ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪೆನಿಯಾದ ಹ್ಯುಂಡೈನಿಂದ ಔರ (Aura), ಗ್ರ್ಯಾಂಡ್ ಐ10 ನಿಯೋಸ್ (Grand i10 Nios), ಸ್ಯಾಂಟ್ರೋ (Santro) ಮತ್ತು i20 ಗಾಗಿ ವರ್ಷಾಂತ್ಯದ ರಿಯಾಯಿತಿಗಳನ್ನು ಘೋಷಿಸಿದೆ. ಇದರಲ್ಲಿ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಸರ್ಕಾರಿ ಅಥವಾ ಕಾರ್ಪೊರೇಟ್ ಉದ್ಯೋಗಿಗಳಿಗೆ ಬೆನಿಫಿಟ್ಗಳು ಸೇರಿವೆ. ಈ ಬೆನಿಫಿಟ್ಗಳು ಮತ್ತು ರಿಯಾಯಿತಿಗಳು ಮಾದರಿ ಹಾಗೂ ವೇರಿಯಂಟ್-ನಿರ್ದಿಷ್ಟವಾಗಿವೆ ಮತ್ತು ಸ್ಟಾಕ್‌ಗಳು ಕೊನೆಗೊಳ್ಳುವವರೆಗೆ- ಡಿಸೆಂಬರ್ 31ರವರೆಗೆ ಅನ್ವಯಿಸುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. 2021ರ ಡಿಸೆಂಬರ್ನಲ್ಲಿ ಯಾವ ಮಾಡೆಲ್ಗೆ ಏನು ಆಫರ್ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿ.
ಹುಂಡೈ ಔರಾ
ಹ್ಯುಂಡೈ ಔರಾದ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್ ಮೇಲೆ ರೂ. 50,000ವರೆಗಿನ ಆಫರ್ಗಳಿವೆ. ಕಾಂಪ್ಯಾಕ್ಟ್ ಸೆಡಾನ್ ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ GDi ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಆದರೆ ಡೀಸೆಲ್ ಆವೃತ್ತಿಯು 1.2-ಲೀಟರ್ CRDi ಎಂಜಿನ್ ಹೊಂದಿದೆ. ಇದರಲ್ಲಿ ಪ್ರಮಾಣಿತ ಐದು-ವೇಗದ ಮ್ಯಾನುಯೆಲ್ ಟ್ರಾನ್ಸ್ಮಿಷನ್ ಮತ್ತು ಆಪ್ಷನಲ್ ಎಎಂಟಿ ಇದೆ. ಅಲ್ಲದೆ, ವಾಹನವು ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿದೆ.
ಹುಂಡೈ ಗ್ರಾಂಡ್ ಐ10 ನಿಯೋಸ್
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್ಗಳ ಮೇಲೆ 50,000 ರೂಪಾಯಿವರೆಗಿನ ಬೆನಿಫಿಟ್ ಇವೆ. ಔರಾದಂತೆಯೇ ಗ್ರಾಂಡ್ ಐ10 ನಿಯೋಸ್ ಸಹ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ – 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ GDi. ಆದರೆ ಡೀಸೆಲ್ ಆವೃತ್ತಿಯು 1.2-ಲೀಟರ್ CRDi ಎಂಜಿನ್ನಲ್ಲಿ ಲಭ್ಯ ಇದೆ. ಐದು-ವೇಗದ ಮ್ಯಾನುಯೆಲ್ ಟ್ರಾನ್ಸ್ಮಿಷನ್ ಮತ್ತು ಆಪ್ಷನಲ್ ಎಎಂಟಿ ಜತೆ ಬರುತ್ತದೆ. ಹ್ಯಾಚ್‌ಬ್ಯಾಕ್ ಆಪ್ಷನಲ್ ಸಿಎನ್‌ಜಿ ವೇರಿಯಂಟ್ ಸಹ ನೀಡುತ್ತದೆ.
ಹುಂಡೈ ಸ್ಯಾಂಟ್ರೋ
ಹ್ಯುಂಡೈನ ಸ್ಯಾಂಟ್ರೊ ಎಂಟ್ರಿ ಲೆವೆಲ್ ಮಾದರಿಗೆ ರೂ. 40,000ವರೆಗಿನ ಬೆನಿಫಿಟ್ ಇದೆ. ಹುಂಡೈ ಸ್ಯಾಂಟ್ರೋ ಐದು-ಸ್ಪೀಡ್ ಮ್ಯಾನುಯೆಲ್ ಮತ್ತು ಎಎಂಟಿ ಆಯ್ಕೆಗಳಲ್ಲಿ 1.1-ಲೀಟರ್ ಎಪ್ಸಿಲಾನ್ ಎಂಪಿಐ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು CNG ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.
ಹುಂಡೈ ಐ20
ಹ್ಯುಂಡೈನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಐ20 ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ರೂ. 40,000 ವರೆಗಿನ ಬೆನಿಫಿಟ್ಗಳನ್ನು ನೀಡುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ಮತ್ತು 1.0-ಲೀಟರ್ ಟರ್ಬೋ ಸೇರಿವೆ. ಆದರೆ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಹೊಂದಿದೆ. ವೇರಿಯಂಟ್ ಮತ್ತು ವೇರಿಯಂಟ್ ಆಯ್ಕೆಗಳನ್ನು ಅವಲಂಬಿಸಿ ಮ್ಯಾನ್ಯುಯೆಲ್, IVT ಮತ್ತು 7DCT ಆಯ್ಕೆಗಳಲ್ಲಿ ಹೊಂದಬಹುದು.
ಇದನ್ನೂ ಓದಿ: ಪ್ರತಿಷ್ಠಿತ ಕಾರು ಉತ್ಪಾದಕ ಕಂಪನಿಗಳ ಇಲೆಕ್ಟ್ರಿಕ್ ಕಾರು ಬಹಳ ದುಬಾರಿ, ವ್ಯವಹಾರವೆಲ್ಲ ಕೋಟಿಗಳಲ್ಲಿ!
Published On - 7:33 pm, Mon, 6 December 21