ಬಹು ನಿರೀಕ್ಷಿತ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಮಹೀಂದ್ರಾ XUV700 ಹೇಗಿರಲಿದೆ, ಫೀಚರ್ಸ್, ಸುರಕ್ಷತೆ, ಡಿಸೈನ್ನ ಪ್ರಮುಖಾಂಶಗಳು ಹೀಗೆ ಇತರ ಮಾಹಿತಿಗಳನ್ನು ತಿಳಿಸಲಾಗಿದೆ. ಇನ್ನು ಆರಂಭಿಕ ದರ, ಅಂದರೆ MX ವೇರಿಯಂಟ್ನ ಪೆಟ್ರೋಲ್ ಎಂಜಿನ್ ಬೆಲೆ 11.99 ಲಕ್ಷ ರೂಪಾಯಿ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ಅದೇ MX ವೇರಿಯಂಟ್ನ ಡೀಸೆಲ್ ಎಂಜಿನ್ನ ಬೆಲೆ 12.49 ಲಕ್ಷ ರೂಪಾಯಿ ಆಗಲಿದೆ. ಇದರ ಜತೆಗೆ ಮಹೀಂದ್ರಾದಿಂದ AX3 ಹಾಗೂ AX5 ಪೆಟ್ರೋಲ್ ವಾಹನದ ದರವನ್ನು ಸಹ ಘೋಷಣೆ ಮಾಡಲಾಗಿದೆ. ಎಕ್ಸ್ ಶೋರೂಮ್ ದರವು ಕ್ರಮವಾಗಿ 13.99 ಲಕ್ಷ ರೂಪಾಯಿ ಮತ್ತು 14.99 ಲಕ್ಷ ರೂಪಾಯಿ ಆಗಲಿದೆ. ನೆನಪಿನಲ್ಲಿಡಬೇಕಾದ ಅಂಶ ಏನೆಂದರೆ, ಈ ಎಲ್ಲವೂ 5 ಸೀಟರ್ ಹಾಗೂ ಮ್ಯಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆಯ ಬೆಲೆಯಾಗಿದೆ.
ಅಂದಹಾಗೆ ಮಹೀಂದ್ರಾ ಕಂಪೆನಿಯಿಂದ ಈ ನಾಲ್ಕು ವೇರಿಯಂಟ್ಗಳ ಬೆಲೆಗಳನ್ನು ಮಾತ್ರ ಘೋಷಿಸಲಾಗಿದೆ, ಪೂರ್ತಿ ದರ ಪಟ್ಟಿಯನ್ನು ಅಲ್ಲ. 6- ಸೀಟರ್ ವಾಹನದ್ದು ಹಾಗೂ ಆಟೋಮೆಟಿಕ್ ಟ್ರಾನ್ಸ್ಮಿಷನ್ ಇರುವಂಥದ್ದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಲ್ಲ. ಒಂದು, ಈ ರೀತಿ ಕೆಲವು ವೇರಿಯಂಟ್ಗಳ ಬೆಲೆಯನ್ನು ಮಾತ್ರ ಘೋಷಣೆ ಮಾಡುವುದರಿಂದ ಕುತೂಹಲವನ್ನು ಕಾಯ್ದುಕೊಳ್ಳಬಹುದು. ಇದೇ ವೇಳೆ ಇನ್ನೆಷ್ಟು ವೇರಿಯಂಟ್ ಇದೆಯೋ ಎಂಬ ಗೊಂದಲ ಸಹ ಗ್ರಾಹಕರಲ್ಲಿ ಉಳಿದುಹೋಗುತ್ತದೆ. ಇನ್ನು XUV700ನಲ್ಲಿ ಹಲವು ಮೊದಲುಗಳು ಸೇರ್ಪಡೆ ಆಗಲಿವೆ.
AndrenoX ತಂತ್ರಜ್ಞಾನದೊಂದಿಗೆ, ಮಹೀಂದ್ರಾ ಬ್ರ್ಯಾಂಡ್ನ ಹೊಸ ಲೋಗೋ ಜತೆಗೆ ಬರುತ್ತದೆ. ಟ್ವಿನ್ ಪೀಕ್ಸ್, ಸೋನಿ ಎನ್ಫೋಟೇನ್ಮೆಂಟ್ ಸಿಸ್ಟಮ್ ಜತೆ ಇರುತ್ತದೆ. AndrenoX ಇಂಟೆಲಿಜೆಂಟ್ ಕಾಕ್ಪಿಟ್ ತಂತ್ರಜ್ಞಾನದೊಂದಿಗೆ ಬರಲಿದ್ದು, 10.25 ಇಂಚಿನ ಡ್ಯುಯಲ್ ಸ್ಕ್ರೀನ್ನೊಂದಿಗೆ ಇರುತ್ತದೆ. ಸ್ಮಾರ್ಟ್ಕೋರ್ ಕಾಕ್ಪಿಟ್ ಡೊಮೈನ್ ಕಂಟ್ರೋಲರ್ ಟೆಕ್ನಾಲಜಿ ಜತೆಗೆ ಮೂರನೇ ತಲೆಮಾರಿನ ಸ್ನ್ಯಾಪ್ಡ್ರ್ಯಾಗನ್ ಆಟೋಮೆಟಿವ್ ಕಾಕ್ಪಿಟ್ ಪ್ಲಾಟ್ಫಾರ್ಮ್ಸ್ ಅನ್ನು ವಿಸ್ಟಿಯಾನ್ ಜತೆಗೂಡಿ ಅಭಿವೃದ್ಧಿಪಡಿಸಲಾಗಿದೆ. ಅಮೆಜಾನ್ ಮತ್ತು ಮಹೀಂದ್ರಾ ಸೇರಿ ಅಲೆಕ್ಸಾ ಬಿಲ್ಟ್-ಇನ್ ಫಂಕ್ಷಾನಲಿಟಿ ತಂದಿವೆ. ಸೋನಿ ಕಂಪೆನಿಯ 3ಡಿ ಸೌಂಡ್ ಟೆಕ್ನಾಲಜಿಯ ಅನುಭವವನ್ನು ಪಡೆಯಬಹುದು.
ವಾಯ್ಸ್ ಕಮಾಂಡ್ನಲ್ಲೇ ಸನ್ರೂಪ್, ಏಸಿ ಕಂಟ್ರೋಲ್ ಮುಂತಾದವನ್ನು ಮಾಡಬಹುದು. ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್ನಲ್ಲಿ ಸನ್ರೂಫ್, ವಯರ್ಲೆಸ್ ಚಾರ್ಜಿಂಗ್, ಟೂ-ಝೋನ್ ಕಂಟ್ರೋಲ್ ಮತ್ತಿತರ ಫೀಚರ್ಗಳಿವೆ. ಆಸಕ್ತಿಕರ ಸಂಗತಿ ಏನೆಂದರೆ, ಈ ಎಸ್ಯುವಿಯಲ್ಲಿ ಟೆಕ್ನಾಲಜಿಗೆ ಸಂಬಂಧಿಸಿದಂತೆಯೇ 60 ಫೀಚರ್ಗಳಿವೆ.
ಮಹೀಂದ್ರಾ XUV700ನಲ್ಲಿ ಪೆಟ್ರೋಲ್- ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳಿವೆ. 2.2 ಪೆಟ್ರೋಕ್ ಗರಿಷ್ಠ 200bhp, 2.2 ಲೀಟರ್ mHawk ಎಂಜಿನ್ 185 bhp ಉತ್ಪಾದಿಸುತ್ತದೆ. ಎರಡರಲ್ಲೂ ಮ್ಯಾನ್ಯುಯಲ್ ಹಾಗೂ ಆಟೋಮೆಟಿಕ್ ಗೇರ್ಬಾಕ್ಸ್ ಆಯ್ಕೆಗಳು ಬರುತ್ತವೆ. 7 ಏರ್ಬ್ಯಾಗ್ಗಳು, 360 ಕ್ಯಾಮೆರಾ ವ್ಯೂ ಸೇರಿದಂತೆ ಅತ್ಯಾಧುನಿಕವಾದ ಫೀಚರ್ಗಳನ್ನು ಈ ಕಾರು ಹೊಂದಿದೆ.
ಇದನ್ನೂ ಓದಿ: Mahindra New Logo: ಲೋಗೋ ಬದಲಿಸಿದ ಮಹೀಂದ್ರಾ: ಇಲ್ಲಿದೆ ಹೊಸ ಲೋಗೋ
(Mahindra XUV 700 Price Features And Other Details Are Here )