Apple iPhone: ರಹಸ್ಯವಾಗಿ ಖಾಸಗಿ ಸಂಭಾಷಣೆ ಕೇಳಿಸಿಕೊಳ್ಳುವ ವಿಶಿಷ್ಟ ಫೀಚರ್​ ಇದೆಯಂತೆ ಆಪಲ್ ಐಫೋನ್​ನಲ್ಲಿ

ಆಪಲ್ ಐಫೋನ್​ ಅನ್ನು ರಹಸ್ಯ ಸಾಧನವಾಗಿ ಮಾರ್ಪಡಿಸುವವಂಥ ಅವಕಾಶಗಳಿವೆ. ಆ ಮೂಲಕ ಇತರರ ಖಾಸಗಿ ಸಂಭಾಷಣೆಯನ್ನು ಕೇಳಿಸಿಕೊಳ್ಳಬಹುದು. ಅದು ಹೇಗೆ ಎಂದು ತಿಳಿಯಬೇಕಿದ್ದಲ್ಲಿ ಈ ಲೇಖನವನ್ನು ಓದಿ.

Apple iPhone: ರಹಸ್ಯವಾಗಿ ಖಾಸಗಿ ಸಂಭಾಷಣೆ ಕೇಳಿಸಿಕೊಳ್ಳುವ ವಿಶಿಷ್ಟ ಫೀಚರ್​ ಇದೆಯಂತೆ ಆಪಲ್ ಐಫೋನ್​ನಲ್ಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Dec 22, 2021 | 2:22 PM

ಆಪಲ್ ಐಫೋನ್‌ಗಳ ಬಗ್ಗೆ ಈ ತನಕ ತಿಳಿದಿರದ ಸಾಮರ್ಥ್ಯವೊಂದು ಬಯಲಾಗಿದ್ದು, ಅದರ ಬಗ್ಗೆ ತಿಳಿದ ಮೇಲೆ ಇಂಟರ್​ನೆಟ್​ನಂಥ ಇಂಟರ್​ನೆಟ್​ ಥಂಡಾ ಹೊಡೆದರೂ ಅಚ್ಚರಿ ಇಲ್ಲ. ನಿಮಗೆ ಗೊತ್ತಾ ಆಪಲ್​ ಐಫೋನ್​ನಲ್ಲಿ ಲೈವ್ ಲಿಸನ್ ಎಂಬ ಫೀಚರ್​ ಇದೆ. ಯಾವುದಾದರೂ ಖಾಸಗಿ ಚರ್ಚೆಗಳನ್ನು ಈ ಫೀಚರ್ ಮೂಲಕ ಆಲಿಸಬಹುದು. ಗೋಡೆಗಳು ಅಡ್ಡ ಇದ್ದರೂ ಕೇಳಿಸಿಕೊಳ್ಳುವುದಕ್ಕೆ ಯಾವುದೇ ತಡೆ ಇರುವುದಿಲ್ಲ. ಟಿಕ್‌ಟಾಕ್ ಬಳಕೆದಾರರಾದ ದಲಿಲಮೌಹಿಬ್ ಅವರು ಐಫೋನ್​ನ ಈ ವಿಶೇಷ ಸಾಮರ್ಥ್ಯವನ್ನು ಕಂಡುಕೊಂಡಿದ್ದಾರೆ ಹಾಗೂ ಸಂಗಾತಿ ಮತ್ತು ಸ್ನೇಹಿತರು ದೂರದಿಂದ ಏನು ಹೇಳುತ್ತಾರೆಂದು ಕೇಳಲು ಐಫೋನ್ ಲೈವ್ ಲಿಸನ್ ಅನ್ನು ಹೇಗೆ ಬಳಸುವುದು ಎಂದು ಸಹ ವಿವರಿಸಿದ್ದಾರೆ.

“ನಿಮ್ಮ ಏರ್‌ಪಾಡ್‌ಗಳ ಮೂಲಕ ಎಲ್ಲವನ್ನೂ, ಅಂದರೆ ಎಲ್ಲವನ್ನೂ ಕೇಳಬಹುದು” ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಾರೆ. ಜನರು ಸಂಭಾಷಣೆ ನಡೆಸುತ್ತಿರುವ ಕೋಣೆಯಲ್ಲಿ ತಮ್ಮ ಐಫೋನ್ ಅನ್ನು ಮರೆತರೆ ಅಥವಾ ಬಿಟ್ಟರೆ, ಮತ್ತೊಂದು ಕೋಣೆಗೆ ಹೋಗಿ ತಮ್ಮ ಬೆನ್ನಿನ ಹಿಂದೆ ಏನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಬಹುದು ಎಂದು ಅವರು ತಮ್ಮ ಎಚ್ಚರಿಕೆ ನೀಡಿದ್ದಾರೆ. ಏರ್​ಪಾಡ್ಸ್ (AirPods) ಮೂಲಕ ಇದು ಜೋರಾಗಿ ಮತ್ತು ಸ್ಪಷ್ಟವಾಗಿ ಬರುತ್ತದೆ. ಇದು ಸಂಪೂರ್ಣವಾಗಿ ಮರೆಯಾಗಿರುತ್ತದೆ. “ಮತ್ತು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯುದಿಲ್ಲ,” ಎಂದು ಆಕೆ ಹೇಳಿದ್ದಾರೆ.

ಅದು ಸರಿ. ಐಫೋನ್​ನಲ್ಲಿನ ಲೈವ್ ಲಿಸನ್ ಕಾರ್ಯವನ್ನು ಮತ್ತೊಂದು ಕೋಣೆಯಲ್ಲಿದ್ದಾಗ ಗುಟ್ಟಾಗಿ ಮಾತುಕತೆಗಳನ್ನು ಕೇಳಲು ಮೈಕ್ರೊಫೋನ್ ಆಗಿ ಬಳಸಬಹುದು. ಆಪಲ್ ವೆಬ್‌ಸೈಟ್ ಪ್ರಕಾರ, ಗ್ರಾಹಕರು ಗದ್ದಲದ ವಾತಾವರಣದಲ್ಲಿ ಚರ್ಚೆಯನ್ನು ಕೇಳಲು ಅಥವಾ ಕೋಣೆಯಾದ್ಯಂತ ಯಾರಾದರೂ ಮಾತನಾಡುವುದನ್ನು ಕೇಳಲು ಸಹಾಯ ಮಾಡುವುದಕ್ಕೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಐಫೋನ್‌ಗಳು, ಐಪ್ಯಾಡ್‌ಗಳು ಅಥವಾ ಐಪಾಡ್‌ಗಳನ್ನು ಮೈಕ್ರೊಫೋನ್‌ಗಳಾಗಿ ಮಾರ್ಪಡಿಸಲು ಲೈವ್ ಲಿಸನ್ ಅನ್ನು ಬಳಸಿಕೊಳ್ಳಬಹುದು. ಅದು ಏರ್‌ಪಾಡ್ಸ್, ಏರ್‌ಪಾಡ್ಸ್ ಪ್ರೊ, ಏರ್‌ಪಾಡ್ಸ್ ಮ್ಯಾಕ್ಸ್, ಪವರ್‌ಬೀಟ್ಸ್ ಪ್ರೊ, ಅಥವಾ ಬೀಟ್ಸ್ ಫಿಟ್ ಪ್ರೊಗೆ ಸಂಪರ್ಕಗೊಂಡಿರುವ ಸಂಭಾಷಣೆಗಳನ್ನು ಪ್ರಸಾರ ಮಾಡುತ್ತದೆ.

ಈ ವೈಶಿಷ್ಟ್ಯವನ್ನು ಬಳಸಲು, ಕೆಳಗೆ ಸ್ಲೈಡ್ ಮಾಡುವ ಮೂಲಕ ಕಂಟ್ರೋಲ್ ಸೆಂಟರ್​ ಸಂಪರ್ಕಿಸಿ ಮತ್ತು “ಕೇಳಿಸಿಕೊಳ್ಳುವ” (hearing) ಐಕಾನ್ ಮೇಲೆ ಟ್ಯಾಪ್ ಮಾಡಬೇಕು. ಆ ನಂತರ ಲೈವ್ ಲಿಸನ್ ಆಯ್ಕೆಯನ್ನು ಆನ್ ಮಾಡಬೇಕು. ಅದಾದ ಮೇಲೆ ಸಾಧನವನ್ನು ಕೋಣೆಯಲ್ಲಿ ಬಿಡಬಹುದು ಮತ್ತು ಮಾತನಾಡುವ ಯಾವುದನ್ನಾದರೂ ಆಲಿಸಬಹುದು. ಆದರೆ ಈ ಸಾಮರ್ಥ್ಯವು ಬ್ಲೂಟೂತ್ ಸಂಪರ್ಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ.

ಒಂದು ವೇಳೆ ನಿಮಗೂ ಈ ಬಗ್ಗೆ ಆತಂಕ ಇದ್ದರೆ ಮತ್ತು ಐಫೋನ್‌ನ ಲೈವ್ ಲಿಸನ್ ವೈಶಿಷ್ಟ್ಯವನ್ನು ನಿಮ್ಮ ವಿರುದ್ಧ ಬಳಸಲಾಗಿದೆಯೇ ಎಂದು ತಿಳಿಯಲು ಬಯಸಿದರೆ ಕಂಡುಹಿಡಿಯುವುದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ. ಲೈವ್ ಲಿಸನ್ ಅನ್ನು ಸಕ್ರಿಯಗೊಳಿಸಿದರೆ ಐಫೋನ್ ಪರದೆಯ ಮೇಲಿನ ಎಡ ಮೂಲೆಯಲ್ಲಿ ಕಿತ್ತಳೆ ಮೈಕ್ರೊಫೋನ್ ಐಕಾನ್ ಕಾಣಿಸಿಕೊಳ್ಳುತ್ತದೆ.

ರಿಪೇರಿ ಔಟ್‌ಲೆಟ್‌ನ ಟಾಮ್ ಪೀಟ್ ಪ್ರಕಾರ, ಕೇಳಲು ಕಷ್ಟವಾಗಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಈ ವೈಶಿಷ್ಟ್ಯವನ್ನು ರಚಿಸಲಾಗಿದೆ. “ಹಲವಾರು ಸ್ಪಷ್ಟವಾದ ‘ಬಳಕೆಗಳ’ ಹೊರತಾಗಿಯೂ ಈ ವೈಶಿಷ್ಟ್ಯವು ಕೇಳಲು ಕಷ್ಟವಾಗಿರುವ ಜನರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಅವರು ತಮ್ಮ ಫೋನ್ ಅನ್ನು ಶಬ್ದದ ಮೂಲದ ಬಳಿ ಇರಿಸಬಹುದು ಹಾಗೂ ದೂರದಿಂದಲೂ ಅದನ್ನು ಕೇಳಬಹುದು,” ಎಂದು ಅವರು ಹೇಳುತ್ತಾರೆ.

ಅಂದಹಾಗೆ ಟಿಕ್‌ಟಾಕ್‌ನಲ್ಲಿ ದಲಿಲಮೌಹಿಬ್ ಅವರ ವಿಡಿಯೋ 3 ಮಿಲಿಯನ್ ಲೈಕ್‌ಗಳನ್ನು ಸ್ವೀಕರಿಸಿದೆ.

ಇದನ್ನೂ ಓದಿ: Apple Event: ಭಾರತದಲ್ಲಿ ಆಪಲ್‌ ಮ್ಯಾಕ್‌ಬುಕ್‌ ಪ್ರೊ, ಏರ್​​ಪಾಡ್ಸ್ ಮಾಡೆಲ್‌ ಬಿಡುಗಡೆ: ಏನು ವಿಶೇಷತೆ?

Published On - 2:21 pm, Wed, 22 December 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ