ಆಪಲ್ ಐಫೋನ್ ಎಸ್ಇ3 ಬಿಡುಗಡೆ; ಫೋನ್ನ ಫೀಚರ್ಸ್, ದರ ಮತ್ತಿತರ ವಿವರ ಇಲ್ಲಿದೆ
ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಆಪಲ್ ಎಸ್ಇ3 ಮೊಬೈಲ್ ಫೋನ್ ಬಿಡುಗಡೆ ಮಾಡಲಾಗಿದೆ. ಅದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಆಪಲ್ನಿಂದ A15 ಬಯೋನಿಕ್ ಚಿಪ್‌ಸೆಟ್ ಹೊಂದಿರುವ ‘ಕೈಗೆಟುಕುವ’ ಐಫೋನ್ ಎಸ್ಇ (iPhone SE) ಅನ್ನು ಬಿಡುಗಡೆ ಮಾಡಿದೆ ಮತ್ತು SE ವರ್ಗದ ಅಡಿಯಲ್ಲಿ ಮೊದಲ 5G-ಫೋನ್ ಇದಾಗಿದೆ. ಕ್ಯುಪರ್ಟಿನೋ ಮೂಲದ ಟ್ರಿಲಿಯನ್ ಡಾಲರ್ ಕಂಪೆನಿಯಾತ್ರೆ ಪೆನಿಯಿಂದ ಐಫೋನ್ SE3 ಮೂರನೇ ತಲೆಮಾರಿನ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. iPhone SE 3 ಅನ್ನು ಯುಎಸ್ಡಿ 429 (ಸುಮಾರು ರೂ. 33,000) ನಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಮೂರು ಬಣ್ಣಗಳಲ್ಲಿ ಲಭ್ಯ ಇರುತ್ತದೆ. ಮಾರಾಟವು ಮಾರ್ಚ್ 18ರಂದು ಪ್ರಾರಂಭವಾಗುತ್ತದೆ.
ಪ್ರೊಸೆಸರ್ ವಿಷಯದಲ್ಲಿ ಆಪಲ್ iPhone SE 3 ಅನ್ನು 5G ಸಾಮರ್ಥ್ಯಗಳನ್ನು ಹೊಂದಿರುವ 4nm A15 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಪ್ಯಾಕ್ ಮಾಡಿದೆ. ಸದ್ಯಕ್ಕೆ ಐಫೋನ್ 13 ಮಾದರಿಗಳಲ್ಲಿ ಅದೇ ಪ್ರೊಸೆಸರ್ ಅನ್ನು ಬಳಸಲಾಗುತ್ತಿದೆ. ಐಫೋನ್ SE 3 iOS 15ರಲ್ಲಿ ಕಾರ್ಯ ನಿರ್ವಹಿಸುತ್ತದೆ. ಆಪಲ್ iPhone SE 3 2022 12MPಯ ಒಂದೇ ಹಿಂದಿನ ಕ್ಯಾಮೆರಾವನ್ನು ಹೊಂದಿದೆ. SE3 7MP ಸೆಲ್ಫಿ ಲೆನ್ಸ್ ಅನ್ನು ಹೊಂದಿದೆ.
ಐಫೋನ್ SE 3 ಹಿಂದಿನ ಪೀಳಿಗೆಯಂತೆಯೇ ಅದೇ 4.7 ಇಂಚಿನ ಡಿಸ್ಪ್ಲೇಯನ್ನು ಬಳಸುತ್ತದೆ. ಇದು ವೃತ್ತಾಕಾರದ ಟಚ್ ಐಡಿಯಾ ವಿನ್ಯಾಸದೊಂದಿಗೆ ಬರುತ್ತದೆ.
ಇದನ್ನೂ ಓದಿ: Apple iPhone SE 2: ಆಪಲ್ ಐಫೋನ್ ಎಸ್ಇ2 15,499 ರೂಪಾಯಿಯಷ್ಟು ಸಸ್ತಾಗೆ ಸಿಗುತ್ತಿದೆ, ಹೇಗೆ ಗೊತ್ತಾ?