Zodiac Career Predictions: ನಿಮ್ಮ ರಾಶಿಗನುಗುಣವಾಗಿ ಜನವರಿ 4ರಿಂದ 10ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ
ಜನವರಿ 4ರಿಂದ 10ರ ವರೆಗೆ 12 ರಾಶಿಗಳ ಉದ್ಯೋಗ ಭವಿಷ್ಯ ಇಲ್ಲಿದೆ. ಈ ವಾರ ಉದ್ಯೋಗದಲ್ಲಿ ಅಸ್ಥಿರತೆ, ಭಯ ಮತ್ತು ಭ್ರಮ ನಿರಸನ ಎದುರಾಗಬಹುದು. ಆದರೆ, ನಿಮ್ಮ ಸ್ವಂತ ಪ್ರೇರಣೆಯಿಂದ ಎಲ್ಲವನ್ನೂ ಎದುರಿಸಬೇಕು. ಪ್ರತಿ ರಾಶಿಗೂ ವೃತ್ತಿ ಅವಕಾಶಗಳು, ಸವಾಲುಗಳು ಮತ್ತು ಯಶಸ್ಸಿನ ಮಾರ್ಗದರ್ಶನವಿದೆ. ಈ ವಾರ ನಿಮಗೆ ಶುಭವಾಗಲಿ.

ಹೊಸ ವರ್ಷ ಆರಂಭವಾಗಿದೆ. ಜನವರಿ 4ರಿಂದ 10ರ ವರೆಗೆ 12 ರಾಶಿಗನುಗುಣವಾಗಿ ನಿಮ್ಮ ಉದ್ಯೋಗ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಅಸ್ಥಿರತೆಯ ಉದ್ಯೋಗದಿಂದ ಭಯ, ಭ್ರಮ ನಿರಸನ, ಎಲ್ಲವೂ ಆಗಲಿದೆ. ನಿಮಗೆ ನೀವೇ ಪ್ರೇರಣೆ ಕೊಟ್ಟುಕೊಂಡು ಎಲ್ಲವನ್ನೂ ಎದುರಿಸಬೇಕಾಗುವುದು. ಈ ವಾರ ಶುಭವಾಗಲಿ.
ಮೇಷ ರಾಶಿ:
ಈ ವಾರದ ಕೆಲವು ದಿನದಲ್ಲಿ ಉದ್ಯೋಗ ಬದಲಾವಣೆ ಯೋಚನೆ ಗಟ್ಟಿಯಾಗುತ್ತದೆ. ಸಂದರ್ಶನದ ಮೂಲಕ ಅವಕಾಶ ಬರುತ್ತದೆ. ಹೊಸ ಕೆಲಸ ಆರಂಭದಲ್ಲಿ ಒತ್ತಡದಾಯಕವಾದರೂ ಮುಂದೆ ಸ್ಥಾನಮಾನ ಹೆಚ್ಚುತ್ತದೆ. ಆತುರದ ನಿರ್ಧಾರದಿಂದ ತಪ್ಪು ಆಯ್ಕೆ ಸಂಭವ. ಸ್ವಂತ ಸಾಮರ್ಥ್ಯವನ್ನು ತೋರಿಸಿದರೆ ಹಿರಿಯರ ಗಮನ ಸೆಳೆಯುತ್ತೀರಿ. ಖಾಸಗಿ ಕ್ಷೇತ್ರ ಲಾಭದಾಯಕ. ಕೋಪದ ನಿಯಂತ್ರಣ ಅವಶ್ಯಕ.
ವೃಷಭ ರಾಶಿ:
ಮೊದಲ ವಾರದಲ್ಲಿ ಉದ್ಯೋಗದಲ್ಲಿ ಸ್ಥಿರತೆ ಹುಡುಕುವ ಮನಸ್ಸು ಹೆಚ್ಚಾಗುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ನಿಧಾನವಾದರೂ ಭದ್ರತೆ ಇರಲಿದೆ. ವೇತನ ಹೆಚ್ಚಳ ಅಥವಾ ಜವಾಬ್ದಾರಿ ಬದಲಾವಣೆ ಯೋಗ. ಹಣಕಾಸಿನ ಲಾಭ ಮಧ್ಯಮ. ಕೌಶಲ್ಯ ವೃದ್ಧಿಗೆ ಸಮಯ ಕೊಟ್ಟರೆ ಮುಂದಿನ ಉದ್ಯೋಗ ಉತ್ತಮವಾಗುತ್ತದೆ. ಸಹನೆ ಇಲ್ಲದಿದ್ದರೆ ಅವಕಾಶ ಕೈ ತಪ್ಪಬಹುದು.
ಮಿಥುನ ರಾಶಿ:
ಚಟುವಟಿಕೆಯಿಂದ ಇರುವ ನಿಮಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳು ಎದುರಾಗುತ್ತವೆ. ಸಂವಹನ, ಬರವಣಿಗೆ, ಮಾರಾಟ, ಐಟಿ ಕ್ಷೇತ್ರದಲ್ಲಿ ಯಶಸ್ಸು. ಸರಿಯಾದ ಆಯ್ಕೆ ಮಾಡದಿದ್ದರೆ ಗೊಂದಲ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಯಾಣ ಅಥವಾ ಸ್ಥಳಾಂತರ ಯೋಗ. ಒಪ್ಪಂದ ಮತ್ತು ಷರತ್ತುಗಳನ್ನು ಗಮನವಿಟ್ಟು ನೋಡಿಕೊಳ್ಳಿ. ಸ್ನೇಹಿತರ ಸಲಹೆ ಸಹಾಯಕ.
ಕರ್ಕಾಟಕ ರಾಶಿ:
ನಾಲ್ಕನೇ ರಾಶಿಯವರಿಗೆ ಕುಟುಂಬದ ಅಭಿಪ್ರಾಯವು ಉದ್ಯೋಗ ನಿರ್ಧಾರಕ್ಕೆ ಪ್ರಭಾವ ಬೀರುತ್ತದೆ. ಹೊಸ ಕೆಲಸ ಸಿಕ್ಕರೂ ಮನಸ್ಸಿಗೆ ಸಂಪೂರ್ಣ ತೃಪ್ತಿ ಸಿಗದೆ ಇರಬಹುದು. ಸರ್ಕಾರಿ, ಶಿಕ್ಷಣ ಅಥವಾ ಸಂಸ್ಥಾತ್ಮಕ ಕ್ಷೇತ್ರದಲ್ಲಿ ಅವಕಾಶ. ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಕಡಿಮೆ ಮಾಡಿದರೆ ಪ್ರಗತಿ ವೇಗವಾಗುತ್ತದೆ. ಸ್ಥಳ ಬದಲಾವಣೆ ಸಾಧ್ಯತೆ ದೃಢವಾಗಲಿದೆ.
ಸಿಂಹ ರಾಶಿ:
ಈ ವಾರ ನಿಮ್ಮ ಉದ್ಯೋಗದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗುತ್ತದೆ. ನಾಯಕತ್ವ ಗುಣದಿಂದ ಹೊಸ ಹುದ್ದೆ ಸಿಗುವ ಸೂಚನೆ. ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆದರೆ ಅಹಂಕಾರದಿಂದ ಸಹೋದ್ಯೋಗಿಗಳ ವಿರೋಧ ಉಂಟಾಗಬಹುದು. ಈ ವಾರ ಖಾಸಗಿ ಸಂಸ್ಥೆ, ಉದ್ಯೋಗದಲ್ಲಿ ವೇಗವಾಗಿ ಬೆಳವಣಿಗೆ ಕಾಣಿಸುವುದು. ಹಣಕಾಸು ಲಾಭ ಉತ್ತಮ.
ಕನ್ಯಾ ರಾಶಿ:
ಆರನೇ ರಾಶಿಯವರಿಗೆ ಈ ವಾರ ಶ್ರಮ, ಶಿಸ್ತು ಮತ್ತು ಕೌಶಲ್ಯಕ್ಕೆ ತಕ್ಕ ಉದ್ಯೋಗ ಸಿಗುತ್ತದೆ. ತಾಂತ್ರಿಕ, ಲೆಕ್ಕಪತ್ರ, ವಿಶ್ಲೇಷಣಾ ಕೆಲಸದಲ್ಲಿ ಯಶಸ್ಸು. ಸಣ್ಣ ಸಂಸ್ಥೆಯಿಂದ ದೊಡ್ಡ ಸಂಸ್ಥೆಗೆ ಹೋಗುವ ಯೋಗ. ಕೆಲಸದ ಒತ್ತಡದಿಂದ ಆರೋಗ್ಯ ಕಡೆ ನಿರ್ಲಕ್ಷ್ಯ ಬೇಡ. ಈ ವಾರ ಉದ್ಯೋಗ ಸ್ಥಿರತೆಯ ಜೊತೆಗೆ ಕಲಿಕೆಗೂ ಅವಕಾಶ ನೀಡುತ್ತದೆ. ಆತ್ಮವಿಶ್ವಾಸದಿಂದ ಮುಂದುವರಿಯಿರಿ.
ತುಲಾ ರಾಶಿ:
ಈ ವಾರ ನೀವು ಪಾಲುದಾರಿಕೆ, ಒಪ್ಪಂದ ಉದ್ಯೋಗಕ್ಕೆ ಸೇರಿಕೊಳ್ಳುವ ಸಾಧ್ಯತೆ. ಕಾನೂನು, ಕಲೆ, ವಿನ್ಯಾಸ ಕ್ಷೇತ್ರ ಅನುಕೂಲ. ನಿರ್ಧಾರ ತೆಗೆದುಕೊಳ್ಳುವಲ್ಲಿ ತಡವಾದರೆ ಅವಕಾಶ ತಪ್ಪಬಹುದು. ಕೆಲಸದ ಸ್ಥಳದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಣಕಾಸು ಲಾಭ ಮಧ್ಯಮ. ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಸಾಧಿಸಿದರೆ ವೃತ್ತಿ ಜೀವನ ಸುಗಮ.
ವೃಶ್ಚಿಕ ರಾಶಿ:
ಎಂಟನೇ ರಾಶಿಯವರಿಗೆ ಮೊದಲ ವಾರ ರಹಸ್ಯವಾಗಿ ಬಂದ ಉದ್ಯೋಗ ಅವಕಾಶ ನಿಮ್ಮ ಜೀವನದ ದಿಕ್ಕು ಬದಲಾಯಿಸುತ್ತದೆ. ಸ್ಪರ್ಧೆ, ರಾಜಕೀಯ ಹಚ್ಚಿದ್ದರೂ ಗೆಲುವು ನಿಮ್ಮದೇ. ಸಂಶೋಧನೆ, ಭದ್ರತೆ, ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು. ಕೆಲಸದ ಒತ್ತಡ ಹೆಚ್ಚಾಗಬಹುದು. ಧೈರ್ಯ ಮತ್ತು ಸಹನೆ ಅಗತ್ಯ. ಹಣಕಾಸು ಲಾಭ ಕ್ರಮೇಣ ಹೆಚ್ಚುತ್ತದೆ.
ಧನು ರಾಶಿ:
ದೂರದ ಊರು ಅಥವಾ ವಿದೇಶ ಸಂಪರ್ಕಿತ ಉದ್ಯೋಗ ಯೋಗ. ಶಿಕ್ಷಣ, ತರಬೇತಿ, ಸಲಹೆ ನೀಡುವ ಕ್ಷೇತ್ರದಲ್ಲಿ ಹೊಸ ಅವಕಾಶ. ಉನ್ನತ ವಿದ್ಯಾಭ್ಯಾಸದ ನಂತರ ಉತ್ತಮ ಕೆಲಸ ಸಿಗುತ್ತದೆ. ಅತಿಯಾದ ನಿರೀಕ್ಷೆ ನಿರಾಶೆ ತರಬಹುದು. ವೆಚ್ಚ ಹೆಚ್ಚಾಗುವ ಸಾಧ್ಯತೆ. ಈ ವಾರ ಉದ್ಯೋಗದಲ್ಲಿ ಗೌರವವಿದ್ದರೂ ಶ್ರಮ ಹೆಚ್ಚು. ಕಾಲು ಸಂಬಂಧಿತ ಆರೋಗ್ಯ ಗಮನಿಸಿ.
ಮಕರ ರಾಶಿ:
ಶನಿಯು ಅಧಿಪತಿಯಾದ ಈ ರಾಶಿಯವರಿಗೆ ನಿಧಾನವಾದರೂ ಖಚಿತ ಉದ್ಯೋಗ ಬದಲಾವಣೆ ಸಂಭವಿಸುತ್ತದೆ. ಆಡಳಿತ, ಸರ್ಕಾರಿ, ನಿರ್ವಹಣಾ ಕ್ಷೇತ್ರದಲ್ಲಿ ಅವಕಾಶ. ಹಿರಿಯರ ಶಿಫಾರಸು ಕೆಲಸಕ್ಕೆ ದಾರಿ ಮಾಡಿಕೊಡುತ್ತದೆ. ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಹಣಕಾಸು ಸ್ಥಿರತೆ ಹೆಚ್ಚಾಗುತ್ತದೆ. ಕೆಲಸದ ಹೊಣೆಗಾರಿಕೆ ಜಾಸ್ತಿ.
ಕುಂಭ ರಾಶಿ:
ಹೊಸ ವರ್ಷದ ಮೊದಲನೇ ವಾರ ನವೀನ ಆಲೋಚನೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯೋಗ ಸಿಗುತ್ತದೆ. ಸ್ಟಾರ್ಟ್‌ಅಪ್ ಅಥವಾ ಹೊಸ ಪ್ರಾಜೆಕ್ಟ್ ಮೂಲಕ ಕೆಲಸಕ್ಕೆ ಪ್ರವೇಶ ಪಡೆಯುವಿರಿ. ಸ್ಥಿರತೆ ಕಡಿಮೆ ಆದರೆ ಅನುಭವ ಹೆಚ್ಚು. ಸ್ವಾತಂತ್ರ್ಯ ಇದ್ದರೂ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ನೇಹಿತರ ಸಂಪರ್ಕ ಲಾಭದಾಯಕ. ಹಣಕಾಸು ಏರಿಳಿತ. ನರ ಮತ್ತು ಕಣ್ಣುಗಳ ಆರೋಗ್ಯ ಗಮನಿಸಿ.
ಮೀನ ರಾಶಿ:
ಗುರುವಿನ ಆಧಿಪತ್ಯದ ಕೊನೆಯ ರಾಶಿಗೆ ಈ ವಾರ ಸೇವಾ, ಆರೋಗ್ಯ, ಸೃಜನಶೀಲ ಕ್ಷೇತ್ರದಲ್ಲಿ ಮುಂದಿನ ಉದ್ಯೋಗ ಅವಕಾಶ. ಭರವಸೆ ಮಾತುಗಳಿಗೆ ಮೋಸ ಹೋಗದಂತೆ ಎಚ್ಚರ. ದಾಖಲೆ ಮತ್ತು ನೇಮಕ ಪತ್ರ ಪರಿಶೀಲನೆ ಮಾಡಿಸಿಕೊಳ್ಳಿ. ಕೆಲಸದಲ್ಲಿ ತೃಪ್ತಿ ಇದ್ದರೂ ಹಣಕಾಸು ಮಧ್ಯಮ. ಧ್ಯಾನ ಮತ್ತು ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು. ನೀರಿನ ಸಂಪರ್ಕದ ಕೆಲಸ ಅಥವಾ ಪ್ರಯಾಣ ಸಾಧ್ಯ.
– ಲೋಹಿತ ಹೆಬ್ಬಾರ್ – 8762924271 (what’s app only)
Published On - 12:11 pm, Sat, 3 January 26




