SBI Alert: ಎಸ್ಬಿಐ ಗ್ರಾಹಕರೇ ಗಮನಿಸಿ!; ನಾಳೆ 2 ಗಂಟೆ ಕಾಲ ಬ್ಯಾಂಕಿಂಗ್ ಸೇವೆ ಇರೋದಿಲ್ಲ
SBI Internet Banking | ಸೆಪ್ಟೆಂಬರ್ 15ರಂದು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ಇರುವುದಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಬಳಸುವವರು 2 ಗಂಟೆಯ ಬಳಿಕ ಸೇವೆಯನ್ನು ಬಳಸಬಹುದು ಎಂದು ಎಸ್ಬಿಐ ಟ್ವೀಟ್ ಮಾಡಿದೆ.
ನವದೆಹಲಿ: ನೀವು ಎಸ್ಬಿಐ ಗ್ರಾಹಕರಾ? ಆನ್ಲೈನ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ? ಹಾಗಿದ್ದರೆ ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಎಸ್ಬಿಐ ಮತ್ತೊಮ್ಮೆ ಮೇಂಟೇನನ್ಸ್ಗಾಗಿ ನಾಳೆ 2 ಗಂಟೆಗಳ ಕಾಲ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡುವುದಿಲ್ಲ. ಎಸ್ಬಿಐ ಗ್ರಾಹಕರಿಗೆ ಬುಧವಾರ 2 ಗಂಟೆಗಳ ಕಾಲ ಡಿಜಿಟಲ್ ಬ್ಯಾಂಕಿಂಗ್ ಸೇವೆ ಲಭ್ಯ ಇರುವುದಿಲ್ಲ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಎಸ್ಬಿಐ ಘೋಷಣೆ ಮಾಡಿದೆ.
ಬುಧವಾರ 2 ಗಂಟೆಗಳ ಕಾಲ ತಾತ್ಕಾಲಿಕವಾಗಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಇದಕ್ಕೆ ಗ್ರಾಹಕರು ಸಹಕರಿಸಬೇಕು. ಸೆಪ್ಟೆಂಬರ್ 15ರಂದು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ಇರುವುದಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಬಳಸುವವರು 2 ಗಂಟೆಯ ಬಳಿಕ ಸೇವೆಯನ್ನು ಬಳಸಬಹುದು ಎಂದು ಎಸ್ಬಿಐ ಟ್ವೀಟ್ ಮಾಡಿದೆ.
We request our esteemed customers to bear with us as we strive to provide a better Banking experience.#InternetBanking #OnlineSBI #SBI pic.twitter.com/5SXHK20Dit
— State Bank of India (@TheOfficialSBI) September 14, 2021
ಕಳೆದ ತಿಂಗಳು ಕೂಡ ಎಸ್ಬಿಐ ನಿರ್ವಹಣೆಗಾಗಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ರಜೆಗಳನ್ನು ಘೋಷಿಸಿದೆ. ಸೆಪ್ಟೆಂಬರ್ 17 – ಕರ್ಮ ಪೂಜೆ – (ರಾಂಚಿ), ಸೆಪ್ಟೆಂಬರ್ 19 – ಭಾನುವಾರ, ಸೆಪ್ಟೆಂಬರ್ 20 – ಇಂದ್ರಜಾತ್ರೆ – (ಗಾಂಗ್ಟಕ್), ಸೆಪ್ಟೆಂಬರ್ 21 – ಶ್ರೀ ನಾರಾಯಣ ಗುರು ಸಮಾಧಿ ದಿನ – (ಕೊಚ್ಚಿ ಮತ್ತು ತಿರುವನಂತಪುರಂ), ಸೆಪ್ಟೆಂಬರ್ 25 – ನಾಲ್ಕನೇ ಶನಿವಾರ, ಸೆಪ್ಟೆಂಬರ್ 26 – ಭಾನುವಾರ ಇರಲಿದೆ.
ಈ ಹಿಂದೆ ಸೆಪ್ಟೆಂಬರ್ 4 ರಂದು ಎಸ್‌ಬಿಐನ ಯೋನೊ ಸೇವೆಯನ್ನು ನಿರ್ವಹಣೆ ಕೆಲಸದ ಕಾರಣದಿಂದ ಸುಮಾರು 3 ಗಂಟೆಗಳ ಕಾಲ ರದ್ದುಗೊಳಿಸಲಾಗಿತ್ತು. ಹಾಗೇ, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಿರ್ವಹಣೆಯ ಕಾರಣದಿಂದಾಗಿ SBI ಬ್ಯಾಂಕಿಂಗ್ ಸೇವೆಗಳನ್ನುಸ್ಥಗಿತಗೊಳಿಸಲಾಗಿತ್ತು. ಈ ಬಾರಿಯೂ ರಾತ್ರಿ ವೇಳೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳುವುದರಿಂದ ಹೆಚ್ಚು ಜನರಿಗೆ ಸಮಸ್ಯೆ ಆಗುವುದಿಲ್ಲ.
SBI Pension Portal: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಿಂಚಣಿದಾರರಿಗಾಗಿಯೇ ಹೊಸ ಪೋರ್ಟಲ್
(SBI alert Internet Banking services to be closed for 2 hours on September 15 SBI Yono App)