AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Data Protection Bill: ಡಾಟಾ ಪ್ರೊಟೆಕ್ಷನ್ ಬಿಲ್​ಗೆ ಅನುಮೋದನೆಯಾಗಿದೆ ಎಂದು ಸಚಿವರು ಹೇಳಿಲ್ಲ: NASSCOM ಸ್ಪಷ್ಟನೆ

NASSCOM Clarification Statement: ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕರಡು ಮಸೂದೆಗೆ ಸಂಸದೀಯ ಸ್ಥಾಯಿ ಸಮಿತಿಯೊಂದರ ಅನುಮೋದನೆ ಆಗಿದೆ ಎಂದು ನಿನ್ನೆ ಗುರುವಾರ ಕೇಂದ್ರ ಉದ್ಯಮ ಮತ್ತು ವ್ಯವಹಾರಗಳ ಸಚಿವ ಅಶ್ವಿನಿ ವೈಷ್ಣವ್ ಅವರು ನಾಸ್​ಕಾಮ್ ಟೆಕ್ನಾಲಜಿ ಲೀಡರ್​ಶಿಪ್ ಫೋರಂ ಸಭೆಯಲ್ಲಿ ಹೇಳಿದ್ದರು. ಆದರೆ ಈ ವರದಿಯನ್ನು ನಾಸ್​ಕಾಮ್ ನಿರಾಕರಿಸಿದೆ.

Data Protection Bill: ಡಾಟಾ ಪ್ರೊಟೆಕ್ಷನ್ ಬಿಲ್​ಗೆ ಅನುಮೋದನೆಯಾಗಿದೆ ಎಂದು ಸಚಿವರು ಹೇಳಿಲ್ಲ: NASSCOM ಸ್ಪಷ್ಟನೆ
ಸಚಿವ ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 03, 2023 | 4:19 PM

Share

ನವದೆಹಲಿ: ಡಿಜಿಟಲ್ ಡಾಟಾ ರಕ್ಷಣೆ ಮಸೂದೆಯ (Digital Data Protection Bill 2023) ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ತಂತ್ರಜ್ಞಾನ ಉದ್ಯಮ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಒತ್ತಾಯಿಸಿದೆ. ಭಾರತವನ್ನು ಒಂದು ನಂಬುಗೆಯ ದೇಶವಾಗಿ ನಿರ್ಮಿಸಲು ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಬಿಲ್ ಬಹಳ ಮುಖ್ಯ. ಇದರ ಶೀಘ್ರ ಅನುಷ್ಠಾನಕ್ಕೆ ಸರ್ಕಾರ ಗಮನ ಕೊಡಬೇಕು ಎಂದು ಉದ್ಯಮ ಸಂಘಟನೆ ನಾಸ್​ಕಾಮ್ ಸಲಹೆ ನೀಡಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಡಿಜಿಟಲ್ ಡೇಟಾ ಪ್ರೊಟೆಕ್ಷನ್ ಕರಡು ಮಸೂದೆಗೆ ಸಂಸದೀಯ ಸ್ಥಾಯಿ ಸಮಿತಿಯೊಂದರ (Parliamentary Standing Committee) ಅನುಮೋದನೆ ಆಗಿದೆ ಎಂದು ನಿನ್ನೆ ಗುರುವಾರ ಕೇಂದ್ರ ಉದ್ಯಮ ಮತ್ತು ವ್ಯವಹಾರಗಳ ಸಚಿವ ಅಶ್ವಿನಿ ವೈಷ್ಣವ್ ಅವರು ನಾಸ್​ಕಾಮ್ ಟೆಕ್ನಾಲಜಿ ಲೀಡರ್​ಶಿಪ್ ಫೋರಂ ಸಭೆಯಲ್ಲಿ ಹೇಳಿದ್ದರು. ಆದರೆ ಈ ವರದಿಯನ್ನು ನಾಸ್​ಕಾಮ್ ನಿರಾಕರಿಸಿದೆ.

ಮಸೂದೆಗೆ ಸಮಿತಿಯಿಂದ ಅನುಮೋದನೆ ಸಿಕ್ಕಿದೆ ಎಂದು ಸಚಿವ ವೈಷ್ಣವ್ ಆ ಕಾರ್ಯಕ್ರಮದಲ್ಲಿ ಹೇಳಲಿಲ್ಲ ಎಂದು ಸ್ಪಷ್ಟಪಡಿಸಲು ಇಚ್ಛಿಸುತ್ತೇವೆ ಎಂದು ನಾಸ್​ಕಾಮ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ಸಭೆಯಲ್ಲಿ ಮಾತನಾಡುತ್ತಾ ಸಚಿವ ವೈಷ್ಣವ್ ಅವರು ಮಸೂದೆಯನ್ನು ಸಂಸತ್​ನಲ್ಲಿ ಮಂಡನೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ಐಟಿ ಮತ್ತು ಸಂವಹನದ ಸಂಸದೀಯ ಸಮಿತಿಯಲ್ಲಿ ಆದಷ್ಟೂ ಬೇಗ ಚರ್ಚೆಗಳನ್ನು ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು ಎಂದು ನಾಸ್​ಕಾಮ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿG20 Meet: ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಭಾರತ-ಚೀನಾ ಭರವಸೆ, ಗಡಿಯಲ್ಲಿ ಶಾಂತಿ ಬಗ್ಗೆ ಚರ್ಚೆ

ನಾಸ್​ಕಾಮ್ ಟೆಕ್ನಾಲಜಿ ಲೀಡರ್​ಶಿಪ್ ಫೋರಮ್ (ಎನ್​ಟಿಎಲ್​ಎಫ್) 2023 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಶ್ವಿನಿ ವೈಷ್ಣವ್, ಐಟಿ ಮತ್ತು ಕಮ್ಯೂನಿಕೇಶನ್ಸ್​ನ ಸಂಸದೀಯ ಸ್ಥಾಯಿ ಸಮಿತಿ ಈ ಮಸೂದೆ ಸಂಸತ್​ನಲ್ಲಿ ಮಂಡನೆಯಾಗುವ ಮುನ್ನ ಮುಂಚಿತವಾಗಿ ಪರಿಶೀಲನೆ ನಡೆಸಿ ಸಮ್ಮತಿ ಕೊಟ್ಟಿದೆ ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ನಿನ್ನೆ ಗುರುವಾರ ವರದಿಗಳಾಗಿದ್ದವು.

ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಕೂಡ ಸ್ಥಾಯಿ ಸಮಿತಿಯಿಂದ ಮಸೂದೆ ಅನುಮೋದನೆ ಆಗಿರುವ ವರದಿ ಸುಳ್ಳು ಎಂದು ಹೇಳಿ ವರದಿಗಳನ್ನು ತಳ್ಳಿಹಾಕಿದ್ದಾರೆ.

ಇನ್ನಷ್ಟು ಉದ್ಯಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Fri, 3 March 23

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಮೊದಲು ನನಗೆ ಬಾಸ್ ಅಂತಿದ್ರು, ಈಗ ಯಶ್​ಗೆ ಬಾಸ್ ಅಂತಾರೆ: ಪುಷ್ಪ
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ