ಕೊರೊನಾದಿಂದ ಹಾಸಿಗೆ ಹಿಡಿದಿರುವ ಶಶಿ ತರೂರ್ ಕೇಂದ್ರದ ಲಸಿಕೆ ನೀತಿ ವಿರುದ್ಧ ನೀಡಿರುವ ವಿಡಿಯೋ ಸಂದೇಶ ಏನು?
Shashi Tharoor Video Message: ಕೇಂದ್ರ ಸರ್ಕಾರದ ನೂತನ ಮುಕ್ತ ಮಾರುಕಟ್ಟೆ ನೀತಿಯಲ್ಲಿ ಮೇ 1 ರಿಂದ ಜಾರಿಗೆ ಬಂದಿರುವಂತೆ ಆಯಾ ರಾಜ್ಯಗಳು ತಮ್ಮ ಅಗತ್ಯದ ಅನುಸಾರ ಶೇ. 50 ರಷ್ಟು ಲಸಿಕೆಯನ್ನು ತಾನೇ ಖುದ್ದಾಗಿ ಖರೀಸಬಹುದಂತೆ. ಆದರೆ ಈ ಹಿಂದೆ ತಾನು ನಿಗದಿ ಪಡಿಸಿದ್ದ ಬೆಲೆಗಿಂತಲೂ ಹೆಚ್ಚಿನ ಬೆಲೆಯಲ್ಲಿ ರಾಜ್ಯಗಳು ಖರೀದಿಸಬೇಕಂತೆ. ಇದು ಉಚಿತವೇ? ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಕೇಂದ್ರ ಸರ್ಕಾರ ಈ ವರ್ಷಾಂತ್ಯ ಇಡೀ ದೇಶದಲ್ಲಿ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಹಾಕಿಸುವ ಮಹತ್ವದ ಯೋಜನೆ ಬಗ್ಗೆ ಕಟಕಿಯಾಡಿದ್ದಾರೆ. ಯೋಜನೆಯ ಬಗ್ಗೆ ಶಶಿ ತರೂರ್ ಇಂದು ಬೆಳಗ್ಗೆ ವಿಡಿಯೋ ಸಂದೇಶವೊಂದನ್ನು ಟ್ವೀಟ್ ಮಾಡಿದ್ದಾರೆ. ‘ಭಾರತವನ್ನು ಕೋವಿಡ್ನಿಂದ ರಕ್ಷಿಸಿ; ವ್ಯಾಕ್ಸಿನ್ ಎಲ್ಲರಿಗೂ ಉಚಿತವಾಗಿ ದೊರೆಯುವಂತೆ ಮಾಡಿ’ ಎಂದು ತಿರುವನಂತಪುರ ಸಂಸದ ಶಶಿ ತರೂರ್ ಪೋಸ್ಟ್ ಮಾಡಿರುವ ವಿಡಿಯೋ ಸಂದೇಶದ (Shashi Tharoor Covid Video) ಸಾರಾಂಶ ಇಲ್ಲಿದೆ:
ನಿಮಗೆಲ್ಲಗೊತ್ತಿರುವಂತೆ ನಾನು ಕೋವಿಡ್ ಸೋಂಕಿನ ವ್ಯತ್ಯಗಳಿಂದಾಗಿ ದೀರ್ಘಾವಧಿ (ಏಪ್ರಿಲ್ ತಿಂಗಳಿಂದ) ಪರಿಣಾಮದಿಂದ ಹಾಸಿಗೆ ಹಿಡಿದಿದ್ದೇನೆ. ನಾನು ನಿಮಗೆಲ್ಲ ಇಷ್ಟು ಮಾತ್ರ ಹೇಳಲು ಬಯಸುತ್ತೇನೆ… ಡಿಸೆಂಬರ್ ತಿಂಗಳ ವೇಳೆಗೆ ದೇಶದಲ್ಲಿ ಎಲ್ಲರಿಗೂ ವ್ಯಾಕ್ಸಿನೇಶನ್ ಹಾಕಲಾಗುವುದು. ಆದರೆ ವ್ಯಾಕ್ಸಿನ್ ಲಭ್ಯತೆ ಅಥವಾ ಅದರ ಕೊರತೆಯನ್ನು ಗಮನಿಸಿದಾಗ ಸರ್ಕಾರ ಇದನ್ನು ಹೇಗೆ ಸಾಧಿಸುತ್ತದೆ ಎಂಬುದೇ ನನಗೆ ಚಿಂತೆಯ ವಿಷಯವಾಗಿದೆ ಎಂದು ಕೋವಿಡ್ ಅಸ್ವಸ್ಥ ಹಾಸಿಗೆಯಲ್ಲಿರುವ ಶಶಿ ತರೂರ್ ಹೇಳಿದ್ದಾರೆ.
ಕೇಂದ್ರದ ವ್ಯಾಕ್ಸಿನ್ ಪಾಲಿಸಿ ಮತ್ತು ಶಶಿ ತರೂರ್ ವಿಡಿಯೋ ಮಾತುಗಳು: ದೇಶದಲ್ಲಿ ವ್ಯಾಕ್ಸಿನೇಶನ್ ಹಾಕಿಸುವ ಯೋಜನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ವ್ಯಾಕ್ಸಿನೇಶನ್ ಹಾಕಲಾಗುವುದು ಎಂದು ಕಳೆದ ವಾರವಷ್ಟೇ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಎಲ್ಲ ಭಾರತೀಯರಿಗೂ ನಿಗದಿತ ಡಿಸೆಂಬರ್ ವೇಳೆಗೆ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಬೇಕು ಎಂಬ ಕೇಂದ್ರದ ನೀತಿಯಲ್ಲಿ ಭಾರೀ ಬದಲಾವಣೆ ಮಾಡಿಕೊಳ್ಳಬೇಕು. ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು ಎಂಬ ಕಾಂಗ್ರೆಸ್ ಪಕ್ಷದ ಆಂದೋಲನವನ್ನು ನಾನೂ ಬೆಂಬಲಿಸುವೆ.
ಕೇಂದ್ರವೇ ಖರೀದಿಸಿ ಜನಕ್ಕೆ ಹಂಚಬಹುದಾಗಿದ್ದ ಲಸಿಕೆಗೆ ದುಬಾರಿ ಬೆಲೆ, ಕೇಂದ್ರದ ತಾರತಮ್ಯದ ಮಧ್ಯಸ್ಥಿಕೆ ಏಕೆ?: ಲಸಿಕೆಯ ದರ ಒಂದೊಂದು ಕಡೆ ಒಂದೊಂದು ರೀತಿ ಜಾರಿಯಲ್ಲಿರುವುದಕ್ಕೆ ಕಿಡಿಕಾರಿರುವ ಶಶಿ ತರೂರ್, ಇದೊಂದು ವಿವಾದಾಸ್ಪದ ವಿಷಯವಾಗಿದೆ. ಎಲ್ಲರಿಗೂ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗೆ ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು ಮತ್ತಿತರ ಸಂಸ್ಥೆಗಳಿಂದ ಕೇಂದ್ರ ಸರ್ಕಾರ ದರ ನಿಗದಿ ಮಾಡಿದೆ. ಅದೂ ಒಬ್ಬೊಬ್ಬರಿಗೂ ಒಂದೊಂದು ಬೆಲೆಯಲ್ಲಿದೆ. ಸೂಕ್ತ ಬೆಲೆಯಲ್ಲಿ ಕೇಂದ್ರ ಸರ್ಕಾರವೇ ಖರೀದಿಸಿ, ಜನಕ್ಕೆ ಹಂಚಬಹುದಾಗಿದ್ದ ಲಸಿಕೆಗೆ ಕೇಂದ್ರದ ಇಂತಹ ತಾರತಮ್ಯದ ಮಧ್ಯಸ್ಥಿಕೆ ಏಕೆ ಬೇಕು? ಆರಂಭದಲ್ಲಿ ಕೇಂದ್ರ ಸರ್ಕಾರ ತಾನೇ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳುತ್ತದೆ ಎಂದು ಹೇಳಿತ್ತಲ್ಲವಾ? ಎಂದು 65 ವರ್ಷದ ಶಶಿ ತರೂರ್ ಆಕ್ರೋಶದ ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರದ ನೂತನ ಮುಕ್ತ ಮಾರುಕಟ್ಟೆ ನೀತಿಯಲ್ಲಿ ಮೇ 1 ರಿಂದ ಜಾರಿಗೆ ಬಂದಿರುವಂತೆ ಆಯಾ ರಾಜ್ಯಗಳು ತಮ್ಮ ಅಗತ್ಯದ ಅನುಸಾರ ಶೇ. 50 ರಷ್ಟು ಲಸಿಕೆಯನ್ನು ತಾನೇ ಖುದ್ದಾಗಿ ಖರೀಸಬಹುದಂತೆ. ಆದರೆ ಈ ಹಿಂದೆ ತಾನು ನಿಗದಿ ಪಡಿಸಿದ್ದ ಬೆಲೆಗಿಂತಲೂ ಹೆಚ್ಚಿನ ಬೆಲೆಯಲ್ಲಿ ರಾಜ್ಯಗಳು ಖರೀದಿಸಬೇಕಂತೆ. ಇದು ಉಚಿತವೇ? ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.
ಕೋವಿಡ್ನಿಂದ ಜನರನ್ನು ಕಾಪಾಡಲು ಎಲ್ಲರಿಗೂ ಸಲ್ಲತಕ್ಕಂತಹ, ಉಚಿತ ವ್ಯಾಕ್ಸಿನೇಶನ್ ಪಾಲಿಸಿಯನ್ನು ಅಳವಡಿಸಿಕೊಳ್ಳೋಣ. ನಾನಂತೂ ಓ ಕೊಒರನಾದಿಂದ ಬಹಳಷ್ಟು ಅನುಭವಿಸಿದ್ದೇನೆ. ನನ್ನ ದೇಶ ವಾಸಿಗಳು ನಾನು ಅನುಭವಿಸಿದ್ದರಲ್ಲಿ ಸ್ವಲ್ಪೇ ಸ್ವಲ್ಪವೂ ಅವರು ಅನುಭವಿಸಬಾರದು ಎಂಬುದು ನನ್ನ ಅನಿಸಿಕೆ. ಆದರೆ ಕೊರೊನಾ ಎರಡನೆಯ ಅಲೆಯಲ್ಲಿ ಲಕ್ಷಾಂತರ ಮಂದಿ ದಿನನಿತ್ಯ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಶಶಿ ತರೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ICMR ಮುಖ್ಯಸ್ಥ ಡಾ. ಬಲರಾಂ ಭಾರ್ಗವ ಅವರು ಹೇಳುವಂತೆ ಜುಲೈ ಅಂತ್ಯಕ್ಕೆ ಅಥವಾ ಆಗಸ್ಟ್ ಆರಂಭವಾಗುತ್ತಿದ್ದಂತೆ ದೇಶದಲ್ಲಿ ಎಲ್ರಿಗೂ ಪ್ರತಿ ದಿನ ಒಂದು ಕೋಟಿ ಕೋವಿಡ್ ಲಸಿಕೆಗಳು ಲಭ್ಯವಾಗಲಿವೆ.
My message from my Covid sickbed: #SpeakUpForFreeUniversalVaccination pic.twitter.com/JjKmV5Rk71
— Shashi Tharoor (@ShashiTharoor) June 2, 2021
(Congress MP Shashi Tharoor Video Message From Covid Sick bed)
Published On - 12:54 pm, Wed, 2 June 21