Maruti Celerio CNG: ಮಾರುತಿ ಸೆಲೆರಿಯೋ ಸಿಎನ್​ಜಿ ಘೋಷಣೆ; 36 ಕಿ.ಮೀ. ಮೈಲೇಜ್, 6.58 ಲಕ್ಷ ರೂಪಾಯಿ ಬೆಲೆ​

| Updated By: Srinivas Mata

Updated on: Jan 17, 2022 | 6:13 PM

ಮಾರುತಿ ಸುಜುಕಿ ಇಂಡಿಯಾದಿಂದ ಹೊಸ ಸೆಲೆರಿಯೋ ಎಸ್ ತಂತ್ರಜ್ಞಾನದೊಂದಿಗೆ ಘೋಷಣೆ ಮಾಡಲಾಗಿದೆ. 36 ಕಿಲೋಮೀಟರ್ ಪ್ರತಿ ಕೇಜಿಗೆಎ ಮೈಲೇಜ್ ದೊರೆಯುತ್ತದೆ ಎನ್ನಲಾಗಿದೆ.

Maruti Celerio CNG: ಮಾರುತಿ ಸೆಲೆರಿಯೋ ಸಿಎನ್​ಜಿ ಘೋಷಣೆ; 36 ಕಿ.ಮೀ. ಮೈಲೇಜ್, 6.58 ಲಕ್ಷ ರೂಪಾಯಿ ಬೆಲೆ​
ಪ್ರಾತಿನಿಧಿಕ ಚಿತ್ರ
Follow us on

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್​ನಿಂದ (Maruti Suzuki India Limited) ಜನವರಿ 17ನೇ ತಾರೀಕಿನ ಸೋಮವಾರದಂದು ಸೆಲೆರಿಯೋ ಕಾರಿನ ಸಿಎನ್​ಜಿ (Maruti Celerio CNG- S) ಮಾದರಿಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಿಸಲಾಗಿದೆ. ಭಾರತದಲ್ಲಿ ಬೆಳೆಯುತ್ತಿರುವ ಗ್ರೀನ್​ ವಾಹನಗಳ ಪೋರ್ಟ್​ಫೋಲಿಯೋವನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಗೆ ಅನುಗುಣವಾಗಿಹೊಸ ಸೆಲೆರಿಯೋ ಜತೆಗೆ ಎಸ್​- ಸಿಎನ್​ಜಿ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಮುಂದಿನ ತಲೆಮಾರಿನ ಡ್ಯುಯೆಲ್ ಜೆಟ್, ಡ್ಯುಯೆಲ್ ವಿವಿಟಿ ಕೆ- ಸಿರೀಸ್ 1.0L ಎಂಜಿನ್, ಹೊಸ ಸೆಲೆರಿಯೊ ಜತೆಗೆ ಎಸ್​- ಸಿಎನ್​ಜಿ ತಂತ್ರಜ್ಞಾನ ಕೇಜಿಗೆ 35.60 ಕಿಲೋಮೀಟರ್ ಮೈಲೇಜ್​ ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಈ ಕಾರಿನಲ್ಲಿ ಸಿಎನ್​ಜಿ ಟ್ಯಾಂಕ್ ಸಾಮರ್ಥ್ಯ 60 ಲೀಟರ್ ಇದೆ. ಸೆಲೆರಿಯೋ ಎಸ್​- ಸಿಎನ್​ಜಿ ಕಾರ್ಖಾನೆಯಲ್ಲಿ ಸಿದ್ಧಗೊಳ್ಳುವ ಕಾರು. ಬೆಲೆ ರೂ. 6.58 ಲಕ್ಷ (ಎಕ್ಸ್​-ಶೋರೂಂ) (VXi ಮಾಡೆಲ್). ಈ ಎಂಜಿನ್ 41.7kW ಪವರ್ 5300 ಆರ್​ಪಿಎಂ (ಸಿಎನ್​ಜಿ ಮೋಡ್), ಮತ್ತು 48.0kW 5500 ಆರ್​ಪಿಎಂ (ಗ್ಯಾಸೊಲಿನ್ ಮೋಡ್) ಜನರೇಟ್ ಮಾಡುತ್ತದೆ. ಸಿಎನ್​ಜಿ ಮೋಡ್​ನಲ್ಲಿ ಕಾರಿನ ಗರಿಷ್ಠ ಟಾರ್ಕ್ 82.1 ಎನ್​ಎಂ ಮತ್ತು ಗ್ಯಾಸೋಲಿನ್ ಮೋಡ್​ನಲ್ಲಿ 89 ಎನ್​ಎಂ ಇರುತ್ತದೆ.

ಸೆಲೆರಿಯೋ ಪೆಟ್ರೋಲ್​ ಕಾರು 2021ರ ನವೆಂಬರ್​ನಲ್ಲಿ ಬಿಡುಗಡೆಯಾಯಿತು. ಅಲ್ಲಿಂದ ಎರಡು ತಿಂಗಳಲ್ಲಿ 25 ಸಾವಿರ ಬುಕ್ಕಿಂಗ್ ಪಡೆದುಕೊಂಡಿತು. ಎಲ್ಲ ರೀತಿಯ ಹೊಸ ಸೆಲೆರಿಯೋದೊಂದಿಗೆ, ಮಾರಾಟವು 6,00,000 ಯೂನಿಟ್ ದಾಟಿದೆ. ಮಾರುತಿ ಸುಜುಕಿ ಕಾರ್ಖಾನೆಯಲ್ಲಿ ಜೋಡಣೆಯಾದ ಎಸ್​-ಸಿಎನ್​ಜಿ ವಾಹನದಲ್ಲಿ ಡ್ಯುಯಲ್ ಇಂಟರ್​ಡಿಂಪೆಂಡೆಂಟ್​ ಇಸಿಯುಸ್​ (ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್​ಗಳು) ಮತ್ತು ಇಂಟೆಲಿಜೆಂಟ್ ಇಂಜೆಕ್ಷನ್ ಸಿಸ್ಟಮ್ ಹೊಂದಿದೆ. ಎಲ್ಲ ಬಗೆಯ ರಸ್ತೆಗಳಲ್ಲೂ ಸಂಚರಿಸುವಂಥ, ದೀರ್ಘ ಕಾಲ ಬಾಳಿಕೆ ಬರುವಂಥ, ಉತ್ತಮ ಪರ್ಫಾರ್ಮೆನ್ಸ್​ನ ವಾಹನ ಇದಾಗಿದೆ. ಎಸ್​-ಸಿಎನ್​ಜಿ ವಾಹನವು ಸುರಕ್ಷತೆ, ಎಂಜಿನ್​ ಬಾಳಿಕೆ, ಕನ್ವೀನಿಯೆನ್ಸ್ ಮತ್ತು ಅದ್ಭುತ ಮೈಲೇಜ್​ಗಾಗಿ ರೂಪಿಸಲಾಗಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಮಾರಾಟ) ಶಶಾಂಕ್ ಶ್ರೀವಾಸ್ತವ ಮಾತನಾಡಿ, “ಮಾರುತಿ ಸುಜುಕಿ ಕಾರ್ಖಾನೆಯಲ್ಲಿ ಅಳವಡಿಸಲಾದ ಸಿಎನ್‌ಜಿ ಕಾರುಗಳನ್ನು ನೀಡಲು ದೇಶದಲ್ಲಿ ಪ್ರಮುಖವಾಗಿದೆ. ನಾವು ರಸ್ತೆಯಲ್ಲಿ 8 ಹಸಿರು ಮಾದರಿಗಳ ಅತಿದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದ್ದೇವೆ ಮತ್ತು ಸುಮಾರು 9,50,000 S-CNG ವಾಹನಗಳನ್ನು ಮಾರಾಟ ಮಾಡಿದ್ದೇವೆ. ಫ್ಯಾಕ್ಟರಿ ಅಳವಡಿಸಿದ S-CNG ವಾಹನದ ಮಾಲೀಕತ್ವವು ಪ್ರಮಾಣಿತ ಖಾತರಿ ಪ್ರಯೋಜನಗಳೊಂದಿಗೆ ಮತ್ತು ಭಾರತದಾದ್ಯಂತ ಹರಡಿರುವ ಮಾರುತಿ ಸುಜುಕಿಯ ಸೇವಾ ನೆಟ್‌ವರ್ಕ್‌ನ ಅನುಕೂಲದೊಂದಿಗೆ ಬರುತ್ತದೆ. ಇದು ನಮ್ಮ ಗ್ರಾಹಕರಿಗೆ ತುಂಬಾ ಆರಾಮದಾಯಕವಾಗಿದೆ. ಹಸಿರು ಮೊಬಿಲಿಟಿ ಗಮನದಲ್ಲಿಟ್ಟುಕೊಂಡು, ಕಳೆದ ಐದು ವರ್ಷಗಳಲ್ಲಿ ನಮ್ಮ CNG ಮಾರಾಟದಲ್ಲಿ ಶೇ 22 CAGR ಹೆಚ್ಚಳಕ್ಕೆ ಸಾಕ್ಷಿಯಾಗಿದ್ದೇವೆ. ಗ್ರಾಹಕರು ತಾಂತ್ರಿಕವಾಗಿ ಸುಧಾರಿತ, ಪರಿಸರ ಸ್ನೇಹಿ ಮತ್ತು ಸುರಕ್ಷಿತ CNG ಮೊಬಿಲಿಟಿ ಸಲ್ಯೂಷನ್​ಗಳನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ,” ಎಂದಿದ್ದಾರೆ.

ಅವರು ಮುಂದುವರಿದು, “ಎಲ್ಲ-ಹೊಸದಾದ ಸೆಲೆರಿಯೊ S-CNG ಬಿಡುಗಡೆಯು ಭಾರತದಲ್ಲಿ ಹಸಿರು ವಾಹನಗಳ ಸಾಮೂಹಿಕ ಅಳವಡಿಕೆಯನ್ನು ಮುನ್ನಡೆಸುವ ನಮ್ಮ ಮಹತ್ವಾಕಾಂಕ್ಷೆಗೆ ಒಂದು ಹೆಜ್ಜೆ ಹತ್ತಿರಕ್ಕೆ ಒಯ್ಯುತ್ತದೆ. ಕುತೂಹಲಕಾರಿಯಾಗಿ, ಹಿಂದಿನ ತಲೆಮಾರಿನ ಸೆಲೆರಿಯೋದಲ್ಲಿನ S-CNG ವೇರಿಯಂಟ್ ಒಟ್ಟು ಮಾರಾಟದಲ್ಲಿ ಶೇ 30ಕ್ಕಿಂತ ಹೆಚ್ಚು ಕೊಡುಗೆ ನೀಡಿದೆ. ಹೊಸ 3D ಆರ್ಗಾನಿಕ್ ಕೆತ್ತನೆಯ ವಿನ್ಯಾಸ, ಶಕ್ತಿಯುತ ಮತ್ತು ವಿಶಾಲವಾದ ಕ್ಯಾಬಿನ್ ಮತ್ತು S-CNG ತಂತ್ರಜ್ಞಾನದೊಂದಿಗೆ ಆಲ್-ನ್ಯೂ ಸೆಲೆರಿಯೊ S-CNG ಗ್ರಾಹಕರಿಗೆ ಕೈಗೆಟುಕುವ, ಸುರಕ್ಷಿತ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಹಸಿರು ವಾಹನವನ್ನು ನೀಡುತ್ತದೆ. ಗ್ರಾಹಕರು ಎಲ್ಲ-ಹೊಸ ಸೆಲೆರಿಯೊ ಎಸ್-ಸಿಎನ್‌ಜಿಯ ಅದ್ಭುತ ಇಂಧನ-ದಕ್ಷತೆಯನ್ನು ಮೆಚ್ಚುತ್ತಾರೆ ಎಂಬ ವಿಶ್ವಾಸ ನಮಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ: Car Sales: ಚಿಪ್ ಕೊರತೆಯಿಂದ ಡಿಸೆಂಬರ್ ತಿಂಗಳಲ್ಲಿ ಕಾರು ಮಾರಾಟ ಶೇ 13ರಷ್ಟು ಕುಸಿತ