ಇಂದು ಆಗುತ್ತಿರುವ ಖುಷಿ ನನಗೆ ಯಾವತ್ತೂ ಆಗಿಲ್ಲ, ಅಂಬರೀಶ್ ಕನಸು ಇದಾಗಿತ್ತು- ಸಂಸದೆ ಸುಮಲತಾ ಅಂಬರೀಶ್ ಸಂತಸ
Mandya Mysugar Factory: ನಾನು ಸಂಸದೆಯಾಗಿ 3 ವರ್ಷ ಕಳೆದಿವೆ. ಇಂದು ಆಗುತ್ತಿರುವ ಸಂತೋಷ ಯಾವತ್ತೂ ಆಗಿಲ್ಲ. ಮೈಶುಗರ್ ಚಾಲನೆ ಮಾಡಿಸುತ್ತೇನೆಂದು ಮಾತು ಕೊಟ್ಟಿದ್ದೆ. ಮಂಡ್ಯ ರೈತರಿಗೆ ಇಂದು ಐತಿಹಾಸಿಕ ಹಾಗೂ ಸಂಭ್ರಮದ ದಿನ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ: ಇಂದು ಆಗುತ್ತಿರುವ ಖುಷಿ ನನಗೆ ಯಾವತ್ತೂ ಆಗಿಲ್ಲ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ (Mandya MP Sumalatha Ambareesh) ಸಂತಸ ವ್ಯಕ್ತಪಡಿಸಿದ್ದಾರೆ. ಸಂದರ್ಭ – ಇನ್ನೊಂದು ವಾರದಲ್ಲಿ ಮಂಡ್ಯ ಮೈಶುಗರ್ ಕಾರ್ಖಾನೆ (Mandya Mysugar Factory) ಆರಂಭವಾಗುತ್ತದೆ ಎಂದು ರಾಜ್ಯ ಬಿಜೆಪಿ ಸರ್ಕಾರ ಇಂದು Good News ಕೊಟ್ಟಿರುವ ಸಂದರ್ಭ. ನಾನು ಸಂಸದೆಯಾಗಿ ಮೂರು ವರ್ಷಗಳು ಕಳೆದಿವೆ. ಇಂದು ಆಗುತ್ತಿರುವ ಸಂತೋಷ ಯಾವತ್ತೂ ಆಗಿಲ್ಲ. ಮೈಶುಗರ್ ಚಾಲನೆ ಮಾಡಿಸುತ್ತೇನೆಂದು ಮಾತು ಕೊಟ್ಟಿದ್ದೆ. ಸಾಕಷ್ಟು ಜನರ ಸಹಕಾರದಿಂದ ಕಾರ್ಖಾನೆ ಶುರುವಾಗುತ್ತಿದೆ. ಮಂಡ್ಯ ರೈತರಿಗೆ ಇಂದು ಐತಿಹಾಸಿಕ ಹಾಗೂ ಸಂಭ್ರಮದ ದಿನ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಅಂಬರೀಶ್ ಅವರ ಕನಸು ಇದಾಗಿತ್ತು
ಅಂಬರೀಶ್ ಅವರ ಕನಸು ಇದಾಗಿತ್ತು. ಎಷ್ಟೋ ವರ್ಷಗಳ ಹೋರಾಟದ ಫಲವಿದು. ಮಂಡ್ಯ ಜಿಲ್ಲೆಯ ರೈತರಿಗೆ ಐತಿಹಾಸಿಕ ಹಾಗೂ ಸಂಭ್ರಮದ ದಿನ ಇದು. ಕೊರೋನಾ, ಪ್ರವಾಹದ ನಂತರ ಸಂಭ್ರಮಿಸಲು ಇದು ಅವಕಾಶ. ಮೈಶುಗರ್ ಆರಂಭಕ್ಕೆ ಸಹಕಾರ ಕೊಟ್ಟಿರುವ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಸುಮಲತಾ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory) ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಆ.17 ಅಥವಾ 18ಕ್ಕೆ ಅಧಿಕೃತವಾಗಿ ಕಾರ್ಖಾನೆ ಪುನರಾರಂಭ ಸಾಧ್ಯತೆ ಎನ್ನಲಾಗುತ್ತಿದ್ದು, ಸಿಎಂ ಅವರಿಂದಲೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆಗೆ ಚಿಂತನೆ ನಡೆಸಲಾಗುತ್ತಿದೆ. 4 ವರ್ಷಗಳ ಬಳಿಕ ಕಾರ್ಖಾನೆಯಲ್ಲಿ ಯಂತ್ರಗಳ ಸದ್ದು ಮಾಡಲು ಸಿದ್ಧವಾಗಿವೆ. ಕಬ್ಬು ನುರಿಸುವ ಕಾರ್ಯಕ್ಕೆ ಮೈಶುಗರ್ ಕಾರ್ಖಾನೆ ಸಜ್ಜಾಗಿದ್ದು, ಇಂದು ಕಾರ್ಖಾನೆಯಲ್ಲಿ ಪೂಜೆ, ಹೋಮ-ಹವನ ನಡೆಯಲಿದೆ. ಜೊತೆಗೆ ಇಂದೇ ಬಾಯ್ಲರ್ಗೆ ಅಗ್ನಿ ಸ್ಪರ್ಶ ನಡೆಯಲಿದೆ. ಯಂತ್ರೋಪಕರಣಗಳು ಕೆಟ್ಟು ಹೋಗಿದ್ದ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದು, ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಭರವಸೆ ನೀಡಿತ್ತು. ಸರ್ಕಾರದ ಭರವಸೆಯಂತೆ ಪುನರಾರಂಭಕ್ಕೆ ಮೈಶುಗರ್ ಸಜ್ಜಾಗಿದ್ದು, ಮಂಡ್ಯ ಜನರಲ್ಲಿ ಸಂತಸ ಮನೆ ಮಾಡಿದೆ.
Also Read:
ಇನ್ನೊಂದು ವಾರದಲ್ಲಿ ಮಂಡ್ಯ ಮೈಶುಗರ್ ಕಾರ್ಖಾನೆ ಆರಂಭ: ರೈತರಿಗೆ ಹರ್ಷ
Published On - 9:11 pm, Thu, 11 August 22