ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಪರಿಚಯಿಸಿದ ಹೀರೋ: ಬೆಲೆ ಎಷ್ಟು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Aug 12, 2021 | 9:53 PM

Hero MotoCorp electric scooter: ಹೀರೋ ಮೋಟೋಕಾರ್ಪ್ ತೈವಾನ್ ಕಂಪನಿ ಗೊಗೊರೊ ಜೊತೆ ಬ್ಯಾಟರಿ ವಿನಿಮಯ ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ.

ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಪರಿಚಯಿಸಿದ ಹೀರೋ: ಬೆಲೆ ಎಷ್ಟು ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ಭಾರತದ ವಾಹನ ತಯಾರಿಕಾ ಕಂಪೆನಿಗಳು ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ. ಈಗಾಗಲೇ ಹಲವು ಕಂಪೆನಿಗಳು ಇ-ಸ್ಕೂಟರ್​ಗಳನ್ನು ಪರಿಚಯಿಸುತ್ತಿದೆ. ಇದೀಗ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಹೀರೋ ಕಂಪೆನಿ (Hero electric scooter) ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್​ನ್ನು ಗ್ರಾಹಕರ ಮುಂದಿಡಲು ಸಜ್ಜಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ನೂತನ ಸ್ಕೂಟರ್​ನ್ನು ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಅನಾವರಣಗೊಳಿಸಿದ್ದಾರೆ.

ಹೀರೋ ಕಂಪನಿಯ 10 ವರ್ಷಗಳ ಸಂಭ್ರಮಾಚರಣೆಯ ಲೈವ್ ಸ್ಟ್ರೀಮ್ ಕಾರ್ಯಕ್ರಮದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದಾಗ್ಯೂ ಹೀರೋ ಮೋಟೋಕಾರ್ಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.

ಹೀರೋ ಮೋಟಾರ್ಸ್ ಹೊಸ ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್​ಗೆ ಬಿಳಿ ಮತ್ತು ಕಪ್ಪು ಬಣ್ಣಗಳನ್ನು ನೀಡಲಾಗಿದೆ. ಅಲ್ಲದೆ ಫ್ಲೈಸ್ಕ್ರೀನ್ ಮತ್ತು ಉದ್ದವಾದ ಆಸನದೊಂದಿಗೆ ಬಾಗಿದ ಫ್ರಂಟ್​ ವಿನ್ಯಾಸವನ್ನು ರೂಪಿಸಲಾಗಿದೆ. ಹಾಗೆಯೇ ಈ ಸ್ಕೂಟರ್ ಮುಂಭಾಗದಲ್ಲಿ 12 ಇಂಚಿನ ಟೈರ್ ಮತ್ತು ಹಿಂಭಾಗದಲ್ಲಿ 10 ಇಂಚಿನ ಟೈರ್ ನೀಡಲಾಗಿದೆ. ಇನ್ನು ಎರಡು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವಂತಹ ವಿನ್ಯಾಸದಲ್ಲಿ ಈ ಸ್ಕೂಟರ್​ ಅನ್ನು ರೂಪಿಸಲಾಗಿದೆ.

ಏಪ್ರಿಲ್‌ನಲ್ಲಿ, ಹೀರೋ ಮೋಟೋಕಾರ್ಪ್ ತೈವಾನ್ ಕಂಪನಿ ಗೊಗೊರೊ ಜೊತೆ ಬ್ಯಾಟರಿ ವಿನಿಮಯ ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಕಂಪನಿಯು ಪರಿಚಯಿಸಲಿರುವ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿರುವುದು ವಿಶೇಷ.

ಆಗಸ್ಟ್ 15 ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನ ಹೀರೋ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್, ಅಥರ್ 450X ಮತ್ತು TVS iQube ಹೀರೋ ಮೋಟೋಕಾರ್ಪ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಪೈಪೋಟಿ ನಡೆಸಲಿದೆ. ಇನ್ನು ಈ ನೂತನ ಸ್ಕೂಟರ್​ನ್ನು ಹೀರೋ ಕಂಪೆನಿ 1 ಲಕ್ಷ ರೂ. ಒಳಗೆ, ಅಂದರೆ 80 ರಿಂದ 90 ಸಾವಿರದೊಳಗೆ ಗ್ರಾಹಕರ ಮುಂದಿಡಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Ola electric scooter: ಓಲಾ ಸ್ಕೂಟರ್​ನಲ್ಲಿ ರಿವರ್ಸ್ ಗೇರ್ ಇರಲಿದೆಯಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಇಂಟರ್‌ನೆಟ್‌ ಸೇವೆಗೆ ಟಾಟಾ ಸಜ್ಜು: ನೆಟ್​ವರ್ಕ್ ಇಲ್ಲದೆಯೂ ಸಿಗಲಿದೆ ಅಂತರ್ಜಾಲ ಸೇವೆ

ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು

ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ

(Hero MotoCorp unveils electric scooter)