India GDP: 2020-21 ನಾಲ್ಕನೇ ತ್ರೈಮಾಸಿಕ ಜಿಡಿಪಿ ಶೇ 1.6ರಷ್ಟು ಬೆಳವಣಿಗೆ; ಇಡೀ ವರ್ಷಕ್ಕೆ ಶೇ 7.3ರಷ್ಟು ಕುಸಿತ

2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಇನ್ನು ಇಡೀ ವರ್ಷದ ಲೆಕ್ಕಕ್ಕೆ ಹೇಳಬೇಕೆಂದರೆ ಶೇ 7.3ರಷ್ಟು ಕುಗ್ಗಿದೆ.

India GDP: 2020-21 ನಾಲ್ಕನೇ ತ್ರೈಮಾಸಿಕ ಜಿಡಿಪಿ ಶೇ 1.6ರಷ್ಟು ಬೆಳವಣಿಗೆ; ಇಡೀ ವರ್ಷಕ್ಕೆ ಶೇ 7.3ರಷ್ಟು ಕುಸಿತ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on:May 31, 2021 | 6:41 PM

ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 1.6ರಷ್ಟು ದಾಖಲು ಮಾಡಿದೆ. 2020- 21ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ಶೇ 7.3ರಷ್ಟು ಕುಸಿದಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯಿಂದ ಮಾಡಲಾದ ಮತಗಣನೆಯಲ್ಲಿ ಅರ್ಥಶಾಸ್ತ್ರಜ್ಞರು ಬೆಳವಣಿಗೆ ಅಂದಾಜು ಶೇ 1 ಎಂದು ಹೇಳಿದ್ದರು. ಆದರೆ ಅದನ್ನು ಮೀರಿ, ಬೆಳವಣಿಗೆ ದರವನ್ನು ದಾಖಲಿಸಿದೆ. ಈ ಮೂಲಕ 2020- 21ನೇ ಸಾಲಿನಲ್ಲಿ ಅಕ್ಟೋಬರ್​ನಿಂದ ಡಿಸೆಂಬರ್ ಹಾಗೂ ಜನವರಿಯಿಂದ ಮಾರ್ಚ್​ ತ್ರೈಮಾಸಿಕಕ್ಕೆ ಬೆಳವಣಿಗೆ ದರ ಪ್ರಗತಿಯನ್ನು ಸಾಧಿಸಿದಂತೆ ಆಗಿದೆ. ಅದಕ್ಕೂ ಮುಂಚಿನ ಎರಡು ತ್ರೈಮಾಸಿಕದಲ್ಲಿ ಆರ್ಥಿಕತೆಯು ಕುಸಿತವನ್ನು ಕಂಡಿತ್ತು. 2020-21ರಲ್ಲಿ ಜಿಡಿಪಿ ಸ್ಥಿರತೆ (2011-2012) ದರದಲ್ಲಿ 2020- 21ರ ಅಂದಾಜು ರೂ. 38.96 ಲಕ್ಷ ಕೋಟಿ ಇದ್ದರೆ, 2019- 20ರಲ್ಲಿ 38.33 ಲಕ್ಷ ಕೋಟಿ ಇದ್ದು, ಶೇ 1.6ರಷ್ಟು ಬೆಳವಣಿಗೆ ಕಂಡಿದೆ ಎಂದು ಅಧಿಕೃತ ಬೆಳವಣಿಗೆಯಲ್ಲಿ ತಿಳಿಸಲಾಗಿದೆ.

ಯಾವ ವಲಯಗಳು ಯಾವ ರೀತಿಯ ಚಲನೆ ದಾಖಲಿಸಿವೆ ಎಂದು ನೋಡುವುದಾದರೆ, ಗ್ರಾಸ್ ವ್ಯಾಲ್ಯೂ ಆ್ಯಡೆಡೆ (ಜಿವಿಎ) ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ ಶೇ 3.7ರಷ್ಟು ಬೆಳವಣಿಗೆ ಕಂಡಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 1ರಷ್ಟಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 3.7ರಷ್ಟಿತ್ತು. ಇನ್ನು ವಿದ್ಯುಚ್ಛಕ್ತಿ, ಅನಿಲ, ನೀರು ಪೂರೈಕೆ, ಇತರೆ ಶೇ 9.1ರಷ್ಟು ಬೆಳವಣಿಗೆ ಕಂಡಿದ್ದು, ಕಳೆದ ತ್ರೈಮಾಸಿಕದಲ್ಲಿ ಶೇ 7.3ರಷ್ಟಿತ್ತು. ನಿರ್ಮಾಲಣ ವಲಯ ಶೇ 14.5ರ ಪ್ರಗತಿ ಕಂಡಿದೆ. ಇದರಿಂದ ಆರ್ಥಿಕ ಪ್ರಗತಿಗೆ ಸಹಾಯ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತದ ಗ್ರಾಸ್ ವ್ಯಾಲ್ಯೂ ಆ್ಯಡೆಡ್ ಶೇ (-) 6.2 ಇತ್ತು.

ಕೃಷಿ ವಲಯವು ವರ್ಷದ ಹಿಂದೆ ಶೇ 4.3ರಷ್ಟು ಇದ್ದದ್ದು, ಶೇ 3.6ರಷ್ಟು ಬೆಳವಣಿಗೆ ಕಂಡಿದೆ. ವಿದ್ಯಚ್ಛಕ್ತಿ ಮತ್ತು ಇತರೆ ಸೇವೆಗಳು ಶೇ 1.9ರಷ್ಟು ಬೆಳವಣಿಗೆ ಕಂಡಿದ್ದು, ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 2.1ರಷ್ಟಿತ್ತು. ಜಿಡಿಪಿ ಸ್ಥಿರ (2011-12) ದರವು 2020-21ರ ನಾಲ್ಕನೇ ತ್ರೈಮಾಸಿಕದ ಅಂದಾಜು ರೂ. 38.96 ಲಕ್ಷ ಕೋಟಿ, 2019- 20ರ ಇದೇ ಅವಧಿಗೆ 38.33 ಲಕ್ಷ ಕೋಟಿ ಇದ್ದು, ಶೇ 1.6ರಷ್ಟು ಪ್ರಗತಿ ಕಂಡಿದೆ.

ಇನ್ನು ರಿಯಲ್ ಜಿಡಿಪಿ ಅಥವಾ ಜಿಡಿಪಿ ಸ್ಥಿರ (2011-12) ದರವು 2020-21ರಲ್ಲಿ 135.13 ಲಕ್ಷ ಕೋಟಿ ಸಾಧಿಸುವ ಅಂದಾಜು ಈಗಿದೆ. 2019-20ರಲ್ಲಿ ಮೊದಲ ಪರಿಷ್ಕೃತ ಅಂದಾಜು ಜಿಡಿಪಿ 145.69 ಲಕ್ಷ ಕೋಟಿ ಇತ್ತು. ಅದನ್ನು ಜನವರಿ 29, 2021ರಂದು ಬಿಡುಗಡೆ ಮಾಡಲಾಯಿತು. 2019-20ರಲ್ಲಿ ಜಿಡಿಪಿ ಶೇ 4 ಇದ್ದದ್ದು 2020-21ರಲ್ಲಿ ಶೇ (-) 7.3 ಅಂದಾಜು ಮಾಡಲಾಗುತ್ತಿದೆ.

FY21, ಕಳೆದ ಹಣಕಾಸು ವರ್ಷದಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಬೆಳವಣಿಗೆ ನೆಗೆಟಿವ್ (-) 6.5ರಷ್ಟಿದೆ. ಏಪ್ರಿಲ್​ನಲ್ಲಿ ಮುಖ್ಯ ಕೈಗಾರಿಕೆಗಳ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಹೋಲಿಸಿದಲ್ಲಿ ಶೇ 56.1 ಇತ್ತು. ಮಾರ್ಚ್​ನಲ್ಲಿ ಎಂಟು ಮುಖ್ಯ ಕೈಗಾರಿಕೆಗಳು ಶೇ 11.4ರಷ್ಟು ಬೆಳವಣಿಗೆ ಕಂಡಿತ್ತು. ಆದರೆ ಏಪ್ರಿಲ್ ತಿಂಗಳ ಮುಖ್ಯ ಕೈಗಾರಿಕೆಗಳ ಬೆಳವಣಿಗೆಯನ್ನು ಮಾರ್ಚ್​ ತಿಂಗಳಿಗೆ ಹೋಲಿಸಿದಲ್ಲಿ ಶೇ 15ರಷ್ಟು ಕುಸಿತ ಕಂಡಿದೆ. ಏಪ್ರಿಲ್​ನಲ್ಲಿ ಸಿಮೆಂಟ್ ವಲಯ ಕಳೆದ ವರ್ಷಕ್ಕಿಂತ ಶೇ 548.8ರಷ್ಟು ಏರಿಕೆ ಕಂಡಿದೆ. ಕಳೆದ ತಿಂಗಳು ಇದೇ ಶೇ 32.7ರಷ್ಟಿತ್ತು.

ಇದನ್ನೂ ಓದಿ: ಭಾರತದ ಜಿಡಿಪಿ ಭಾರೀ ಕುಸಿತ, ಆತಂಕ ಮೂಡಿಸಿದ ವಿಶ್ವ ಬ್ಯಾಂಕ್ ವರದಿ

( India GDP for FY21 Q4 turned positive with 1.6% consecutive second quarter. But overall GDP contraction for year 7.3%)

Published On - 6:35 pm, Mon, 31 May 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್