ಆಸ್ತಿ ಬೆಲೆಯಲ್ಲಿ ಕಡಿಮೆ ಆಗಿರುವುದು, ಬಡ್ಡಿ ದರದಲ್ಲಿನ ಇಳಿಕೆ ಮತ್ತು ಆದಾಯದಲ್ಲಿನ ಏರಿಕೆಯಿಂದಾಗಿ ಭಾರತದ ರಿಯಲ್ ಎಸ್ಟೇಟ್ ಮಾರ್ಕೆಟ್ಗೆ ಸಹಾಯ ಆಗಿದೆ. ಮನೆ ಖರೀದಿ ಮಾಡಬೇಕೆಂದಿರುವವರು ಹೆಚ್ಚಿನ ಪ್ರಮಾಣದ ಸಾಲ ಪಡೆಯುತ್ತಿದ್ದು, ದೊಡ್ಡ ಮನೆಗಳ ಖರೀದಿ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ಗೆ ಸೂಕ್ತ ವ್ಯವಸ್ಥೆ, ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಬೇಕಾದ ವಾತಾವರಣಕ್ಕೆ ಸಿದ್ಧತೆ ಮಾಡಿಟ್ಟುಕೊಳ್ಳುತ್ತಾರೆ. ಕಳೆದ ಐದು ವರ್ಷದಲ್ಲಿ ಎಚ್ಡಿಎಫ್ಸಿ ಗ್ರಾಹಕರ ಪ್ರೊಫೈಲ್ ವಿಶ್ಲೇಷಣೆ ಮಾಡಿದರೆ, ಅಲ್ಪಾವಧಿಯ ಸಾಲ ಪಡೆಯುವವರ ಪ್ರಮಾಣ ಸ್ಥಿರವಾಗಿ ಹೆಚ್ಚಳ ಆಗುತ್ತಿರುವುದು ಕಂಡುಬರುತ್ತದೆ. ಅಂದಹಾಗೆ ಗೃಹಸಾಲ ನೀಡುವ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಎಚ್ಡಿಎಫ್ಸಿ ಕೂಡ ಒಂದು. ಕಳೆದ ಐದು ವರ್ಷದಲ್ಲಿ ಸರಾಸರಿ ಸಾಲದ ಗಾತ್ರದ ಪ್ರಮಾಣವು 2021ರ ಮಾರ್ಚ್ ಹೊತ್ತಿಗೆ ಸ್ಥಿರವಾಗಿ ರೂ. 29.5 ಲಕ್ಷಕ್ಕೆ ಏರಿಕೆ ಆಗಿದೆ. ಕಳೆದ ವರ್ಷ, ಅಂದರೆ 2020ರ ಮಾರ್ಚ್ನಲ್ಲಿ ಇದು ರೂ. 27 ಲಕ್ಷ ಇತ್ತು.
ಗೃಹ ಸಾಲ ಪಡೆಯುವ ಗ್ರಾಹಕರ ಸರಾಸರಿ ವಯಸ್ಸು ಮೊದಲ ಮೂರು ವರ್ಷ 38 ವರ್ಷ ಇದ್ದರೆ, 2020ರಲ್ಲಿ ಅದು 39 ವರ್ಷಕ್ಕೆ ಏರಿಕೆ ಆಗಿದೆ. 2021ರ ಮಾರ್ಚ್ಗೆ ಸರಾಸರಿ ವಯಸ್ಸು 38 ವರ್ಷಕ್ಕೆ ಇಳಿದಿದೆ. ಆಸಕ್ತಿಕರ ಸಂಗತಿ ಏನೆಂದರೆ, 2019ರ ಮಾರ್ಚ್ನಲ್ಲಿ ಸಾಲದ ಅವಧಿ 13 ವರ್ಷ ಇದ್ದಿದ್ದು, 2021ರ ಮಾರ್ಚ್ನಲ್ಲಿ ಅದು 11 ವರ್ಷಕ್ಕೆ ಇಳಿದಿದೆ. 2020ನೇ ಇಸವಿಯಲ್ಲಿ ಸಾಲದ ಸರಾಸರಿ ಅವಧಿಯ ಪ್ರಮಾಣ 12 ವರ್ಷ ಇತ್ತು. ಕಳೆದ ಐದು ವರ್ಷಗಳಲ್ಲಿ ಮನೆಗಳ ಸಾಲದ ನೀಡುವ ಪ್ರಮಾಣವನ್ನು ಎಚ್ಡಿಎಫ್ಸಿ ಜಾಸ್ತಿ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ 7 ಲಕ್ಷ ಹೌಸಿಂಗ್ ಯೂನಿಟ್ಗಳಿಗೆ ಸಾಲ ನೀಡಿದೆ. 2021ರ ಮಾರ್ಚ್ ಹೊತ್ತಿಗೆ 84 ಲಕ್ಷ ಮನೆಗಳಿಗೆ ಸಾಲ ನೀಡಿದೆ. 2020- 21ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ವೈಯಕ್ತಿಕ ಸಾಲಗಾರರಿಗೆ ವಿತರಿಸಿರುವ ಸಾಲದ ಪ್ರಮಾಣವು ಅದರ ಹಿಂದಿನ ವರ್ಷಕ್ಕಿಂತ ಶೇ 35ರಷ್ಟು ಕಡಿಮೆ ಆಗಿತ್ತು. ಅದಕ್ಕೆ ಕಾರಣ ಆಗಿದ್ದು ದೇಶದಾದ್ಯಂತ ಹೇರಿದ ಕಠಿಣ ಲಾಕ್ಡೌನ್. ಆನಂತರ ದ್ವಿತೀಯಾರ್ಧದಲ್ಲಿ ವೈಯಕ್ತಿಕ ಸಾಲಗಾರರಿಗೆ ವಿತರಿಸಿದ ಸಾಲ ಪ್ರಮಾಣವು ಅದರ ಹಿಂದಿನ ಅವಧಿಗೆ ಹೋಲಿಸಿದಲ್ಲಿ ಶೇ 42ರಷ್ಟು ಹೆಚ್ಚಳವಾಗಿ, ಒಟ್ಟಾರೆಯಾಗಿ ಕಳೆದ ಹಣಕಾಸು ವರ್ಷದಲ್ಲಿ ಶೇ 3ರಷ್ಟು ಬೆಳವಣಿಗೆ ದಾಖಲಿಸಿತು.
ಮನೆ ಖರೀದಿಗೆ ಇಪ್ಪತ್ತೈದು ವರ್ಷದಲ್ಲೇ ಇದು ಅತ್ಯುತ್ತಮ ಸಮಯ
ಎಚ್ಡಿಎಫ್ಸಿ ಅಫೋರ್ಡಬಲಿಟಿ ಸೂಚ್ಯಂಕದ ಪ್ರಕಾರ, ಕಳೆದ ಇಪ್ಪತ್ತೈದು ವರ್ಷದಲ್ಲೇ ಇದು ಅತ್ಯುತ್ತಮ ಸಮಯ ಎನ್ನಲಾಗುತ್ತಿದೆ. ಕೆಲವು ಮಾರುಕಟ್ಟೆಗಳಲ್ಲಿ ಆಸ್ತಿ ದರದಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಇನ್ನು ಅಫೋರ್ಡಬಲಿಟಿ (ಕೈಗೆಟುಕುವ ದರದ ಪ್ರಮಾಣ) ಹೇಗೆ ಲೆಕ್ಕ ಹಾಕಲಾಗುತ್ತದೆ ಅಂದರೆ, ಆಸ್ತಿಯ ದರವನ್ನು ವಾರ್ಷಿಕ ಆದಾಯದಿಂದ ಭಾಗಿಸಲಾಗುತ್ತದೆ. ಅದು 1995ನೇ ಇಸವಿಯಲ್ಲಿ 22 ಇದ್ದದ್ದು, 2021ರಲ್ಲಿ 3.2ಗೆ ಬಂದಿದೆ. ಇನ್ನು ಸರ್ಕಾರ ಕೂಡ ಹೌಸಿಂಗ್ ವಲಯದಲ್ಲಿ ನೀಡುತ್ತಿರುವ ಬೆಂಬಲದಿಂದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ ಖರೀದಿ ಸಾಧ್ಯವಾಗುತ್ತಿದೆ. ಮನೆಗಳು ಕೈಗೆಟುಕುವ ದರದಲ್ಲಿ ಸಿಗುತ್ತಿದೆ ಎಂಬುದು ಒಂದು ಕಡೆಯಾಯಿತು. ಮತ್ತೊಂದು ಹಲವು ಕಡೆ ಬೆಳವಣಿಗೆ ಅಂಶಗಳು ಸಾಲ ಅಡಮಾನ ಮಾರ್ಕೆಟ್ ಬೆಳೆಯುವುದಕ್ಕೆ ಕೊಡುಗೆ ನೀಡಿದೆ.
ಸದ್ಯಕ್ಕೆ ಇರುವ ಕಡಿಮೆ ಆದ್ಯತೆ, ಸರ್ಕಾರದ ಪ್ರೋತ್ಸಾಹ ಧನ, ಹಣಕಾಸು ಅನುಕೂಲದ ವಿಸ್ತರಣೆ ಮತ್ತು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ನಿಂದ ಗೃಹ ಸಾಲ ವಲಯಕ್ಕೆ ಸಹಾಯ ಮಾಡಿವೆ. ಮಾರುಕಟ್ಟೆಯಲ್ಲಿ ಗೃಹಸಾಲಕ್ಕೆ ಈಗಾಗಲೇ ಇರುವ ಬೇಡಿಕೆ ಪ್ರಮಾಣವನ್ನು ಗಮನಿಸುವುದಾದರೆ, ಭಾರತದಲ್ಲಿ ಶೇ 11, ಚೀನಾ ಶೇ 18, ಅಮೆರಿಕದಲ್ಲಿ ಶೇ 52, ಯುನೈಟೆಡ್ ಕಿಂಗ್ಡಮ್ನಲ್ಲಿ ಶೇ 68 ಮತ್ತು ನೆದರ್ಲೆಂಡ್ಸ್ನಲ್ಲಿ ಶೇ 89ರಷ್ಟು ಇದೆ. ಇದನ್ನು ಗಮನಿಸುವುದಾದರೆ ಭಾರತದಲ್ಲಿ ಬೆಳವಣಿಗೆಗೆ ಅವಕಾಶಗಳಿವೆ.
ಭಾರತದ ಶೇ 66ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕೆಳಗಿನವರು
ಭಾರತದ ಶೇ 66ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕೆಳಗಿನವರು. ಆದ್ದರಿಂದ ಗೃಹ ಸಾಲ ನೀಡುವ ಅವಕಾಶ ತುಂಬಾ ಜಾಸ್ತಿ ಇದೆ. ಕೂಡು ಕುಟುಂಬಗಳಿಂದ ಬೇರೆಯಾಗಿ ರೂಪುಗೊಳ್ಳುತ್ತಿರುವ ಸಣ್ಣ ಕುಟುಂಬಗಳು ಮತ್ತು ನಗರ ಪ್ರಮಾಣ ಜಾಸ್ತಿ ಆಗುತ್ತಿರುವುದು (ಸದ್ಯಕ್ಕೆ ಶೇ 33ರಷ್ಟು ಜನಸಂಖ್ಯೆ ನಗರಗಳಲ್ಲಿ ವಾಸವಿದೆ, 2030ರ ಹೊತ್ತಿಗೆ ಇದು ಶೇ 50ಕ್ಕೆ ಏರಿಕೆ ಆಗಬಹುದು) ಸಹ ರಿಯಲ್ ಎಸ್ಟೇಟ್ ಮಾರ್ಕೆಟ್ ಬೇಡಿಕೆ ಹೆಚ್ಚಳಕ್ಕೆ ಕಾರಣ ಆಗಬಹುದು. ಮೇ 7, 2021ಕ್ಕೆ ಎಚ್ಡಿಎಫ್ಸಿಯಿಂದ ಪ್ರಕಟಿಸಿದ ಹಣಕಾಸು ಫಲಿತಾಂಶದಲ್ಲಿ, ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಪಾವತಿಸಿದ ನಂತರದ ಲಾಭ ಶೇ 31ರಷ್ಟು ಏರಿಕೆಯಾಗಿ ರೂ. 5669 ಕೋಟಿ ಮುಟ್ಟಿದೆ.
ಕಡಿಮೆ ಬಡ್ಡಿ ದರದ ಕಾರಣಕ್ಕೆ ಗೃಹ ಸಾಲಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ಜತೆಗೆ ಆಸ್ತಿ ಮೌಲ್ಯ ಮತ್ತು ನೋಂದಣಿ ಮೌಲ್ಯವನ್ನು ಕೆಲವು ರಾಜ್ಯಗಳಿಕೆ ಇಳಿಕೆ ಮಾಡಿರುವುದು, ಹೋಮ್ ಲೋನ್ ಪ್ರೋತ್ಸಾಹಧನದಿಂದ ಬೆಂಬಲ ದೊರೆಯುತ್ತಿದೆ. ಕೈಗೆಟುಕುವ ದರದ ಮನೆಗಳು ಮತ್ತು ಹೈ-ಎಂಡ್ ಆಸ್ತಿಗಳು ಎರಡೂ ಸೆಗ್ಮೆಂಟ್ನಲ್ಲೂ ಬೆಳವಣಿಗೆ ಕಾಣಿಸಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Insurance on housing loan: ಹೌಸಿಂಗ್ ಲೋನ್ ಪಡೆಯುವಾಗ ಇನ್ಷೂರೆನ್ಸ್ ಖರೀದಿಸುವುದು ಕಡ್ಡಾಯವೇ?
ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು
(Housing loan ticket size increased and tenure for loan decreased in current trend, here is the complete details)