MG Motor ZS EV 2022: ಶೀಘ್ರದಲ್ಲೇ 480 ಕಿ.ಮೀ ಮೈಲೇಜ್ ನೀಡುವ MG ಕಾರು ಬಿಡುಗಡೆ

| Updated By: ಝಾಹಿರ್ ಯೂಸುಫ್

Updated on: Mar 02, 2022 | 10:24 PM

MG Motor ZS EV 2022: ಹೊಸ EV 51kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ. ಆದಾಗ್ಯೂ, ಕಂಪನಿಯು ಅನೇಕ EV ಗಳ ರೇಂಜ್​ ಅನ್ನು ಬಹಿರಂಗಪಡಿಸಿಲ್ಲ.

MG Motor ZS EV 2022: ಶೀಘ್ರದಲ್ಲೇ 480 ಕಿ.ಮೀ ಮೈಲೇಜ್ ನೀಡುವ MG ಕಾರು ಬಿಡುಗಡೆ
MG Motor ZS EV
Follow us on

MG ಮೋಟಾರ್ ಇಂಡಿಯಾ ಶೀಘ್ರದಲ್ಲೇ ಫೇಸ್‌ಲಿಫ್ಟೆಡ್ ZS ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲಿದೆ. MG ZS EV ಅನ್ನು ಭಾರತದಲ್ಲಿ ಮೊದಲ ಬಾರಿಗೆ 2020 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಕೆಲ ಸಣ್ಣ ಬದಲಾವಣೆಗಳು ಮತ್ತು ನವೀಕರಣಗಳೊಂದಿಗೆ ಮರು ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ನೂತನ MG ZS EV ಫೇಸ್‌ಲಿಫ್ಟ್ ಭಾರತದಲ್ಲಿ ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಹೊಸ MG ZS EV ಯಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ ZS EV 44.5kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಪಡೆದರೆ, ಫೇಸ್‌ಲಿಫ್ಟೆಡ್ ಮಾಡೆಲ್ ದೊಡ್ಡ 51kWh ಬ್ಯಾಟರಿಯನ್ನು ಹೊಂದಿರಲಿದೆ.

ಇನ್ನು MG ZS EVಯ ಹೊಸ ವಿನ್ಯಾಸವು ಕೆಲವು ಹೊಸ ಎಲೆಕ್ಟ್ರಿಕ್ ವಿಶೇಷಣಗಳೊಂದಿಗೆ ಸಂಪೂರ್ಣವಾಗಿ ಹೊಸ ಲುಕ್​ ಅನ್ನು ನೀಡಲಾಗಿದೆ . ಹಾಗೆಯೇ ಇದು ಡೇಟೈಮ್ ಎಲ್ಇಡಿ ಚಾಲನೆಯಲ್ಲಿರುವ ಲ್ಯಾಂಪ್​ಗಳೊಂದಿಗೆ ಸ್ಲೀಕರ್ ಎಲ್ಇಡಿ ಹೆಡ್​ಲ್ಯಾಂಪ್​ಗಳನ್ನು ಹೊಂದಿರಲಿದೆ. ಭಾರತದಲ್ಲಿನ ಯಾವುದೇ ಎಲೆಕ್ಟ್ರಿಕ್ ವಾಹನಕ್ಕೆ ಹೋಲಿಸಿದರೆ MG ZS EV ದೀರ್ಘ ಶ್ರೇಣಿಯ SUV ಎಂದು ಕಂಪೆನಿ ಹೇಳಿಕೊಂಡಿದೆ.

MG ZS EV ವೈಶಿಷ್ಟ್ಯಗಳು:
ADAS ವೈಶಿಷ್ಟ್ಯ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಸ EV ನಲ್ಲಿ ನೀಡಲಾಗಿದೆ. ಆಸ್ಟರ್‌ನಂತೆ ಕ್ಯಾಮೆರಾ ಮತ್ತು ರಾಡಾರ್ ಸೆಟಪ್ ಇದರಲ್ಲಿದೆ. ಇದಲ್ಲದೆ, EV ಯ ಡ್ಯಾಶ್‌ಬೋರ್ಡ್‌ನಲ್ಲಿ Aster Robot Assistant ನ USP ಅನ್ನು ಸಹ ನೀಡಲಿದೆ. ಹಾಗೆಯೇ 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ EV ನಲ್ಲಿ ಕಾಣಬಹುದು. ಹೊಸ MG ZS EV ಅದರ ಒಳಭಾಗದಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ. ಉನ್ನತ ರೂಪಾಂತರಗಳು ಟಚ್‌ಸ್ಕ್ರೀನ್ ಸುತ್ತಲೂ ಹೊಸ ಫಾಕ್ಸ್ ಕಾರ್ಬನ್ ಫೈಬರ್ ಟ್ರಿಮ್ ಅನ್ನು ಪಡೆಯುತ್ತವೆ. ಹವಾಮಾನ ನಿಯಂತ್ರಣ ಬಟನ್‌ಗಳನ್ನು ಸಹ ಬದಲಾಯಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೊಸ EV 51kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರಲಿದೆ. ಆದಾಗ್ಯೂ, ಕಂಪನಿಯು ಅನೇಕ EV ಗಳ ರೇಂಜ್​ ಅನ್ನು ಬಹಿರಂಗಪಡಿಸಿಲ್ಲ. ಆದರೆ ಹಳೆಯ EV 44.5kWh ಬ್ಯಾಟರಿ 415 ಕಿಮೀ ರೇಂಜ್​ನ್ನು ನೀಡುತ್ತಿತ್ತು. ಹೀಗಾಗಿ ಹೊಸ EV 480 ಕಿಮೀ ರೇಂಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ZS EV ಯ ಎಕ್ಸ್ ಶೋರೂಂ ಬೆಲೆ 21.49 ಲಕ್ಷದಿಂದ 25.18 ಲಕ್ಷದವರೆಗೆ ಇದೆ. ಹೀಗಾಗಿ ಹೊಸ MG ZS EV ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(MG Motor ZS EV 2022 launch date confirmed)