Ola S1 Pro: ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ರಿಯಾಯಿತಿ ಕೊಡುಗೆ ಘೋಷಿಸಿದ ಓಲಾ

| Updated By: Rakesh Nayak Manchi

Updated on: Sep 27, 2022 | 3:03 PM

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್ ಹಬ್ಬದ ಋತುವಿನ ಸಂದರ್ಭದಲ್ಲಿ S1 Pro ಖರೀದಿಸುವ ಗ್ರಾಹಕರಿಗೆ ರಿಯಾಯಿತಿ ದರ ಘೋಷಣೆ ಮಾಡಿದೆ. S1 Pro ಅನ್ನು ಖರೀದಿಸುವಾಗ ಕಂಪನಿಯು ಯಾವುದೇ ರಿಯಾಯಿತಿಯ ಕೊಡುಗೆಯನ್ನು ಪರಿಚಯಿಸಿರುವುದು ಇದೇ ಮೊದಲು.

Ola S1 Pro: ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ರಿಯಾಯಿತಿ ಕೊಡುಗೆ ಘೋಷಿಸಿದ ಓಲಾ
ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ರಿಯಾಯಿತಿ ಕೊಡುಗೆ ಘೋಷಿಸಿದ ಓಲಾ
Follow us on

ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಓಲಾ ಎಲೆಕ್ಟ್ರಿಕ್ (Ola Electric) ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ರಿಯಾಯಿತಿ ಕೊಡುಗೆಯನ್ನು ನೀಡಿದೆ. ಇದೇ ಮೊದಲು S1 Pro ಅನ್ನು ಖರೀದಿಸುವಾಗ ಕಂಪನಿಯು ಯಾವುದೇ ರಿಯಾಯಿತಿ ಕೊಡುಗೆ (Discount offer)ಯನ್ನು ಘೋಷಿಸಿದೆ. ಹಬ್ಬದ ಸೀಸನ್‌ನಲ್ಲಿ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ (S1 Pro Electric Scooter) ಖರೀದಿಸುವ ಮೂಲಕ ಗ್ರಾಹಕರು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು ಎಂದು ಓಲಾ ಹೇಳಿದೆ. ಭಾರತದಲ್ಲಿ ಈ ಸ್ಕೂಟರ್​ನ ಎಕ್ಸ್ ಶೋ ರೂಂ ಬೆಲೆ 1.40 ಲಕ್ಷ ರೂ. ಆಗಿದ್ದು, ಗ್ರಾಹಕರು ಇದನ್ನು ಖರೀದಿಸುವ ಸಂದರ್ಭದಲ್ಲಿ 10,000 ರೂ. ರಿಯಾಯಿತಿ ಪಡೆಯಲಿದ್ದಾರೆ. ಅಂದರೆ ಈ ಸ್ಕೂಟರ್ 1.30 ಲಕ್ಷಕ್ಕೆ ನಿಮ್ಮ ಕೈಸೇರಲಿದೆ. Ola S1 Pro ನಲ್ಲಿ ಲಭ್ಯವಿರುವ ರಿಯಾಯಿತಿ ಮತ್ತು ಇತರ ವಿಷಯಗಳನ್ನು ನೋಡೋಣ.

Ola S1 Pro ಖರೀದಿ ಮೇಲೆ 10 ಸಾವಿರ ರಿಯಾಯಿತಿ

ಓಲಾ ಎಲೆಕ್ಟ್ರಿಕ್ ಹಬ್ಬದ ಋತುವಿನ ದೃಷ್ಟಿಯಿಂದ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ಘೋಷಿಸಿದೆ. ಕಂಪನಿಯು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದೆ. “ಓಲಾದ ಹಬ್ಬದ ಕೊಡುಗೆಯ ಹೆಚ್ಚಿನದನ್ನು ಪಡೆದುಕೊಳ್ಳಿ ಮತ್ತು Ola S1 Pro ನಲ್ಲಿ 10,000 ರೂಪಾಯಿಗಳ ರಿಯಾಯಿತಿಯೊಂದಿಗೆ ಆಚರಿಸಿ. ಇತರ ಹಣಕಾಸು ಆಯ್ಕೆಗಳು ಸಹ ನಿಮಗಾಗಿ ಕಾಯುತ್ತಿವೆ. Ola S1 Proನ ಖರೀದಿ ವಿಂಡೋವನ್ನು 10,000 ರೂಪಾಯಿಗಳ ರಿಯಾಯಿತಿಯೊಂದಿಗೆ ತೆರೆದಿದೆ.

S1 Pro ಅನ್ನು 1.30 ಲಕ್ಷಕ್ಕೆ ಖರೀದಿಸುವುದು ಹೇಗೆ?

Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 10,000 ರೂಪಾಯಿಗಳ ರಿಯಾಯಿತಿಯು ದಸರಾ ಹಬ್ಬದವರೆಗೆ ಅಂದರೆ ಅಕ್ಟೋಬರ್ 5ರ ವರೆಗೆ ಮುಂದುವರಿಯುತ್ತದೆ. ಇದರ ಲಾಭ ಪಡೆಯಲು ಗ್ರಾಹಕರು ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಎಸ್1 ಪ್ರೊ ಅನ್ನು ಬುಕ್ ಮಾಡಬೇಕು. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ಫೆಸ್ಟಿವ್ ಸೀಸನ್ ಆಫರ್ಸ್ ಟ್ಯಾಬ್ ಕ್ಲಿಕ್ ಮಾಡಿ. S1 Pro ಅನ್ನು ಕೇವಲ 1.30 ಲಕ್ಷಕ್ಕೆ (ಎಕ್ಸ್ ಶೋ ರೂಂ) ಹಾಗೂ 10,000 ರಿಯಾಯಿತಿಯೊಂದಿಗೆ ಖರೀದಿಸಲು ಉಳಿದ ಹಂತಗಳನ್ನು ಅನುಸರಿಸಿ.

Ola S1 Pro ವೈಶಿಷ್ಟ್ಯಗಳು ಹೀಗಿವೆ

ARAI ಪ್ರಕಾರ, Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 180 ಕಿ.ಮೀಟರ್ ದೂರವನ್ನು ಕ್ರಮಿಸುತ್ತದೆ. ಅದೇ ಸಮಯದಲ್ಲಿ ಕಂಪನಿಯು ಸುಮಾರು 170 ಕಿ.ಮೀಟರ್ ನಿಜವಾದ ಶ್ರೇಣಿಯನ್ನು ಹೇಳುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 116 ಕಿ.ಮೀಟರ್ ವೇಗದಲ್ಲಿ ಚಲಿಸಬಲ್ಲದು. Ola S1 Pro ಕೇವಲ ಮೂರು ಸೆಕೆಂಡುಗಳಲ್ಲಿ 0-40 kmph ನಿಂದ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಮತ್ತಷ್ಟು ಉದ್ಯಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Tue, 27 September 22