ಸಾಮಾನ್ಯವಾಗಿಯೇ ವರ್ಷದ ಈ ಸಮಯದಲ್ಲಿ ಘೋಷಣೆ ಮಾಡುವಂತೆ ಮಾರುತಿ ಸುಜುಕಿಯಿಂದ ಕೆಲವು ನಗದು ರಿಯಾಯಿತಿ ಯೋಜನೆಗಳು ಮತ್ತು ವಿನಿಮಯ ಅನುಕೂಲಗಳನ್ನು ಘೋಷಣೆ ಮಾಡಲಾಗಿದೆ. ಈ ಕೊಡುಗೆಗಳು ಜುಲೈ 1, 2021ರಿಂದ ಜಾರಿಗೆ ಬರುತ್ತವೆ. ರಿಯಾಯಿತಿ ಯೋಜನೆಗಳ ಜೊತೆಗೆ ವಿನಿಮಯ ಬೆನಿಫಿಟ್ಗಳು ಹಾಗೂ ಅದರೊಂದಿಗೆ ವಿಶೇಷ ಇನ್ಸ್ಟಿಟ್ಯೂಷನಲ್ ಮಾರಾಟ ಕೊಡುಗೆಗಳನ್ನು ಘೋಷಿಸಿದ್ದು, ಆ ಬಗ್ಗೆ ವಿವರಗಳು ಇಲ್ಲಿವೆ. ಮಾರುತಿ ಸುಜುಕಿ ಆಲ್ಟೊ 800 ವಿವಿಧ ಶ್ರೇಣಿಯಲ್ಲಿ ಒಟ್ಟು ರೂ. 33,000 ದಿಂದ 43,000 ರೂ. ತನಕ ಉಳಿತಾಯ ಮಾಡಬಹುದು. ಆಲ್ಟೊ ಪೆಟ್ರೋಲ್ ಕಾರಿನ ಮೇಲೆ ಖರೀದಿದಾರರಿಗೆ ರೂ. 15,000 ನಗದು ರಿಯಾಯಿತಿ, ರೂ. 15,000 ವಿನಿಮಯ ಕೊಡುಗೆ ಮತ್ತು ರೂ. 3,000 ಇನ್ಸ್ಟಿಟ್ಯೂಷನಲ್ ಆಫರ್ ಇದೆ. ಈ ಎಲ್ಲ ಸೇರಿ ರೂ. 33,000 ರಿಯಾಯಿತಿ ಪಡೆಯಬಹುದು. ಆಲ್ಟೊದ ಇತರ ವೇರಿಯಂಟ್ಗಳಿಗೆ ರೂ. 25,000 ನಗದು ರಿಯಾಯಿತಿ, ರೂ. 15,000 ವಿನಿಮಯ ಲಾಭ ಮತ್ತು ರೂ. 3,000 ಆಫರ್ಗಳನ್ನು ಒಳಗೊಂಡಂತೆ ರೂ. 43,000 ವರೆಗೆ ರಿಯಾಯಿತಿ ಸಿಗುತ್ತವೆ. ಆದರೆ ಆಲ್ಟೊ 800 ಸಿಎನ್‌ಜಿ ಖರೀದಿದಾರರಿಗೆ ಎಲ್ಲ ನಗದು ರಿಯಾಯಿತಿ ಸೇರಿ ರೂ. 36,000 ಉಳಿತಾಯದ ಲಾಭ ಪಡೆಯಬಹುದು.
ಎಸ್-ಪ್ರೆಸ್ಸೊ ಪೆಟ್ರೋಲ್ ಮತ್ತು ಸಿಎನ್‌ಜಿಯಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಬೆನಿಫಿಟ್ಗಳು ಕ್ರಮವಾಗಿ ರೂ. 44,000 ಮತ್ತು ರೂ. 34,000ಕ್ಕೆ ವಿಸ್ತರಿಸಿದೆ. ಸೆಲೆರಿಯೊ ಸಿಎನ್‌ಜಿ ಮತ್ತು ಪೆಟ್ರೋಲ್‌ಗೆ ಕ್ರಮವಾಗಿ ರೂ. 18,000 ಮತ್ತು ರೂ. 19,000 ಉಳಿತಾಯ ಮಾಡಬಹುದು. ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ಬೆನಿಫಿಟ್ಗಳನ್ನು ಗಣನೆಗೆ ತೆಗೆದುಕೊಂಡು ಇಷ್ಟು ಮೊತ್ತದ ಉಳಿತಾಯ ಆಗುತ್ತದೆ. ಮಾರುತಿ ಸುಜುಕಿಯಿಂದ ಹೊಸ ಸೆಲೆರಿಯೊವನ್ನು ಹಬ್ಬದ ಋತುವಿಗೆ ಸ್ವಲ್ಪ ಮುಂಚಿತವಾಗಿ, ಅಂದರೆ 2021ರ ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಹೊಸ ಸೆಲೆರಿಯೊ ಆಮೂಲಾಗ್ರವಾಗಿ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಆದರೆ ಎಂಜಿನ್ ಆಯ್ಕೆಯು ಹಾಗೇ ಮುಂದುವರಿಸಲಿದೆ.
ಕಂಪೆನಿಯ ಬೆಸ್ಟ್ ಸೆಲ್ಲಿಂಗ್ ಮಾಡೆಲ್ ಆದ ವ್ಯಾಗನ್ ಆರ್ ಪೆಟ್ರೋಲ್ ಎಂಜಿನ್ಗೆ ರೂ. 15,000 ನಗದು ರಿಯಾಯಿತಿ, ರೂ. 15,000 ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಖರೀದಿದಾರರಿಗೆ ರೂ. 4,000 ಸೇರಿಸಿ ಒಟ್ಟು 34,000 ವರೆಗೆ ರಿಯಾಯಿತಿ ನೀಡುತ್ತದೆ. ವ್ಯಾಗನ್ ಆರ್ ಸಿಎನ್‌ಜಿಗೆ ರೂ. 8,000 ನಗದು ರಿಯಾಯಿತಿ, ರೂ. 15,000 ವಿನಿಮಯ ಲಾಭ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 3,000 ಸೇರಿ ಒಟ್ಟು ರೂ. 26,000 ವರೆಗೆ ಬೆನಿಫಿಟ್ ಇದೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ಗೆ ವೇರಿಯಂಟ್ಗಳನ್ನು ಅವಲಂಬಿಸಿ ಒಟ್ಟು 35,000 ದಿಂದ 40,000 ರೂ. ತನಕ ಉಳಿತಾಯವನ್ನು ಮಾಡಬಹುದು. ಬ್ರೆಜಾ ಪೆಟ್ರೋಲ್‌ಗೆ 40,000 ರೂ.ಗಳವರೆಗೆ ಬೆನಿಫಿಟ್ ಇದೆ. ಆದರೆ ಎರ್ಟಿಗಾ ಪೆಟ್ರೋಲ್ ಅಥವಾ ಸಿಎನ್‌ಜಿಯಲ್ಲಿ ಯಾವುದೂ ಇಲ್ಲ.
ಮಾರುತಿ ಸುಜುಕಿ ಇಕೊ ವ್ಯಾನ್ ಅನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ವೇರಿಯಂಟ್ಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಿಯಾಯಿತಿಯು ರೂ. 34,000ದ ವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ರೂ. 15,000 ನಗದು ರಿಯಾಯಿತಿ, ರೂ. 15,000 ವಿನಿಮಯ ಕೊಡುಗೆ, ರೂ. 4,000 ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿದೆ. ಕಾರ್ಗೋ ಸಿಎನ್‌ಜಿ ವೇರಿಯಂಟ್ಗೆ ಒಟ್ಟು ರೂ. 28,000 ರಿಯಾಯಿತಿ ಇದೆ ಮತ್ತು ರೆಗ್ಯುಲರ್ ವೇರಿಯಂಟ್ಗೆ ರೂ. 33,000 ರಿಯಾಯಿತಿ ಇದೆ. ಟೂರ್ ಎಂ ಪೆಟ್ರೋಲ್‌ಗೆ ರೂ. 15,000 ದಿಂದ, ಟೂರ್ ಎಚ್ 1 ಪೆಟ್ರೋಲ್ ಮತ್ತು ಎಚ್ 2 ಪೆಟ್ರೋಲ್ ಮತ್ತು ಟೂರ್ ವಿ ಪೆಟ್ರೋಲ್‌ಗೆ ಕ್ರಮವಾಗಿ ರೂ. 52,000 ಮತ್ತು ರೂ.50,000 ಇದೆ. ಮಾರುತಿ ಸುಜುಕಿ ಟೂರ್ ಎಚ್ 2 ಸಿಎನ್‌ಜಿಗೆ ಒಟ್ಟು ರೂ.35,000 ಉಳಿತಾಯ ಆಗಲಿದ್ದು, ರೂ .10,000 ನಗದು ರಿಯಾಯಿತಿ, ರೂ. 15,000 ವಿನಿಮಯ ಕೊಡುಗೆ ಮತ್ತು ಇನ್ಸ್ಟಿಟ್ಯೂಷನ್ ಬೆನಿಫಿಟ್ಗಳು ರೂ. 10,000 ಒಳಗೊಂಡಿದೆ. ಕಾರು ಖರೀದಿ ಮಾಡುವ ಮೊದಲು ಡೀಲರ್ಗಳ ಬಳಿ ಈ ಬಗ್ಗೆ ವಿಚಾರಿಸಿಕೊಳ್ಳಬೇಕು.
ಇದನ್ನೂ ಓದಿ: ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ
(Maruti Suzuki India company announced offers and discounts on cars for July month)