ಶುಕ್ರನ ಬದಲಾವಣೆಯಿಂದ ಯಾವ ರಾಶಿಗೆ ಏನು ಫಲ?

ಸ್ವಾತಿ ನಕ್ಷತ್ರದಲ್ಲಿ ಇರುವ ಶುಕ್ರನು ದಿನಾಂಕ ೦೫-೧೦-೨೦೨೪ ಶನಿವಾರದಂದು ಮಧ್ಯರಾತ್ರಿ ೧೨ಗಂಟೆ ೪ ನಿಮಿಷಕ್ಕೆ ವಿಶಾಖಾ ನಕ್ಷತ್ರಕ್ಕೆ ಹೋಗುವನು. ಈ ನಕ್ಷತ್ರವನ್ನು ಪ್ರವೇಶಿಸುವುದರಿಂದ ಯಾವೆಲ್ಲ ಫಲಗಳು ಸಿಗುತ್ತವೆ ಎನ್ನುವುದನ್ನು ನೋಡೋಣ.

ಶುಕ್ರನ ಬದಲಾವಣೆಯಿಂದ ಯಾವ ರಾಶಿಗೆ ಏನು ಫಲ?
Edited By:

Updated on: Oct 07, 2024 | 10:30 AM

ಶುಕ್ರನು ಭೋಗೈಶ್ವರ್ಯವನ್ನು ಕೊಡುವ ಗ್ರಹ. ಈತನು ದೈತ್ಯರ ಮಂತ್ರಿ ಎಂದೇ ಪ್ರಸಿದ್ಧಿ ಇದೆ. ಆತನು ಈಗ ಸ್ವಂತ ರಾಶಿಯಲ್ಲಿಯೇ ಇದ್ದಾನೆ. ಹಾಗಾಗಿ ಶುಭಫಲವನ್ನೇ ಆತನು ಕೊಡುವನು. ಸ್ವಾತಿ ನಕ್ಷತ್ರದಲ್ಲಿ ಇರುವ ಶುಕ್ರನು ದಿನಾಂಕ 05-10-2024 ಶನಿವಾರದಂದು ಮಧ್ಯರಾತ್ರಿ ೧೨ಗಂಟೆ ೪ ನಿಮಿಷಕ್ಕೆ ವಿಶಾಖಾ ನಕ್ಷತ್ರಕ್ಕೆ ಹೋಗುವನು. ಈ ನಕ್ಷತ್ರವನ್ನು ಪ್ರವೇಶಿಸುವುದರಿಂದ ಯಾವೆಲ್ಲ ಫಲಗಳು ಸಿಗುತ್ತವೆ ಎನ್ನುವುದನ್ನು ನೋಡೋಣ.

ವಿಶಾಖಾ ನಕ್ಷತ್ರವು ಗುರುವಿನದ್ದು. ಗುರುವಿಗೆ ಶುಕ್ರನು ಸಮವಾದರೂ ಗುರುವು ಶುಕ್ರನಿಗೆ ಶತ್ರು. ಹಾಗಾಗಿ ಶತ್ರುವಿನ ನಕ್ಷತ್ರವನ್ನು ಪ್ರವೇಶಿಸಿದ್ದಾನೆ.

ಮೇಷ ರಾಶಿ :

ಈ ರಾಶಿಯವರಿಗೆ ಶುಕ್ರನ ದೃಷ್ಟಿ ಇರುವ ಕಾರಣ, ರಾಶಿಯ ಅಧಿಪತಿಯೂ ಮಿತ್ರನಾಗಿದ್ದುದರಿಂದ ವಿವಾಹ, ಪ್ರೇಮ, ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ಸುಖವನ್ನು ಬಯಸಿದರೆ ಅದೂ ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ :

ಈ ರಾಶಿಗೆ ಶುಕ್ರನ‌ ದೃಷ್ಟಿ ಇಲ್ಲದಿದ್ದರೂ ಶುಕ್ರನ ರಾಶಿಯಾಗಿದೆ. ಹಾಗಿದ್ದಾಗ ಈ ರಾಶಿಗೆ ತುಲಾ ರಾಶಿಯು ಷಷ್ಠ ಸ್ಥಾನವಾಗುವ ಕಾರಣ, ಯಾರಾದರೂ ಪಂಡಿತರ, ತಿಳಿದವರ, ಸ್ತ್ರೀಯರ ದ್ವೇಷಕ್ಕೆ ಸಿಕ್ಕಿಬೀಳುವಿರಿ. ಸುಖ ಜೀವನವೇ ನಿಮಗೆ ಕೈಕೊಡುವುದು.‌ ಖರ್ಚನ್ನು ನಿಯಂತ್ರಣ ಮಾಡಲು ಕಷ್ಟವಾಗುವುದು.

ಸಿಂಹ ರಾಶಿ :

ಈ ರಾಶಿಯವರಿಗೆ ಔಷಧ ಮುಂತಾದ ವ್ಯಾಪಾರ, ವೈದ್ಯ ವೃತ್ತಿಯವರಿಗೆ ಹೆಚ್ಚು ಉತ್ತಮ. ಚಿಕಿತ್ಸೆ ಮೊದಲಾದ ವಿಚಾರಕ್ಕೆ ಸಂಬಂಧಿಸಿದಂತೆ ಲಾಭಾಂಶವನ್ನು ಪಡೆಯಬಹುದು.

ತುಲಾ ರಾಶಿ :

ಇಲ್ಲಿಯೇ ಶುಕ್ರನು ಇರುವುದು ಮಾನಸಿಕವಾಗಿ ಗಟ್ಟಿಯಾಗಬಹುದು. ಗೊದಲಗಳು ಒಳ್ಳೆಯ ವಿಚಾರಕ್ಕೆ ಹೆಚ್ಚು ಬರುತ್ತವೆ. ಅದನ್ನು ಪರಿಹರಿಸಿಕೊಂಡು ಹೋಗಬೇಕು. ಹೊಸತನ್ನು ಬಳಸಲು ಹೆಚ್ಚು ಇಷ್ಟಪಡುವಿರಿ. ಹಾಳಾದುದರ ಬಗ್ಗೆ ನಿಮಗೆ ಆಸಕ್ತಿ ಇರದು.

ಧನು ರಾಶಿ :

ಇವರಿಗೆ ಯಾವುದನ್ನು ಮಾಡಿ ಸಕ್ಸಸ್ ಕಾಣುವುದಿದ್ದರೂ ಏನಾದರೂ ಹೆಚ್ಚಿನದನ್ನು ಕೊಡಬೇಕಾಗುವುದು. ಅದಲ್ಲದೇ ನಿಮ್ಮ ಶ್ರಮವು ಕಷ್ಟವಾಗುವುದು. ಸೌಂದರ್ಯಕ್ಕೆ ಸಂಬಂಧಿಸಿದ ವ್ಯಾಪಾರ, ಮನೋಹರವಾದ ವಸ್ತುಗಳ ಮಾರಾಟಗಾರರಿಗೆ, ಅಲಂಕಾರಿಕ ವಸ್ತುಗಳ ಆಮದು ರಪ್ತಿನಲ್ಲಿ‌ ಇದ್ದವರಿಗೆ ಶುಭವಿದೆ.

ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ, ಅವನ ಶಕ್ತಿಯನ್ನು ಹೆಚ್ಚಿಸುವ ವಜ್ರ ರತ್ನ ಅಥವಾ ಶುಕ್ರನ ಮಂತ್ರವನ್ನು ಪ್ರಾತಃಕಾಲದಲ್ಲಿ ಪಠಿಸಿ. ನಿಮಗೆ ಸಂಪತ್ತಿನ ಬೆಳವಣಿಗೆಗೆ ದಾರಿ ಸಿಗುವುದು. ಬರಬೇಕಾದ ಸಂಪತ್ತನ್ನು ಪಡೆದು ಸುಖವಾದ ಜೀವನವನ್ನು ಸಾಗಿಸಬಹುದು.

– ಲೋಹಿತ ಹೆಬ್ಬಾರ್ – 8762924271