Apple iPhone: ಆಪಲ್ ಐಫೋನ್​ ಎಸ್​ಇ3, ಐಪ್ಯಾಡ್​ ಏರ್​ 2022 ಭಾರತದಲ್ಲಿ ಮಾರಾಟ ಶುರು

| Updated By: Srinivas Mata

Updated on: Mar 19, 2022 | 6:17 PM

ಭಾರತದಲ್ಲಿ ಆಪಲ್ ಐಫೋನ್​ ಎಸ್​ಇ3, ಐಪ್ಯಾಡ್ ಏರ್ 2022 ಭಾರತದಲ್ಲಿ ಮಾರಾಟವನ್ನು ಆರಂಭ ಮಾಡಿದೆ. ಬೆಲೆ, ಫೀಚರ್ ಮತ್ತಿತರ ವಿವರಗಳು ಇಲ್ಲಿವೆ.

Apple iPhone: ಆಪಲ್ ಐಫೋನ್​ ಎಸ್​ಇ3, ಐಪ್ಯಾಡ್​ ಏರ್​ 2022 ಭಾರತದಲ್ಲಿ ಮಾರಾಟ ಶುರು
ಸಾಂದರ್ಭಿಕ ಚಿತ್ರ
Follow us on

ಆಪಲ್ ಐಫೋನ್ (Apple iPhone) ಎಸ್​ಇ 2022 ಮತ್ತು ಐದನೇ ತಲೆಮಾರಿನ ಐಪ್ಯಾಡ್ ಏರ್ ಭಾರತದಲ್ಲಿ ಮಾರಾಟ ಆರಂಭಿಸಿವೆ. ಇವುಗಳನ್ನು ಮಾರ್ಚ್ 8, 2022ರಂದು ಆಪಲ್​ ಕಂಪೆನಿಯ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿತ್ತು. ಇದರ ಜತೆಗೆ ಹೊಸ ಬಣ್ಣದೊಂದಿಗೆ ಆಪಲ್ ಐಪೋನ್ 13ರ ಸರಣಿ, ಹೊಸ ಮ್ಯಾಕ್ ಸ್ಟುಡಿಯೋ ಹಾಗೂ ಸ್ಟುಡಿಯೋ ಡಿಸ್​ಪ್ಲೇ ಸಹ ಸೇರ್ಪಡೆ ಮಾಡಲಾಗಿದೆ. ಆಪಲ್​ ಐಫೋನ್ 13 ಮತ್ತು ಐಫೋನ್ ಮಿನಿ ಹಸಿರು ಬಣ್ಣದ ವೇರಿಯಂಟ್​ನೊಂದಿಗೆ ಬರುತ್ತದೆ. ಐಫೋನ್ 13 ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್​ ಆಲ್ಪೈನ್ ಗ್ರೀನ್ ಜತೆಗೆ ಬರುತ್ತದೆ. ಐಫೋನ್ 13 ಸರಣಿ ಹೊಸ ಬಣ್ಣದ ವೇರಿಯಂಟ್​ನೊಂದಿಗೆ ಬಂದಿದ್ದು, ಅದು ಕೂಡ ಮಾರಾಟ ಶುರು ಮಾಡಿದೆ.

ಐಫೋನ್ ಎಸ್​ಇ 2022 ಮತ್ತು ಐಪ್ಯಾಡ್ ಏರ್ ಪ್ರೀ ಆರ್ಡರ್ ಮಾರ್ಚ್​ 11ರಂದು ಆರಂಭವಾಗಿತ್ತು. ಮತ್ತು 18ನೇ ತಾರೀಕು ಭಾರತದಲ್ಲಿ ಡೆಲಿವರಿ ಶುರುವಾಗಿತ್ತು. ಐಫೋನ್ ಎಸ್​ಇ ಮೂರು ಬಣ್ಣದಲ್ಲಿ ಲಭ್ಯ ಇವೆ. ಅದು ಮಿಡ್​ನೈಟ್, ಸ್ಟಾರ್​ಲೈಟ್ ಹಾಗೂ ಪ್ರಾಡಕ್ಟ್ ರೆಡ್ ಬಣ್ಣಗಳಲ್ಲಿ ದೊರೆಯುತ್ತದೆ. ಆಪಲ್ ಐಫೋನ್ ಎಸ್​ಇ3 4.7 ಇಂಚಿನ ಐಪಿ67 ರೇಟೆಡ್ ಡಿಸ್​ಪ್ಲೇ ಜತೆ ಇರುತ್ತದೆ. ಗುಂಡನೆಯ ಟಚ್​ ಐಡಿ ಐಫೋನ್ ಎಸ್​ಇ3ರಲ್ಲಿ ಮುಂದುವರಿದಿದೆ. ಈಗ ಫೇಸ್ ಐಡಿ ನೋಡಲು ಸಾಧ್ಯವಿಲ್ಲ. ಐಫೋನ್ ಎಸ್​ಇ3ರಲ್ಲಿ 12 ಮೆಗಾಪಿಕ್ಸೆಲ್​ನ ಹಿಂಬದಿಯ ಕ್ಯಾಮೆರಾ ಹಾಗೂ ಮುಂಬದಿಯಲ್ಲಿ 7 ಮೆಗಾಪಿಕ್ಸೆಲ್​ನ ಕ್ಯಾಮೆರಾ ಬರುತ್ತದೆ.

ಈ ಫೋನ್​ನಲ್ಲಿ ಪ್ರಮುಖವಾದದ್ದು ಏನೆಂದರೆ, ಎ15 ಬಯೋನಿಕ್ ಚಿಪ್​ಸೆಟ್​. ಇದನ್ನೇ ಐಫೋನ್ 13ರ ಸರಣಿಯಲ್ಲಿ ಬಳಸಲಾಗಿದೆ. 5ಜಿ ಸಕ್ರಿಯ ಆಗಿರುವ 4ಎನ್​ಎಂ ಚಿಪ್​ಸೆಟ್​ ಐಒಎಸ್ 15ರೊಂದಿಗೆ ಇರುತ್ತದೆ. ಎ15 ಚಿಪ್​ಸೆಟ್​ ಇರುವುದರಿಂದ ಇಡೀ ದಿನ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಭಾರತದಲ್ಲಿ 64ಜಿಬಿ ಆಪಲ್ ಐಫೋನ್ ಎಸ್​ಇ3 ಖರೀದಿಸಿದಲ್ಲಿ 43,900 ರೂಪಾಯಿ ಆಗುತ್ತದೆ. ಆಪಲ್ ಇಂಡಿಯಾ ಸ್ಟೋರ್ಸ್ ಮತ್ತು ಫ್ಲಿಪ್​ಕಾರ್ಟ್​ ಹಾಗೂ ಅಮೆಜಾನ್​ನಿಂದ ಕೂಡ ಮಾರಾಟ ಮಾಡಲಾಗುತ್ತದೆ. 64 ಜಿಬಿ, 128 ಜಿಬಿ, 256 ಜಿಬಿ ಮಾಡೆಲ್​ಗಳಲ್ಲಿ ಬರುತ್ತದೆ. ಇತರ ಎರಡು ವೇರಿಯಂಟ್​ಗಳ ಬೆಲೆ ಕ್ರಮವಾಗಿ 48,900 ಹಾಗೂ 58,900 ರೂಪಾಯಿ ಆಗುತ್ತದೆ.

ಅದೇ ರೀತಿ ಐದನೇ ತಲೆಮಾರಿನ ಐಪ್ಯಾಡ್ ಏರ್ 2022 64 ಜಿಬಿ ವೈ-ಫೈ ಮಾಡೆಲ್ 54,900 ರೂಪಾಯಿ. ಅದೇ ವೈಫೈ ಹಾಗೂ ಸೆಲ್ಯುಲಾರ್ ಮಾಡೆಲ್​ 68,900 ರೂಪಾಯಿ. ಇದು ನೀಲಿ, ಗುಲಾಬಿ, ನೇರಳೆ, ಆಕಾಶ ಕಂದು ಮತ್ತು ಸ್ಟಾರ್​ಲೈಟ್​ ಬಣ್ಣದಲ್ಲಿ, ಈ ಮೇಲ್ಕಂಡ ಸ್ಟೋರ್​ಗಳಲ್ಲಿ ಲಭ್ಯ ಇವೆ. ಐಪ್ಯಾಡ್​ ಏರ್​ 2022 10.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್​ಪ್ಲೇ, ಜತೆಗೆ ಎಂ1 ಚಿಪ್​ ಇರುತ್ತದೆ. ಇದರಲ್ಲಿ ವಿಡಿಯೋ ಕಾಲ್​ಗಾಗಿ ಮುಂಬದಿಯಲ್ಲಿ 12 ಮೆಗಾಪಿಕ್ಸೆಲ್ ಮತ್ತು ಹಿಂಬದಿಯಲ್ಲೂ 12 ಮೆಗಾಪಿಕ್ಸೆಲ್ ಕ್ಯಾಮೆರಾದ ಜತೆಗೆ ಬರುತ್ತದೆ.

ಇದನ್ನೂ ಓದಿ: ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ