ಉತ್ತಮ ಆರೋಗ್ಯವನ್ನು ಹೊಂದಲು ಮಿತವಾಗಿ ಬಾದಾಮಿ ಸೇವನೆ ಮಾಡಲಾಗುವುದು. ಭಾರತೀಯರು ಬಾದಾಮಿಯನ್ನು ಹೇರಳವಾಗಿ ಬಳಸುತ್ತಾರೆ. ಹೃದಯ ಆರೋಗ್ಯಕ್ಕೂ ಬಾದಾಮಿ ಸೇವನೆ ಅತ್ಯತ್ತಮ. ಹಾಗಾದರೆ ಬಾದಮಿಯಿಂದ ಏನೇನು ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.
ಒಂದು ಕಪ್ ಬಾದಾಮಿಯಲ್ಲಿ ಅಂದರೆ ಸುಮಾರು 20 ಬಾದಾಮಿ ಬೀಜಗಳಲ್ಲಿ ಶೇ.16 ರಷ್ಟು ಫೈಬರ್ ಅಂಶ, ವಿಟಮಿನ್ ಇ ಗುಣ, ಶೇ.20ರಷ್ಟು ಮೆಗ್ನೀಶಿಯಂ ಹಾಗೂ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಷಿಯಮ್ ಅಂಶಗಳನ್ನು ಒಳಗೊಂಡಿರುತ್ತದೆ.
ರೋಗನಿರೋಧಕ ಶಕ್ತಿ, ಊರಿಯೂತ ಸಮಸ್ಯೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಬಾದಾಮಿ ಸೇವನೆ ಸಹಾಯವಾಗುತ್ತದೆ. ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕೆಲಸ ಮಾಡುತ್ತದೆ. ತೂಕ ನಿರ್ವಹಣೆ, ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಲ್ಲಿ ಸಹಾಯ ಮಾಡುತ್ತದೆ ಎಂಬುದು ಅಧ್ಯಯನದ ಮೂಲಕ ತಿಳಿದು ಬಂದಿದೆ.
ಹೃದಯ ರಕ್ಷಣೆಗೆ ಬೇಕಾದ ಎಚ್ಡಿಎಲ್ ಕೊಲೆಸ್ಟ್ರಾಲ್ಅನ್ನು ಕಾಪಾಡಿಕೊಳ್ಳಲು ಅಥವಾ ಹೆಚ್ಚಿಸಲು ಬಾದಾಮಿ ಸೇವನೆ ಉತ್ತಮ. ಹಾಗೂ ದೇಹಕ್ಕೆ ಬೇಡದ ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ರಕ್ತದೊತ್ತಡದಂಥಹ ಸಮಸ್ಯೆಯನ್ನು ನಿಭಾಯಿಸಲು ಬಾದಾಮಿ ಸೇವನೆ ಉತ್ತಮ.
ಬಾದಾಮಿ ಸೇವನೆಯು ತೂಕದ ನಿಯಂತ್ರಣ ಮಾಡಲು ಸಹಾಯಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆಯನ್ನು ಬಾದಾಮಿ ಹೊಂದಿರುವ ಕೊಬ್ಬು ಮತ್ತು ನಾರಿನಂಶದೊಂದಿಗೆ ಸಮತೋಲನದಲ್ಲಿರಿಸಲು ಸಹಾಯಕವಾಗಿದೆ. ಇದೊಂದೇ ಅಲ್ಲದೇ ಮಲಬದ್ಧತೆಯನ್ನು ಕಡಿಮೆ ಮಾಡಲು ಹಾಗೂ ತೂಕ ನಿಯಂತ್ರಿಸಿಕೊಳ್ಳಲು ಸಹಾಯಕಾರಿಯಾಗಿದೆ.
ಬಾದಾಮಿಯಲ್ಲಿ ಕಂಡು ಬರುವ ಖನಿಜ ಅಂಶವು ಮೂಳಗಳನ್ನು ಬಲಿಷ್ಠಗೊಳಿಸುತ್ತದೆ. ಹಾಗೂ ದವಡೆ, ಹಲ್ಲಿನಂತಹ ಭಾಗವನ್ನು ಗಟ್ಟಿ ಮಾಡುತ್ತದೆ. ಮೂಳೆಗಳ ಬಲಿಷ್ಠದ ಜತೆಗೆ ರಕ್ತದೊತ್ತಡದಂತಹ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಸಾಧ್ಯ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬಾದಾಮಿ ಸೇವನೆ ಸಹಾಯಕವಾಗಿದೆ. ಹಿತಮಿತವಾದ ಸೇವನೆಯಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಿ.
ಇದನ್ನೂ ಓದಿ:
ಬಾದಾಮಿ ಕ್ಷೇತ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳ; ನೆರವಿಗೆ ಧಾವಿಸಿದ ಸಿದ್ದರಾಮಯ್ಯ