ಭಾರತ ಮುಳುಗಿಹೋಗಿಲ್ಲ; ಕಾಂಗ್ರೆಸ್ ನಾಯಕ ಚಿದಂಬರಂ ಬೆವರಿಳಿಯುವಂತೆ ಬಿಜೆಪಿ ಸಾಧನೆ ತೆರೆದಿಟ್ಟ ಅನುರಾಗ್ ಠಾಕೂರ್

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ಬಗ್ಗೆ ಎತ್ತಿರುವ ಆಕ್ಷೇಪಕ್ಕೆ ಒಂದೊಂದಕ್ಕೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅಂಕಿ-ಅಂಶದ ಸಹಿತ ಉತ್ತರ ನೀಡಿದ್ದಾರೆ.

ಭಾರತ ಮುಳುಗಿಹೋಗಿಲ್ಲ; ಕಾಂಗ್ರೆಸ್ ನಾಯಕ ಚಿದಂಬರಂ ಬೆವರಿಳಿಯುವಂತೆ ಬಿಜೆಪಿ ಸಾಧನೆ ತೆರೆದಿಟ್ಟ ಅನುರಾಗ್ ಠಾಕೂರ್
ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jun 02, 2021 | 9:04 PM

ಭಾರತದ ಆರ್ಥಿಕತೆ ಬಗ್ಗೆ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮಾಡಿರುವ ಆರೋಪಗಳಿಗೆ ಹಣಕಾಸು ಖಾತೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಅಂಕಿ- ಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ. ಇವತ್ತಿನ ಕಷ್ಟಕರ ಸನ್ನಿವೇಶದಲ್ಲಿಯೂ ಸ್ಥಿರವಾದ ಸುಧಾರಣೆ ಕ್ರಮಗಳ ಮೂಲಕ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದೆ. ಆದರೆ ಕಣ್ಣೆದುರು ಕಾಣುತ್ತಿರುವ ಸಂಗತಿಗಳನ್ನು ನಿರ್ಲಕ್ಷಿಸಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಸಂಬಂಧವೇ ಪಡದ ವಿಷಯಗಳನ್ನು ಪ್ರಸ್ತಾಪಿಸುತ್ತಾ ಇರುವುದು ನನಗೇನೂ ಅಚ್ಚರಿ ತರುತ್ತಿಲ್ಲ. ಏಕೆಂದರೆ ಕಾಂಗ್ರೆಸ್ ನಾಯಕತ್ವ ಕೂಡ ಈ ರೀತಿಯ ಆಧಾರರಹಿತ ಧೋರಣೆಯನ್ನು ವರ್ಷಗಳಿಂದ ಬೆಂಬಲಿಸುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ.

2020- 21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಮಾಣ ಶೇ 24.4ರಷ್ಟು ಕುಗ್ಗಿತ್ತು. ಅದೇ FY21 ನಾಲ್ಕನೇ ತ್ರೈಮಾಸಿಕದಲ್ಲಿ ಶೇ 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಸ್ಥಿರವಾದ ಸುಧಾರಣೆಗಳು ಮತ್ತು ಪ್ರಬಲವಾದ ಮೂಲಭೂತ ಅಂಶಗಳು ಭಾರತದ ಶೀಘ್ರ ಚೇತರಿಕೆಯನ್ನು ಖಾತ್ರಿ ಪಡಿಸಿದೆ. ಭಾರತೀಯ ಉದ್ಯಮಿಗಳು, ಸಣ್ಣ ವ್ಯವಹಾರದವರು, ವರ್ತಕರು ಮತ್ತು ಎಂಎಸ್​ಎಂಇಗಳ ಚೇತರಿಕೆ ಬಗ್ಗೆ ಪಿ. ಚಿದಂಬರಂ ಅವರು ಗುಮಾನಿ ವ್ಯಕ್ತಪಡಿಸಿದ್ದರು. ಆದರೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು 2021-22ರಲ್ಲಿ ಭಾರತವು ಶೇ 12.5ರಷ್ಟು ಬೆಳವಣಿಗೆ ದಾಖಲಿಸುವ ಅಂದಾಜು ಮಾಡಿವೆ. ಎರಡಂಕಿಯ ಬೆಳವಣಿಗೆ ದಾಖಲಿಸುವ ಪ್ರಮುಖ ಆರ್ಥಿಕತೆ ಎಂದು ಗುರುತಿಸಿಕೊಂಡಿರುವುದು ಭಾರತ ಮಾತ್ರ ಎಂದು ಠಾಕೂರ್ ಹೇಳಿದ್ದಾರೆ.

ಇನ್ನೂ ಮುಂದುವರಿದು, ಚಿದಂಬರಂ ಅವರನ್ನು ಆರ್ಥಿಕತೆ ಬಗ್ಗೆ ಪ್ರಶ್ನಿಸಿದ್ದಾರೆ. ಭಾರತೀಯ ಆರ್ಥಿಕತೆಯು ಈಗಿನ ಸನ್ನಿವೇಶಕ್ಕೆ ಹೋಲಿಸಿದರೆ ಪ್ರತ್ಯೇಕವಾಗಿರುವ ದ್ವೀಪವೇ; ಬೇರೆ ಯಾವುದೇ ಆರ್ಥಿಕತೆಯ ಜಿಡಿಪಿಯು ಕುಗ್ಗಿಲ್ಲವೆ? ಫ್ರಾನ್ಸ್, ಜರ್ಮನಿ, ಇಟಲಿ, ಯುನೈಟೆಡ್ ಕಿಂಗ್​ಡಮ್ ಕ್ರಮವಾಗಿ ಶೇ 8.2, ಶೇ 4.9, ಶೇ 8.9 ಮತ್ತು 9.9ರಷ್ಟು ಕುಗ್ಗಿರುವುದು ನಿಮಗೆ ಗೊತ್ತಿಲ್ಲವೆ? ಇನ್ನು ಕಳೆದ ವರ್ಷದಲ್ಲಿ ಕೆನಡಾ, ರಷ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕದ ಜಿಡಿಪಿ ಕೂಡ ಕುಗ್ಗಿವೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ​ ವಿಶ್ವವೇ ತಲ್ಲಣಿಸಿರುವಾಗ ಭಾರತವು ಅದನ್ನು ತಡೆದುಕೊಂಡು ನಿಂತಿದೆ. ಭಾರತವೇ ಮುಳುಗಿಹೋಯಿತು ಎಂದು ಭವಿಷ್ಯ ಹೇಳುವುದನ್ನು ಚಿದಂಬರಂ ನಿಲ್ಲಿಸಬೇಕು. ಲಾಕ್​ಡೌನ್​ನಿಂದ ಜೀವಗಳು ಉಳಿದಿವೆ. ನಿಧಾನವಾಗಿ ಅನ್​ಲಾಕ್​ ಮಾಡುತ್ತಿರುವುರಿಂದ ಚೇತರಿಕೆಗೆ ಅವಕಾಶ ಮಾಡಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

P Chidambaram

ಪಿ. ಚಿದಂಬರಂ (ಸಂಗ್ರಹ ಚಿತ್ರ)

ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂಬುದನ್ನು ಸೂಚಿಸಲು ಮುಂದಿಟ್ಟ ಅಂಕಿ- ಅಂಶಗಳು ಇಲ್ಲಿವೆ: 1) ದೇಶದ ಜಿಎಸ್​ಟಿ ಸಂಗ್ರಹ ಈವರೆಗಿನ ಅತಿ ಹೆಚ್ಚು ಪ್ರಮಾಣದ 1.44 ಲಕ್ಷ ಕೋಟಿ ರೂ. ಒಂದೇ ತಿಂಗಳಲ್ಲಿ ಸಂಗ್ರಹ ಆಗಿದೆ. 2) ಪ್ರಯಾಣಿಕರ ವಾಹನಗಳ ಮಾರಾಟ, ದ್ವಿಚಕ್ರ ವಾಹನ ಮಾರಾಟ, ತೈಲ ಬಳಕೆ, ಉಕ್ಕಿನ ಉತ್ಪಾದನೆ, ಸಿಮೆಂಟ್ ಉತ್ಪಾದನೆ, ಅಂತರರಾಷ್ಟ್ರೀಯ ವಾಯು ಸರಕು ಸಾಗಣೆ ಮತ್ತಿತರ ಕ್ಷೇತ್ರಗಳು ಭಾರತದಲ್ಲಿ ಪ್ರಗತಿ ದಾಖಲಿಸಿವೆ. 3) 8 ಪ್ರಮುಖ ಕೈಗಾರಿಕೆಗಳು ಮತ್ತೆ ಬೆಳವಣಿಗೆ ದಾಖಲಿಸಿವೆ. ಈ ಎಂಟು ಪ್ರಮುಖ ಕೈಗಾರಿಕೆಗಳು 2021ರ ಮಾರ್ಚ್​ನಲ್ಲಿ ಶೇ 11.4ರಷ್ಟು ಬೆಳವಣಿಗೆ ಕಂಡಿವೆ. 2021ರ ಏಪ್ರಿಲ್​ನಲ್ಲಿ ಶೇ 56.1 ತಲುಪಿದೆ. 4) ಈಚಿನ ಜಿಡಿಪಿ ದತ್ತಾಂಶದ ಪ್ರಕಾರ, ಜನವರಿ- ಮಾರ್ಚ್​ನಲ್ಲಿ ಉತ್ಪಾದನಾ ವಲಯ ಶೇ 6.9ರಷ್ಟು ಏರಿಕೆ, ನಿರ್ಮಾಣ ವಲಯ ಶೇ 14.5, ಉಕ್ಕು ಶೇ 27.3, ಸಿಮೆಂಟ್ ಶೇ 32.7ರಷ್ಟು ಏರಿಕೆ ಕಂಡಿದೆ. ಈ ಎರಡು ವಲಯಗಳು 2021ರ ಏಪ್ರಿಲ್​ನಲ್ಲಿ ಕ್ರಮವಾಗಿ ಶೇ 400 ಮತ್ತು ಶೇ 549ರಷ್ಟು ಏರಿಕೆ ಆಗಿವೆ.

ನಗದು ವರ್ಗಾವಣೆ ಆಗುತ್ತಿಲ್ಲ, ಅದನ್ನೀಗ ಆರಂಭಿಸಬೇಕು ಎಂಬ ಬಗ್ಗೆ ಚಿದಂಬರಂ ಆಕ್ಷೇಪಕ್ಕೂ ಠಾಕೂರ್ ಉತ್ತರಿಸಿದ್ದಾರೆ. * 2014- 19ರ ಎನ್​ಡಿಎ ಅವಧಿಯಲ್ಲಿ ಗೋಧಿ ಖರೀದಿಗೆ 8 ಲಕ್ಷ ಕೋಟಿ ರೂ. ವಿತರಿಸಲಾಗಿದೆ. ಅದೇ ಯುಪಿಎ ಅವಧಿಯಲ್ಲಿ 2009ರಿಂದ 2014ರಲ್ಲಿ 3.74 ಲಕ್ಷ ಕೋಟಿ ವಿತರಿಸಲಾಗಿತ್ತು. 2009- 14ರ ಯುಪಿಎ ಅವಧಿಯಲ್ಲಿ ಖರೀದಿಸಿದ್ದಕ್ಕಿಂತ 74 ಪಟ್ಟು ಹೆಚ್ಚು ದ್ವಿದಳ ಧಾನ್ಯಗಳನ್ನು ಮೋದಿ ಸರ್ಕಾರವು ಕೊಂಡಿದೆ. * ಕಳೆದ 5 ವರ್ಷದಲ್ಲಿ ಮೋದಿ ಸರ್ಕಾರವು 306.9 ಮಿಲಿಯನ್ ಟನ್ ಭತ್ತ ಮತ್ತು 162.7 ಮಿಲಿಯನ್ ಟನ್ ಗೋಧಿಯನ್ನು ಖರೀದಿಸಿದೆ. ಯುಪಿಎ ಅವಧಿಯಲ್ಲಿ 176.8 ಮಿಲಿಯನ್ ಟನ್ ಭತ್ತ ಹಾಗೂ 139.5 ಮಿಲಿಯನ್ ಟನ್ ಗೋಧಿ ಖರೀದಿಸಲಾಗಿತ್ತು ಎಂದು ಲೆಕ್ಕವನ್ನು ಮುಂದಿಡಲಾಗಿದೆ.

ಕೃಷಿ ಕಾಯ್ದೆ ಬಗ್ಗೆ ಪ್ರತಿಭಟನೆ ಮೂಲಕ ಕಾಂಗ್ರೆಸ್​ನಿಂದ ರೈತರ ದಿಕ್ಕು ತಪ್ಪಿಸಲಾಗುತ್ತಿದೆ ಎಂದಿರುವ ಠಾಕೂರ್ ಆ ಬಗ್ಗೆಯೂ ಅಂಕಿ- ಅಂಶ ತೆರೆದಿಟ್ಟಿದ್ದಾರೆ. * ಭಾರತವು ಸಾರ್ವಕಾಲಿಕ ಗರಿಷ್ಠ ಪ್ರಮಾಣದ ಗೋಧಿ 405 LMT ಖರೀದಿ ಆಗಿದೆ. ಇದು ರಾಬಿ ಮಾರ್ಕೆಟಿಂಗ್ ಋತು 2020-21ಕ್ಕಿಂತ ಶೇ 4ರಷ್ಟು, ಅಂದರೆ 390 LMTಗಿಂತ ಜಾಸ್ತಿ ಇದೆ. 2020- 21 ಖಾರೀಫ್ ಮಾರ್ಕೆಟಿಂಗ್ ಋತುವಿನಲ್ಲಿ 2020- 21ನೇ ಸಾಲಿನಲ್ಲಿ ಭತ್ತದ ಖರೀದಿಯು ದಾಖಲೆಯ 789 LMT ಆಗಿತ್ತು. ಪಿಎಂಕಿಸಾನ್ ಯೋಜನೆಯಡಿ ಎಂಟನೇ ಕಂತಿನಲ್ಲಿ 19,000 ಕೋಟಿ ರೂಪಾಯಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ. ಇವೆಲ್ಲವುಗಳಿಂದ ರೈತರ ಕೈಯಲ್ಲಿ ನಗದು ಉಳಿದಂತೆ ಆಗುವುದಿಲ್ಲವೆ ಎಂದು ಠಾಕೂರ್ ಪ್ರಶ್ನಿಸಿದ್ದಾರೆ.

* ಇನ್ನು ಯುಪಿಎ ಅವಧಿಯಲ್ಲಿ ಬಡವರಿಗಾಗಿ ಎಷ್ಟು ಖಾತೆ ತೆರೆಯಲಾಯಿತು? ಮೋದಿ ಸರ್ಕಾರವು 42 ಕೋಟಿ ಜನ್ ಧನ್ ಖಾತೆ ತೆರೆಯುವ ಮೂಲಕ ಸೋರಿಕೆಯನ್ನು ತಡೆದು, ಪ್ರತಿ ರೂಪಾಯಿಯು ಫಲಾನುಭವಿಗಳಿಗೆ ಶೀಘ್ರವಾಗಿ ಸೇರುವಂತೆ ಮಾಡಿತು. ಅದೂ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲೂ ನೇರ ಬ್ಯಾಂಕ್​ ವರ್ಗಾವಣೆ ಮಾಡಲಾಗಿದೆ. ಇದರಿಂದ ಹತ್ತಾರು ಲಕ್ಷ ಜನರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ.

* NSAP ಮೂಲಕ ವಿಧವೆಯರು, ದಿವ್ಯಾಂಗರು, ಹಿರಿಯ ನಾಗರಿಕರಿಗೆ ನೀಡಲಾಗಿದೆ. BoCW ಅಡಿಯಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು, ರೈತರಿಗಾಗಿ ಪಿಎಂ- ಕಿಸಾನ್, ಇಪಿಎಫ್​ಒ ಮತ್ತು ಉಜ್ವಲಕ್ಕಾಗಿ ಶೇ 24ರಷ್ಟು ಕೊಡುಗೆಯಾಗಿ ಕೊಡಲಾಗಿದೆ. ಒಟ್ಟು ವರ್ಗಾವಣೆ 68,000 ಕೋಟಿ ರೂಪಾಯಿ ದಾಟುತ್ತದೆ. ಇವೆಲ್ಲ ಕೈಯಲ್ಲಿ ನಗದು ಇದ್ದಂತೆ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ.

* ಯುಪಿಎ ಅವಧಿಯಲ್ಲಿ ನರೇಗಾಗೆ ಎಷ್ಟು ಹಣ ಮೀಸಲಿರಸಲಾಗಿತ್ತು? ಕಳೆದ ವರ್ಷದಲ್ಲಿ ಕೋವಿಡ್ 19 ಕಾರಣಕ್ಕಾಗಿ ರೂ. 61,500 ಕೋಟಿ ಇದ್ದದ್ದು ಐತಿಹಾಸಿಕ ದಾಖಲೆ ಮಟ್ಟಕ್ಕೆ 1 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳ ಮಾಡಿತು. ಜತೆಗೆ ಕೂಲಿಯನ್ನು ರೂ. 202ಕ್ಕೆ ಹೆಚ್ಚಿಸಲಾಯಿತು. ಆ ಮೂಲಕ 300 ಕೋಟಿ ಕೆಲಸದ ದಿನಕ್ಕೆ ಒಟ್ಟಾರೆ ಹೆಚ್ಚಿಸಿದ್ದೇವೆ. ಇದು ಕಾರ್ಮಿಕರ ಕೈಗೆ ನಗದು ತಲುಪಿಸಿದಂತೆ ಅಲ್ಲವೆ?

* ಯುಪಿಎ ಅವಧಿಯಲ್ಲಿ, ಚಿದಂಬರಂ ಹಣಕಾಸು ಸಚಿವರಾಗಿ ಬ್ಯಾಡ್ ಲೋನ್ ನೀಡಿದ್ದಿರಿ; ನಾವು ಇಸಿಎಲ್​ಜಿಎಸ್​ ಯೋಜನೆ ಅಡಿಯಲ್ಲಿ ಸರ್ಕಾರಿ ಖಾತ್ರಿಯಾಗಿ 3 ಲಕ್ಷ ಕೋಟಿ ನೀಡಿದ್ದೇವೆ. ಕಾರ್ಖಾನೆ ಮತ್ತು ಉದ್ಯಮದ ಸುಸ್ಥಿರತೆ ಹಾಗೂ ಪುನಶ್ಚೇತನಕ್ಕೆ ಅದನ್ನು ಕೊಟ್ಟಿದ್ದೇವೆ. ಇದರ ಅಡಿಯಲ್ಲಿ ಎಂಎಸ್​ಎಂಇಗಳು, ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮ, ವಿರಾಮ, ಕ್ರೀಡಾ ವಲಯ, ಹೆಲ್ತ್​ಕೇರ್ ಮುಂತಾದವು ಕವರ್ ಆಗಿದೆ. ಮೋದಿ ಸರ್ಕಾರವು ಭಾಗವಹಿಸುವಿಕೆ ಮತ್ತು ಪ್ರತಿಸ್ಪಂದನೆ ಧೋರಣೆ ಹೊಂದಿದೆ. 2.65 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ಎನ್​ಬಿಎಫ್​ಸಿ, ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್​ಗಳು ಮೂಲಕ ಮಂಜೂರು ಮಾಡಲಾಗಿದೆ. 92 ಲಕ್ಷಕ್ಕೂ ಹೆಚ್ಚು ಖಾತೆಗೆ ನೀಡಲಾಗಿದೆ. ಇವೆಲ್ಲವೂ ಉದ್ಯಮಗಳಿಗೆ ಹಣಕಾಸಿನ ಹರಿವು ನೀಡುವುದಿಲ್ಲವೇ ಎಂದು ಠಾಕೂರ್ ಪ್ರಶ್ನೆ ಮಾಡಿದ್ದಾರೆ. ​

ಇದನ್ನೂ ಓದಿ: India GDP: 2020-21 ನಾಲ್ಕನೇ ತ್ರೈಮಾಸಿಕ ಜಿಡಿಪಿ ಶೇ 1.6ರಷ್ಟು ಬೆಳವಣಿಗೆ; ಇಡೀ ವರ್ಷಕ್ಕೆ ಶೇ 7.3ರಷ್ಟು ಕುಸಿತ

ಇದನ್ನೂ ಓದಿ: India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?

(Union minister Anurag Thakur defended NDA govt economy handling in covid- 19 situation and answered Congress leader P Chidambaram allegations against government)

Published On - 8:40 pm, Wed, 2 June 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್