PSU Privitisation: ಎರಡು ಪಿಎಸ್​ಯು ಬ್ಯಾಂಕ್​ಗಳ ಖಾಸಗೀಕರಣ ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿಕೆ ಸಾಧ್ಯತೆ

| Updated By: Srinivas Mata

Updated on: Aug 02, 2021 | 6:19 PM

ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಖಾಸಗೀಕರಣವನ್ನು 2023ರ ಹಣಕಾಸು ವರ್ಷಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

PSU Privitisation: ಎರಡು ಪಿಎಸ್​ಯು ಬ್ಯಾಂಕ್​ಗಳ ಖಾಸಗೀಕರಣ ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿಕೆ ಸಾಧ್ಯತೆ
ಸಂಸತ್ ಭವನ (ಸಾಂದರ್ಭಿಕ ಚಿತ್ರ)
Follow us on

ಭಾರತ ಸರ್ಕಾರವು ಮಾಡಬೇಕು ಎಂದುಕೊಂಡಿದ್ದ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಷೇರಿನ ಪಾಲು ಮಾರಾಟವನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಬಹುದು ಎನ್ನಲಾಗಿದೆ. ಈ ವಹಿವಾಟಿಗೆ ಸಂಬಂಧಿಸಿದಂತೆ ಕಾನೂನು ಬದಲಾವಣೆಗಳಿಗಾಗಿ ಸಂಸತ್​ನಿಂದ ಸರ್ಕಾರವು ಅನುಮತಿ ಪಡೆಯಬೇಕಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ ಎಂದು ಪ್ರಮುಖ ಇಂಗ್ಲಿಷ್ ವಾಣಿಜ್ಯ ಮಾಧ್ಯಮ ವರದಿ ಮಾಡಿದೆ. ಈ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ ವಿಧಿ-ವಿಧಾನಗಳಿಗೆ ಜನಪ್ರತಿನಿಧಿಗಳಿಂದ ಅಂತಿಮ ಮುದ್ರೆ ಪಡೆಯಬೇಕಿದೆ. ಇದಕ್ಕಾಗಿ ಸ್ವಲ್ಪ ಸಮಯ ಹಿಡಿಯಲಿದ್ದು, ಈ ವರ್ಷದಲ್ಲಿ ಪ್ರಕ್ರಿಯೆ ಮುಗಿಯಲಿದೆ ಎಂದು ಮಾಹಿತಿ ಇನ್ನೂ ಬಹಿರಂಗ ಆಗದ ಹಿನ್ನೆಲೆಯಲ್ಲಿ ಮೂಲಗಳು ಸಹ ತಮ್ಮ ಗುರುತು ಹೊರಬರಬಾರದು ಎಂದು ಮನವಿ ಮಾಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

2022ರ ಮಾರ್ಚ್​ ಹೊತ್ತಿಗೆ ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್​ಗಳು ಖರೀದಿದಾರರನ್ನು ಕೇಳಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಹೇಳಿರುವಂತೆ, ಏಪ್ರಿಲ್​ 1ನೇ ತಾರೀಕಿನಿಂದ ಶುರುವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಸಿದ್ಧಪಡಿಸುವ ವೇಳೆ ತಿಳಿಸಿದ್ದರು. ಇನ್ನು ಹಣಕಾಸು ಸಚಿವಾಲಯದ ವಕ್ತಾರರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಲಭ್ಯರಾಗಿಲ್ಲ ಎಂದು ತಿಳಿದುಬಂದಿದೆ.

ದೇಶದ ಎರಡನೇ ಅತಿದೊಡ್ಡ ಸರ್ಕಾರಿ ರಿಫೈನರ್​ನಲ್ಲಿನ ಪ್ರಮುಖ ಷೇರಿನ ಪಾಲನ್ನು ಮಾರಾಟ ಮಾಡುವು ಯೋಜನೆ ಹಾಕಿಕೊಂಡಿತ್ತು. ಅದು ಕೂಡ ಈಗ ನಿಧಾನ ಆಗುತ್ತಿದೆ. ಈ ವಹಿವಾಟು 2021ರಲ್ಲಿ ನಡೆಯುವ ಸಾಧ್ಯತೆ ಇಲ್ಲ. ಬದಲಿಗೆ ಮುಂದಿನ ವರ್ಷದ ಆರಂಭದಲ್ಲಿ ಆಗಬಹುದು ಎಂದು ಬ್ಲೂಮ್​ಬರ್ಗ್ ನ್ಯೂಸ್​ನಿಂದ ಜುಲೈನಲ್ಲಿ ವರದಿ ಮಾಡಲಾಗಿದೆ. ಲೈಫ್​ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪಬ್ಲಿಕ್ ಆಫರ್ ಸೇರಿದಂತೆ ಇತರ ಆಸ್ತಿಗಳ ಮಾರಾಟಕ್ಕೆ ಮುಂದಾಗಲಿದೆ. ಇದರಿಂದಾಗಿ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಆಗುವ ಕೊರತೆಯನ್ನು ಆ ಮೂಲಕ ಸರಿತೂಗಿಸುವ ಪ್ರಯತ್ನಕ್ಕೆ ಸಹಾಯ ಆಗುತ್ತದೆ.

ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾಸಗೀಕರಣಗೊಳ್ಳುವುದು ಹೆಚ್ಚುಕಡಿಮೆ ಖಚಿತ

(Central Government May Defer Privatisation Of 2 PSU Banks To FY23)