ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 5 ವರ್ಷ ಸಂಬಳ; ಮಕ್ಕಳಿಗೆ ಉಚಿತ ಶಿಕ್ಷಣ: ರಿಲಯನ್ಸ್​ ಉದಾತ್ತ ನಿರ್ಣಯ

|

Updated on: Jun 03, 2021 | 11:29 AM

Reliance Industries salary : ಇನ್ನು ರಿಲಯನ್ಸ್​ ಇಂಡಸ್ಟ್ರೀಸ್ ತನ್ನ ಹಾಲಿ ಉದ್ಯೋಗಿಗಳ ಪೈಕಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ಅನುವಾಗಲು ರಜೆ ಸೇರಿದಂತೆ ಅದರ ಖರ್ಚು ವೆಚ್ಚವನ್ನೂ ಭರಿಸುವ ಭರವಸೆ ನೀಡಿದೆ. ಒಂದು ವೇಳೆ, ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ತಕ್ಷಣಕ್ಕೆ 10 ಲಕ್ಷ ರೂ ನಗದು ನೀಡುವುದರ ಜೊತೆಗೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಘೋಷಿಸಿದೆ

ಕೊರೊನಾದಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ 5 ವರ್ಷ ಸಂಬಳ; ಮಕ್ಕಳಿಗೆ ಉಚಿತ ಶಿಕ್ಷಣ: ರಿಲಯನ್ಸ್​ ಉದಾತ್ತ ನಿರ್ಣಯ
ರಿಲಯನ್ಸ್​ ಉದ್ಯೋಗಿಗಳ ಕುಟುಂಬಕ್ಕೆ ‘ನಿಮಗೆ ಆದರೆಯಾಗಿ ನಾವಿದ್ದೇವೆ’ ಎಂದು ಅಭಯ ನೀಡಿದ ನೀತೂ ಅಂಬಾನಿ ಮತ್ತು ಮುಕೇಶ್​ ಅಂಬಾನಿ ದಂಪತಿ
Follow us on

ಮಹಾಮಾರಿ ಕೊರೊನಾ ಸೋಂಕಿನಿಂದ ಮೃತಪಟ್ಟ ತನ್ನ ಉದ್ಯೋಗಿಗಳ ಕುಟುಂಬಕ್ಕೆ ಐದು ವರ್ಷಗಳ ಕಾಲ ಸಂಬಳ ವಿತರಣೆ ಮತ್ತು ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನು ರಿಲಯನ್ಸ್​ ಇಂಡಸ್ಟ್ರೀಸ್​ ಕಂಪನಿ (Reliance Industries -RIL) ತೆಗೆದುಕೊಂಡಿದೆ. ನೀತು ಅಂಬಾನಿ ಮತ್ತು ಮುಕೇಶ್​ ಅಂಬಾನಿ ದಂಪತಿ ಈ ಭರ್ಜರಿ ನಿರ್ಣಯ ತೆಗೆದುಕೊಂಡಿದ್ದಾರೆ.

ಕೊರೊನಾ ಮಹಾಮಾರಿ ದೇಶದಲ್ಲೇ ಅಲ್ಲ; ಇಡೀ ಜಗತ್ತಿನಲ್ಲಿ ಆಟಾಟೋಪ ಮಿತಿಮೀರಿದೆ. ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಬೇಧಭಾವ ತೋರದೆ ಎಲ್ಲರನ್ನೂ ಕಾಡತೊಡಗಿದೆ. ದಿನೇ ದಿನೆ ಅದರ ಉಪಟಳ ಜಾಸ್ತಿಯಾಗುತ್ತಿದೆ. ಇದರಿಂದ ಉದ್ಯಮ ವಲಯವೂ ಕಂಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಉದ್ಯಮಪತಿಗಳು ತಮ್ಮ ಉದ್ಯೋಗಿಗಳ ಕೈಹಿಡಿಯುವ ನಿರ್ಧಾರ ನಿಜಕ್ಕೂ ಆಶಾದಾಯಕವಾಗಿದೆ. ಈ ನಿಟ್ಟಿನಲ್ಲಿ ಏಷ್ಯಾದ ಅತ್ಯಧಿಕ ಧನಿಕ ಕುಟುಂಬದ ಅಂಬಾನಿ ದಂಪತಿ ತನ್ನ ಉದ್ಯೋಗಿಗಳ ವಿಷಯದಲ್ಲಿ ಉತ್ತರದಾಯಿತ್ವದ, ಉದಾತ್ತ ನಿರ್ಣಯ ತೆಗೆದುಕೊಡಿದೆ.

ರಿಲಯನ್ಸ್​ ಇಂಡಸ್ಟ್ರೀಸ್ ತನ್ನ ಉದ್ಯೋಗಿಗಳ ಕುಟುಂಬಗಳಿಗೆ ದೃಢ ಆಸರೆಯಾಗಿ ನಿಂತಿದೆ. ಕೊರೊನಾದಿಂದ ಮೃತಪಟ್ಟ ತನ್ನ ಉದ್ಯೋಗಿಗಳ ಕುಟುಂಬದವರಿಗೆ ಎಲ್ಲ ರೀತಿಯ ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ರಿಲಯನ್ಸ್​ ಇಂಡಸ್ಟ್ರೀಸ್ ಉದ್ಯೋಗಿಗಳು ತಮ್ಮ ಕೊನೆಯ ಸಂಬಳ ಎಷ್ಟು ಪಡೆಯುತ್ತಿದ್ದರೋ ಅದೇ ಸಂಬಳವನ್ನು ಮುಂದಿನ 5 ವರ್ಷ ಕಾಲ ಅವರ ಕುಟುಂಬಸ್ಥರಿಗೆ ನೀಡಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ ಮೃತ ಉದ್ಯೋಗಿಯ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನೂ ತಾನೂ ಹೊತ್ತುಕೊಳ್ಳುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್ ತಿಳಿಸಿದೆ.

ಇನ್ನು ರಿಲಯನ್ಸ್​ ಇಂಡಸ್ಟ್ರೀಸ್ ತನ್ನ ಹಾಲಿ ಉದ್ಯೋಗಿಗಳ ಪೈಕಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ಅನುವಾಗಲು ರಜೆ ಸೇರಿದಂತೆ ಅದರ ಖರ್ಚು ವೆಚ್ಚವನ್ನೂ ಭರಿಸುವ ಭರವಸೆ ನೀಡಿದೆ. ಒಂದು ವೇಳೆ, ಉದ್ಯೋಗಿ ಕೊರೊನಾದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ತಕ್ಷಣಕ್ಕೆ 10 ಲಕ್ಷ ರೂ ನಗದು ನೀಡುವುದರ ಜೊತೆಗೆ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್ ಘೋಷಿಸಿದೆ.

(Reliance Industries RIL announces full salary for 5 years to family of deceased employees and education for children)

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

Published On - 11:23 am, Thu, 3 June 21