AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಷ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವ ಸ್ವಭಾವ ಹೇಗಿರುತ್ತದೆ? ವಿಶೇಷ ಗುಣಗಳೇನು?

Aries: ಜನಿಸುವಾಗ ಚಂದ್ರನು ಯಾವ ರಾಶಿಯಲ್ಲಿ ಇರುವನೋ ಅದು ಅವರ ರಾಶಿಯಾಗಿರುತ್ತದೆ. ಇದು ರಾಶಿಯನ್ನು ತಿಳಿದುಕೊಳ್ಳುವ ಕ್ರಮವೂ ಆಗಿದೆ. ಈ ಚಂದ್ರನು ಒಂದು ರಾಶಿಯನ್ನು ದಾಟಲು ಎರಡು ವರೆ ದಿನವನ್ನು ತೆಗೆದುಕೊಳ್ಳುವನು.

ಮೇಷ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವ ಸ್ವಭಾವ ಹೇಗಿರುತ್ತದೆ? ವಿಶೇಷ ಗುಣಗಳೇನು?
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 17, 2023 | 9:42 PM

Share

ಜನಿಸುವಾಗ ಚಂದ್ರನು ಯಾವ ರಾಶಿ (Zodiac Signs) ಯಲ್ಲಿ ಇರುವನೋ ಅದು ಅವರ ರಾಶಿಯಾಗಿರುತ್ತದೆ. ಇದು ರಾಶಿಯನ್ನು ತಿಳಿದುಕೊಳ್ಳುವ ಕ್ರಮವೂ ಆಗಿದೆ. ಈ ಚಂದ್ರನು ಒಂದು ರಾಶಿಯನ್ನು ದಾಟಲು ಎರಡು ವರೆ ದಿನವನ್ನು ತೆಗೆದುಕೊಳ್ಳುವನು.

ಮೇಷದಲ್ಲಿ ಚಂದ್ರನಿದ್ದಾಗ ಜನಿಸಿದರೆ ವೃತ್ತದ ಆಕಾರದಲ್ಲಿ ಕಣ್ಣುಗಳನ್ನು ಉಳ್ಳವನಾಗುವನು. ಬಿಸಿಯ ಆಹಾರವನ್ನು ಹೆಚ್ಚು ಸೇವಿಸುವವನೂ, ಆಹಾರದಲ್ಲಿ ಪ್ರೀತಿಯನ್ನು ಇಟ್ಟುಕೊಂಡವನೂ ಆಗುವನು.‌ ಅಷ್ಟು ಮಾತ್ರ ಅಲ್ಲದೇ ಆಹಾರದಲ್ಲಿ ಮಿತಿಯೂ ಇರುವುದು. ಯಾರ ಮೇಲೂ ದೀರ್ಘಕಾಲದ ದ್ವೇಷವನ್ನೂ ಸಾಧಿಸದೇ ಬೇಗ ಪ್ರಸನ್ನ ಮನಃಸ್ಥಿತಿಯನ್ನು ಹೊಂದಿದವನು ಆಗಿರುವನು. ಒಂದು ಕಡೆ ಕುಳಿತಿರುವುದು ಅಥವಾ ವಾಸಸ್ಥಳವನ್ನು ಹೆಚ್ಚು ಬದಲಿಸುವವನೂ ಆಗಿರುತ್ತಾನೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರದಲ್ಲಿ ಆಧ್ಯಾತ್ಮಿಕ ಮಹತ್ವ ಹೊಂದಿರುವ 11:11 ರ ಶಕ್ತಿಯನ್ನು ತಿಳಿಯಿರಿ

ಮೇಷ ರಾಶಿಯಲ್ಲಿ ಜನಿಸಿದವನು ಕಾಮಿಯೂ ದುರ್ಬಲವಾದ ಕೈಕಾಲುಗಳನ್ನು ಉಳ್ಳವನೂ ಹಾಗೂ ಸಂಪತ್ತಿನ ಗಮನಾಗಮನವು ಹೆಚ್ಚು ಇರುವವನೂ ಸಾಹಸ ವೃತ್ತಿಯಲ್ಲಿ ಹೆಚ್ಚು ಆಸಕ್ತಯನ್ನು ಇಟ್ಟುಕೊಂಡಿರುವವನೂ ಆಗಿರುತ್ತಾನೆ. ಅಷ್ಟೇ ಅಲ್ಲದೇ ಸ್ತ್ರೀಯರಿಗೆ ಅತಿಪ್ರಿಯನೂ ಸೇವಾಮನೋಭಾವವನ್ನು ಹೊಂದಿದವನೂ ಕೆಟ್ಟ ಉಗುರುಗಳಿಂದ ಕೂಡಿದವನೂ ಇವನಾಗಿರುತ್ತಾನೆ.

ಇದನ್ನೂ ಓದಿ: Zodiac Signs: ಈ 6 ರಾಶಿಯವರು ಜೀವನದಲ್ಲಿ ಸದಾ ಸಂತೋಷವಾಗಿರುತ್ತಾರೆ

ಮೇಷ ರಾಶಿಯವರ ಶಿರೋಭಾಗದಲ್ಲಿ ಗಾಯದ ಚಿಹ್ನೆಗಳು ಇರುವುವು. ಈತನು ಎಲ್ಲರಿಂದ ಗೌರವಕ್ಕೆ ಪಾತ್ರರಾವವನೂ ಹೆಚ್ಚು ಸಹೋದರ ಅಥವಾ ಸಹೋದರಿಯನ್ನು ಹೊಂದಿದವನೂ ಅತಿಯಾದ ಆಸೆಯುಳ್ಳವನ್ನೂ ಸಮುದ್ರ, ಜಲಾಶಯ, ನದಿ, ಸರೋವರ ಮುಂತಾದ ನೀರಿನ ಪ್ರದೇಶಗಳನ್ನು ಕಂಡು ಭಯಗೊಳ್ಳುವನು.

ಇವಿಷ್ಟು ಮೇಷ ರಾಶಿಯಲ್ಲಿ ಚಂದ್ರಸ್ಥಿತನಾಗಿದ್ದಾಗ ಮನುಷ್ಯರ ಸ್ವಭಾವವಾಗಿರುತ್ತದೆ. ಇದಿಷ್ಟೇ ಅಲ್ಲದೇ ಅಲ್ಲಿನ ಉಳಿದ ಗ್ರಹರ ಸಹವಾಸದಿಂದ ಉಂಟಾಗುವ ಲಕ್ಷಣಗಳು ಸ್ವಭಾವಗಳು ಇನ್ನೂ ಅನೇಕ ಇರುತ್ತವೆ.

ಲೋಹಿತ ಶರ್ಮಾ

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Thu, 17 August 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?