Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 12ರಿಂದ 18ರ ತನಕ ವಾರಭವಿಷ್ಯ

ಸಂಖ್ಯಾಶಾಸ್ತ್ರ ವಾರ ಭವಿಷ್ಯ: 2023ರ ಮಾರ್ಚ್ 12ರಿಂದ ಮಾರ್ಚ್ 18ರ ವರೆಗಿನ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 12ರಿಂದ 18ರ ತನಕ ವಾರಭವಿಷ್ಯ
ಜನ್ಮಸಂಖ್ಯೆ ಪ್ರಕಾರ ವಾರ ಭವಿಷ್ಯ
Follow us
Rakesh Nayak Manchi
|

Updated on: Mar 12, 2023 | 5:20 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 12ರಿಂದ 18ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹೇಗಾದರೂ ಖರ್ಚು ಈ ವಾರ ಆಗೇಆಗುತ್ತದೆ. ಅದರಲ್ಲೂ ಮೊಬೈಲ್ ಫೋನ್, ಗ್ಯಾಜೆಟ್‌ಗಳು, ಲ್ಯಾಪ್‌ಟಾಪ್ ಇಂಥದ್ದನ್ನು ಖರೀದಿಸುವ ಯೋಗ ಇದೆ. ಇನ್ನು ಅಂಗಡಿಗಳಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಯುಪಿಐ ಅಥವಾ ಗೂಗಲ್ ಪೇ- ಫೋನ್‌ಪೇ ಮೂಲಕ ಎಲ್ಲೇ ಹಣ ಪಾವತಿಸುವಾಗ ಮೊತ್ತವನ್ನು ಒಂದಕ್ಕೆ ಎರಡು ಸಲ ಪರೀಕ್ಷಿಸಿಕೊಳ್ಳಿ. ಒಮ್ಮೆ ಪೇಮೆಂಟ್ ಆಗಿಲ್ಲ ಎಂದು ಮತ್ತೊಮ್ಮೆ ಮಾಡಿ, ನಷ್ಟ ಆಗುವ ಸಾಧ್ಯತೆಗಳಿವೆ. ವೀಕೆಂಡ್‌ಗಳಲ್ಲಿ ಭರ್ಜರಿ ಪಾರ್ಟಿ ಮಾಡುವ ಸಾಧ್ಯತೆ ಕಾಣಿಸುತ್ತದೆ. ದ್ರವವೋ ಘನವೋ ಅತಿಯಾಗದಂತೆ ಎಚ್ಚರಿಕೆ ವಹಿಸಿ, ಚಿನ್ನ- ವಜ್ರಾಭರಣಗಳನ್ನು ಖರೀದಿ ಮಾಡುವಂಥ ಯೋಗ ಇದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ನಿರೀಕ್ಷೆಗಳು ವಿಪರೀತ ಜಾಸ್ತಿ ಆಗುತ್ತವೆ. ಯಾವುದೇ ಭರವಸೆ ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಕೃಷಿ ವಲಯದಲ್ಲಿ ಇರುವವರಿಗೆ ಪ್ರಭಾವಿಗಳ ಪರಿಚಯ ಆಗಲಿವೆ. ಸಂಘ- ಸಂಸ್ಥೆಗಳಲ್ಲಿ ನಿಮ್ಮ ಮಾತಿನ ತೂಕ ಹೆಚ್ಚಾಗಲಿದೆ. ಹೊಸದಾಗಿ ಕೈಗೊಳ್ಳುವ ಕೆಲಸಗಳಲ್ಲಿ ಉತ್ತಮ ಪ್ರಗತಿ, ಬೆಳವಣಿಗೆ ಕಾಣಲಿದ್ದೀರಿ. ಇತರರ ನೆರವಿಗಾಗಿ ನಿರೀಕ್ಷೆ ಮಾಡದೆ ನಿಮ್ಮ ಕೆಲಸ ಮುಂದುವರಿಸಿ. ವೃತ್ತಿ ನಿರತರಿಗೆ ಈ ವಾರ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಮಕ್ಕಳಿಂದ ಭಾರೀ ವಿರೋಧಗಳು ಬರಲಿವೆ. ವಿದ್ಯಾರ್ಥಿಗಳಿಗೆ ಪೋಷಕರ ನಿರೀಕ್ಷೆ ವಿಪರೀತ ಆಗುತ್ತಿದೆ ಎಂದು ಬೇಸರ ಆಗುತ್ತದೆ. ಸಾಧ್ಯವಾದಲ್ಲಿ ಈ ವಾರ ಸಾಯಿಬಾಬ ದೇವಸ್ಥಾನಕ್ಕೆ ಹೋಗಿ, ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಮಹಿಳೆಯರು ಸಂತಾನಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಈ ವಾರ ಶುಭ ಸಮಾಚಾರ ಕೇಳುವಂಥ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಒಂದಿಷ್ಟು ಶುಭ ಬೆಳವಣಿಗೆಗಳು ಇವೆ, ಹೊಸ ಬಟ್ಟೆ, ಸ್ಮಾರ್ಟ್‌ ವಾಚ್, ಬ್ರ್ಯಾಂಡೆಡ್ ಶೂಗಳಿಗೆ ಹಣ ಖರ್ಚಾಗಲಿವೆ. ಇನ್ನು ಮದುವೆ ಆದವರು ಒಂದೆರಡು ದಿನದ ಮಟ್ಟಿಗೆ ನೀವಿರುವ ಸ್ಥಳದಿಂದ ಹೊರಗೆ, ಕನಿಷ್ಠ ಪಕ್ಷ ಸಿನಿಮಾ, ಮಾಲ್‌ಗಾದರೂ ಹೋಗಿಬರುವ ಯೋಗ ಇದೆ. ಹೊಸದಾಗಿ ಕೆರಿಯರ್ ಡೆವಲಪ್‌ಮೆಂಟ್ ಕ್ಲಾಸ್‌ಗಳಿಗೆ ಜಾಯಿನ್ ಆಗುವುದಕ್ಕೆ ಮನಸ್ಸು ಮಾಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕೆಂದು ಇರುವವರು ಅದನ್ನು ಮುಂದಕ್ಕೆ ಹಾಕುವುದು ಉತ್ತಮ. ಷೇರು, ಮ್ಯೂಚುವಲ್ ಫಂಡ್ ಇಂಥವುಗಳಲ್ಲಿ ಹಣ ಹೂಡಿರುವವರಿಗೆ ಇದು ಸವಾಲಿನ ವಾರ ಆಗಿರುತ್ತದೆ. ಯಾವುದೇ ಕಾರಣಕ್ಕೂ ಬೇರೆಯವರ ಹಣವನ್ನು ಪಡೆದು, ಹೊಸದಾಗಿ ಹೂಡಿಕೆ ಮಾಡಬೇಡಿ. ಸಾಲವಂತೂ ಬೇಡವೇ ಬೇಡ. ಕೃಷಿ ವಲಯದಲ್ಲಿ ಇರುವವರಿಗೆ ನಿಮ್ಮದೇ ಅತಿಯಾದ ಆತ್ಮವಿಶ್ವಾಸ ಮುಳುವಾಗಿ ಕಾಡುತ್ತದೆ. ನಿಮಗೆ ಗೊತ್ತಿರುವಂಥ ಮಾಹಿತಿಯೇ ಆದರೂ ಮತ್ತೊಮ್ಮೆ ಪರಿಶೀಲಿಸಿ, ಇನ್ನೊಮ್ಮೆ ವಿಚಾರಿಸಿದ ನಂತರವೇ ಹೇಳಿ. ಯಾವುದಾದರೂ ಒಂದು ವಿಚಾರಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗುತ್ತದೆ. ವೃತ್ತಿನಿರತರಿಗೆ ವಿದೇಶದಲ್ಲಿ ವ್ಯವಹಾರಕ್ಕೆ ಅಥವಾ ಯಾವುದಾದರೂ ಸೆಮಿನಾರ್, ಟ್ರೇನಿಂಗ್ ಇಂಥದ್ದಕ್ಕಾದರೂ ಹೋಗಬೇಕಾಗಬಹುದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಇರುವ ಅಡೆತಡೆಗಳು ನಿವಾರಣೆ ಆಗಲಿದೆ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳದ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವಿವಾಹ ವಯಸ್ಕರು ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಇನ್ನು ಈಗ ಇರುವ ಕೆಲಸದಲ್ಲೇ ಮುಂದುವರಿಯಬೇಕಾ ಅಥವಾ ಹೊಸ ವ್ಯಾಪಾರ ಶುರು ಮಾಡಬೇಕಾ ಎಂಬ ಸಂಗತಿ ಬಹಳವಾಗಿ ಕಾಡುತ್ತದೆ. ಸುಖಾಸುಮ್ಮನೆ ಮೇಲಧಿಕಾರಿಗಳನ್ನು ಬೇರೆ ಯಾರದೋ ಕಾರಣಕ್ಕೆ ಎದುರುಹಾಕಿಕೊಳ್ಳುತ್ತೀರಿ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದವರಿಗೆ ಖರೀದಿಗಾಗಿ ಹೊಸ ಹೊಸ ಜನರು ವಿಚಾರಣೆಗೆ ಬರುತ್ತಾರೆ. ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಸೌಂದರ್ಯವರ್ಧಕಗಳನ್ನು ಬಳಸುವವರಿಗೆ ಈ ಎಚ್ಚರಿಕೆ ಮಾತು ಹೆಚ್ಚು ಅನ್ವಯಿಸುತ್ತದೆ. ಕೃಷಿಕರಿಗೆ ಕುಟುಂಬದ ಭವಿಷ್ಯ, ಆರೋಗ್ಯ, ಹೂಡಿಕೆ, ವಿಮೆ ವಿಚಾರಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತವೆ. ನಿಮಗಿಂತ ಚಿಕ್ಕ ವಯಸ್ಸಿನವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಕಡಿಮೆ ಬೆಲೆಗೆ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬೀಳದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ವೃತ್ತಿ ನಿರತರು ನಿಮ್ಮ ವೃತ್ತಿಗೆ ಅಥವಾ ಸಮುದಾಯಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಮುಖ್ಯ ಹುದ್ದೆಗಳಿಗೆ ಆಯ್ಕೆ ಆಗುವಂಥ ಸಾಧ್ಯತೆ ಇದೆ. ಸಂಬಂಧಿಗಳು ನಿಮ್ಮಿಂದ ಹಣಕಾಸು ನೆರವನ್ನು ಕೇಳಿಕೊಂಡು ಬರಲಿದ್ದಾರೆ. ವಿದ್ಯಾರ್ಥಿಗಳು ಯಾವ ವಿಷಯವನ್ನು ಕಷ್ಟ ಎಂದುಕೊಂಡಿರುತ್ತೀರೋ ಅದನ್ನು ಬೋಧಿಸುವುದಕ್ಕೆ ಸೂಕ್ತ ಶಿಕ್ಷಕರು ಅಥವಾ ಉಪನ್ಯಾಸಕರು ದೊರೆಯಲಿದ್ದಾರೆ. ಇನ್ನು ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಉದ್ಯೋಗಾವಕಾಶ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಯಾವುದು ಮೊದಲು, ಯಾವುದು ನಂತರ ಎಂಬ ಸ್ಪಷ್ಟತೆ ಇರಲಿ. ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸ ಬರಲಿದೆ. ನಾಲ್ಕಾರು ಜನರಿಗೆ ಸಹಾಯ ಆಗುವಂಥ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವವರಿಗೆ ಹೊಸ ಹೊಸ ಜನರ ಪರಿಚಯ ಆಗುತ್ತದೆ. ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ದೀರ್ಘ ಕಾಲದ ಪ್ರಾಜೆಕ್ಟ್‌ ದೊರೆಯುವ ಅವಕಾಶಗಳಿವೆ. ಡೇ ಕೇರ್, ಕಿಂಟರ್‌ಗಾರ್ಡನ್‌ನಂಥದ್ದನ್ನು ನಡೆಸುತ್ತಿರುವವರಿಗೆ ಭವಿಷ್ಯದ ಯೋಜನೆಗಳು ಸಾಕಾರಗೊಳ್ಳಲಿವೆ. ಹಣಕಾಸು ಉಳಿತಾಯದ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೀರಿ. ಪ್ರೀತಿ- ಪ್ರೇಮ ವಿಚಾರಗಳು ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಕೃಷಿ ಕ್ಷೇತ್ರದಲ್ಲಿ ಇರುವವರು ನಿಮ್ಮದಲ್ಲದ ವಿಚಾರಗಳಿಗೆ ಮೂಗು ತೂರಿಸಬೇಡಿ. ರಾಜೀ- ಸಂಧಾನಕ್ಕೆ ಅಂತ ಕರೆದರು, ಸುಮ್ಮನೆ ಜತೆಗೆ ಬಾ, ನೀನೇನು ಮಾತನಾಡದೆ ಇದ್ದರೂ ಪರವಾಗಿಲ್ಲ ಅಂದರು ಎಂಬ ಕಾರಣಕ್ಕೆ ಕೂಡ ಯಾರ ಜತೆಗೂ ಹೋಗಬೇಡಿ. ಏಕೆಂದರೆ ಕೋಲು ಕೊಟ್ಟ ಹೊಡೆಸಿಕೊಂಡಂತೆ ಆಗುತ್ತದೆ ನಿಮ್ಮ ಪರಿಸ್ಥಿತಿ. ಇನ್ನು ವೃತ್ತಿನಿರತರಿಗೆ ಯಾರಿಂದಾದರೂ ಬೆದರಿಕೆಗಳು ಬರಬಹುದು. ಮುಖ್ಯವಾಗಿ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು, ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ರಾಜಕಾರಣಿಗಳು ತಮ್ಮ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥ ಗ್ಯಾಜೆಟ್ ಗಳಿಂದ ಡೇಟಾ ಯಾರೂ ಕದಿಯದಂತೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ ಇದೆ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಅಲ್ಪಾವಧಿಗಾದರೂ ವಿದೇಶಕ್ಕೆ ತೆರಳುವ ಅವಕಾಶ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ವಾರ ಭಾವನಾತ್ಮಕವಾಗಿ ಬಹಳ ಸವಾಲಿನಿಂದ ಕೂಡಿರುತ್ತದೆ. ಯಾರ ಬಳಿಯಾದರೂ ವ್ಯವಹಾರ- ಒಪ್ಪಂದದ ವಿಚಾರಗಳನ್ನು ಮಾತನಾಡುವ ಮುನ್ನ ಈ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ನೀವು ಬಹಳ ಇಷ್ಟ ಪಡುವಂಥವರು, ನಂಬುವಂಥವರೇ ನಿಮಗೆ ಹೆಚ್ಚು ನೋವನ್ನು ನೀಡುತ್ತಾರೆ. ದಿಢೀರನೆ ಯಾರ ಸಹವಾಸವೂ ಬೇಡ ಎನಿಸುವುದಕ್ಕೆ ಶುರು ಆಗುತ್ತದೆ. ಸಂಗೀತ, ಯೋಗ, ಧ್ಯಾನ, ಟೈಲರಿಂಗ್, ಫ್ಯಾಷನ್ ಡಿಸೈನಿಂಗ್, ಅಡುಗೆ, ಜಿಮ್ ಏನಾದರೂ ಹೊಸದನ್ನು ಮಾಡುವುದಕ್ಕೆ ತೊಡಗಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸುವ ಯೋಗ ಇದೆ. ಒಂದು ವೇಳೆ ಅದಕ್ಕೆ ಅಗತ್ಯ ಇರುವಷ್ಟು ಹಣ ಇಲ್ಲದಿದ್ದಲ್ಲಿ ಕನಿಷ್ಠ ಪಕ್ಷ ಷೋ ರೂಮ್‌ಗೆ ತೆರಳಿ, ನೋಡಿಕೊಂಡಾದರೂ ಬರುತ್ತೀರಿ. ಕೃಷಿ ವಲಯದಲ್ಲಿ ಇರುವವರು ಭೂಮಿ ಮಾರಾಟ ಮಾಡುವುದಕ್ಕೋ ಅಥವಾ ಇರುವ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ, ಮಾರಾಟ ಮಾಡುವುದಕ್ಕೋ ಆಲೋಚನೆ ಮಾಡುತ್ತೀರಿ. ಕೋರ್ಟ್- ಕಚೇರಿ ವ್ಯಾಜ್ಯಗಳನ್ನು ರಾಜೀ- ಸಂಧಾನದ ಮೂಲಕ ಸರಿ ಮಾಡಿಕೊಳ್ಳುವ ಅವಕಾಶಗಳಿವೆ. ವೃತ್ತಿನಿರತರು ಅದೇ ವೃತ್ತಿಯಲ್ಲಿ ಇರುವವರ ಜತೆಗೆ ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದ್ದು, ಅದು ಮದುವೆ ಹಂತದ ತನಕ ಹೋಗುತ್ತದೆ. ಈ ವಾರ ಇದೇ ವಿಷಯ ನಿಮ್ಮಲ್ಲಿ ಉಲ್ಲಾಸ ತುಂಬುತ್ತದೆ. ವಿದ್ಯಾರ್ಥಿಗಳಿಗೆ ಸ್ನೇಹಿತರ ಮಧ್ಯೆ ಬಹಳ ಒಳ್ಳೆ ಹೆಸರು ಬರಲಿದೆ. ಇತರರಿಗೆ ಸಹಾಯಹಸ್ತ ನೀಡಲಿದ್ದೀರಿ. ಸ್ಟೈಪೆಂಡ್ ಬರುವಂಥ ಕೆಲಸ ಹುಡುಕಿಕೊಂಡು ಬರಲಿದೆ. ಮಹಿಳೆಯರು ರಾಜಕಾರಣದಲ್ಲಿ ಇದ್ದಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಖ್ಯಾತಿ ಜಾಸ್ತಿ ಆಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ. ಕೃಷಿ ವಲಯದಲ್ಲಿ ಇರುವವರಿಗೆ ದೂರ ಪ್ರಯಾಣ ಮಾಡುವ ಯೋಗ ಇದೆ. ಪಶು ಸಾಕಣೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಮಕ್ಕಳ ಸಲುವಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ಒಟ್ಟಿನಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಕುಟುಂಬದಲ್ಲಿ ವೃದ್ಧಿ ಕಾರ್ಯಗಳು ನಡೆಯಲಿವೆ. ವೃತ್ತಿನಿರತರು ಕಾರು ಖರೀದಿ ಮಾಡುವಂಥ ಯೋಗ ಇದೆ. ಒಂದು ವೇಳೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಹೊಸದನ್ನೇ ಕೊಂಡುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ನೀವು ಇದಕ್ಕಾಗಿ ಮಾಡುವ ಸಾಲವೋ ಅಥವಾ ಬೇರೆ ರೀತಿ ಹಣದ ಹೊಂದಾಣಿಕೆಯನ್ನೋ ಬೇಗ ಹಿಂತಿರುಗಿಸುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ನಿರ್ಧಾರದ ಬಗ್ಗೆ ಆತಂಕಗೊಳ್ಳಬೇಡಿ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಸಾಧ್ನೆ ಮಾಡಲಿದ್ದೀರಿ. ಭಾಗವಹಿಸುವ ಯಾವುದೇ ಅವಕಾಶವನ್ನೂ ಕೈ ಚೆಲ್ಲಬೇಡಿ. ಮಹಿಳೆಯರು ವಾಹನ ಚಲಾಯಿಸುವಂತಿದ್ದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಅಂತಲ್ಲದಿದ್ದರೆ ಇದೊಂದು ವಾರ ವಾಹನ ಚಲಾಯಿಸಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಉದ್ಯೋಗ ವಿಚಾರ ಪ್ರಾಶಸ್ತ್ಯ ಪಡೆಯುತ್ತಿದೆ. ಎಷ್ಟು ಖರ್ಚೆಂದರೆ ಬರುವ ಸಂಬಳ ಏನೇನೂ ಸಾಕಾಗುತ್ತಿಲ್ಲ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ನೆನಪಿರಲಿ, ಯಾವ ಕಾರಣಕ್ಕೂ ‌(ಒಂದಕ್ಕಿಂತ ಹೆಚ್ಚು ಕಡೆ, ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಂದು ಕಡೆ ಕೆಲಸ ಮಾಡುವುದು ಬೇಡ. ಏಕೆಂದರೆ ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ. ಇನ್ನು ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ಜತೆಗೆ ದೇಹಾಲಸ್ಯವೂ ಜಾಸ್ತಿ ಆಗುತ್ತದೆ. ಕೃಷಿ ವಲಯದಲ್ಲಿ ಇರುವವರಿಗೆ ರಾಜಕೀಯವಾಗಿ ಪ್ರಾಮುಖ್ಯ ದೊರೆಯುವ ಅವಕಾಶಗಳು ಹೆಚ್ಚಿದೆ. ನಿಮಗೆ ಯಾವುದಾದರೂ ಪ್ರಮುಖ ಜವಾಬ್ದಾರಿ ವಹಿಸಬಹುದು ಹಾಗೂ ಭವಿಷ್ಯದಲ್ಲಿ ಇದೇ ನಿಮ್ಮ ಏಳ್ಗೆ, ಪ್ರಗತಿಗೆ ಕಾರಣವಾಗುವ ಎಲ್ಲ ಅವಕಾಶಗಳು ಇವೆ. ಈ ಸಂದರ್ಭದಲ್ಲಿ ನಿಮ್ಮ ನಿರ್ಧಾರದ ಬಗ್ಗೆ ಕುಟುಂಬದಲ್ಲಿ, ಸ್ನೇಹ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಬರಬಹುದು. ಆದರೆ ನಿಮಗೆ ಸ್ಪಷ್ಟತೆ ಇರುವುದು ಮುಖ್ಯ. ಇನ್ನು ವೃತ್ತಿನಿರತರಿಗೆ ಹೊಸ ಸ್ಥಳ, ಜಮೀನು ಖರೀದಿಸಬೇಕು ಎಂದಿದ್ದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಮಯ ಇದು. ನೀವು ಈಗಾಗಲೇ ಮಾಡಿರುವ ಹೂಡಿಕೆಯಿಂದ ಹಣ ಹಿಂಪಡೆದು, ಬೇರೆ ಕಡೆ ಅದನ್ನು ಹೂಡಿಕೆ ಮಾಡಲಿದ್ದೀರಿ. ಇನ್ನು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಕಡೆಗೆ ನಿಗಾ ಜಾಸ್ತಿ ಆಗಿ, ವ್ಯಾಸಂಗದಲ್ಲಿ ಹಿನ್ನಡೆ ಇದೆ. ಮಹಿಳೆಯರು ಹೊಸಬರ ಜತೆಗೆ ಸ್ನೇಹ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್‌ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ. ಈ ವಾರದಲ್ಲಿ ಒಂದು ದಿನ ಕನಿಷ್ಠ ನಾಲ್ಕು ಗಂಟೆ ಕಾಲ ಮೌನವಾಗಿರುವುದಕ್ಕೆ ಪ್ರಯತ್ನಿಸಿ, ಇದರಿಂದ ನಿಮಗೆ ಅನುಕೂಲ ಇದೆ. ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ. ಕೃಷಿಕರಿಗೆ ಹೊಸ ಹೊಸ ತಂತ್ರಜ್ಞಾನ, ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮಾಮೂಲಿಗಿಂತ ಹೆಚ್ಚಿನ ಕೆಲಸದ ಒತ್ತಡವನ್ನು ಎದುರಿಸಲಿದ್ದೀರಿ. ಮನೆಗೆ ಬರುವಂಥ ಹೊಸ ವಸ್ತುಗಳ ಗುಣಮಟ್ಟ ಹಾಗೂ ಸ್ಥಿತಿಯನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ವೃತ್ತಿನಿರತರಿಗೆ ಮಿತ್ರರು, ಸಂಬಂಧಿಕರಿಂದ ಶಿಫಾರಸುಗಳು ಬರಬಹುದು. ಅಂದರೆ ಯಾರಿಗಾದರೂ ಕೆಲಸ ನೀಡುವಂತೆ ಅಥವಾ ಯಾವುದಾದರೂ ವಸ್ತುಗಳನ್ನು ಇಂಥವರಿಂದಲೇ ಖರೀದಿಸುವಂತೆ ಕೇಳಬಹುದು. ಇನ್ನು ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗಲಿದೆ. ಕ್ರೀಡಾಕ್ಷೇತ್ರದಲ್ಲಿ ಇರುವವರಿಗೆ ಪ್ರಾಯೋಜಕರು ದೊರೆಯುವಂಥ ಅವಕಾಶಗಳಿವೆ. ಮಹಿಳೆಯರಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ವಿದೇಶಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ಫ್ಯಾಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶ, ಕೆಲಸಗಳು ದೊರೆಯಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೆ ಅನಾರೋಗ್ಯದ ಸಾಧ್ಯತೆ ಇದೆ. ಇನ್ನು ಊಟ- ತಿಂಡಿ, ಪಾನೀಯಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ, ಜತೆಗೆ ಅದು ನಿಮ್ಮ ದೇಹಕ್ಕೆ ಒಗ್ಗುತ್ತಿದೆಯಾ ಎಂಬ ಕಡೆ ಲಕ್ಷ್ಯ ಕೊಡಿ. ಶುಕ್ರವಾರ ಅಥವಾ ಶನಿವಾರದಂದು ರಾಮಕೃಷ್ಣಾಶ್ರಮ, ಅಥವಾ ಚರ್ಚ್‌ಗೆ ಹೋಗುವಂಥವರು ಚರ್ಚ್‌ಗೆ ಅಥವಾ ಆಯಾ ಧಾರ್ಮಿಕ ಕೇಂದ್ರಕ್ಕೆ ಹೋಗುವಂಥವರು ಅಂಥಲ್ಲಿಗೆ ಹೋಗಿಬನ್ನಿ. ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮ್ಮದಲ್ಲದ ತಪ್ಪಿಗೆ ಅಪವಾದ, ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಕಣ್ಣು ಮಂಜು ಬರುವುದು, ತಲೆ ಸುತ್ತುವುದು ಇತ್ಯಾದಿ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೊಸದಾಗಿ ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತಿದ್ದಲ್ಲಿ ಅಥವಾ ಮಾತ್ರೆ, ಔಷಧಿಗಳನ್ನು ಬದಲಿಸಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡುವುದು ಒಳ್ಳೆಯದು. ವೃತ್ತಿನಿರತರಿಗೆ ಸರ್ಕಾರದ ಕೆಲಸಗಳಲ್ಲಿ ಇತರರ ನೆರವು, ಮಾರ್ಗದರ್ಶನ ಪಡೆಯುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ನಿಮ್ಮ ಆತ್ಮಗೌರವಕ್ಕೆ ಪೆಟ್ಟು ನೀಡುವಂಥ ಮಾತನಾಡಿದರು ಎಂಬ ಕಾರಣಕ್ಕೆ ವಿಪರೀತದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆ, ಸಂಯಮ ಬಹಳ ಮುಖ್ಯ. ಇಲ್ಲದಿದ್ದಲ್ಲಿ ಭಾರೀ ಹಿನ್ನಡೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಒಂದು ವೇಳೆ ನಿಮ್ಮದೇ ವೈಫಲ್ಯವಿದ್ದಲ್ಲಿ ಅದಕ್ಕಾಗಿ ಬೇರೆಯವರನ್ನು ದೂರಬೇಡಿ. ಮಹಿಳೆಯರಿಗೆ ಹಳೇ ಸ್ನೇಹಿತ- ಸ್ನೇಹಿತೆಯರನ್ನು ಭೇಟಿ ಆಗುವ ಹಾಗೂ ಅವರ ಜತೆಗೆ ಉತ್ತಮ ಸಮಯವನ್ನು ಕಳೆಯುವ ಯೋಗ ಇದೆ.

ಲೇಖನ- ಎನ್‌.ಕೆ.ಸ್ವಾತಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ