Hero Eddy: ಕಡಿಮೆ ಬೆಲೆಯ ವಿಭಿನ್ನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ
Hero Eddy Electric Scooter: ಕಂಪನಿಯು ದೇಶಾದ್ಯಂತ 750 ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಮಳಿಗೆಗಳನ್ನು ಹೊಂದಿದೆ. ಹಾಗೆಯೇ ತನ್ನ ಗ್ರಾಹಕರಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೀರೋ ಕಂಪೆನಿ ಹೇಳಿಕೊಂಡಿದೆ.
ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಹೀರೋ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಹೀರೋ ಎಡ್ಡಿಯನ್ನು (Hero Eddy Electric Scooter ) ಪರಿಚಯಿಸಿದೆ. ಈ ಸ್ಕೂಟರ್ನಲ್ಲಿ ಇ-ಲಾಕ್, ಫೈಂಡ್ ಮೈ ಬೈಕ್, ರಿವರ್ಸ್ ಮೋಡ್, ದೊಡ್ಡ ಬೂಟ್ ಸ್ಪೇಸ್ ಮತ್ತು ಫಾಲೋ ಮಿ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ನೀಡಲಾಗಿರುವುದು ವಿಶೇಷ. ಇನ್ನು ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಅದರಂತೆ ತಿಳಿ ನೀಲಿ ಹಾಗೂ ಹಳದಿ ಬಣ್ಣಗಳಲ್ಲಿ ಹೀರೋ ಎಡ್ಡಿಯನ್ನು ತಮ್ಮದಾಗಿಸಿಕೊಳ್ಳಬಹುದು.
“ಹೀರೋ ಎಡ್ಡಿಯನ್ನು ಬಿಡುಗಡೆ ಮಾಡಲು ನಾವು ರೋಮಾಂಚನಗೊಂಡಿದ್ದೇವೆ. ಇದು ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು ಸೊಗಸಾದ ಲುಕ್ನೊಂದಿಗೆ ಆನ್-ರೋಡ್ಗೆ ಅತ್ಯುತ್ತಮ ಸ್ಕೂಟರ್. ಕಾರ್ಬನ್-ಮುಕ್ತ ಭವಿಷ್ಯಕ್ಕಾಗಿ ಕೊಡುಗೆ ನೀಡಲು ವ್ಯಕ್ತಿಯ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲಾ ಸೌಕರ್ಯ ಮತ್ತು ಅನುಕೂಲತೆಯನ್ನು ನೀಡಲಿರುವ ಸ್ಕೂಟರ್ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಹೀರೋ ಎಲೆಕ್ಟ್ರಿಕ್‌ನ ಎಂಡಿ ನವೀನ್ ಮುಂಜಾಲ್ ತಿಳಿಸಿದ್ದಾರೆ.
ಹೀರೋ ಎಲೆಕ್ಟ್ರಿಕ್ ಭಾರತದಲ್ಲಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಪವರ್ ಪ್ಲೇಯರ್ ಆಗಲಿದೆ. ಇತ್ತೀಚೆಗೆ ತನ್ನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಲುಧಿಯಾನದಲ್ಲಿನ ತನ್ನ ಸ್ಥಾವರದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಹೀರೋ ಕಂಪೆನಿ ಘೋಷಿಸಿದೆ. ಕಂಪನಿಯು ದೇಶಾದ್ಯಂತ 750 ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಮಳಿಗೆಗಳನ್ನು ಹೊಂದಿದೆ. ಹಾಗೆಯೇ ತನ್ನ ಗ್ರಾಹಕರಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೀರೋ ಕಂಪೆನಿ ಹೇಳಿಕೊಂಡಿದೆ.
ಅದರಂತೆ ಎಲ್ಲಾ ಸೌಕರ್ಯಗಳೊಂದಿಗೆ ಹೀರೋ ಎಡ್ಡಿ ಶೀಘ್ರದಲ್ಲೇ ಭಾರತದ ರಸ್ತೆಗಿಳಿಯಲಿದೆ. ಅದರಂತೆ ಹೀರೋ ಎಡ್ಡಿಯ ಆರಂಭಿಕ ಬೆಲೆ 72 ಸಾವಿರ ರೂ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Hero Eddy Electric Scooter Launched at Rs 72,000 in India)