ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ

ಆಪಲ್, ರೋಲೆಕ್ಸ್, ಮೆಕ್​ಡೊನಾಲ್ಡ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳು ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿವೆ. ಉಕ್ರೇನ್​ ಸಂಘರ್ಷದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.

ಆಪಲ್, ಪೆಪ್ಸಿ, ರೋಲೆಕ್ಸ್ ಸೇರಿದಂತೆ 300ಕ್ಕೂ ಹೆಚ್ಚು ಕಂಪೆನಿಗಳಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತ
ರಷ್ಯಾ ಅಧ್ಯಕ್ಷ ವ್ಲಾದಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ
Follow us
TV9 Web
| Updated By: Srinivas Mata

Updated on: Mar 09, 2022 | 6:31 PM

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವುದಕ್ಕಾಗಿ ರಷ್ಯಾ (Russia- Ukraine Crisis) ಜಾಗತಿಕವಾಗಿ ಖಂಡನೆಯನ್ನು ಎದುರಿಸುತ್ತಿದೆ. ಈ ಕೋಪವು ಪಾಶ್ಚಾತ್ಯ ದೇಶಗಳ ನಿರ್ಬಂಧಗಳಿಗೆ ಕಾರಣವಾಯಿತು ಮತ್ತು ಕಂಪೆನಿಗಳು ಮಾಸ್ಕೋ ಮತ್ತು ರಷ್ಯಾದ ಇತರ ನಗರಗಳಲ್ಲಿ ತಮ್ಮ ಮಳಿಗೆಗಳನ್ನು ಮುಚ್ಚಿದವು. ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಪ್ರಕಾರ, ಕಳೆದ ಎರಡು ವಾರಗಳಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ರಷ್ಯಾವನ್ನು ತೊರೆದಿವೆ. ಸ್ಪೆಕ್ಟೇಟರ್ ಇಂಡೆಕ್ಸ್ ಪ್ರಕಾರ, ಐಷಾರಾಮಿ ವಾಚ್ ಬ್ರ್ಯಾಂಡ್ ರೋಲೆಕ್ಸ್ ಇತ್ತೀಚೆಗೆ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಮೆಕ್​ ಡೊನಾಲ್ಡ್ಸ್ (McDonald’s), ಪಿಜ್ಜಾ ಹಟ್ (Pizza Hut) ಮತ್ತು ಪಾನೀಯಗಳ ತಯಾರಕ ಕೋಕಾ-ಕೋಲಾದಂಥದ್ದು ಈಗಾಗಲೇ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಉಕ್ರೇನ್‌ನ ಮೇಲೆ ರಷ್ಯಾ ದಾಳಿಯನ್ನು ವಿರೋಧಿಸಿದ ಕಾರ್ಪೊರೇಟ್​ಗಳಿಗೆ ಬೆಂಬಲವಾಗಿ ಇವುಗಳು ಸಹ ಸೇರ್ಪಡೆ ಆಗಿವೆ.

ಇನ್ನು ಈ ಮಧ್ಯೆ, ರಷ್ಯಾದ ಇಂಧನ ವಿರುದ್ಧ ಅಮೆರಿಕವು ರಷ್ಯಾದ ಇಂಧನ ಆಮದುಗಳ ಮೇಲೆ ತಕ್ಷಣದ ನಿಷೇಧವನ್ನು ವಿಧಿಸಿದ್ದು, ಇದರಿಂದಾಗಿ ತೈಲ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವನ್ನು ಉಂಟುಮಾಡಿದೆ. ಇದು ಮಂಗಳವಾರ ಸುಮಾರು ಶೇ 4ರಷ್ಟನ್ನು ಏರಿಕೆ ಮಾಡಿದೆ. ಫೆಬ್ರವರಿ 24ರಂದು ರಷ್ಯಾ ತನ್ನ ನೆರೆಯ ಉಕ್ರೇನ್​ ಮೇಲೆ ಆಕ್ರಮಣ ಮಾಡಿದ ನಂತರ ಬೆಲೆಗಳು ಶೇಕಡಾ 30ಕ್ಕಿಂತ ಹೆಚ್ಚಿವೆ. ರಷ್ಯಾ ದೇಶವು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ರಫ್ತುದಾರ – ಪಶ್ಚಿಮವು ನಿಷೇಧವನ್ನು ಜಾರಿಗೊಳಿಸಿದರೆ ವೆಚ್ಚವು ಮತ್ತಷ್ಟು ಗಗನಕ್ಕೇರುತ್ತದೆ ಎಂದು ಎಚ್ಚರಿಸಿದೆ. 2022ರ ಅಂತ್ಯದ ವೇಳೆಗೆ ರಷ್ಯಾದ ತೈಲದ ಆಮದುಗಳನ್ನು ಹಂತಹಂತವಾಗಿ ನಿಲ್ಲಿಸುವ ಗುರಿಯ ಬಗ್ಗೆ ಬ್ರಿಟನ್ ಹೇಳಿದೆ. ಯುರೋಪಿಯನ್ ಒಕ್ಕೂಟ (EU) ಈ ವರ್ಷ ರಷ್ಯಾದ ಅನಿಲದ ಮೇಲಿನ ಅವಲಂಬನೆಯನ್ನು ಮೂರನೇ ಎರಡರಷ್ಟು ಕಡಿತಗೊಳಿಸಲು ಯೋಜಿಸಿದೆ.

ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಕೆಲವು ದೊಡ್ಡ ಕಂಪೆನಿಗಳ ಪಟ್ಟಿ ಇಲ್ಲಿದೆ: ರೋಲೆಕ್ಸ್

ಮೆಕ್ ಡೊನಾಲ್ಡ್ಸ್

ಕೋಕಾ ಕೋಲಾ

ಪೆಪ್ಸಿಕೋ

ಸ್ಟಾರ್‌ಬಕ್ಸ್

ನೆಟ್‌ಫ್ಲಿಕ್ಸ್

ಟಿಕ್ ಟಾಕ್

ಸ್ಯಾಮ್ಸಂಗ್

ವೀಸಾ

ಮಾಸ್ಟರ್ ಕಾರ್ಡ್

ಅಮೆರಿಕನ್ ಎಕ್ಸ್​ಪ್ರೆಸ್

ಜನರಲ್ ಎಲೆಕ್ಟ್ರಿಕ್

ಜನರಲ್ ಮೋಟಾರ್ಸ್

ಫೋರ್ಡ್ ಮೋಟಾರ್ ಕಂ

ಫೋಕ್ಸ್‌ವ್ಯಾಗನ್ AG

ಟೊಯೊಟಾ ಮೋಟಾರ್ ಕಾರ್ಪೊರೇಶನ್

ವೋಲ್ವೋ ಎಬಿ

ಡೈಮ್ಲರ್ ಟ್ರಕ್ ಹೋಲ್ಡಿಂಗ್ AG

ಶೆಲ್

ಯೂನಿಲಿವರ್

ಲೆವಿ ಸ್ಟ್ರಾಸ್ ಮತ್ತು ಕಂ

ಮೈಕ್ರೋಸಾಫ್ಟ್

ಆಪಲ್

ನೈಕ್

ಕಾಂಡೆ ನಾಸ್ಟ್

ಹಾಲಿವುಡ್ ಸ್ಟುಡಿಯೋಗಳಾದ ವಾಲ್ಟ್​ ಡಿಸ್ನಿ (Walt Disney Co), ಪಾರಾಮೌಂಟ್ ಪಿಕ್ಚರ್ಸ್ (Paramount Pictures), ಸೋನಿ ಕಾರ್ಪ್ (Sony Corp), ಮತ್ತು ವಾರ್ನರ್ ಮೀಡಿಯಾ (AT&T Inc’s WarnerMedia) ಮತ್ತು ಯೂನಿವರ್ಸಲ್ ಪಿಕ್ಚರ್ಸ್ (Comcast Corp’s Universal Pictures) ಕೂಡ ರಷ್ಯಾದಲ್ಲಿ ಚಲನಚಿತ್ರಗಳ ಬಿಡುಗಡೆಯನ್ನು ಸ್ಥಗಿತಗೊಳಿಸಿವೆ ಅಥವಾ ಮುಂದೂಡಿವೆ.

ಇದನ್ನೂ ಓದಿ: ರಷ್ಯಾ – ಉಕ್ರೇನ್​ ಯುದ್ಧ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ

ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ