Car Sales: ಚಿಪ್ ಕೊರತೆಯಿಂದ ಡಿಸೆಂಬರ್ ತಿಂಗಳಲ್ಲಿ ಕಾರು ಮಾರಾಟ ಶೇ 13ರಷ್ಟು ಕುಸಿತ
ಭಾರತದಲ್ಲಿ ಕಾರು ಮಾರಾಟ ಡಿಸೆಂಬರ್ ತಿಂಗಳಲ್ಲಿ ಶೇ 13ರಷ್ಟು ಇಳಿಕೆ ಆಗಿದೆ. ಜಾಗತಿಕ ಚಿಪ್ ಕೊರತೆಯು ಉತ್ಪಾದನೆ ಮೇಲೆ ಆಗಿದೆ.
ಬಲವಾದ ಬೇಡಿಕೆಯ ಹೊರತಾಗಿಯೂ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಪ್ರಯಾಣಿಕ ವಾಹನ ಮಾರಾಟವು (December Month Car Sales) ಕುಸಿದಿದೆ. ಸೆಮಿಕಂಡಕ್ಟರ್‌ಗಳ ಜಾಗತಿಕ ಕೊರತೆಯು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಈ ಮಧ್ಯೆಯೂ 2021ರ ಕ್ಯಾಲೆಂಡರ್ ವರ್ಷದಲ್ಲಿ ಮಾರಾಟವು ಕೇವಲ ಮೂರನೇ ಬಾರಿಗೆ 30 ಲಕ್ಷದ ಲೆಕ್ಕವನ್ನು ಮೀರಿದೆ. ಉದ್ಯಮಗಳ ಒಕ್ಕೂಟ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಮಾಹಿತಿಯ ಪ್ರಕಾರ, ಕಾರು ತಯಾರಕರು ಡಿಸೆಂಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 219,421 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಇದು ಕಳೆದ ವರ್ಷದಿಂದ ಈ ವರ್ಷಕ್ಕೆ ಶೇ 13ರಷ್ಟು ಕಡಿಮೆಯಾಗಿದೆ. ಟಾಟಾ ಮೋಟಾರ್ಸ್‌ನ ಸಂಖ್ಯೆಗಳನ್ನು ಸೇರಿಸಿದಾಗ ಮಾರಾಟದಲ್ಲಿನ ಕುಸಿತವು ಸುಮಾರು ಶೇ 8ರಷ್ಟು ಕಡಿಮೆಯಾಗಿದೆ. SIAMಗೆ ಮಾಸಿಕ ಆಧಾರದ ಮೇಲೆ ಡೇಟಾವನ್ನು ವರದಿ ಮಾಡುವುದನ್ನು ಟಾಟಾ ಮೋಟಾರ್ಸ್ ನಿಲ್ಲಿಸಿದೆ. ಕಳೆದ ತಿಂಗಳು 35,299 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.
2021ರ ಪೂರ್ಣ ವರ್ಷದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಸುಮಾರು ಶೇ 27ರಷ್ಟು ಬೆಳವಣಿಗೆಯಾಗಿ, 30.80 ಲಕ್ಷ ಯೂನಿಟ್‌ಗಳಿಗೆ ಏರಿದೆ. ಪ್ರಯಾಣಿಕ ವಾಹನಗಳ ಮಾರಾಟವು ಈ ಹಿಂದೆ 2017 ಮತ್ತು 2018ರಲ್ಲಿ 30 ಲಕ್ಷದ ಗಡಿಯನ್ನು ದಾಟಿತ್ತು. ಭಾರತದಲ್ಲಿನ ವಾಹನ ತಯಾರಕರು ಕಾರ್ಖಾನೆಗಳಿಂದ ಸಗಟು ರವಾನೆಗಳನ್ನು ವರದಿ ಮಾಡುತ್ತಾರೆ, ಗ್ರಾಹಕರಿಗೆ ರೀಟೇಲ್ ಮಾರಾಟವಲ್ಲ. ಡಿಸೆಂಬರ್‌ಗೆ ಕೊನೆಗೊಂಡ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಪ್ರಯಾಣಿಕ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಕುಸಿದು, 7,61,124 ಯೂನಿಟ್‌ಗಳಿಗೆ ತಲುಪಿದೆ. ಮುಖ್ಯವಾಗಿ ಜಾಗತಿಕ ಚಿಪ್ ಕೊರತೆಯಿಂದಾಗಿ ಎಲ್ಲ ಕಾರು ತಯಾರಕರು ಉತ್ಪಾದನೆಯನ್ನು ಕಡಿತಗೊಳಿಸುವಂತೆ ಸನ್ನಿವೇಶ ಸೃಷ್ಟಿಯಾಗಿದೆ.
ಸ್ವಾಧೀನಪಡಿಸಿಕೊಳ್ಳುವ ವೆಚ್ಚಗಳ ಹೆಚ್ಚಳ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿನ ಕೊರೊನಾ ರೋಗದ ಎರಡನೇ ಅಲೆಯ ಮುಂದುವರಿದ ಆರ್ಥಿಕ ಪರಿಣಾಮದಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಶೇ 25ರಷ್ಟು ಕಡಿಮೆಯಾಗಿ, 35,98,299 ಯೂನಿಟ್‌ಗಳಿಗೆ ಇಳಿದಿದೆ. ಡಿಸೆಂಬರ್‌ನಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಶೇ 11ರಷ್ಟು ಕುಸಿದು, 10,06,062 ಯೂನಿಟ್‌ಗಳಿಗೆ ತಲುಪಿದೆ. “ಹಬ್ಬದ ಸೀಸನ್ ಸೇರಿದಂತೆ ತ್ರೈಮಾಸಿಕ-3 ಮಾರಾಟವು ನಿರೀಕ್ಷೆಯಂತೆ ಇರಲಿಲ್ಲ” ಎಂದು SIAM ಅಧ್ಯಕ್ಷ ಮತ್ತು ಮಾರುತಿ ಸುಜುಕಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಆಯುಕಾವಾ ಹೇಳಿದ್ದಾರೆ. “ಎಲ್ಲ ವಿಭಾಗಗಳು ಇನ್ನೂ ಹಲವು ವರ್ಷಗಳಿಂದ ಹಿಂದುಳಿದಿವೆ. ಉತ್ಪಾದನೆಯನ್ನು ಗರಿಷ್ಠಗೊಳಿಸಲು ಮತ್ತು ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಜನರ ಸುರಕ್ಷತೆಯನ್ನು ಖಾತ್ರಿಪಡಿಸುವ ಜೊತೆಗೆ ಪೂರೈಕೆ ನಿರ್ಬಂಧಗಳ ಪರಿಣಾಮವನ್ನು ಕಡಿಮೆ ಮಾಡಲು ಉದ್ಯಮವು ಶ್ರಮಿಸುತ್ತಿದೆ,” ಎಂದಿದ್ದಾರೆ.
SIAM ಡೈರೆಕ್ಟರ್ ಜನರಲ್ ರಾಜೇಶ್ ಮೆನನ್, ಮೂರನೇ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ಪೂರೈಕೆಯ ನಿರ್ಬಂಧಗಳಿಂದ ಹೆಚ್ಚಾಗಿ ಪರಿಣಾಮ ಬೀರಿತು. ಆದರೆ ದ್ವಿಚಕ್ರ ವಾಹನಗಳ ವಿಭಾಗವು ಕಡಿಮೆ ಬೇಡಿಕೆಯಿಂದಾಗಿ ಪ್ರಮುಖವಾಗಿ ಪ್ರಭಾವಿತವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Maruti Suzuki Car Price: ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಜ. 15ರಿಂದ ಏರಿಕೆ