ನಮ್ಮ ಎಲ್ಲ ಆಹಾರ ಉತ್ಪನ್ನಗಳೂ ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ಸತ್ಯವನ್ನು ಒಪ್ಪಿಕೊಂಡ ನೆಸ್ಲೆ ಕಂಪನಿ; ಕಿಟ್​ಕ್ಯಾಟ್​, ಮ್ಯಾಗಿಗಳೆಲ್ಲ ಎಷ್ಟು ಆರೋಗ್ಯಕರ?

ನಮ್ಮ ಎಲ್ಲ ಆಹಾರ ಉತ್ಪನ್ನಗಳೂ ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ಸತ್ಯವನ್ನು ಒಪ್ಪಿಕೊಂಡ ನೆಸ್ಲೆ ಕಂಪನಿ; ಕಿಟ್​ಕ್ಯಾಟ್​, ಮ್ಯಾಗಿಗಳೆಲ್ಲ ಎಷ್ಟು ಆರೋಗ್ಯಕರ?
ಪ್ರಾತಿನಿಧಿಕ ಚಿತ್ರ

Nestle: ಸಾಕುಪ್ರಾಣಿಗಳ ಆಹಾರ, ವಿಶೇಷ ವೈದ್ಯಕೀಯ ಪೌಷ್ಟಕಾಂಶಗಳನ್ನು ಹೊರತು ಪಡಿಸಿದರೆ, ನಮ್ಮ ಕಂಪನಿಯ ಶೇ.37ರಷ್ಟು ಆಹಾರ ಮತ್ತು ಪಾನೀಯಗಳು ಮಾತ್ರ ಆಸ್ಟ್ರೇಲಿಯಾದ ಹೆಲ್ತ್ ರೇಟಿಂಗ್​ ವ್ಯವಸ್ಥೆಯಿಂದ 3.5 ಸ್ಟಾರ್​ ಪಡೆದಿವೆ ಎಂದು ನೆಸ್ಲೆ ತಿಳಿಸಿದ್ದಾಗಿ ವರದಿಯಾಗಿದೆ.

TV9kannada Web Team

| Edited By: Lakshmi Hegde

Jun 02, 2021 | 1:36 PM

ದೆಹಲಿ: ಜಗತ್ತಿನ ಅತಿದೊಡ್ಡ ಫುಡ್​ಕಂಪನಿಯಲ್ಲೊಂದಾದ ನೆಸ್ಲೆ (Nestle) ಈಗೊಂದು ಸತ್ಯವನ್ನು ಒಪ್ಪಿಕೊಂಡಿದೆ. ತಮ್ಮ ಕಂಪನಿಯ ಶೇ.60ರಷ್ಟು ಮುಖ್ಯ ಆಹಾರ ಮತ್ತು ಪಾನೀಯಗಳು ಆರೋಗ್ಯಕ್ಕೆ ಅಷ್ಟೊಂದು ಸುರಕ್ಷಿತವಲ್ಲ. ಆರೋಗ್ಯ ಮಾನ್ಯತೆ ಪಡೆದ ವ್ಯಾಖ್ಯಾನಕ್ಕೆ ಅನುಗುಣವಾಗಿಲ್ಲ. ಅವುಗಳಲ್ಲಿ ನಾವೆಷ್ಟೇ ನವೀಕರಣ ಮಾಡಲಿ, ಅವೆಂದೂ ಆರೋಗ್ಯಕರವಲ್ಲ ಎಂದು ಹೇಳಿಕೊಂಡಿದೆ ಎಂದು ಫೈನಾನ್ಸಿಯಲ್​ ಟೈಮ್ಸ್​ ವರದಿ ಮಾಡಿದೆ.

ಸಾಕುಪ್ರಾಣಿಗಳ ಆಹಾರ, ವಿಶೇಷ ವೈದ್ಯಕೀಯ ಪೌಷ್ಟಿಕಾಂಶಗಳನ್ನು ಹೊರತು ಪಡಿಸಿದರೆ, ನಮ್ಮ ಕಂಪನಿಯ ಶೇ.37ರಷ್ಟು ಆಹಾರ ಮತ್ತು ಪಾನೀಯಗಳು ಮಾತ್ರ ಆಸ್ಟ್ರೇಲಿಯಾದ ಹೆಲ್ತ್ ರೇಟಿಂಗ್​ ವ್ಯವಸ್ಥೆಯಿಂದ 3.5 ಸ್ಟಾರ್​ ಪಡೆದಿವೆ ಎಂದು ನೆಸ್ಲೆ ತಿಳಿಸಿದ್ದಾಗಿ ವರದಿಯಾಗಿದೆ. ನೆಸ್ಲೆ ಕಂಪನಿಯ ಕಿಟ್​ಕ್ಯಾಟ್​ ಚಾಕಲೇಟ್​, ಮ್ಯಾಗಿ ಸೇರಿ ಹಲವು ತಿನಿಸಿಗಳು ಸಖತ್​ ಫೇಮಸ್​ ಆಗಿವೆ. ತಮ್ಮ ಕಂಪನಿಯ ಆಹಾರಗಳ ಬಗ್ಗೆ ಆಂತರಿಕವಾಗಿಯೇ ವರದಿ ಸಲ್ಲಿಸಿದ ನೆಸ್ಲೆ ಸತ್ಯವನ್ನು ಒಪ್ಪಿಕೊಂಡಿದೆ. ಅದಷ್ಟೇ ಅಲ್ಲ, 3.5 ಅಥವಾ ಅದಕ್ಕಿಂತ ಹೆಚ್ಚು ಸ್ಟಾರ್​​ಗಳು ಬಂದರೆ ಅದು ಆರೋಗ್ಯ ಮಾನ್ಯತೆ ಪಡೆದ ವ್ಯಾಖ್ಯಾನಕ್ಕೆ ಅನುಗುಣವಾಗಿದ್ದಂತೆ ಎಂದು ಹೇಳಿಕೊಂಡಿದೆ.

ನೆಸ್ಲೆಯ ಶೇ.60ರಷ್ಟು ಆಹಾರ ಉತ್ಪನ್ನಗಳು ಈ ಆರೋಗ್ಯ ಮಾನ್ಯತೆ ತಲುಪಲು ವಿಫಲವಾಗಿವೆ. ಹಾಗೇ ಶುದ್ಧಕಾಫಿಯನ್ನು ಹೊರತುಪಡಿಸಿ ಶೇ.96ರಷ್ಟು ಪಾನೀಯಗಳು ಆರೋಗ್ಯ ಮಾನ್ಯತೆ ಪಡೆಯಲು ವಿಫಲವಾಗಿವೆ. ಶೇ.99ರಷ್ಟು ಮಿಠಾಯಿ, ಐಸ್​​ಕ್ರೀಂಗಳೂ ಕೂಡ ಆರೋಗ್ಯ ಮಾನ್ಯತೆಯ ವ್ಯಾಖ್ಯಾನಕ್ಕೆ ಅನುಗುಣವಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಅದಕ್ಕೆ ಹೋಲಿಸಿದರೆ ನೀರು ಮತ್ತು ಹಾಲಿನ ಉತ್ಪನ್ನಗಳು ಉತ್ತಮ ಸ್ಕೋರ್​ ಮಾಡಿವೆ. ಶೇ.82ರಷ್ಟು ನೀರಿನ ಉತ್ಪನ್ನಗಳು ಮತ್ತು ಶೇ.60ರಷ್ಟು ಹಾಲಿನ ಉತ್ಪನ್ನಗಳು ಆರೋಗ್ಯ ಮಾನ್ಯತೆ ವ್ಯಾಖ್ಯಾನಕ್ಕೆ ಅನುಗುಣವಾಗಿವೆ ಎಂದೂ ತಿಳಿಸಿದೆ. ನಾವು ನಮ್ಮ ಆಹಾರ ಉತ್ಪನ್ನಗಳನ್ನು ಇನ್ನಷ್ಟು ಆರೋಗ್ಯಕ್ಕೆ ಪೂರಕವಾಗಿ ಇರುವಂತೆ ತಯಾರಿಸಲು ದಶಕಗಳಿಂದಲೂ ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಉಪ್ಪು ಮತ್ತು ಸೋಡಿಯಂ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ನಾವೆಷ್ಟೇ ನವೀಕರಣ ಮಾಡಿದರೂ ಒಂದಷ್ಟು ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಅವೆಂದೂ 3.5 ಸ್ಟಾರ್​ ಪಡೆಯುವುದಿಲ್ಲ ಎಂದೂ ಕಂಪನಿ ತಿಳಿಸಿದೆ.

ಇದನ್ನೂ ಓದಿ: ಕೊರೊನಾದಿಂದ ಹಾಸಿಗೆ ಹಿಡಿದಿರುವ ಶಶಿ ತರೂರ್​ ಕೇಂದ್ರದ ಲಸಿಕೆ ನೀತಿ ವಿರುದ್ಧ ನೀಡಿರುವ ವಿಡಿಯೋ ಸಂದೇಶ ಏನು?

Nestle Document Says 60 Per Cent of its Food and drinks are unhealthy

Follow us on

Related Stories

Most Read Stories

Click on your DTH Provider to Add TV9 Kannada