Apple iPhone SE 2: ಆಪಲ್ ಐಫೋನ್ ಎಸ್ಇ2 15,499 ರೂಪಾಯಿಯಷ್ಟು ಸಸ್ತಾಗೆ ಸಿಗುತ್ತಿದೆ, ಹೇಗೆ ಗೊತ್ತಾ?
ಆಪಲ್ ಐಫೋನ್ ಎಸ್ಇ2 ಮೊಬೈಲ್ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ನಲ್ಲಿ ಆಫರ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಏನಿದು ಆಫರ್ ಎಂಬ ಬಗ್ಗೆ ವಿವರಗಳು ಇಲ್ಲಿವೆ.
ಆಪಲ್ ಐಫೋನ್ ಎಸ್ಇ (Apple iPhone SE) ಅನ್ನು ಅತ್ಯಂತ ಕಡಿಮೆ ಬೆಲೆ ಆದ 15,499 ರೂಪಾಯಿಗೆ ಖರೀದಿಸಬಹುದಾಗಿದೆ. ಇ-ಕಾಮರ್ಸ್ ಪೋರ್ಟಲ್ ಆದ ಫ್ಲಿಪ್ಕಾರ್ಟ್ ಮೊದಲ ತಲೆಮಾರಿನ ಆಪಲ್ ಐಫೋನ್ (Apple iPhone) ಎಸ್ಇ ಅನ್ನು ಶೇ 24ರಷ್ಟು ಕಡಿತದೊಂದಿಗೆ ಮಾರಾಟ ಮಾಡುತ್ತಿದೆ. ಈ ಫೋನ್ನ ಮೂಲ ಬೆಲೆ 39,900 ರೂಪಾಯಿ. ಐಫೋನ್ ಎಸ್ಇ ಅನ್ನು ಸದ್ಯಕ್ಕೆ 30,299 ರೂಪಾಯಿಗೆ ಮಾರಲಾಗುತ್ತಿದೆ. ಇದರ ಮೇಲೆ ಫ್ಲಿಪ್ಕಾರ್ಟ್ನಿಂದ ಹಳೇ ಸ್ಮಾರ್ಟ್ಫೋನ್ ಮೇಲೆ ವಿನಿಮಯ ಮೌಲ್ಯ ದೊರೆಯುತ್ತಿದ್ದು, 14,800 ರೂಪಾಯಿ ತನಕ ಸಿಗುತ್ತದೆ. ಇದರಿಂದಾಗಿ ಆಪಲ್ ಐಫೋನ್ ಎಸ್ಇ ಬೆಲೆ 15,499 ರೂಪಾಯಿಗೆ ಸಿಗುತ್ತದೆ.
ಆಪಲ್ ಐಫೋನ್ ಎಸ್ಇ 4.7 ಇಂಚಿನ ಡಿಸ್ಪ್ಲೇ ಹೊಂದಿದ್ದು, 12 ಮೆಗಾಪಿಕ್ಸೆಲ್ನ ಹಿಂಬದಿ ಕ್ಯಾಮೆರಾ ಮತ್ತು 7 ಮೆಗಾಪಿಕ್ಸೆಲ್ನ ಸೆಲ್ಫಿ ಲೆನ್ಸ್ ಹೊಂದಿದೆ. ಇದರಲ್ಲಿ ಎ13 ಬಯೋನಿಕ್ ಚಿಪ್ಸೆಟ್ ಇದೆ. ಐಫೋನ್ ಎಸ್ಇ3 2022 ಬಿಡುಗಡೆ ನಂತರ ಐಫೋನ್ ಎಸ್ಇ ಬೆಲೆ ಇನ್ನಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳಲ್ಲೇ ಐಫೋನ್ ಎಸ್ಇ 2022 ಫೋನ್ ಬಿಡುಗಡೆ ಮಾಡಬಹುದು. 2022ರ ಐಫೋನ್ ಎಸ್ಇನಲ್ಲಿ ಹೊಸ ಫೀಚರ್ಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆ ಇದೆ. ಐಫೋನ್ ಎಸ್ಇ 2022ರಲ್ಲಿ ಮೊದಲ ಬಾರಿಗೆ 5G ಫೀಚರ್ ಸೇರಿಸಬಹುದು ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಇದರ ಜತೆಗೆ ಆಪಲ್ ಐಫೋನ್ ಎಸ್ಇ 2022ರಲ್ಲಿ ವಿಸ್ತೃತವಾದ ಸೆಲ್ಫಿ ಲೆನ್ಸ್ ಮತ್ತು ಎ15 ಬಯೋನಿಕ್ ಚಿಪ್ಸೆಟ್ ಬಳಸಬಹುದು ಎಂದು ಅಂದಾಜಿಸಲಾಗುತ್ತಿದೆ. ಅಂದಹಾಗೆ ಇದು ಸದ್ಯಕ್ಕೆ ಐಫೋನ್ 13ರ ಸರಣಿಯಲ್ಲಿ ಬಳಸಲಾಗುತ್ತಿದೆ.
ಐಫೋನ್ ಎಸ್ಇ 3 2022 ಮೊಬೈಲ್ ಫೋನ್ ಅನ್ನು ಈ ತಿಂಗಳು ಯಾವುದೇ ಸಮಯದಲ್ಲಿ ಬಿಡುಗಡೆ ಮಾಡಬಹುದು. ಆಪಲ್ನಿಂದ ಐಫೋನ್ ಎಸ್ಇ3 2022 ರಚನೆಯನ್ನು ಬದಲಾವಣೆ ಮಾಡಬಹುದು ಎಂಬ ಸುದ್ದಿ ಇದೆ. ಆದರೆ ಈ ತನಕ ಆ ಸಾಧ್ಯತೆ ಕಂಡುಬಂದಿಲ್ಲ. ಆದರೆ ಅತಿದೊಡ್ಡ ಅಚ್ಚರಿ ಅಂರೆ ಫೋನ್ನ ಬೆಲೆ. ಆಪಲ್ ಐಫೋನ್ ಎಸ್ಇ 3 ಅನ್ನು ಕೈಗೆಟುಕುವ ದರದ ಫೋನ್ ಎಂದು ಈಗಾಗಲೇ ಕರೆಯಲಾಗಿದೆ. ವರದಿಗಳ ಪ್ರಕಾರ, ಆರಂಭದ ವೇರಿಯಂಟ್ನ ಬೆಲೆ 300 ಯುಎಸ್ಡಿ ಇರಬಹುದು. ಈ ಹಿಂದಿನ ಐಫೋನ್ ಎಸ್ಇಗಳ ಕಥೆ ಬೇರೆಯೇ ಇದೆ. 300 ಡಾಲರ್ ಆಗುವುದಾದರೆ 22,522 ರೂಪಾಯಿ ಆಗುತ್ತದೆ. ಇದು ಯಾವುದೇ ಫಾರ್ಮಾಟ್ನಲ್ಲಿ ನಿಜವಾಗಿಲ್ಲ.
ಆಪಲ್ ಐಫೋನ್ ಈ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆ ಆಗಿದ್ದೇ ಆದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆಯೇ ತಲೆಕೆಳಗಾಗುತ್ತದೆ. ಅದರ ಹಿಂದಿನ ತಲೆಮಾರಿನ ಐಫೋನ್ ಎಸ್ಇ ಸರಣಿ ಫೋನ್ಗಳನ್ನು ಇಲ್ಲದಂತಾಗಿಸುತ್ತದೆ. ಇದರ ಜತೆಗೆ ಪ್ರಮುಖ ಐಫೋನ್ಗಳ ಮಿನಿ ವರ್ಷನ್ಗಳ ಪಾಲಿಗೂ ಸವಾಲಾಗಿ ಪರಿಣಮಿಸಲಿದೆ.
ಇದನ್ನೂ ಓದಿ: Apple CEO Salary: ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ ವೇತನ ಎಷ್ಟು ನೂರು ಕೋಟಿ ಗೊತ್ತಾ?