AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಈ ರಾಶಿಯವರು ಇಷ್ಟಪಟ್ಟವರನ್ನು ಇನ್ಯಾರೂ ಗೆಲ್ಲುವರು, ಇಲ್ಲಿದೆ ಈ ವಾರದ ಪ್ರೀತಿ-ಪ್ರೇಮದ ಭವಿಷ್ಯ

ವಾರದ ಪ್ರೇಮ -ಪ್ರೀತಿ: ರಾಶಿ ಚಕ್ರದ ಮೂಲಕ ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರ ಅಂದರೆ ನವೆಂಬರ್ 09 ರಿಂದ ನವೆಂಬರ್ 15 ವರೆಗೆ ಯಾವ ರಾಶಿಯವರಿಗೆ ಪ್ರೇಮ-ಪ್ರೀತಿ ಲಾಭ ಹಾಗೂ ನಷ್ಟಗಳು ಇದೆ ಎಂಬುದನ್ನು ಹೇಳಲಾಗಿದೆ. ಯಾವ ರಾಶಿಯವರು ಈ ವಾರ ಪ್ರೀತಿಯಲ್ಲಿ ಬೀಳುತ್ತಾರೆ? ಯಾವ ರಾಶಿಯವರ ಪ್ರೀತಿ ಪ್ರೇಮದಲ್ಲಿ ಏನೇನು ಆಗಲಿದೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ

Weekly Love Horoscope: ಈ ರಾಶಿಯವರು ಇಷ್ಟಪಟ್ಟವರನ್ನು ಇನ್ಯಾರೂ ಗೆಲ್ಲುವರು, ಇಲ್ಲಿದೆ ಈ ವಾರದ ಪ್ರೀತಿ-ಪ್ರೇಮದ ಭವಿಷ್ಯ
Love Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Nov 06, 2025 | 2:05 AM

Share

ನವೆಂಬರ್ 09 ರಿಂದ ನವೆಂಬರ್ 15 ವರೆಗೆ ಪ್ರೀತಿಯ ವಿಚಾರದಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ. ಎಲ್ಲರೂ ಪ್ರೇಮಕ್ಕೆ ಸಹಕಾರಿಯಾಗಿ ಇರುತ್ತಾರೆ ಎನ್ನಲಾಗದು. ಗೊತ್ತಿಲ್ಲದಂತೆ ಶತ್ರುಗಳ ಪಕ್ಷ ಸೇರಬಹುದು. ಯಾವುದಕ್ಕೂ ನಿಮ್ಮ ರಕ್ಷಣೆ, ಪ್ರೇಮದ ಉಳಿವಿಗೆ ಬೇಕಾದಂತೆ ನಡೆಸುಕೊಳ್ಳಿ. ವಿಮರ್ಶಾತ್ಮಕ ವಿಚಾರಕ್ಕೆ ಕೆಲವು ಸಮಯವನ್ನು ಪಡೆದು ಉತ್ತರಿಸಿದರೆ ಕೆಲವು ಸಂದರ್ಭಗಳಲ್ಲಿ ಉತ್ತಮ ರೀತಿಯಲ್ಲಿ ದಾಟಲು ಸಾಧ್ಯ. ಸತ್ಪ್ರೇಮ ಫಲಿಸಲಿ.

ಮೇಷ ರಾಶಿ :ನವೆಂಬರ್ ತಿಂಗಳ ಎರಡನೇ ವಾರ ನಿಮ್ಮ ಮನಸ್ಸು ಪ್ರೇಮದಲ್ಲಿ ಸ್ಪಷ್ಟತೆ ಹುಡುಕುತ್ತದೆ. ವೈಷಮ್ಯದ ಸಂಬಂಧಗಳನ್ನು ಸಮಾಧಾನವಾಗಿಸಲು ಇದು ಉತ್ತಮ ಸಮಯ. ಜೋಡಿಯಾದವರು ಹೊಸ ಭರವಸೆ ಮತ್ತು ನಂಬಿಕೆಯ ಮೂಲಕ ಹತ್ತಿರ ಬರುವರು. ಒಂಟಿಯಾಗಿರುವವರು ಆಕರ್ಷಕ ವ್ಯಕ್ತಿಯನ್ನು ವಶ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಅತಿಯಾದ ವೇಗವನ್ನು ತಪ್ಪಿಸಬೇಕು.

ವೃಷಭ ರಾಶಿ :ರಾಶಿ ಚಕ್ರದ ಎರಡನೇ ರಾಶಿಯವರಿಗೆ ಎರಡನೇ ವಾರ ನೀವಾಗಿಯೇ ಭಾವನೆಗಳಲ್ಲಿ ಸ್ಥಿರತೆ ತಂದುಕೊಳ್ಳುವಿರಿ. ಸಂಬಂಧದಲ್ಲಿ ಆತ್ಮೀಯತೆ ಉಂಟಾಗುವುದು. ನಿಮ್ಮ ಸ್ನೇಹದ ಮೂಲಕ ಪ್ರೇಮಕ್ಕೆ ಮಾರ್ಗ ತೆರೆದಿಕೊಳ್ಳುವರು. ಈ ವಾರ ನಿರೀಕ್ಷೆಗಳನ್ನು ಸಮಯ ನೋಡಿ ಮೊದಲೇ ಸ್ಪಷ್ಟಪಡಿಸಿ. ಪ್ರೀತಿಗಾಗಿ ಸ್ತ್ರೀಯರಿಗೆ ಅತಿಯಾದ ಒತ್ತಡ ಬರಲಿದೆ.

ಮಿಥುನ ರಾಶಿ :ಈ ತಿಂಗಳ ಎರಡನೇ ವಾರದಲ್ಲಿ ನಿಮಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೊಸ ಪ್ರೇಮ ಸಾಧ್ಯತೆ ಇದೆ. ಯಾವುದಕ್ಕೂ ನಿಮ್ಮ ಪೂರ್ವಪ್ರೇಮವನ್ನು ತಿಳಿಸಿಬಿಡಿ. ಹೊಸಬರು ನಿಮ್ಮ ಮನಸ್ಸು ಚಂಚಲವಾಗಿರುವುದರಿಂದ ಆಯ್ಕೆಯಲ್ಲಿ ಎಚ್ಚರಿಕೆ ಇರದು. ಸಂಭಾಷಣೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ. ಮಾಡುವ ಕ್ರಿಯೆಗೂ ಮಾತಿಗೂ ಸಮನ್ವಯತೆ ಇರಲಿ.

ಕರ್ಕಾಟಕ ರಾಶಿ :ಈ ರಾಶಿಯವರಿಗೆ ಹಳೆಯ ಭಾವನೆಗಳು ಮತ್ತೆ ಬರಲಿದೆ. ಇಬ್ಬರೂ ಹೊಸ ಪ್ರೇಮಿಯ ಜೊತೆ ಹಳೆಯ ಮೆಲುಕು ಹಾಕುವಿರಿ. ಜೊತೆಯಾಗಿ ಪ್ರಯಾಣದ ಆರಂಭಕ್ಕೆ ಆಲೋಚನೆ ಮಾಡುವಿರಿ. ಈ ವಾರ ಪರಸ್ಪರ ಒಬ್ಬರನ್ನೊಬ್ಬರು ಮತ್ತೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವರು. ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಳ್ಳುವರು. ಇದರಿಂದ ಸ್ನೇಹಭಾವ ಹೆಚ್ಚಾಗುತ್ತದೆ.

ಸಿಂಹ ರಾಶಿ :ಐದ‌ನೇ ರಾಶಿಯವರು ಈ ವಾರ ಬಹಳ ಆಕರ್ಷಣೆಯಿಂದ ಮತ್ತೆ ಬೆಳಗುವರು. ಪ್ರೇಮದಲ್ಲಿ ಶೃಂಗಾರ ಚಹರೆಗಳು ಹೆಚ್ಚು ಕಂಡುಬರುತ್ತದೆ. ಅಹಂಕಾರ ಅಥವಾ ಅತಿಯಾದ ಆಕಾಂಕ್ಷೆಗಳು ಸಂಬಂಧಕ್ಕೆ ತೊಂದರೆ ಕೊಡುವುದು. ಈ ವಾರ ಒಂಟಿಯಾಗಿದ್ದವರಿಗೆ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯಿಂದ ಆಹ್ಲಾದವಾಗಲಿದೆ.

ಕನ್ಯಾ ರಾಶಿ :ಬುಧಾಧಿಪತ್ಯದ ಈ ರಾಶಿಯವರಿಗೆ ಈ ವಾರ ಪ್ರೇಮವನ್ನು ತುಲನಾತ್ಮಕವಾಗಿ ಕೊಂಡೊಯ್ಯುವುದು ಕಷ್ಟವಾಲಿದೆ. ಜೀವನವೂ ಜೀವನಕ್ಕೆ ಆಧಾರವೂ ಬೇಕು ಎನ್ನುವ ಪರಿಜ್ಞಾನ ನಿಮಗೆ ಸ್ಪಷ್ಟವಾಗಿ ಇರಲಿದೆ. ಪ್ರೇಮಿಯ ಬಗ್ಗೆ ಅತಿಯಾದ ವಿಶ್ಲೇಷಣೆ ಮಾಡಬೇಡಿ. ಹೃದಯದಿಂದ ಅವರನ್ನು ಅರ್ಥ ಮಾಡಿಕೊಳ್ಳಿ. ವಿದ್ಯಾಭ್ಯಾಸದಲ್ಲಿ ಉಂಟಾದ ಪ್ರೇಮ ನಿಮ್ಮ ಸಮಯವನ್ನು ಹಾಳುಮಾಡುವುದು.

ತುಲಾ ರಾಶಿ :ಏಳನೇ ರಾಶಿಯವರಿಗೆ ಈ ವಾರ ನಿಮ್ಮ ಸ್ನೇಹಿತರು ಮೂಲಕ ಹೊಸ ಪರಿಚಯವಾಗಲಿದೆ. ಆದರೆ ಸಂವಹನದಲ್ಲಿ ಸಮತೋಲನ ಇರಲಿ. ಅತಿಯಾದ ಭಾವನಾತ್ಮಕವಾಗಿ ಆಡುವ ಆಟವು ಸಂಕಟ ಮುಕ್ತಾಯ. ಹೇಳಬೇಕಾದುದನ್ನು ಬೇಗನೆ ಹೇಳುಬಿಡಿ. ಸಂಗಾತಿಯಿಂದ ಅಪೇಕ್ಷಿತ ವಿಚಾರಕ್ಕೆ ಕಲಹವಾಗಲಿದೆ. ಉದ್ಯೋಗವನ್ನು ನೀವೇ ಕೊಡಿಸುವಿರಿ.

ವೃಶ್ಚಿಕ ರಾಶಿ :ನವೆಂಬರ್ ತಿಂಗಳ ಈ ವಾರದಲ್ಲಿ ನಿಮಗೆ ಪ್ರೇಮವನ್ನು ಪ್ರಮಾಣಬದ್ಧವಾಗಿ ನಿರೂಪಿಸುವಿರಿ. ಒಬ್ಬರ ಮೇಲೆ ಅತಿಯಾದ ಭರವಸೆ ಇಡುವ ಮುನ್ಸೂಚನೆ ಇದೆ. ಜೊತೆಗಾರರ ಮನಸ್ಸಿನ ಗಾಢ ವಿಷಯಗಳನ್ನು ಚರ್ಚಿಸಲು ಇದು ಒಳ್ಳೆಯ ಸಮಯ. ಆದರೆ ಹಳೆ ಅಸೂಯೆ ಮತ್ತೆ ಮೇಲೇಳದಂತೆ ಕಾಪಾಡಿಕೊಳ್ಳಿ. ನಿಮ್ಮಿಂದ ನೀಡಲ್ಪಡುವ ಕಿರುಕಾಣಿಕೆ ಸಂತೋಷ ಕೊಡುವುದು.

ಧನು ರಾಶಿ :ಈ ರಾಶಿಯವರಿಗೆ ಎರಡನೇ ಸಂಗಾತಿಗೆ ನಿಮ್ಮ ಸ್ವಾತಂತ್ರ್ಯ ಹೆಚ್ಚಾಗಿರುತ್ತದೆ. ಆದರೆ ಮೇಲ್ವಿಚಾರಣೆಯನ್ನು ಆಗಾಗ ಮಾಡುವುದು ಸೂಕ್ತ. ಆಕಸ್ಮಿಕ ಆಕರ್ಷಣೆಗಳಿಗೆ ಮಾತ್ರ ಬೀಳದಂತೆ ಎಚ್ಚರಿಕೆ ಇರಲಿ. ಒಟ್ಟಾಗಿ ಪ್ರಯಾಣ ಅಥವಾ ಹೊಸ ಅನುಭವ ಪಡೆಯಬಹುದು. ಈ ವಾರ ನಿಮ್ಮನ್ನು ನೋಡಲು ಯಾವುದಾದರೂ ತಂತ್ರ ಬಳಕೆಯಾಗಲಿದೆ. ಬಹುಪಾಲು ಮಾತುಕತೆಲ್ಲಿಯೇ ವಾರವಿಡೀ ಮುಕ್ತಾಯವಾಗಲಿದೆ.

ಮಕರ ರಾಶಿ :ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಸಂಬಂಧವು ಸಜ್ಜನಿಕೆ ಮತ್ತು ಗಂಭೀರತೆಯ ಆಧಾರದಲ್ಲಿ ಬೆಳೆಯುವುದು. ಆದರೆ ಭಾವನೆಗಳನ್ನು ಗುಟ್ಟಾಗಿಟ್ಟರೆ ಪರಿಣಾಮ ತೊಂದರೆಯನ್ನು ಉಂಟುಮಾಡುವುದು. ಆಮಿಷ ಅಥವಾ ಪ್ರಲೋಭನೆಯಿಂದ ನಿಮ್ಮನ್ನು ವಶಮಾಡಿಕೊಂಡರೆ ಅದರಿಂದಂದ ಹೊರಬರುವ ಯೋಚನೆ ಅಗತ್ಯ.

ಕುಂಭ ರಾಶಿ :ಶನಿಯ ಆಧಿಪತ್ಯದ ಈ ರಾಶಿಯವರಿಗೆ ಎರಡನೇ ವಾರ ಸಂಬಂಧಗಳಲ್ಲಿ ಸ್ವಾತಂತ್ರ್ಯ ಮತ್ತು ಸ್ನೇಹ ಎರಡನ್ನೂ ಸಮತೋಲನವಾಗಿಟ್ಟುಕೊಳ್ಳಲೇ ಬೇಕು. ಪರಿಚಯಗಳು ತಿಳಿವಳಿಕೆಯ ಮೂಲಕ ಪ್ರೇಮಕ್ಕೆ ಮಾರ್ಗ ತೆರೆದಿಕೊಳ್ಳಬಹುದು. ಪ್ರೀತಿ ಪ್ರೇಮವು ಇಷ್ಟವಿಲ್ಲದೆ ಇದ್ದರೂ ಪ್ರತಿಷ್ಠೆಯ ಕಾರಣಕ್ಕೆ ಮಾಡಬೇಕಾಗುವುದು.

ಮೀನು ರಾಶಿ :ಕೊನೆಯ ರಾಶಿಯವರಿಗೆ ಈ ವಾರ ಪ್ರೇಮಕ್ಕೆ ಸಂಬಂಧಿಸಿದಂತೆ ಒಳ ಮನಸ್ಸು ಸಕಾರಾತ್ಮಕವಾಗಿ ಚಿಂತಿಸಿದರೆ, ಬುದ್ಧಿಯು ನಕಾರಾತ್ಮಕವಾಗಿರುವುದು. ಹೃದಯ ಸಂವೇದನಾಶೀಲವಾಗಿರುತ್ತದೆ. ಆದರೆ ಭಾವನೆಗೆ ತಕ್ಕಂತೆ ನಿರ್ಧಾರ ಮಾಡಬೇಡಿ. ಹೃದಯದ ಜೊತೆ ಬುದ್ಧಿಯನ್ನೂ ಬಳಸಿ. ಸಹಚರರ ಅಭಿಪ್ರಾಯವನ್ನೂ ಪಡೆದು ಮುಂದಿನ‌ ಕ್ರಮಕ್ಕೆ ಅಡಿಯಿಡಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ