AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honda Cars: ಭಾರತದಲ್ಲಿ ಹೋಂಡಾ ವಾಹನಗಳ ಎಲ್ಲ ಮಾಡೆಲ್​ಗಳ ಬೆಲೆಯಲ್ಲಿ ಆಗಸ್ಟ್​ನಿಂದ ಏರಿಕೆ ಮಾಡುವುದಾಗಿ ಘೋಷಣೆ

ಹೋಂಡಾದಿಂದ ಭಾರತದಲ್ಲಿ ಎಲ್ಲ ಮಾಡೆಲ್​ಗಳ ಬೆಲೆಯಲ್ಲಿ ಆಗಸ್ಟ್​ನಿಂದ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಇನ್​ಪುಟ್​ ಕಾಸ್ಟ್​ ವೆಚ್ಚ ಹೆಚ್ಚಳವನ್ನು ಸರಿತೂಗಿಸಲು ಹೀಗೆ ಮಾಡಬೇಕಾಗಿದೆ ಎಂದು ಕಂಪೆನಿ ಹೇಳಿದೆ.

Honda Cars: ಭಾರತದಲ್ಲಿ ಹೋಂಡಾ ವಾಹನಗಳ ಎಲ್ಲ ಮಾಡೆಲ್​ಗಳ ಬೆಲೆಯಲ್ಲಿ ಆಗಸ್ಟ್​ನಿಂದ ಏರಿಕೆ ಮಾಡುವುದಾಗಿ ಘೋಷಣೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 04, 2021 | 6:40 PM

Share

ಜಪಾನ್ ಮೂಲದ ವಾಹನ ತಯಾರಿಕೆ ಸಂಸ್ಥೆ ಹೋಂಡಾದಿಂದ ಭಾರತದಲ್ಲಿ ಎಲ್ಲ ಮಾಡೆಲ್​ಗಳ ಬೆಲೆಯಲ್ಲಿ ಆಗಸ್ಟ್​​ನಿಂದ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಉಕ್ಕು, ಇತರ ಲೋಹಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿರುವುದರಿಂದ ಅದನ್ನು ಸರಿತೂಗಿಸುವ ನಿಟ್ಟಿನಲ್ಲಿ ಬೆಲೆ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಹೋಂಡಾದಿಂದ ಭಾರತದಲ್ಲಿ ಸಿಟಿ ಮತ್ತು ಅಮೇಜ್ ಸೇರಿ ವಿವಿಧ ಮಾಡೆಲ್​ಗಳನ್ನು ಮಾರಾಟ ಮಾಡಲಾಗುತ್ತದೆ. ಇದೀಗ ಬೆಲೆ ಏರಿಕೆಯಲ್ಲಿ ಒಂದಿಷ್ಟು ಪ್ರಮಾಣವನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಕ್ಕೆ ನಿರ್ಧಾರ ಕೈಗೊಂಡಿದೆ. “ಉಕ್ಕು, ಅಲ್ಯೂಮಿನಿಯಂ ಮತ್ತು ಇತರ ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿಕೊಂಡಿದೆ. ಇದರಿಂದ ನಮ್ಮ ಇನ್​ಪುಟ್​ ವೆಚ್ಚದಲ್ಲಿ ಏರಿಕೆಯಾಗಿದೆ,” ಎಂದು ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕ (ಮಾರುಕಟ್ಟೆ ಮತ್ತು ಮಾರಾಟ) ರಾಜೇಶ್​ ಗೋಯೆಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆಗಸ್ಟ್​ನಿಂದ ಯಾವ ಮಾಡೆಲ್​ ಬೆಲೆಯನ್ನು ಎಷ್ಟು ಹೆಚ್ಚಿಸಬೇಕು ಎಂಬ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಸದ್ಯಕ್ಕೆ ಎಷ್ಟು ಹೆಚ್ಚುವರಿ ವೆಚ್ಚವು ತಗುಲುತ್ತಿದೆ, ಆ ಪೈಕಿ ಅನಿವಾರ್ಯವಾಗಿ ಎಷ್ಟನ್ನು ಗ್ರಾಹಕರ ಮೇಲೆ ವರ್ಗಾಯಿಸಬೇಕು ಎಂಬ ಲೆಕ್ಕಾಚಾರ ಆಗುತ್ತದೆ. ಪರಿಷ್ಕೃತ ದರಗಳು ಮುಂದಿನ ತಿಂಗಳಿಂದ ಜಾರಿಗೆ ಬರಲಿವೆ ಎಂದು ಗೋಯೆಲ್ ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಹಿಂದೆ 2021ರ ಏಪ್ರಿಲ್​ನಲ್ಲೇ ಕಂಪೆನಿಯಿಂದ ವಾಹನಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿತ್ತು. ದೇಶದಲ್ಲಿ ಉಕ್ಕಿನ ದರ ಕಳೆದ ಕೆಲವು ತಿಂಗಳಿಂದ ಭಾರೀ ಏರಿಕೆ ಆಗಿದೆ. ಜೂನ್​ ತಿಂಗಳಲ್ಲಿ ಉಕ್ಕು ತಯಾರಕರು ಹಾಟ್​ ರೋಲ್ಡ್​ ಕಾಯಿಲ್ ಮತ್ತು ಕೋಲ್ಡ್​ ರೋಲ್ಡ್​ ಕಾಯಿಲ್ (ಸಿಆರ್​ಸಿ) ಬೆಲೆಯನ್ನು ಕ್ರಮವಾಗಿ ಟನ್​ಗೆ ರೂ. 4000 ಮತ್ತು ರೂ. 4,900ರಂತೆ ಏರಿಕೆ ಮಾಡಿದ್ದಾರೆ.

ಎಚ್​ಆರ್​ಅಇ ಮತ್ತು ಸಿಆರ್​ಸಿ ಉಕ್ಕಿನ ಉತ್ಪನ್ನಗಳನ್ನು ಆಟೋ ಉಪಕರಣ, ನಿರ್ಮಾಣದಂಥ ಕಡೆಯಲ್ಲಿ ಬಳಸಲಾಗುತ್ತದೆ. ಆದ್ದರಿಂದ ಇವುಗಳಲ್ಲಿನ ಬೆಲೆ ಏರಿಕೆಯು ವಾಹನಗಳು, ಗ್ರಾಹಕ ವಸ್ತುಗಳು ಮತ್ತು ನಿರ್ಮಾಣದ ವೆಚ್ಚ ಹೆಚ್ಚಳಕ್ಕೆ ಕಾರಣ ಆಗುತ್ತವೆ. ಇದನ್ನು ಹೊರತುಪಡಿಸಿ, ಬೆಲೆಬಾಳುವ ಲೋಹಗಳಾದ ರೋಡಿಯಂ ಮತ್ತು ಪಲ್ಲಾಡಿಯಂ ಕೂಡ ಉತ್ಪಾದನಾ ವೆಚ್ಚದ ಮೇಲೆ ದುಪ್ಪಟ್ಟು ಪರಿಣಾಮ ಬೀರುತ್ತಿವೆ. ವಾಹನದ ಹೊಗೆಯುಗುಳುವ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಕಠಿಣ ನಿಯಮಾವಳಿ ತರಲಾಗಿದ್ದು ಮತ್ತು ಕ್ಯಾಟಲೈಸರ್​ಗಳಲ್ಲಿ ರೋಡಿಯಂ ಮತ್ತು ಪಲ್ಲಾಡಿಯಂ ಹೆಚ್ಚೆಚ್ಚು ಬಳಸಲಾಗುತ್ತದೆ. ಅದರಿಂದಲೂ ಬೇಡಿಕೆ ಹೆಚ್ಚಾಗಿದೆ.

ಇನ್​ಪುಟ್​ ವೆಚ್ಚ ಮೇಲೇರಿರುವುದರಿಂದ ಈಗಾಗಲೇ ಜೂನ್​ನಲ್ಲಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ಘೋಷಣೆ ಮಾಡಿದಂತೆ, ಎಲ್ಲ ಉತ್ಪನ್ನಗಳ ಬೆಲೆ ಏರಿಕೆ ಸೆಪ್ಟೆಂಬರ್ ತ್ರೈಮಾಸಿಕ​ದಲ್ಲಿ ಮಾಡಲಾಗುವುದು. ಈಗಾಗಲೇ ಮಾರುತಿ ಸುಜುಕಿಯಿಂದ ಏಪ್ರಿಲ್​ನಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಏಪ್ರಿಲ್​ 16ರಂದು ಮಾರುತಿಯಿಂದ ಹೇಳಿದಂತೆ, ಎಲ್ಲ ಮಾಡೆಲ್​ಗಳ ಎಕ್ಸ್​ ಶೋ- ರೂಮ್​ ದರದ ವೇಯ್ಟೆಡ್​ ಸರಾಸರಿಯಲ್ಲಿ ಶೇ 1.6ರಷ್ಟು ಏರಿಕೆ ಘೋಷಿಸಿದೆ. ಈ ವರ್ಷ ಜನವರಿ 18ರಂದು ಆಯ್ದ ಮಾಡೆಲ್​ಗಳ ಮೇಲೆ ರೂ. 34,000 ತನಕ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: Car Loan: ಹೊಸ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ? ಇಲ್ಲಿದೆ ಸಂಪೂರ್ಣ ಮಾಹಿತಿ

(Honda announced price hike in all vehicle models in India from August. Here is the details)​