ಕರ್ನಾಟಕ ಸರ್ಕಾರವು 2,367.99 ಕೋಟಿ ರೂಪಾಯಿ ಮೌಲ್ಯದ 88 ಕೈಗಾರಿಕೆ ಯೋಜನೆಗಳಿಗೆ ಅನುಮತಿ ನೀಡಿದ್ದು, ಇದರಿಂದ ರಾಜ್ಯದಲ್ಲಿ 10,904 ಉದ್ಯೋಗ ಸೃಷ್ಟಿ ಆಗಲಿದೆ. ಏಕ ಗವಾಕ್ಷಿ ವಿಲೇವಾರಿ ಸಮಿತಿ (SLSWCC)ಯಿಂದ ಮಂಗಳವಾರ ಸಂಜೆ 129ನೇ ರಾಜ್ಯ ಮಟ್ಟದ ಸಭೆಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ (Murugesh Nirani) ಅಧ್ಯಕ್ಷತೆಯಲ್ಲಿ ನಡೆದು, ಈ ಯೋಜನೆಗಳಿಗೆ ಮಂಜೂರು ನೀಡಲಾಗಿದೆ. 7 ಮುಖ್ಯ ಹಾಗೂ ಮಧ್ಯಮ ಗಾತ್ರದ ಯೋಜನೆಗಳು 50 ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದಕ್ಕೆ ಸಮಿತಿಯು ಪರಿಗಣಿಸಿದೆ ಹಾಗೂ ಅನುಮತಿಸಿದೆ, ಎಂದು ಸಚಿವರ ಕಚೇರಿಯು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಯೋಜನೆಗಳು 799.1 ಕೋಟಿ ರೂಪಾಯಿ ಮೌಲ್ಯದ್ಧಾಗಿದ್ದು, ರಾಜ್ಯದಲ್ಲಿ 3237 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಸಬಹುದು.
SLSWCC ಸಭೆಯಲ್ಲಿ 78 ಹೊಸ ಪ್ರಾಜೆಕ್ಟ್ಗಳನ್ನು ಸಹ ವಿಲೇವಾರಿ ಮಾಡಲಾಗಿದೆ. ಅವುಗಳು 15 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿದ್ದು, 50 ಕೋಟಿ ರೂಪಾಯಿಗಿಂತ ಕಡಿಮೆ ಇದೆ. ಈ ಪ್ರಾಜೆಕ್ಟ್ಗಳ ಮೌಲ್ಯ 1431.74 ಕೋಟಿ ರೂಪಾಯಿಗಳಾಗಿದ್ದು, ಇದರಿಂದ ರಾಜ್ಯದಲ್ಲಿ 7,667 ಮಂದಿಗೆ ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಲಾಗಿದೆ. ಇನ್ನೂ ಮೂರು ಪ್ರಾಜೆಕ್ಟ್ಗಳು ರೂ. 137.15 ಕೋಟಿ ಹೂಡಿಕೆಯದ್ದಾಗಿದ್ದು, ಅವುಗಳಿಗೂ ಅನುಮತಿ ಸಿಕ್ಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಟ್ಟಾರೆ 88 ಪ್ರಾಜೆಕ್ಟ್ಗಳು ರೂ. 2,367.99 ಕೋಟಿಯಲ್ಲಿ 10904 ಮಂದಿಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದಕ್ಕೆ ವಿಲೇವಾರಿ ಮಾಡಲಾಗಿದೆ.
ಅನುಮೋದಿಸಲಾದ ಹೊಸ ಹೂಡಿಕೆಗಳ ಪೈಕಿ M/s ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ಪಾರ್ಕ್ ಲಿಮಿಟೆಡ್ ರೂ.357 ಕೋಟಿ ಮತ್ತು 1,655 ಮಂದಿಗೆ ಉದ್ಯೋಗಾವಕಾಶ ಸಾಮರ್ಥ್ಯ; 540 ಜನರಿಗೆ ಉದ್ಯೋಗಾವಕಾಶವಿರುವ M/s ಸ್ಪಾನ್ಸುಲ್ಸ್ ಫಾರ್ಮುಲೇಷನ್ಸ್‌ನಿಂದ ರೂ 96 ಕೋಟಿ ಯೋಜನೆ; 125 ಉದ್ಯೋಗಗಳೊಂದಿಗೆ M/s ರಿನಾಕ್ ಇಂಡಿಯಾ ಲಿಮಿಟೆಡ್‌ನಿಂದ ರೂ. 80 ಕೋಟಿ ಹೂಡಿಕೆ; 20 ಜನರಿಗೆ ಉದ್ಯೋಗ ಸೃಷ್ಟಿಯೊಂದಿಗೆ M/s ಸನ್ವಿಕ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ರೂ. 64 ಕೋಟಿ ಯೋಜನೆ ಇದೆ.
ಅಲ್ಲದೆ, 327 ಜನರಿಗೆ ಉದ್ಯೋಗದೊಂದಿಗೆ M/s H&V ಅಡ್ವಾನ್ಸ್ಡ್ ಮೆಟೀರಿಯಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ 59.31 ಕೋಟಿ ಮೌಲ್ಯದ ಯೋಜನೆ; M/s ಎ ಒನ್ ಟೆಕ್ಸ್ಟೆಕ್ ಪ್ರೈವೇಟ್ ಲಿಮಿಟೆಡ್ ಮೂಲಕ ರೂ. 46.50 ಕೋಟಿ ಹೂಡಿಕೆ, 160 ಜನರಿಗೆ ಉದ್ಯೋಗಾವಕಾಶಗಳು; 1501 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ M/s ಟೆಕ್ಸ್ಪೋರ್ಟ್ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್‌ನಿಂದ ರೂ. 44.80 ಕೋಟಿ ಹೂಡಿಕೆ; ಮತ್ತು 390 ಜನರಿಗೆ ಉದ್ಯೋಗ ಸೃಷ್ಟಿಯೊಂದಿಗೆ M/s ಕೇನ್ಸ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಿಂದ ರೂ. 35 ಕೋಟಿ ಹೂಡಿಕೆ ಆಗಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾರು ಉತ್ಪಾದನಾ ಘಟಕ ತೆರೆಯಲು ಎಲಾನ್ ಮಸ್ಕ್ಗೆ ಮುರುಗೇಶ್ ನಿರಾಣಿ ಆಹ್ವಾನ