Bengaluru Tech Summit: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ‘ಬೆಂಗಳೂರು ಟೆಕ್ ಸಮಿಟ್’ ಕಲರವ
ಇಂದಿನಿಂದ ಆರಂಭವಾಗಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಒಟ್ಟು 30 ದೇಶಗಳು ಭಾಗಿಯಾಗಲಿವೆ. ಮೊದಲ ಬಾರಿಗೆ ನಡೆಯುತ್ತಿರುವ ಇಂಡೋ-US ಕಾನ್‌ಕ್ಲೇವ್ ಸೇರಿದಂತೆ ಟೆಕ್ ಸಮಿಟ್‌ನಲ್ಲಿ (Bengaluru Tech Summit -BTS) 75 ಪ್ಯಾನಲ್ ಡಿಸ್ಕಷನ್ ನಡೆಯಲಿವೆ. ನೀತಿಸಂಹಿತೆ ಹಿನ್ನೆಲೆ ಒಪ್ಪಂದಗಳ ಘೋಷಣೆ ಮಾಡುವುದಿಲ್ಲ.
ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ‘ಬೆಂಗಳೂರು ಟೆಕ್ ಸಮಿಟ್’ ಕಲರವ ಕೇಳಿಬರಲಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು 24ನೇ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ಘಾಟಿಸಲಿದ್ದಾರೆ. ಸಮಿಟ್‌ನಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಗಮನಾರ್ಗಹವೆಂದರೆ ಟೆಕ್ ಸಮಿಟ್ ಬಹುತೇಕ ವರ್ಚುವಲ್ ಆಗಿ ನಡೆಯಲಿದೆ. ಟೆಕ್ ಸಮಿಟ್‌ನಲ್ಲಿ ಇಸ್ರೇಲ್ ಮತ್ತು ಆಸ್ಟ್ರೇಲಿಯಾ ದೇಶಗಳ ಪ್ರಧಾನಿಗಳು ಭಾಗಿಯಾಗಲಿದ್ದಾರೆ.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಒಟ್ಟು 30 ದೇಶಗಳು ಭಾಗಿಯಾಗಲಿವೆ. ಮೊದಲ ಬಾರಿಗೆ ನಡೆಯುತ್ತಿರುವ ಇಂಡೋ-US ಕಾನ್‌ಕ್ಲೇವ್ ಸೇರಿದಂತೆ ಟೆಕ್ ಸಮಿಟ್‌ನಲ್ಲಿ (Bengaluru Tech Summit -BTS) 75 ಪ್ಯಾನಲ್ ಡಿಸ್ಕಷನ್ ನಡೆಯಲಿವೆ. ನೀತಿಸಂಹಿತೆ ಹಿನ್ನೆಲೆ ಒಪ್ಪಂದಗಳ ಘೋಷಣೆ ಮಾಡುವುದಿಲ್ಲ.
24ನೇ ಬೆಂಗಳೂರು ಟೆಕ್ ಶೃಂಗವು (BTS 2021 Virtual Event) ವರ್ಚುಯಲ್ ಈವೆಂಟ್ ಆಗಿ ಇದೇ ನವೆಂಬರ್ 17 ರಿಂದ 19 ವರಗೆಗೆ ನಡೆಯಲಿದೆ. ತಂತ್ರಜ್ಞಾನ ಆವಿಷ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯಾವ ರೀತಿ ತಲುಪುತ್ತದೆ ಅಂತ ನಾವು ನೋಡಿದ್ದೇವೆ. ಕೋವಿಡ್ ಸವಾಲಿನ ಮಧ್ಯದಲ್ಲೂ ವಿವಿಧ ದೇಶದ ರಾಯಭಾರಿಗಳು ಬಂದು ಭಾಗಿಯಾಗಿದ್ದಾರೆ. ತಮ್ಮ ಯೋಚನೆಗಳನ್ನ ಹೇಳಿದ್ದಾರೆ. ಈ ಬಾರಿಯ ಬೆಂಗಳೂರು ಟೆಕ್ ಶೃಂಗದಲ್ಲಿ 17 ಸೆಷನ್‌ಗಳು ತಂತ್ರಜ್ಞಾನ ಆವಿಷ್ಕಾರ ಆರೋಗ್ಯ, ಶಿಕ್ಷಣ, ವ್ಯವಸಾಯ ಮುಂದಾದ ಕ್ಷೇತ್ರಗಳ ಕುರಿತು ಆಗುತ್ತಿದೆ ಎಂದು ಐಟಿ-ಬಿಟಿ ಖಾತೆ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
Published On - 7:31 am, Wed, 17 November 21