ಮುಂಬೈ: ಒಂದು ತಿಂಗಳ ಕಾಲ ಭಾರತದಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಿದಲ್ಲಿ ಜಿಡಿಪಿ ಬೆಳವಣಿಗೆ 2 ಪರ್ಸಂಟೇಜ್ ಪಾಯಿಂಟ್ಗೆ (ಒಂದು ಅಂದಾಜಿನ ಪ್ರಕಾರ 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು) ಪೆಟ್ಟು ಬೀಳುತ್ತದೆ ಎಂದು ಸೋಮವಾರ ಅಮೆರಿಕ ಬ್ರೋಕರೇಜ್ ಎಚ್ಚರಿಕೆ ನೀಡಿದೆ. ಕೋವಿಡ್ ಹಬ್ಬವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ನಿರ್ಬಂಧಗಳನ್ನು ಸರ್ಕಾರಗಳು ಹೇರುತ್ತಿವೆ. ಅಂದಹಾಗೆ ಒಂದು ತಿಂಗಳ ಹಿಂದೆ ದಿನಕ್ಕೆ 35,000 ಪ್ರಕರಣಗಳು ವರದಿ ಆಗುತ್ತಿದ್ದವು. ಅದೀಗ ದಿನಕ್ಕೆ ಏಳು ಪಟ್ಟು ಹೆಚ್ಚಾಗಿದೆ. ದಿನಕ್ಕೆ 2.61 ಲಕ್ಷ ಹೊಸ ಪ್ರಕರಣಗಳು ವರದಿ ಆಗಿವೆ. ಬೋಫಾ ಸೆಕ್ಯೂರಿಟೀಸ್ ಹೇಳುವಂತೆ, ಕೋವಿಡ್- 19ನಿಂದ ಈಗಿನ್ನೂ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗೆ ಅಪಾಯವಾಗಿಯೇ ಕಂಡುಬರುತ್ತಿದೆ.
ಈಗಿನ ಸ್ಥಿತಿಯನ್ನು ಗಂಭೀರವಾದ ರಾಷ್ಟ್ರವ್ಯಾಪಿ ಲಾಕ್ಡೌನ್ ಆಗದ ಹೊರತು ಕೋವಿಡ್-19 ಎರಡನೇ ಅಲೆ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಹಾಗೊಂದು ವೇಳೆ ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಿದಲ್ಲಿ ಇದರಿಂದ ಶೇಕಡಾ 1ರಿಂದ 2ರಷ್ಟು ಜಿಡಿಪಿ ನಷ್ಟವಾಗುತ್ತದೆ. ಅಂಥದ್ದೊಂದು ಭಾರೀ ಆರ್ಥಿಕ ಬೆಲೆ ತೆತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್-19 ನಿರ್ಬಂಧಗಳು, ರಾತ್ರಿ ಕರ್ಫ್ಯೂಗಳು ಮತ್ತು ಸ್ಥಳೀಯ ಲಾಕ್ಡೌನ್ಗಳ ಮೂಲಕ ಕೊರೊನಾ ಹಬ್ಬದಂತೆ ತಡೆಯಬಹುದು ಎಂದು ವರದಿ ಹೇಳಿದೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿಯಾಗಿದೆ.
ಬ್ರೋಕರೇಜ್ ಹೇಳಿದಂತೆ, ಒಟ್ಟಾರೆ ಪ್ರಕರಣಗಳ ಪೈಕಿ ನಾಲ್ಕನೇ ಮೂರು ಭಾಗದಷ್ಟು ಬರುತ್ತಿರುವುದು 29 ರಾಜ್ಯಗಳ ಪೈಕಿ 10 ರಾಜ್ಯಗಳಿಂದ. ಇನ್ನು ಮೊದಲಿಗೆ ಮಹಾರಾಷ್ಟ್ರ ಕಠಿಣ ನಿರ್ಬಂಧಗಳನ್ನು ಹೇರಿದ ಮೇಲೆ ಉಳಿದ ರಾಜ್ಯಗಳು ಅದನ್ನು ಅನುಸರಿಸಿದವು. ಸದ್ಯಕ್ಕೆ ಒಟ್ಟು ಜನಸಂಖ್ಯೆಯ ಶೇ 1.2ರಷ್ಟು ಮಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇ 7.8ರಷ್ಟು ಮಂದಿ ಒಂದು ಡೋಸ್ ಹಾಕಿಸಿಕೊಂಡಿದ್ದಾರೆ. ಏಪ್ರಿಲ್ 16ರ ವಾರಕ್ಕೆ ಲಸಿಕೆ ಕೊರತೆಯ ಕಾರಣಕ್ಕೆ ಶೇ 12ರಷ್ಟು ಹಾಕುವ ವೇಗ ಶೇ 12ರಷ್ಟು ಕಡಿಮೆ ಆಗಿದೆ. 2021ರ ಕೊನೆ ಹೊತ್ತಿಗೆ ಒಟ್ಟು ಜನಸಂಖ್ಯೆಯ ಶೇ 34ರಷ್ಟು ಮಂದಿಗೆ ಲಸಿಕೆ ಹಾಕಲಾಗಿರುತ್ತದೆ. ಇದು ತುಂಬ ಕನಿಷ್ಠ ಮಟ್ಟದ ಸನ್ನಿವೇಶದಲ್ಲಿ ಆಯಿತು. ಇನ್ನು ಹೊಸದಾಗಿ ರಷ್ಯಾದ ಸ್ಪುಟ್ನಿಕ್ಗೆ ಅನುಮತಿ ಸಿಕ್ಕ ಮೇಲೆ ಶೇಕಡಾ 40ರಷ್ಟು ಲಸಿಕೆ ಹಾಕಬಹುದು.
ಈ ಎರಡೂ ಲಸಿಕೆ ಸೇರಿ ಪ್ರತಿ ತಿಂಗಳು 7.5 ಕೋಟಿ ಡೋಸ್ಗಳು ಸದ್ಯಕ್ಕೆ ಉತ್ಪಾದನೆಯಾಗುತ್ತಿದೆ ಎನ್ನಲಾಗಿದೆ. ಭಾರತದ ಸೆರಂ ಇನ್ಸ್ಟಿಟ್ಯೂಟ್ನಿಂದ ಜೂನ್ ನಂತರ ತಿಂಗಳಿಗೆ 10 ಕೋಟಿ ಡೋಸ್ಗೂ ಹೆಚ್ಚು ಉತ್ಪಾದಿಸುವ ನಿರೀಕ್ಷೆ ಇದೆ. ಭಾರತ್ ಬಯೋಟೆಕ್ 1.2 ಕೋಟಿ ಡೋಸ್ ಉತ್ಪಾದಿಸುತ್ತದೆ. ಡಾ ರೆಡ್ಡೀಸ್ನಿಂದ 10 ಕೋಟಿ ಡೋಸ್ ಅನ್ನು ಸ್ಪುಟ್ನಿಕ್ನಿಂದ ಆಮದು ಮಾಡಿಕೊಳ್ಳುವ ಬಗ್ಗೆ ಹೇಳಲಾಗಿದೆ. ಇನ್ನು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ತೆಗೆದುಕೊಂಡವರಲ್ಲಿ ಹೆಪ್ಪುಗಟ್ಟುವ ಸಮಸ್ಯೆ ಹಲವು ಕಡೆ ಕಂಡುಬಂದಿದೆ ಮತ್ತು ಫೈಜರ್ಗೆ ಸಂಗ್ರಹಕ್ಕೆ ತುಂಬ ಕಡಿಮೆ ತಾಪಮಾನ ಬೇಕಾಗುತ್ತದೆ. ಆದ್ದರಿಂದ ಈ ಲಸಿಕೆಗಳಿಗೆ ಅವಕಾಶ ಕೊಟ್ಟರೂ ಹೆಚ್ಚಿನ ಪ್ರಯೋಜನ ಆಗಲ್ಲ.
ಇದನ್ನೂ ಓದಿ: ಲಾಕ್ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ
ಇದನ್ನೂ ಓದಿ: ದೆಹಲಿಯಲ್ಲಿ 6 ದಿನಗಳ ಲಾಕ್ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್
( If government announce 1 month nationwide lock down to contain corona may cause Rs 2.68 lakh crore loss to GDP)