ಆಟೋಮೋಟಿವ್ ಉತ್ಪಾದಕ ಹ್ಯುಂಡೈ ಮೋಟಾರ್ಸ್ ರೂ. 2000 ಕೋಟಿ ಹೂಡಿಕೆಯೊಂದಿಗೆ ಹರ್ಯಾಣದ ಗುರುಗ್ರಾಮದಲ್ಲಿ ಹೆಜ್ಜೆಯನ್ನು ಇಟ್ಟಿದೆ. ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಅಷ್ಟೇ ಅಲ್ಲ ಹ್ಯುಂಡೈ ಕಂಪೆನಿಯ ವ್ಯಾವಹಾರಿಕ ಪ್ರತಿಸ್ಪರ್ಧಿಯಾದ ಮಾರುತಿ ಸುಜುಕಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಕೆನಿಚಿ ಅಯುಕವ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕೊರಿಯಾ ಕಂಪೆನಿಯಾದ ಹ್ಯುಂಡೈನಿಂದ ಗುರುಗ್ರಾಮದಲ್ಲಿ ಮೆಗಾ- ಕಾರ್ಪೊರೇಟ್ ಕಚೇರಿಯನ್ನು ಆರಂಭಿಸಲಾಯಿತು. ಈ ಕಚೇರಿಯು ಭಾರತದಲ್ಲಿ ಹ್ಯುಂಡೈ ಕಂಪೆನಿಯ ಕೇಂದ್ರ ಕಚೇರಿ ಆಗಲಿದೆ. ಈ ಹೊಸ ಕಚೇರಿಯು 28,000 ಚದರಡಿ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕಳೆದ ಮೂರು ವರ್ಷದಲ್ಲಿ 1000 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲಾಗಿದೆ.
ಈ ಸ್ಥಳದಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗಾಗಿ 14 ಚಾರ್ಜಿಂಗ್ ಘಟಕಗಳು, 50kw ಸೋಲಾರ್ ಪ್ಯಾನೆಲ್ ರೂಫ್ ಟಾಪ್ನಲ್ಲಿ ಮತ್ತು 400 ಚದರ ಮೀಟರ್ ಉದ್ದಕ್ಕೂ ಹಸಿರು ಗೋಡೆಯ ಇದೆ. ಇನ್ನು ಈ ಕಚೇರಿಗೆ ಹೊಂದಿಕೊಂಡಂತೆಯೇ ಮತ್ತೊಂದು ಫೆಸಿಲಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದು ಕೂಡ 1000 ಕೋಟಿ ರೂಪಾಯಿಯ ಹೂಡಿಕೆ ಯೋಜನೆ ಆಗಿದೆ.
ಹ್ಯುಂಡೈ ಸಿಇಒ ಮತ್ತು ಎಂ.ಡಿ. ಎಸ್.ಎಸ್.ಕಿಮ್ ಮಾತನಾಡಿ, ಜನರು ಹಾಗೂ ಪರಿಸರದ ಬಗೆಗಿನ ಬದ್ಧತೆಯೊಂದಿಗೆ ಈ ಕೇಂದ್ರ ಕಚೇರಿಯು ಮುಖ್ಯ ಗಮನವನ್ನು ಆವಿಷ್ಕಾರಗಳಗೆ ಮತ್ತು ಜನರ ಬೆಳವಣಿಗೆ ಹಾಗೂ ಈ ಭೂಮಿಯ ಸಮೃದ್ಧಿ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಂದಹಾಗೆ ಹರ್ಯಾಣದಲ್ಲಿ 10 ಲಕ್ಷ ಯೂನಿಟ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಮಾರುತಿ ಸುಜುಕಿಯಿಂದ 18,000 ಕೋಟಿ ರೂಪಾಯಿ ಹೂಡಿಕೆ ಮಾಡುವ ಗುರಿ ಇದೆ. ಆ ಯೋಜನೆಯಂತೆ ಹೇಳುವುದಾದರೆ, ಸದ್ಯಕ್ಕೆ ಗುರುಗ್ರಾಮದಲ್ಲಿ ಇರುವ ಮಾರುತಿ ಸುಜುಕಿಯ ಉತ್ಪಾದನಾ ಘಟಕಕ್ಕಿಂತ ಹೆಚ್ಚು ದೊಡ್ಡದಾದ ಹಾಗೂ ಆಧುನಿಕವಾದ ಉತ್ಪಾದನಾ ಘಟಕಕ್ಕೆ ಸ್ಥಳಾಂತರಗೊಳ್ಳಲಿದೆ.
ಇದನ್ನೂ ಓದಿ: ಅಮೆರಿಕದ ಎಲೆಕ್ಟ್ರಿಕಲ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಘೋಷಿಸಿದ ಹುಂಡೈ, ಕಿಯಾ
(Hyundai Company Open Up Rs 1000 Crore Worth Facility At Gurugram In Haryana )