
ಸಪ್ಟೆಂಬರ್ 28ರಿಂದ ಅಕ್ಟೋಬರ್ 04 ವರೆಗೆ ಈ ವಾರವಿದ್ದು ಪ್ರೀತಿ (Weekly Love Horoscope) ಕೆಲವರಿಗೆ ಉತ್ತಮ ಫಲ, ಮಧ್ಯಮ, ಅಫಲ, ಅಶುಭ ಎಲ್ಲವೂ ಇದ್ದು ಅದನ್ನು ನಿಭಾಯಿಸುವುದು ದೊಡ್ಡ ಜವಾಬ್ದಾರಿ. ಹೊಂದಾಣಿಕೆ ಮಾಡಿಕೊಳ್ಳುವ ಮನಃಸ್ಥಿತಿ ಇದ್ದರೆ ಒಳ್ಳೆ ರೀತಿಯಲ್ಲಿ ಮುಂದುರಿಯುವುದು. ದೈವಾನುಕೂಲಕ್ಕಿಂತ ಪುರುಷ ಪ್ರಯತ್ನದಿಂದ ಸಾಧಿಸುವುದು ಇದಾಗಿದೆ.
ಈ ತಿಂಗಳಲ್ಲಿ ವಾರಕ್ಕೆ ಮೊದಲ ರಾಶಿಯವರಿಗೆ ಶುಭ. ಸಂಗಾತಿಯ ಜೊತೆ ಬುದ್ಧಿವಂತಿಕೆಯಿಂದ ವ್ಯವಹಾರ ಮಾಡುವಿರಿ. ಸಿಟ್ಟು ಅರ್ಥಪೂರ್ಣವಾಗಿದ್ದರೂ ಅದನ್ನು ಅರಿಯುವ ಸಾಮರ್ಥ್ಯ ಇರದು. ವಿವಾಹ ವಿಚ್ಛೇದನಕ್ಕೆ ಒಪ್ಪಲಾರಿರಿ. ಉತ್ಸಾಹದಲ್ಲಿ ಕೊಡುವ ಮಾತಿಗೆ ಬದ್ಧರಾಗುವಿರಿ. ಕುಜ ದಶೆಯಿಂದ ಶ್ರೇಯಸ್ಕರ.
ಶುಕ್ರನ ಆಧಿಪತ್ಯದ ಈ ರಾಶಿಗೆ ಈ ವಾರ ಪ್ರೇಮಕ್ಕೆ ನಿಮ್ಮ ಮನೆಯಿಂದ ಒಪ್ಪಿಗೆ ಸಿಕ್ಕರೂ ಸಂಗಾತಿಯ ಕಡೆಯಿಂದ ಪೂರ್ಣ ಸಹಮತವಿಲ್ಲ. ಯಾರಿಗೂ ತಿಳಿಯದಂತೆ ಪ್ರೇಮವನ್ನು ಇಟ್ಟುಕೊಳ್ಳುವಿರಿ. ಈ ವಾರ ಸಂಗಾತಿ ಮನೆಯಲ್ಲಿ ವಾಸ್ತ ಸಂಗಾತಿಯ ಕರೆ ಇಲ್ಲದೇ ಒದ್ದಾಡುವಿರಿ. ಅದಕ್ಕಾಗಿ ಬೇರೆದ ಮಾರ್ಗವನ್ನು ಅರಸುವಿರಿ. ಶುಕ್ರ ದಶೆ ಪೂರ್ಣ ಫಲವಿಲ್ಲ.
ಅಕ್ಟೋಬರ್ ತಿಂಗಳ ಈ ವಾರದಲ್ಲಿ ಪ್ರೀತಿಗೆ ಹೆಚ್ಚು ಬೆಲೆ ಕೊಡಲಾರಿರಿ. ನಿಮಗೆ ಸಿಗದೇ ಇರುವ ಪ್ರೀತಿಯ ಮೇಲೆ ಆಸಕ್ತಿ ಹೋಗುವುದು. ಒತ್ತಾಯಕ್ಕೆ ಸಿಗುವ ಪ್ರೀತಿಗೆ ಬಾಳಿಕೆ ಇಲ್ಲ. ಅತಿಯಾದ ಸಲುಗೆಯಿಂದ ಸಂಗಾತಿಯ ಮೇಲೆ ಗೌರವ ಕಡಿಮೆಯಾಗಲಿದೆ. ಅಶುಭ ಸೂಚನೆಯನ್ನು ಹೆಚ್ಚು ನಂಬುವಿರಿ. ನಿಮ್ಮ ದಾಂಪತ್ಯದ ಬಗ್ಗೆ ಯಾರಾದರೂ ಅಪಹಾಸ್ಯ ಮಾಡುವುದು.
ನಾಲ್ಕನೇ ರಾಶಿಯವರಿಗೆ ಈ ವಾರ ಪ್ರೇಮಕ್ಕೆ ಸಂಬಂಧಿಸಿದಂತೆ ಶುಭ. ಸಪ್ತಮಾಧಿಪತಿ ನವಮದಲ್ಲಿ ಇದ್ದು ಪೂರ್ವಜನ್ಮದ ಸಂಬಂಧ ಏರ್ಪಡುವುದು. ವಿವಾಹಿತರಿಗೆ ಸಂಗಾತಿಯ ವ್ಯವಹಾರ ಲಾಭಪ್ರದವಾಗಲಿದೆ. ವಯಸ್ಸಿನಲ್ಲಿ ನಿಮಗಿಂತ ಹಿರಿಯರಂತೆ ಕಾಣಿಸಬಹುದು. ಮಾನಸಿಕ ಸ್ಥಿತಿಗೆ ವಿರುದ್ಧವೆನಿಸಿದರೂ ಹೊಂದಾಣಿಕೆ ಮಾಡುವುದು ಅನಿವಾರ್ಯ. ಎಲ್ಲಿಗಾದರೂ ದೂರ ಪ್ರಯಾಣದಿಂದ ಮನಸ್ಸು ಹಗುರಾಗಿ ಒಮ್ಮತಕ್ಕೆ ಬರುವುದು ಸಾಧ್ಯ.
ಈ ವಾರ ಸೂರ್ಯನ ಆಧಿಪತ್ಯದ ಈ ರಾಶಿಗೆ ಶುಭಾಶುಭ ಫಲಗಳಿವೆ. ನಿಮ್ಮ ಮೇಲೆ ನಿಮಗೇ ಸೌಂದರ್ಯದ ಪ್ರಜ್ಞೆ ಹೆಚ್ಚಾಗಿದ್ದು, ದುರಭಿಮಾನದಿಂದ ಎಲ್ಲರನ್ನೂ ಕಳೆದುಕೊಳ್ಳುವಿರಿ. ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ನಿಮ್ಮ ನಡೆತೆಯೂ ಮುಖ್ಯ ಕಾರಣವಾಗಲಿದೆ. ಸಂಗಾತಿಯ ಕೋಪವನ್ನು ಶಾಂತಗೊಳಿಸುವ ಪ್ರಮೇಯ ಎದುರಾಗಲಿದೆ. ಸಂತಾನದ ಬಯಕೆಯನ್ನು ಹೇಳಿಕೊಳ್ಳುವಿರಿ.
ಬುಧಾಧಿಪತ್ಯದ ಈ ರಾಶಿಯವರಿಗೆ ಯಾರೂ ಸರಿ ಕಾಣಿಸರು. ಎಲ್ಲರ ಮೇಲೂ ಒಂದೊಂದು ದೂರುಗಳು ಗೋಚರಿಸುವುದು. ಯಾರನ್ನೂ ಇಷ್ಟಪಡುವ ಮನಸ್ಸಾಗದು. ನಿಮ್ಮನ್ನು ಇಷ್ಟಪಡುವವರಿದ್ದರೂ ಅದನ್ನು ಲೆಕ್ಕಿಸಲಾರಿರಿ. ಎಲ್ಲರ ಜೊತೆ ಒಡನಾಟ ಚೆನ್ನಾಗಿದ್ದರೂ ಅದು ಸ್ನೇಹಕ್ಕೆ ಮಾತ್ರ ಸೀಮಿತವಾಗಿರುವುದು. ಯಾವುದೇ ರಂಜನೀಯ ಮಾತುಗಳಿಲ್ಲದೇ ಎಲ್ಲರನ್ನೂ ನಗಿಸುತ್ತ ಇರುವಿರಿ.
ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಯಾವ ರಾಶಿಗೆ ಯಾವ ಫಲ, ಇಲ್ಲಿದೆ ನೋಡಿ
ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಪ್ರೇಮ ದಾಂಪತ್ಯದ ವಿಚಾರಕ್ಕೆ ಶುಭ. ಶುಕ್ರನು ಅಷ್ಟಮಾಧಿಪತಿಯಾಗಿ ಏಕಾದಶದಲ್ಲಿ ಇರುವನು. ಪ್ರೇಮವು ಈ ರಾಶಿಗೆ ಇದೆಯಾದರೂ ಇ ಪರಸ್ಪರ ವಾಗ್ವಾದದಿಂದ ಅದನ್ನು ಮಾಡಿಕೊಳ್ಳಬೇಕು. ಪ್ರೀತಿಯನ್ನು ಮುಖ್ಯವಾಗಿ ಇಟ್ಟು ಮಾತನಾಡಿದರೆ ನೀವು ಗೆಲ್ಲುವಿರಿ. ಅಧಿಕಾರ, ಸಂಬಂಧ, ಹಣಕಾಸಿನಿಂದ ನಿಮಗೆ ತೊಂದರೆ. ನಿಮ್ಮ ಪಾಲಿಗೆ ಶುಕ್ರ ಅಥವಾ ಗುರುದಶೆ ಉತ್ತಮ.
ಕುಜನು ಅಧಿಪತಿಯಾಗಿರುವ ಈ ರಾಶಿಗೆ ಅಕ್ಟೋಬರ್ ತಿಂಗಳ ಈ ವಾರ ಅಶುಭ. ಉದ್ಯೋಗದಲ್ಲಿ ಪ್ರೇಮವು ಅಂಕುರಿಸುವುದು. ಸೌಂದರ್ಯವನ್ನೇ ಮುಖ್ಯವಾಗಿ ಅವಲಂಬಿಸಿರಲಿದೆ. ತಂದೆಯ ಅಧಿಕಾರಿಗಳ ಮಾತೂ ಕಹಿಯಾಗುವುದು. ಸುಖದ ಆಮಿಷವನ್ನು ತೋರಿಸುವ ಸಾಧ್ಯತೆ ಇದೆ. ಅನುರೂಪವಾದವರು ಸಿಕ್ಕರೂ ಅದು ಶಾಶ್ವತವಾಗಿ ಉಳಿಯದು. ಆದರೂ ಉಳಿಸಿಕೊಳ್ಳುವ ಸಕಲ ಪ್ರಯತ್ನವನ್ನು ನಿಮ್ಮ ಕಡೆಯಿಂದ ಮಾಡುವಿರಿ.
ಗುರುವಿನ ಆಧಿಪತ್ಯದ ಈ ರಾಶಿ ಈ ವಾರ ಶುಭ. ವಿವಾಹದ ಇಚ್ಛೆಯನ್ನು ಮನೆಯವರ ಜೊತೆ ಹಂಚಿಕೊಳ್ಳುವಿರಿ. ಈ ವಾರ ಹಿರಿಯರ ನಿರ್ಧಾರದಂತೆ ನೀವು ಮುಂದುವರಿಯುವಿರಿ. ಅವಿವಾಹಿತರು ದಕ್ಷಿಣ ದಿಕ್ಕಿನ ನೆಂಟಸ್ತಿಕೆಯನ್ನು ಬೆಳೆಸಬಹುದು. ಸತ್ಕುಲದ ಸ್ತ್ರೀಯ ಅಥವಾ ಪುರುಷನ ಪ್ರಾಪ್ತಿಯಾಗುವುದು. ಆಚರಣೆಯೂ ಉತ್ತಮವೇ ಹಾಗೂ ವಿದ್ಯಾಭ್ಯಾಸವೂ ಚೆನ್ನಾಗಿ ಇರಲಿದೆ.
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಅಶುಭ. ಸಂಗಾತಿಯಿಂದ ಕಾನೂನಾತ್ಮಕ ತೊಂದರೆ ಎದುರಿಸಬೇಕಾಗುವುದು. ಈ ವಾರ ದಾಂಪತ್ಯದಲ್ಲಿ ಸುಖವನ್ನು ನಿರೀಕ್ಷಿಸದೇ ನಿಮ್ಮಷ್ಟಕ್ಕೆ ನೀವಿರುವುದು ಉತ್ತಮ. ಪೂರ್ವ ನಿಶ್ಚಿತವಾದ ವ್ಯಕ್ತಿಯ ಜೊತೆ ವಿವಾಹ ನೆರವೇರಲಿದೆ. ಈ ವಾರ ಬೇಡಿಕೆಗೆ ಮಣಿಯುವುದು ಸಾಧ್ಯವಾಗದು. ಭವಿಷ್ಯದ ಆರ್ಥಿಕತೆಯ ಬಗ್ಗೆ ಚರ್ಚೆಗಳು ನಡೆಯುವುದು.
ಈ ವಾರ ನಿಮಗೆ ಪ್ರೇಮ ಜೀವನ ಚೆನ್ನಾಗಿರದು. ಸಪ್ತಮಾಧಿಪತಿ ಅಷ್ಟಮದಲ್ಲಿದ್ದು ಪೂರ್ಣ ಅಧಿಕ ಪ್ರಯತ್ನದಿಂದ ಉಳಿಸಿಕೊಳ್ಳಬೇಕಾಗುವುದು. ಬಂಧುಗಳ ಕಡೆಯಿಂದ ವಿವಾಹಕ್ಕೆ ಮಾತುಕತೆಯ ಆಗಲಿದೆ. ಸುರೂಪವು ನಿಮಗೆ ಶಾಪವಾಗುವ ಸಾಧ್ಯತೆ ಇದೆ. ಆಪ್ತರೂ ಅನ್ಯರ ವಶವಾಗುವರು.
ಗುರುವಿನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಪ್ರೇಮ ಫಲಿಸದು. ಸಪ್ತಮಾಧಿಪತಿ ಅಷ್ಟಮದಲ್ಲಿದ್ದು ಸಹೋದರನ ಕಾರಣದಿಂದ ಹಾಗೂ ತಂದೆಯ ಕಾರಣದಿಂದ ವೈಫಲ್ಯವಾಗಲಿದೆ. ಶುಕ್ರನು ಷಷ್ಠದಲ್ಲಿ ಕೇತುವಿನ ಜೊತೆ ರವಿಯ ರಾಶಿಯಲ್ಲಿದ್ದು ನಿಮಗೆ ಸಲ್ಲುವಂತಹ ಪ್ರೇಮ ಇದಾಗಿರದು ಎನ್ನುವುದನ್ನೂ ತೋರಿಸುತ್ತದೆ. ಬೇಸರವಾದರೂ ಕಾಲಕ್ರಮೇಣ ಸರಿಯಾಗುವುದು.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Fri, 26 September 25