Apple iPhone: ಆಪಲ್​ ಐಫೋನ್​ 13ರ ಸರಣಿಯ ನಾಲ್ಕು ಫೋನ್​ ಬಿಡುಗಡೆ; ಬೆಲೆ, ಫೀಚರ್​ ಮತ್ತಿತರ ವಿವರ ಇಲ್ಲಿದೆ

| Updated By: Srinivas Mata

Updated on: Sep 15, 2021 | 1:28 PM

ಆಪಲ್ ಐಫೋನ್ 13ರ ಸರಣಿಯ ನಾಲ್ಕು ಮೊಬೈಲ್​ ಫೋನ್​ಗಳನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Apple iPhone: ಆಪಲ್​ ಐಫೋನ್​ 13ರ ಸರಣಿಯ ನಾಲ್ಕು ಫೋನ್​ ಬಿಡುಗಡೆ; ಬೆಲೆ, ಫೀಚರ್​ ಮತ್ತಿತರ ವಿವರ ಇಲ್ಲಿದೆ
ಆಪಲ್ ಐಫೋನ್ 13 (ಸಾಂದರ್ಭಿಕ ಚಿತ್ರ)
Follow us on

ಮತ್ತೊಮ್ಮೆ ಸೆಪ್ಟೆಂಬರ್ ಬಂದಿದೆ. ಆಪಲ್ ಪ್ರಾಡಕ್ಟ್​ಗಳಿಗಾಗಿ ಕಾಯುವವರಿಗೆ ಕಂಪೆನಿಯಿಂದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಮಂಗಳವಾರದಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ವರ್ಚುವಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಐಫೋನ್ 13ರ ಸರಣಿಯ 4 ಫೋನ್​ ಅನ್ನು ಬಿಡುಗಡೆ ಮಾಡಲಾಗಿದೆ. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್ ಎಂದು ಕರೆಯಲಾಗಿದೆ. ಈ ಹಿಂದೆ ಐಫೋನ್ 12ರ ಇದೇ ಹೆಸರಿನ (ಮಿನಿ, ಪ್ರೊ, ಪ್ರೊ ಮ್ಯಾಕ್ಸ್) ಫೋನ್​ಗಳಿಗೆ ಯಾವ ರಚನೆ ಇತ್ತೋ ಅದೇ ಅಳತೆ, ಗಾತ್ರ, ಸ್ಕ್ರೀನ್ ಒಟ್ಟಾರೆಯಾಗಿ ಹೂಬೇಹೂಬು ಹಾಗೇ ಕಾಣುವಂತೆ ಐಫೋನ್ 13 ಇದೆ. ಆದರೆ ಈಗಿನ ಸರಣಿಯಲ್ಲಿ ಮಾಡಿರುವ ಬದಲಾವಣೆ ಏನೆಂದರೆ, ಉತ್ತಮ ಬ್ಯಾಟರಿ ಲೈಫ್, ಕ್ಯಾಮೆರಾದಲ್ಲಿ ಬದಲಾವಣೆ, ಸಿನೆಮ್ಯಾಟಿಕ್ ವಿಡಿಯೋ ರೆಕಾರ್ಡಿಂಗ್ ಇನ್ನಷ್ಟು ಉತ್ತಮಗೊಳಿಸಲಾಗಿದೆ. ಈ ಎಲ್ಲ ಐಫೋನ್​ಗಳು ಹೊಸ A15 ಬಯೋನಿಕ್ SOC ಜತೆಗೆ, ಐಒಸ್​ 15ರೊಂದಿಗೆ ಬರುತ್ತದೆ.

ಭಾರತದಲ್ಲಿ ಫೋನ್​ಗಳ ಬೆಲೆ ಮತ್ತು ಮಾರಾಟ ದಿನಾಂಕ
ಐಫೋನ್​​ 13
128 GB- ರೂ. 79,900
256 GB- ರೂ. 89,900
512 GB- ರೂ. 99,900

ಐಫೋನ್​ 13 ಮಿನಿ
128 GB- ರೂ. 69,900
256 GB- ರೂ. 79,900
512 GB- ರೂ.89,900

ಐಫೋನ್​ 13 ಪ್ರೊ
128 GB- ರೂ. 1,19,900
256 GB- ರೂ. 1,29,900
512 GB- ರೂ. 1,49,900
1 TB- ರೂ. 1,69,900

ಐಫೋನ್ ಮ್ಯಾಕ್ಸ್ ಪ್ರೋ
128 GB- ರೂ. 1,29,900
256 GB- ರೂ. 1,39,900
512 GB- ರೂ. 1,59,900
1 TB- ರೂ. 1,79,900

ಭಾರತ ಸೇರಿದಂತೆ ಅಮೆರಿಕ, ಯು.ಕೆ., ಜಪಾನ್, ಚೀನಾ, ಆಸ್ಟ್ರೇಲಿಯಾ ಕೆನಡಾದಲ್ಲಿ ಪ್ರೀ ಆರ್ಡರ್​ ಸೆಪ್ಟೆಂಬರ್ 17ರಿಂದ ಶುರುವಾಗುತ್ತದೆ. ಸೆಪ್ಟೆಂಬರ್ 24ರಂದು ರೀಟೇಲ್​ ಆಗಿ ಲಭ್ಯ ಇವೆ.

ಫೋನ್​ಗಳ ವೈಶಿಷ್ಟ್ಯ
ಎಲ್ಲ ನಾಲ್ಕು ಹೊಸ ಐಫೋನ್ ಮಾದರಿಗಳಲ್ಲೂ ಆಪಲ್​ನಿಂದ ಅದರದೇ ನಿರ್ಮಾಣದ A15 ಬಯೋನಿಕ್ SoC ಬಳಸಲಾಗಿದೆ. ಇದು 6 ಕೋರ್ CPU, ಎರಡು ಉತ್ತಮ-ಕಾರ್ಯಕ್ಷಮತೆ ಮತ್ತು ನಾಲ್ಕು ದಕ್ಷ ಕೋರ್‌ಗಳನ್ನು ಹೊಂದಿದೆ. ಜತೆಗೆ 16-ಕೋರ್ ನ್ಯೂರಲ್ ಎಂಜಿನ್ ಅನ್ನು ಹೊಂದಿದೆ. ಪ್ರಮುಖ ಪ್ರತಿಸ್ಪರ್ಧಿಗಿಂತ ಶೇಕಡಾ 50ರಷ್ಟು ಉತ್ತಮವಾಗಿದೆ ಎಂದು ಹೇಳಲಾಗಿದೆ. ಐಫೋನ್ 13 ಮತ್ತು ಐಫೋನ್ 13 ಮಿನಿ ನಾಲ್ಕು-ಕೋರ್ ಜಿಪಿಯು ಹೊಂದಿರುವ ಎ15 ಬಯೋನಿಕ್ ಅನ್ನು ಹೊಂದಿದ್ದರೆ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಐದು ಕೋರ್ ಇಂಟಿಗ್ರೇಟೆಡ್ ಜಿಪಿಯು ಪಡೆಯುತ್ತದೆ.

ಆಪಲ್ ಅಧಿಕೃತವಾಗಿ RAM ಪ್ರಮಾಣ ಮತ್ತು ಪ್ರತಿ ಮಾದರಿಯ ಬ್ಯಾಟರಿ ಸಾಮರ್ಥ್ಯಗಳನ್ನು ಬಹಿರಂಗಪಡಿಸಿಲ್ಲ. ಐಫೋನ್​ 12ರ ಸರಣಿಗೆ ಹೋಲಿಸಿದರೆ ಆಪಲ್ ಐಫೋನ್ 13 ಮಿನಿ ಮತ್ತು ಐಫೋನ್ 13 ಪ್ರೊಗಳಲ್ಲಿ 1.5 ಗಂಟೆಗಳ ಉತ್ತಮ ಬ್ಯಾಟರಿ ಬಾಳಿಕೆಯನ್ನು, ಐಫೋನ್ 13 ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ 2.5 ಗಂಟೆಗಳ ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿವೆ. ಐಫೋನ್ 13 ಮತ್ತು ಐಫೋನ್ 13 ಮಿನಿ 256GBಗಿಂತ ಹೆಚ್ಚಿನ ಸಂಗ್ರಹಣೆಯೊಂದಿಗೆ ಲಭ್ಯವಿರುವ ಮೊದಲ ಪ್ರೊ-ಅಲ್ಲದ ಐಫೋನ್ ಆಗಿದ್ದು, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್​ 1TB ಸಂಗ್ರಹದೊಂದಿಗೆ ಬಂದಿರುವ ಮೊದಲ ಐಫೋನ್​ಗಳಾಗಿವೆ.

ಎಲ್ಲ ನಾಲ್ಕು ಫೋನ್​ಗಳು ಈ ಹಿಂದಿನ 12ರ ಸರಣಿಯ ಸ್ಕ್ರೀನ್ ಗಾತ್ರವನ್ನು ಹೊಂದಿವೆ. ಆದರೆ ಹೆಚ್ಚಿದ ಸ್ಕ್ರೀನ್ ಸ್ಪೇಸ್​ ಆಗಿ ಶೇಕಡಾ 20 ಕಿರಿದಾದ ನಾಚ್​ನೊಂದಿಗೆ ಬರುತ್ತದೆ. ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಕೂಡ ಸುಧಾರಿತ ಹೊಳಪನ್ನು ಹೊಂದಿರುತ್ತವೆ. ಆದರೂ ಪ್ರೊ ಮಾದರಿಗಳು ಮಾತ್ರ ಆಪಲ್​ನ ProMotion 120Hz ರಿಫ್ರೆಶ್ ದರದ ಫೀಚರ್ ಹೊಂದಿರುತ್ತವೆ. ಪ್ರೊ ಮಾದರಿಗಳು 10Hz ನಿಂದ 120Hz ವರೆಗೂ ಇರುತ್ತದೆ. ಐಫೋನ್ 13 ಮತ್ತು ಐಫೋನ್ 13 ಪ್ರೊ ಮಾದರಿಗಳಿಗೆ ಹಗಲಿನ ಬ್ರೈಟ್​ನೆಸ್ ಕ್ರಮವಾಗಿ 800 ನಿಟ್ಸ್ ಮತ್ತು 1000 ನಿಟ್ಸ್, ಆದರೆ ಗರಿಷ್ಠ ಮಟ್ಟದಲ್ಲಿ ಎಚ್‌ಡಿಆರ್ ಬ್ರೈಟ್​ನೆಸ್ ಎಲ್ಲ ನಾಲ್ಕಕ್ಕೂ 1200 ನಿಟ್ಸ್ ಇದೆ. ಡಾಲ್ಬಿ ವಿಷನ್, HDR10 ಮತ್ತು HLG ಅನ್ನು ಸಹ ಬೆಂಬಲಿಸುತ್ತದೆ.

ಯಾವ ಬಣ್ಣಗಳಲ್ಲಿ ಲಭ್ಯ?
ಐಫೋನ್ 13 ಮತ್ತು ಐಫೋನ್ 13 ಮಿನಿ ಈ ಹಿಂದಿನ ಪೀಳಿಗೆಯಂತೆಯೇ ಫ್ಲಾಟ್-ಎಡ್ಜ್ ಅಲ್ಯೂಮಿನಿಯಂ ಫ್ರೇಮ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಮೆಟೀರಿಯಲ್ ಮತ್ತು ಐಪಿ 68 ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ಗಳು ಇವೆ. ಅವು ಐದು ಹೊಸ ಬಣ್ಣಗಳಲ್ಲಿ ಲಭ್ಯವಿದೆ-ಪಿಂಕ್, ಬ್ಲೂ, ಮಿಡ್​ನೈಟ್, ಸ್ಟಾರ್‌ಲೈಟ್ ಮತ್ತು (ಪ್ರಾಡಕ್ಟ್) ಕೆಂಪು. ಆಂಟೆನಾ ಲೈನ್‌ಗಳಿಗಾಗಿ ಮರುಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿ ಗುಣಮಟ್ಟದ್ದನ್ನು ಬಳಸಿ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಐಫೋನ್ 13 ಪ್ರೊ ಮಾದರಿಗಳಿಗಾಗಿ ಆಪಲ್ ಸರ್ಜಿಕಲ್ ಗ್ರೇಡ್ ಸ್ಟೇನ್​ಲೆಸ್ ಸ್ಟೀಲ್ ಅನ್ನು ಬಳಸಿದ್ದು, ಕಸ್ಟಮ್ ಫಿನಿಷ್​ ಅನ್ನು ಸವೆತ ಮತ್ತು ತುಕ್ಕು ನಿರೋಧಕ ಎಂದು ಹೇಳಲಾಗಿದೆ. ಇದರಲ್ಲಿ ನಾಲ್ಕು ಹೊಸ ಬಣ್ಣಗಳಿವೆ: ಗ್ರ್ಯಾಫೈಟ್, ಚಿನ್ನ, ಬೆಳ್ಳಿ ಮತ್ತು ಸಿಯೆರಾ ನೀಲಿಯಲ್ಲಿ ದೊರೆಯಲಿವೆ. ಎರಡನೆಯದನ್ನು ನ್ಯಾನೋಮೀಟರ್ ಸ್ಕೇಲ್ ಸೆರಾಮಿಕ್​ನ ಬಹು ಪದರಗಳನ್ನು ಬಳಸಿ ಸಾಧಿಸಲಾಗುತ್ತದೆ ಮತ್ತು ಕೈಯಲ್ಲಿ ಹಿಡಿಯುವುದಕ್ಕೆ ಮ್ಯಾಟ್ ಟೆಕ್ಚರರ್ಡ್ ಹಿಂಭಾಗವನ್ನು ಹೊಂದಿದೆ.

ಐಫೋನ್ 13 ಮತ್ತು ಐಫೋನ್ 13 ಮಿನಿ ಹೊಸ ವೈಡ್-ಆ್ಯಂಗಲ್ ಕ್ಯಾಮೆರಾವನ್ನು ಹೊಂದಿದ್ದು, ಕಡಿಮೆ ಶಬ್ದ ಮತ್ತು ಬ್ರೈಟ್ ಫಲಿತಾಂಶಗಳಿಗಾಗಿ ಶೇ 47ರಷ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ. ಇದು 1.7um ಸೆನ್ಸರ್ ಪಿಕ್ಸೆಲ್‌ಗಳು ಮತ್ತು f/1.6 ಅಪರ್ಚರ್ ಹೊಂದಿದೆ. ಜೊತೆಗೆ iPhone 12 Pro Maxನಿಂದ ಸೆನ್ಸರ್-ಶಿಫ್ಟ್ ಆಪ್ಟಿಕಲ್ ಸ್ಟೆಬಿಲೈಸೇಷನ್ ಹೊಂದಿದೆ. ನೈಟ್ ಮೋಡ್ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ತೀಕ್ಷ್ಣವಾದ ಪಿಕ್ಚರ್​ಗಳನ್ನು ಸೆರೆ ಹಿಡಿಯುತ್ತದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಎಫ್/2.4 ಅಪರ್ಚರ್ ಹೊಂದಿದೆ. ಹೊಸ ಸಿನಿಮ್ಯಾಟಿಕ್ ವಿಡಿಯೋ ಮೂವಿಂಗ್ (ಚಲಿಸುವ) ವಿಷಯ- ವಸ್ತುಗಳನ್ನು ಸೆರೆ ಹಿಡಿಯಲು ಸಪೋರ್ಟ್​ ಮಾಡುತ್ತದೆ.

ಐಫೋನ್ 13 ಪ್ರೊ ಮಾದರಿಗಳು ಹೊಸ 77 ಎಂಎಂ ಟೆಲಿಫೋಟೋ ಕ್ಯಾಮರಾವನ್ನು ಹೊಂದಿದ್ದು, 3X ಆಪ್ಟಿಕಲ್ ಜೂಮ್, ಅಲ್ಟ್ರಾ-ವೈಡ್ ಕ್ಯಾಮರಾ ಈಗ ಒಂದು ವಸ್ತುವನ್ನು 2 ಸೆಂ.ಮೀ.ವರೆಗೆ ಮ್ಯಾಕ್ರೋ ಶಾಟ್ ತೆಗೆದುಕೊಳ್ಳಬಹುದು ಮತ್ತು ಎಫ್/1.5 ಅಪರ್ಚರ್ ಮತ್ತು 1.9 um ಸೆನ್ಸರ್ ಹೊಂದಿರುವ ಪ್ರಾಥಮಿಕ ವೈಡ್ ಕ್ಯಾಮೆರಾ ಪಿಕ್ಸೆಲ್‌ಗಳನ್ನು ಹೊಂದಿವೆ. ಟ್ರೈಪಾಡ್ ಬಳಸುವಾಗ ಕಡಿಮೆ ಶಬ್ದ, ವೇಗದ ಶಟರ್ ಮತ್ತು ಉದ್ದದ ಬ್ರಾಕೆಟ್​ಗಳಿಗಾಗಿ ಇದು ಹೆಚ್ಚು ಬೆಳಕನ್ನು ಸೆರೆ ಹಿಡಿಯುತ್ತದೆ ಎಂದು ಹೇಳಲಾಗಿದೆ. ಟೆಲಿಫೋಟೋ ಒಂದನ್ನು ಒಳಗೊಂಡಂತೆ ಎಲ್ಲ ಕ್ಯಾಮೆರಾಗಳು ಈಗ ಕಂಪ್ಯೂಟೇಷನಲ್ ಫೋಟೋಗ್ರಫಿಯಿಂದಾಗಿ ನೈಟ್ ಮೋಡ್‌ನಲ್ಲಿ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಿನ ಸ್ಥಳಗಳಲ್ಲಿ ಹೆಚ್ಚಿನ ಬ್ಯಾಂಡ್‌ಗಳನ್ನು ಸಪೋರ್ಟ್​ ಮಾಡಲು ಹೊಸ ಐಫೋನ್‌ಗಳು ಕಸ್ಟಮೈಸ್ಟ್​ ಆಗಿ ವಿನ್ಯಾಸಗೊಳಿಸಿದ ಆಂಟೆನಾಗಳು ಮತ್ತು ರೇಡಿಯೋ ಯೂನಿಟ್​ನೊಂದಿಗೆ 5G ಅನ್ನು ಹೊಂದಿವೆ.

ಇದನ್ನೂ ಓದಿ: ಐಫೋನ್ 12 ಸಿರೀಸ್ ಪೋನ್​ಗಳು ರಿಯಾಯಿತಿ ದರದಲ್ಲಿ ಬೇಕಿದ್ದರೆ ಕೂಡಲೇ ಫ್ಲಿಪ್​ಕಾರ್ಟ್​​ಗೆ ಪೋರ್ಟಲ್​​ಗೆ ಲಾಗಿನ್ ಆಗಿ!

Apple iPhone: ಐಫೋನ್ ಬಳಸುತ್ತಿರುವವರಿಗೆ ಶಾಕಿಂಗ್ ನ್ಯೂಸ್: ಹೀಗೆ ಮಾಡಿದ್ರೆ ನಿಮ್ಮ ಕ್ಯಾಮೆರಾ ಹಾಳಾಗುತ್ತೆ

(Apple iPhone 13 Mobile 4 Variants Released Price Features And Other Details Here)