿರಿ.

ಇದನ್ನೂ ಓದಿ: ಒಂದೇ ಬಾರಿಗೆ ನೀಚ ಸ್ಥಿತಿಯಲ್ಲಿ ರವಿ, ಚಂದ್ರ ಹಾಗೂ ಶುಕ್ರ ಗ್ರಹ; ಏನಿದರ ಪರಿಣಾಮ?

ಕುಂಭ ರಾಶಿ :

ಎರಡನೇ ವಾರದಲ್ಲಿ ನಿಮಗೆ ಪ್ರೇಮದಲ್ಲಿ ಅನನ್ಯತೆ, ಹೊಸ ಮನೋರಂಜನೆಯ ಮೇಲೆ ಗಮನವಿರಲಿದೆ. ಸಾಮಾನ್ಯ ಮಾರ್ಗವಲ್ಲದೇ ಬೇರೆ ದಿಕ್ಕಿನಲ್ಲಿ ಸಂಬಂಧ ಬೆಳೆಸಿಕೊಳ್ಳುವ ಯೋಚನೆ. ಈ ವಾರ ನೀವು ಮಾಡುವ ಸಂವಹನದ ಪರಿಶುದ್ಧವಾಗಿರಲಿ. ಅರಿವಿಲ್ಲದ ಮಾತುಗಳಿಂದ ಮೂಲೆಗುಂಪಾಗುವ ಸಾಧ್ಯತೆ ಇದೆ.

ಮೀನ ರಾಶಿ :

ರಾಶಿ ಚಕ್ರದ ಕೊನೆಯ ರಾಶಿಗೆ ಈ ವಾರ ಪ್ರೀತಿಯನ್ನು ಸಾಹಿತ್ಯದ ಮೂಲಕ ಪ್ರಕಟಿಸುವ ವಿವರಿಸುವ ಆಸೆ ತೋರಿಸುವಿರಿ. ಪರಸ್ಪರ ಸಹಾನುಭೂತೆಯಿಂದ ತುಂಬಿದ ಪ್ರೇಮ ಗಟ್ಟಿಯಾಗುತ್ತ ಹೋಗುವುದು. ಈ ವಾರ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲೂ ಸುಲಭ. ಭಾವನಾತ್ಮಕ ಮಟ್ಟದಲ್ಲಿ ಗಟ್ಟಿಯಾಗುವ ಅವಧಿ. ಒಬ್ಬರಾದರೂ ಮುಂದಿನ ಕನಸುಗಳನ್ನು ಗೌಪ್ಯವಾಗಿ ಇರಿಸಿಕೊಳ್ಳುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Fri, 10 October 25