PSU Privitisation: ಎರಡು ಪಿಎಸ್ಯು ಬ್ಯಾಂಕ್ಗಳ ಖಾಸಗೀಕರಣ ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿಕೆ ಸಾಧ್ಯತೆ
ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಖಾಸಗೀಕರಣವನ್ನು 2023ರ ಹಣಕಾಸು ವರ್ಷಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಭಾರತ ಸರ್ಕಾರವು ಮಾಡಬೇಕು ಎಂದುಕೊಂಡಿದ್ದ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಷೇರಿನ ಪಾಲು ಮಾರಾಟವನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಬಹುದು ಎನ್ನಲಾಗಿದೆ. ಈ ವಹಿವಾಟಿಗೆ ಸಂಬಂಧಿಸಿದಂತೆ ಕಾನೂನು ಬದಲಾವಣೆಗಳಿಗಾಗಿ ಸಂಸತ್ನಿಂದ ಸರ್ಕಾರವು ಅನುಮತಿ ಪಡೆಯಬೇಕಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ ಎಂದು ಪ್ರಮುಖ ಇಂಗ್ಲಿಷ್ ವಾಣಿಜ್ಯ ಮಾಧ್ಯಮ ವರದಿ ಮಾಡಿದೆ. ಈ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ ವಿಧಿ-ವಿಧಾನಗಳಿಗೆ ಜನಪ್ರತಿನಿಧಿಗಳಿಂದ ಅಂತಿಮ ಮುದ್ರೆ ಪಡೆಯಬೇಕಿದೆ. ಇದಕ್ಕಾಗಿ ಸ್ವಲ್ಪ ಸಮಯ ಹಿಡಿಯಲಿದ್ದು, ಈ ವರ್ಷದಲ್ಲಿ ಪ್ರಕ್ರಿಯೆ ಮುಗಿಯಲಿದೆ ಎಂದು ಮಾಹಿತಿ ಇನ್ನೂ ಬಹಿರಂಗ ಆಗದ ಹಿನ್ನೆಲೆಯಲ್ಲಿ ಮೂಲಗಳು ಸಹ ತಮ್ಮ ಗುರುತು ಹೊರಬರಬಾರದು ಎಂದು ಮನವಿ ಮಾಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
2022ರ ಮಾರ್ಚ್ ಹೊತ್ತಿಗೆ ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ಗಳು ಖರೀದಿದಾರರನ್ನು ಕೇಳಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಹೇಳಿರುವಂತೆ, ಏಪ್ರಿಲ್ 1ನೇ ತಾರೀಕಿನಿಂದ ಶುರುವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಸಿದ್ಧಪಡಿಸುವ ವೇಳೆ ತಿಳಿಸಿದ್ದರು. ಇನ್ನು ಹಣಕಾಸು ಸಚಿವಾಲಯದ ವಕ್ತಾರರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಪಡೆಯುವುದಕ್ಕೆ ಲಭ್ಯರಾಗಿಲ್ಲ ಎಂದು ತಿಳಿದುಬಂದಿದೆ.
ದೇಶದ ಎರಡನೇ ಅತಿದೊಡ್ಡ ಸರ್ಕಾರಿ ರಿಫೈನರ್ನಲ್ಲಿನ ಪ್ರಮುಖ ಷೇರಿನ ಪಾಲನ್ನು ಮಾರಾಟ ಮಾಡುವು ಯೋಜನೆ ಹಾಕಿಕೊಂಡಿತ್ತು. ಅದು ಕೂಡ ಈಗ ನಿಧಾನ ಆಗುತ್ತಿದೆ. ಈ ವಹಿವಾಟು 2021ರಲ್ಲಿ ನಡೆಯುವ ಸಾಧ್ಯತೆ ಇಲ್ಲ. ಬದಲಿಗೆ ಮುಂದಿನ ವರ್ಷದ ಆರಂಭದಲ್ಲಿ ಆಗಬಹುದು ಎಂದು ಬ್ಲೂಮ್ಬರ್ಗ್ ನ್ಯೂಸ್ನಿಂದ ಜುಲೈನಲ್ಲಿ ವರದಿ ಮಾಡಲಾಗಿದೆ. ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪಬ್ಲಿಕ್ ಆಫರ್ ಸೇರಿದಂತೆ ಇತರ ಆಸ್ತಿಗಳ ಮಾರಾಟಕ್ಕೆ ಮುಂದಾಗಲಿದೆ. ಇದರಿಂದಾಗಿ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಆಗುವ ಕೊರತೆಯನ್ನು ಆ ಮೂಲಕ ಸರಿತೂಗಿಸುವ ಪ್ರಯತ್ನಕ್ಕೆ ಸಹಾಯ ಆಗುತ್ತದೆ.
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾಸಗೀಕರಣಗೊಳ್ಳುವುದು ಹೆಚ್ಚುಕಡಿಮೆ ಖಚಿತ
(Central Government May Defer Privatisation Of 2 PSU Banks To FY23)