Ola Electric Scooter: ಸ್ವಾತಂತ್ರ್ಯ ದಿನಕ್ಕೆ ಮುನ್ನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ; ಕಂಪೆನಿ ಸಿಇಒ ಹೇಳಿದ್ದೇನು?

Ola Electric Scooter: ಸ್ವಾತಂತ್ರ್ಯ ದಿನಕ್ಕೆ ಮುನ್ನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ; ಕಂಪೆನಿ ಸಿಇಒ ಹೇಳಿದ್ದೇನು?
ಇನ್ನು ದೆಹಲಿಯಲ್ಲಿ ಓಲಾ S1 85,099 ರೂ. ಹಾಗೆಯೇ ಓಲಾ S1 ಪ್ರೊ ಬೆಲೆ 110,149 ರೂ. ಅತ್ತ ಮಹಾರಾಷ್ಟ್ರದಲ್ಲೂ ಓಲಾ ಸ್ಕೂಟರ್ ಮೇಲೆ ಸಬ್ಸಿಡಿ ಇದ್ದು, ಅಲ್ಲಿ 94,999 ರೂ. ಹಾಗೂ 124,999 ರೂ.ನಲ್ಲಿ ಓಲಾ ಸ್ಕೂಟರ್​ ಲಭ್ಯವಿದೆ.

Electric Scooter Launch Date: ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕದ ಬಗ್ಗೆ ಕಂಪೆನಿಯ ಸಿಇಒ ಘೋಷಣೆ ಮಾಡಿದ್ದು, ವಿವರಗಳಿವೆ.

TV9kannada Web Team

| Edited By: Srinivas Mata

Aug 03, 2021 | 11:11 AM

ಓಲಾ ಕ್ಯಾಬ್ಸ್ ಸ್ಥಾಪಕ ಮತ್ತು ಓಲಾ ಎಲೆಕ್ಟ್ರಿಕ್ ಸಿಇಒ ಭಾವೇಶ್ ಅಗರ್​ವಾಲ್ ಮಂಗಳವಾರ ಘೋಷಣೆ ಮಾಡಿರುವಂತೆ, ಭಾರತದ ಸ್ವಾತಂತ್ರ್ಯ ದಿನಾಚರಣೆ ದಿನವಾದ ಆಗಸ್ಟ್​ 15ನೇ ತಾರೀಕಿನ ಮುನ್ನ ಬಹು ನಿರೀಕ್ಷಿತವಾದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಕಾರ್ಯಕ್ರಮದ ಯೋಜನೆ ಹಾಕಿಕೊಂಡಿದೆ. “ಮುಂದಿನ ದಿನಗಳಲ್ಲಿ ಉತ್ಪನ್ನದ ಪೂರ್ತಿ ವೈಶಿಷ್ಟ್ಯ, ಮಾಹಿತಿ ಹಾಗೂ ಲಭ್ಯತೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದೇವೆ. ಇದಕ್ಕಾಗಿ ಎದುರು ನೋಡುತ್ತಿದ್ದೇವೆ! ಯಾರೆಲ್ಲ ನಮ್ಮ ಸ್ಕೂಟರ್​ ಅನ್ನು ಕಾಯ್ದಿರಿಸಿದ್ದೀರೋ ಎಲ್ಲರಿಗೂ ಧನ್ಯವಾದ!,” ಎಂದು ಟ್ವೀಟ್​ನಲ್ಲಿ ಅವರು ಹೇಳಿದ್ದಾರೆ. ಕಳೆದ ತಿಂಗಳು ಪ್ರಕ್ರಿಯೆ ಆರಂಭಿಸಿದ 24 ಗಂಟೆಯೊಳಗಾಗಿ ಓಲಾ ಎಲೆಕ್ಟ್ರಿಕ್​ 1 ಲಕ್ಷ ಬುಕ್ಕಿಂಗ್ ಪಡೆದಿತ್ತು. ಜುಲೈ 15ನೇ ತಾರೀಕಿನ ಸಂಜೆ ತನ್ನ ಎಲೆಕ್ಟ್ರಿಕ್ ಸ್ಕೂಟರ್​ಗಳಿಗೆ ಬುಕ್ಕಿಂಗ್ ಆರಂಭಿಸಿತ್ತು.

ವೇಗ, ರೇಂಜ್​, ಬೂಟ್​ ಸ್ಪೇಸ್ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಚೂಣಿ ಗುಣಮಟ್ಟದ್ದಾಗಿರುತ್ತದೆ ಎಂದು ಓಲಾ ಹೇಳಿದೆ. ಇನ್ನು ಈ ಮಾಡೆಲ್ ಬೆಲೆ ಕೂಡ ಸ್ಪರ್ಧಾತ್ಮಕವಾಗಿ ಇರಲಿದ್ದು, ವ್ಯಾಪಕವಾಗಿ ಕೈಗೆ ಸಿಗಲಿದೆ. ಇಡೀ ವಿಶ್ವಕ್ಕಾಗಿ ಭಾರತದಿಂದ ಮಾಡಲಿರುವ ಸ್ಕೂಟರ್ ಇದು. ಕಂಪೆನಿಯ ದ್ವಿಚಕ್ರ ವಾಹನ ಕೈಗಾರಿಕೆಯಲ್ಲಿ ಉತ್ಪಾದನೆ ಆಗುತ್ತದೆ. ಈ ಇದು ತಮಿಳುನಾಡಿನಲ್ಲೂ ನಿರ್ಮಿಸಲಾಗುತ್ತದೆ.

ಮೊದಲ ಹಂತವಾಗಿ ಓಲಾ ಫ್ಯೂಚರ್​ಫ್ಯಾಕ್ಟರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಕಾರ್ಯ ನಿರ್ವಹಣೆ ಆರಂಭವಾಗಲಿದೆ. ಮುಂದಿನ ಒಂದು ವರ್ಷದಲ್ಲಿ 1 ಕೋಟಿ ವಾಹನ ಪೂರ್ಣ ಸಾಮರ್ಥ್ಯದೊಂದಿಗೆ ಮುಂದಿನ ವರ್ಷ ನಿರ್ಮಾಣ ಆಗಲಿದೆ. ಓಲಾ ಸ್ಕೂಟರ್​ ಹತ್ತು ಬಣ್ಣದಲ್ಲಿ ಲಭ್ಯ ಇದೆ. ಪೆಟ್ರೋಲ್​ ದರದಲ್ಲಿ ಭಾರೀ ಮಟ್ಟದಲ್ಲಿ ಏರಿಕೆ ಆಗಿದ್ದು, ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಜಾಸ್ತಿ ಆಗಿದೆ. ಆದ್ದರಿಂದ ಗ್ರಾಹಕರ ಕಡೆಯಿಂದ ಅಭೂತಪೂರ್ವವಾದ ಸ್ಪಂದನೆ ಸಿಕ್ಕಿದೆ. ಇನ್ನು ದೇಶದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಚಾರ್ಜಿಂಗ್​ ಸೇರಿ ಮೊದಲದ ಸೌಕರ್ಯಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

(Ola Electric Scooter Launch Date And Other Details Announced By Company CEO Bahvish Aggarwal)

Follow us on

Related Stories

Most Read Stories

Click on your DTH Provider to Add TV9 Kannada